Team India: ತವರಿನ ಕ್ರಿಕೆಟ್‌ ಸರಣಿಗಳ ವೇಳಾಪಟ್ಟಿ ರಿಲೀಸ್‌ ಮಾಡಿದ ಬಿಸಿಸಿಐ

Published : Jul 25, 2023, 09:10 PM IST
Team India: ತವರಿನ ಕ್ರಿಕೆಟ್‌ ಸರಣಿಗಳ ವೇಳಾಪಟ್ಟಿ ರಿಲೀಸ್‌ ಮಾಡಿದ ಬಿಸಿಸಿಐ

ಸಾರಾಂಶ

Indian Cricket Team Home Season: ಬಿಸಿಸಿಐ 2023-24 ನೇ ಸಾಲಿನ ಟೀಮ್ ಇಂಡಿಯಾದ ತವರಿನ ಕ್ರಿಕೆಟ್‌ ಸರಣಿಯ ವೇಳಾಪಟ್ಟಿ ಪ್ರಕಟಿಸಿದೆ. ಟೀಂ ಇಂಡಿಯಾ ತನ್ನ ತವರು ಋತುವಿನಲ್ಲಿ ಮೊದಲು ಆಸ್ಟ್ರೇಲಿಯಾವನ್ನು ಎದುರಿಸಲಿದೆ.

ಮುಂಬೈ (ಜು.25): ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 2023-24ನೇ ಸಾಲಿನ ಟೀಮ್ ಇಂಡಿಯಾದ ತವರಿನ ಕ್ರಿಕೆಟ್‌ ಸರಣಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮುಂಬರುವ ದೇಶೀಯ ಋತುವಿನಲ್ಲಿ, ಟೀಮ್‌ ಇಂಡಿಯಾ 5 ಟೆಸ್ಟ್, 3 ಏಕದಿನ  ಮತ್ತು 8 ಟಿ20 ಗಳನ್ನು ಒಳಗೊಂಡಂತೆ ಒಟ್ಟು 16 ಅಂತರಾಷ್ಟ್ರೀಯ ಪಂದ್ಯಗಳನ್ನು ಭಾರತದಲ್ಲಿ ಆಡಲಿದೆ. ಟೀಂ ಇಂಡಿಯಾ 2024ರ ವರ್ಷವನ್ನು 3 ಪಂದ್ಯಗಳ ಟಿ20 ಸರಣಿಯೊಂದಿಗೆ ಆರಂಭ ಮಾಡಲಿದೆ. ವಿಶೇಷವೆಂದರೆ, ಈ ತಂಡದ ವಿರುದ್ಧ ಭಾರತ ಇದೇ ಮೊದಲ ಬಾರಿಗೆ ತವರಿನಲ್ಲಿ ದ್ವಿಪಕ್ಷೀಯ ಸರಣಿಯನ್ನು ಆಡಲಿದೆ. 2023-24ರ ದೇಶೀಯ ಋತುವಿನಲ್ಲಿ ಟೀಂ ಇಂಡಿಯಾ ಮೊದಲು ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಏಕದಿನ ವಿಶ್ವಕಪ್‌ಗೂ ಮುನ್ನ ಅಂದರೆ, ಸೆಪ್ಟೆಂಬರ್ 22 ರಿಂದ 27 ರವರೆಗೆ, ಆಸ್ಟ್ರೇಲಿಯಾ ತಂಡವು ಭಾರತದಲ್ಲಿ ಟೀಮ್ ಇಂಡಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. 2023ರ ವಿಶ್ವಕಪ್ ಬಳಿಕ ಈ ಎರಡು ತಂಡಗಳ ನಡುವೆ 5 ಟಿ20 ಪಂದ್ಯಗಳ ಸರಣಿ ನಡೆಯಲಿದೆ. ಈ ಟಿ20 ಸರಣಿಯು ನವೆಂಬರ್ 23 ರಿಂದ ಆರಂಭವಾಗಲಿದ್ದು, ಡಿಸೆಂಬರ್ 3 ರವರೆಗೆ ನಡೆಯಲಿದೆ.

ಅಫ್ಘಾನಿಸ್ತಾನ ವಿರುದ್ಧ ಮೊದಲ ಬಾರಿಗೆ ಟಿ20 ಸರಣಿ: ಹೊಸ ವರ್ಷದ ಆರಂಭದಲ್ಲಿ, ಅಫ್ಘಾನಿಸ್ತಾನ ತಂಡವು ಸೀಮಿತ ಓವರ್‌ಗಳ ದ್ವಿಪಕ್ಷೀಯ ಪ್ರವಾಸಕ್ಕಾಗಿ ಭಾರತಕ್ಕೆ ಬರಲಿದೆ. ಈ ಟಿ20 ಸರಣಿಯ ಮೊದಲ ಪಂದ್ಯ ಮೊಹಾಲಿಯಲ್ಲಿ, ಎರಡನೇ ಪಂದ್ಯ ಇಂದೋರ್‌ನಲ್ಲಿ ಮತ್ತು ಅಂತಿಮ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ. ಜನವರಿ 11ರಿಂದ ಜನವರಿ 17ರವರೆಗೆ ಈ ಸರಣಿ ನಡೆಯಲಿದ್ದು, ಅಫ್ಘಾನಿಸ್ತಾನದ ಬಳಿಕ ಇಂಗ್ಲೆಂಡ್ ತಂಡ ಭಾರತ ಪ್ರವಾಸಕ್ಕೆ ಬರಲಿದೆ. ಈ ಪ್ರವಾಸದಲ್ಲಿ ಉಭಯ ತಂಡಗಳ ನಡುವೆ 5 ಟೆಸ್ಟ್ ಪಂದ್ಯಗಳು ನಡೆಯಲಿವೆ.

ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ
ಮೊದಲ ಏಕದಿನ - ಸೆಪ್ಟೆಂಬರ್ 22, ಮೊಹಾಲಿ
2ನೇ ಏಕದಿನ - ಸೆಪ್ಟೆಂಬರ್ 24, ಇಂದೋರ್
3ನೇ ಏಕದಿನ - ಸೆಪ್ಟೆಂಬರ್ 27, ರಾಜ್‌ಕೋಟ್‌

ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಟಿ20 ಸರಣಿ
1ನೇ ಟಿ20 - 23 ನವೆಂಬರ್, ವಿಶಾಖಪಟ್ಟಣ
2ನೇ ಟಿ20 - 26 ನವೆಂಬರ್, ತಿರುವನಂತಪುರ
3ನೇ ಟಿ20 - 28 ನವೆಂಬರ್, ಗುವಾಹಟಿ
4ನೇ ಟಿ20 - 1 ಡಿಸೆಂಬರ್, ನಾಗ್ಪುರ
5ನೇ ಟಿ20 - 3 ಡಿಸೆಂಬರ್, ಹೈದರಾಬಾದ್

ಅಫ್ಘಾನಿಸ್ತಾನ ವಿರುದ್ಧ 3 ಟಿ20 ಪಂದ್ಯದ ಸರಣಿ
ಮೊದಲ ಟಿ20 - 11 ಜನವರಿ 2024, ಮೊಹಾಲಿ
2 ನೇ T20 - 14 ಜನವರಿ 2024, ಇಂದೋರ್
3ನೇ ಟಿ20 - 17 ಜನವರಿ 2024, ಬೆಂಗಳೂರು

Video: ಕಡುಕತ್ತಲ ದಾರಿಯಲ್ಲಿ ಚಂದ್ರನೂರಿಗೆ ಭಾರತದ ಯಾನ, ಟೆಲಿಸ್ಕೋಪ್‌ನಲ್ಲಿ ಸೆರೆಯಾಯ್ತು ಚಂದ್ರಯಾನ!

ಇಂಗ್ಲೆಂಡ್ ವಿರುದ್ಧ 5 ಟೆಸ್ಟ್ ಪಂದ್ಯದ ಸರಣಿ
1 ನೇ ಟೆಸ್ಟ್ - 25-29 ಜನವರಿ 2024, ಹೈದರಾಬಾದ್
2ನೇ ಟೆಸ್ಟ್ - 2-6 ಫೆಬ್ರವರಿ 2024, ವಿಶಾಖಪಟ್ಟಣ
3ನೇ ಟೆಸ್ಟ್ - 15-19 ಫೆಬ್ರವರಿ 2024, ರಾಜ್‌ಕೋಟ್
4 ನೇ ಟೆಸ್ಟ್ - 23-27 ಫೆಬ್ರವರಿ 2024, ರಾಂಚಿ
5 ನೇ ಟೆಸ್ಟ್ - 7-11 ಮಾರ್ಚ್ 2024, ಧರ್ಮಶಾಲಾ

ಕ್ರೀಡಾಗ್ರಾಮದಲ್ಲಿ ಮಗುವಿಗೆ ಅವಕಾಶವಿಲ್ಲ, ಏಷ್ಯಾಡ್‌ನಿಂದ ಹಿಂದೆ ಸರಿದ ಬಿಸ್ಮಾ!

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?