ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ತಂಡದ ಯಶಸ್ಸಿನ ಹಿಂದೆ ಸೌರವ್ ಗಂಗೂಲಿಯ ಪಾತ್ರವನ್ನು ಒಪ್ಪಿಕೊಂಡಿದ್ದಾರೆ. ತಮ್ಮ ತಂಡ ಇದೀಗ ತಿರುಗೇಟು ನೀಡುವುದನ್ನು ಕಲಿತುಕೊಂಡಿದೆ ಎಂದಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಕೋಲ್ಕತಾ[ನ.24]: ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಮತ್ತೊಂದು ಟೆಸ್ಟ್ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಗೆಲ್ಲುವುದರ ಮೂಲಕ ಟೀಂ ಇಂಡಿಯಾ ತವರಿನಲ್ಲಿ 12ನೇ ಟೆಸ್ಟ್ ಸರಣಿ ದಾಖಲಿಸಿದೆ. ಈ ಯಶಸ್ಸಿನ ಹಿಂದೆ ದಾದಾ ಪರಿಶ್ರಮವಿದೆ ಎಂದು ವಿರಾಟ್ ಕೊಹ್ಲಿ ಒಪ್ಪಿಕೊಂಡಿದ್ದಾರೆ.
ಇಂದೋರ್’ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಅನಾಯಾಸವಾಗಿ ಗೆದ್ದುಕೊಂಡಿದ್ದ ವಿರಾಟ್ ಕೊಹ್ಲಿ ಪಡೆ, ಇದೀಗ ಕೋಲ್ಕತಾ ಟೆಸ್ಟ್ ಪಂದ್ಯವನ್ನು ಸುಲಭವಾಗಿಯೇ ಕೈವಶ ಮಾಡಿಕೊಂಡಿದೆ. ಒಂದು ಕಾಲದಲ್ಲಿ ಸ್ಪಿನ್ ಬೌಲರ್’ಗಳ ನೆರವಿನಿಂದ ಟೆಸ್ಟ್ ಪಂದ್ಯಗಳನ್ನು ಗೆಲ್ಲುತ್ತಿದ್ದ ಟೀಂ ಇಂಡಿಯಾ, ಇದೀಗ ಸ್ಪಿನ್ನರ್ ನೆರವಿಲ್ಲದೆಯೇ ಭಾರತ ಜಯ ಸಾಧಿಸುವ ಮಟ್ಟಕ್ಕೆ ಬೆಳೆದು ನಿಂತಿದೆ. ಈ ಕುರಿತಂತೆ ಪಂದ್ಯದ ವಿಶ್ಲೇಷಕ ಸಂಜಯ್ ಮಂಜ್ರೇಕರ್ ಕೇಳಿದ ಪ್ರಶ್ನೆಗೆ ವಿರಾಟ್ ಕೊಹ್ಲಿ ಮನಬಿಚ್ಚಿ ಮಾತನಾಡಿದ್ದಾರೆ.
undefined
ನನಗೇನಾದರೂ ಪಂದ್ಯ ಶ್ರೇಷ್ಠ ಪ್ರಶಸ್ತಿ ಬಂದಿದ್ದರೆ..? ಹೃದಯಗೆದ್ದ ವಿರಾಟ್ ಮಾತು
1980, 90ರ ಆರಂಭದ ದಶಕದಲ್ಲಿ ಟೀಂ ಇಂಡಿಯಾ ಟೀಂ ಇಂಡಿಯಾ ವೇಗಿಗಳ ಮೇಲೆ ಅವಲಂಬಿತವಾಗಿತ್ತು. ಈಗಿನ ಟೀಂ ಇಂಡಿಯಾ ವೇಗಿಗಳು ಎದುರಾಳಿ ಪಡೆಯ ಬ್ಯಾಟ್ಸ್’ಮನ್’ಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದಾರೆ ಎಂಬ ಮಂಜ್ರೇಕರ್ ಪ್ರಶ್ನೆಗೆ ಕೊಹ್ಲಿ, ’ಟೆಸ್ಟ್ ಕ್ರಿಕೆಟ್ ಒಂದು ಮೈಂಡ್ ಗೇಮ್ ಆಗಿದ್ದು, ನಮ್ಮ ಬೌಲರ್’ಗಳು ಆಕ್ರಮಣಕಾರಿ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ನಾವೀಗ ತಿರುಗೇಟು ನೀಡುವುದನ್ನು ಕಲಿತುಕೊಂಡಿದ್ದೇವೆ. ಇದೆಲ್ಲಾ ದಾದಾ ತಂಡ ತೋರಿಸಿಕೊಟ್ಟ ದಾರಿ. ಆ ದಾರಿಯನ್ನೇ ನಾವು ಹಿಂಬಾಲಿಸುತ್ತಿದ್ದೇವೆ ಎನ್ನುವ ಮೂಲಕ ಟೀಂ ಇಂಡಿಯಾದ ಯಶಸ್ಸಿನ ಹಿಂದೆ ಸೌರವ್ ಗಂಗೂಲಿಯ ಪಾತ್ರವಿದೆ ಎಂದು ಹೇಳಿದ್ದಾರೆ.
ಇಶಾಂತ್-ಉಮೇಶ್ ಬಿರುಗಾಳಿ, ಪಿಂಕ್ ಬಾಲ್ ಟೆಸ್ಟ್ ಟೀಂ ಇಂಡಿಯಾ ಕೈವಶ
ಸೌರವ್ ಗಂಗೂಲಿ ಟೀಂ ಇಂಡಿಯಾ ನಾಯಕತ್ವ ವಹಿಸಿಕೊಂಡ ಬಳಿಕ ತಂಡದಲ್ಲಿ ಯುವ ಕ್ರಿಕೆಟಿಗರಿಗೆ ಹೆಚ್ಚೆಚ್ಚು ಅವಕಾಶ ನೀಡಿದ್ದರು. ಜತೆಗೆ ದಾದಾ ನಾಯಕತ್ವದಲ್ಲಿ ಟೀಂ ಇಂಡಿಯಾ ವಿದೇಶದಲ್ಲೂ ಟೆಸ್ಟ್ ಪಂದ್ಯಗಳನ್ನು ಗೆಲ್ಲುವ ಮೂಲಕ ಹೊಸ ಸಂಚಲನ ಮೂಡಿಸಿತ್ತು. ಸೆಹ್ವಾಗ್, ಯುವರಾಜ್, ಹರ್ಭಜನ್ ಸಿಂಗ್, ಜಹೀರ್ ಖಾನ್, ಮಹೇಂದ್ರ ಸಿಂಗ್ ಧೋನಿ ಅವರಂತಹ ಮ್ಯಾಚ್ ವಿನ್ನಿಂಗ್ ಆಟಗಾರರಿಗೆ ದಾದಾ ಅವಕಾಶ ನೀಡಿದ್ದರು.
ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ಬಳಿಕ ಹಲವಾರು ಕ್ರಾಂತಿಕಾರಕ ಬದಲಾವಣೆಗಳನ್ನು ತರುತ್ತಿದ್ದಾರೆ. ದಾದಾ ಒತ್ತಾಸೆಯ ಮೇರೆಗೆ ದೇಶದಲ್ಲಿ ಮೊದಲ ಬಾರಿಗೆ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಯಶಸ್ವಿಯಾಗಿ ನಡೆದಿದೆ. ಭಾರತದಲ್ಲಿ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ನಿಜವಾದ ಹೀರೋ ಸೌರವ್ ಗಂಗೂಲಿ ಎಂದರೆ ಅತಿಶಯೋಕ್ತಿಯಾಗಲಾರದು.