ಏಕದಿನ ವಿಶ್ವಕಪ್​ಗೂ ಮುನ್ನ ಟೀಂ ಇಂಡಿಯಾಗೆ ಮತ್ತೊಂದು ಆಘಾತ..!

By Suvarna NewsFirst Published Jun 30, 2023, 4:26 PM IST
Highlights

2023ರ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ
ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ ತಂಡಕ್ಕೆ ಶಾಕ್
ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್ ಏಕದಿನ ವಿಶ್ವಕಪ್ ಆಡೋದು ಅನುಮಾನ

ಬೆಂಗಳೂರು(ಜೂ.30): ಏಕದಿನ ವಿಶ್ವಕಪ್​ಗೆ ಇನ್ನು ಮೂರು ತಿಂಗಳು ಮಾತ್ರ ಬಾಕಿಯಿದೆ. ಆದ್ರೆ, ಟೀಂ ಇಂಡಿಯಾಗೆ ಮೇಲಿಂದ ಮೇಲೆ ಆಘಾತ ಎದುರಾಗ್ತಿದೆ. ಇಂಜುರಿಯಿಂದ ತಂಡದಿಂದ ಹೊರಗುಳಿದಿರೋ ಶ್ರೇಯಸ್ ಅಯ್ಯರ್, ಏಕದಿನ ವಿಶ್ವಕಪ್​ ಆಡೋದು ಡೌಟ್. ಇದೇ ಈಗ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಟೀಂ ಮ್ಯಾನೇಜ್​ಮೆಂಟ್ ಚಿಂತೆ ಹೆಚ್ಚಿಸಿದೆ. 

ಈಗಾಗಲೇ ಪ್ರಮುಖ ಆಟಗಾರರು ಇಂಜುರಿಯಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ಈ ಆಟಗಾರರು ಅದ್ಯಾವಾಗ ರಿಕವರಿ ಆಗ್ತಾರೆ ಅನ್ನೋದೆ  ಕ್ಲಾರಿಟಿ ಇಲ್ಲ. ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಕೆ.ಎಲ್ ರಾಹುಲ್ ವೇಗವಾಗಿ ರಿಕವರಿ ಆಗ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದ್ರೆ, ಏಷ್ಯಾಕಪ್ ಟೂರ್ನಿಯಲ್ಲಿ ಕನ್ನಡಿಗ ಕೆ ಎಲ್ ರಾಹುಲ್ ಮತ್ತೆ ಬ್ಯಾಟ್ ಬೀಸಲಿದ್ದಾರೆ. ಮತ್ತೊಂದೆಡೆ ರಿಷಭ್ ಪಂತ್​ ವಿಶ್ವಕಪ್ ವೇಳೆಗೆ ಗುಣಮುಖರಾಗೋದು ಅನುಮಾನವಾಗಿದೆ. 

ವಿಶ್ವಕಪ್ ವೇಳೆಗೆ ಶ್ರೇಯಸ್ ಅಯ್ಯರ್ ರಿಕವರಿ ಆಗೋದು ಡೌಟ್​..!

ಹೌದು, ರಿಷಭ್ ಪಂತ್ ಜೊತೆಗೆ ಶ್ರೇಯಸ್ ಅಯ್ಯರ್ ಕೂಡ ಸದ್ಯಕ್ಕೆ ಗುಣಮುಖರಾಗೊ ಲಕ್ಷಣ ಕಾಣಿಸ್ತಿಲ್ಲ. ಕೆ ಎಲ್ ರಾಹುಲ್ ಮತ್ತು ಬುಮ್ರಾರಂತೆ ಶ್ರೇಯಸ್ ಅಯ್ಯರ್ ಸ್ಪೀಡಾಗಿ ರಿಕವರಿ ಆಗ್ತಿಲ್ಲ. ಇದರಿಂದ ಶ್ರೇಯಸ್ ವಿಶ್ವಕಪ್ ಆಡಲಿದ್ದಾರೆ ಅಂತ ಹೇಳಲು ಸಾಧ್ಯವಿಲ್ಲ. ಹಾಗಂತ, ಇದನ್ನು ನಾವೇಳ್ತಿಲ್ಲ, ಬಿಸಿಸಿಐ ಮೂಲಗಳೇ ಸ್ಪಷ್ಟಪಡಿಸಿವೆ. ಒಂದು ವೇಳೆ ಶ್ರೇಯಸ್ ಅಯ್ಯರ್ ಏಕದಿನ ವಿಶ್ವಕಪ್ ಆಡದಿದ್ರೆ, ತಂಡಕ್ಕೆ ದೊಡ್ಡ ಪೆಟ್ಟು ಬೀಳಲಿದೆ. 

ICC ಮನಗೆದ್ದ 3 ಕ್ರಿಕೆಟ್‌ ಸ್ಟೇಡಿಯಂ; ಆ ಮೂರು ಕ್ರೀಡಾಂಗಣಕ್ಕೆ ವಿಶ್ವಕಪ್ ಆತಿಥ್ಯ ಸಿಕ್ಕಿದ್ದು ಹೇಗೆ..?

ಏಕದಿನ ಫಾರ್ಮ್ಯಾಟ್​ನಲ್ಲಿ ಶ್ರೇಯಸ್ ಅಯ್ಯರ್, ತಂಡದ ಪ್ರಮುಖ ಮಿಡಲ್ ಆರ್ಡರ್ ಬ್ಯಾಟ್ಸ್​​​ಮನ್ ಆಗಿದ್ದಾರೆ. 4ನೇ ಕ್ರಮಾಂಕದಲ್ಲಿ ಅಯ್ಯರ್, ಅದ್ಭುತ ದಾಖಲೆ ಹೊಂದಿದ್ದಾರೆ. ಈವರೆಗು ಭಾರತ ಪರ 42 ಏಕದಿನ ಪಂದ್ಯಗಳನ್ನಾಡಿರೋ ಶ್ರೇಯಸ್ ಅಯ್ಯರ್, 46.6ರ ಸರಾಸರಿಯಲ್ಲಿ 1,631 ರನ್​ಗಳಿಸಿದ್ದಾರೆ. ಇದ್ರಲ್ಲಿ 2 ಶತಕ 14 ಅರ್ಧಶತಕ ಸೇರಿವೆ. ಈ ಅಂಕಿ-ಅಂಶಗಳೇ, ವಿಶ್ವಕಪ್ ಟೂರ್ನಿಯಲ್ಲಿ ಭಾರತ​ ತಂಡಕ್ಕೆ ಅಯ್ಯರ್ ಎಷ್ಟು ಇಂಪಾರ್ಟೆಂಟ್ ಅನ್ನೋದನ್ನ ಹೇಳುತ್ತಿವೆ. 

ಮುಂಬೈಕರ್ ಸ್ಥಾನದ ಮೇಲೆ ಮತ್ತೊಬ್ಬ ಮುಂಬೈಕರ್ ಕಣ್ಣು..!

ಯೆಸ್, ಈಗಾಗಲೇ ಟೆಸ್ಟ್​ ತಂಡಕ್ಕೆ ಕಮ್​ಬ್ಯಾಕ್ ಮಾಡಿರೋ ಅಜಿಂಕ್ಯ ರಹಾನೆ, ​ ಏಕದಿನ ತಂಡದ ಮೇಲೆ ಕಣ್ಣಿಟ್ಟಿದ್ದಾರೆ. ಶ್ರೇಯಸ್ ಅಯ್ಯರ್ ಇಂಜುರಿಯಿಂದಾಗಿ ಟೆಸ್ಟ್ ತಂಡದಲ್ಲಿ ರಹಾನೆಗೆ ಸ್ಥಾನ ಸಿಕ್ತು. ಈಗ ಮತ್ತೊಮ್ಮೆ ಶ್ರೇಯಸ್  ಸ್ಥಾನವನ್ನ ಆಕ್ರಮಿಸಿಕೊಳ್ಳಲು ರಹಾನೆ ರೆಡಿಯಾಗಿದ್ದಾರೆ. ಅಯ್ಯರ್ ವಿಶ್ವಕಪ್​ ಆಡದಿದ್ರೆ, ವಲ್ಡ್​ಕಪ್​ನಲ್ಲಿ 4ನೇ ಕ್ರಮಾಂಕಕ್ಕೆ ರಹಾನೆ ಸೂಕ್ತ ಅನ್ನೋ ಮಾತುಗಳು ಕೇಳಿ ಬರ್ತಿವೆ. 

ODI World Cup 2023: ಜುಲೈ 01ರಿಂದ ಏಕದಿನ ವಿಶ್ವಕಪ್ ಟಿಕೆಟ್ ಮಾರಾಟ?

ಏಕದಿನ ಫಾರ್ಮ್ಯಾಟ್​ನಲ್ಲಿ ಅಜಿಂಕ್ಯ ರಹಾನೆ ಉತ್ತಮ ಟ್ರ್ಯಾಕ್​ ರೆಕಾರ್ಡ್​ ಹೊಂದಿದ್ದಾರೆ. ಅಲ್ಲದೇ, ರಹಾನೆಗೆ ಈ ಹಿಂದೆ 2015ರ ವಿಶ್ವಕಪ್ ಆಡಿದ ಅನುಭವವಿದೆ. ಆಸ್ಟ್ರೇಲಿಯಾದಲ್ಲಿ ನಡೆದ ಟೂರ್ನಿಯಲ್ಲಿ ರಹಾನೆ ಉತ್ತಮ ಪ್ರದರ್ಶನ ನೀಡಿದ್ರು. ಈ ಎಲ್ಲಾ ಕಾರಣಗಳು ರಹಾನೆಗೆ ಪ್ಲಸ್ ಪಾಯಿಂಟ್ ಆಗಲಿವೆ. ಇದರಿಂದ ರಹಾನೆ 5 ವರ್ಷಗಳ ನಂತರ ಏಕದಿನ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ರು ಅಚ್ಚರಿ ಇಲ್ಲ.

click me!