
ಮುಂಬೈ(ಅ.14): ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಅ.23 ರಂದು ನಡೆಯಲಿರುವ ಬಿಸಿಸಿಐ ಚುನಾವಣೆಯಲ್ಲಿ ಗಂಗೂಲಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಇದೀಗ ಗಂಗೂಲಿ ಅಧ್ಯಕ್ಷ ಪಟ್ಟ ಪಕ್ಕಾ ಆಗುತ್ತಿದ್ದಂತೆ, ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಟ್ರೋಲ್ ಆಗಿದ್ದಾರೆ.
ಇದನ್ನೂ ಓದಿ: ಸೌರವ್ ಗಂಗೂಲಿಗೆ ಬಿಸಿಸಿಐ ಅಧ್ಯಕ್ಷ, ಬ್ರಿಜೇಶ್ ಪಟೇಲ್‌ಗೆ ಐಪಿಎಲ್ ಹೊಣೆ?
ಭಾರತೀಯ ಕ್ರಿಕೆಟ್ ಕ್ಷೇತ್ರದಲ್ಲಿ ಅತೀ ಹೆಚ್ಚು ಟ್ರೋಲ್ ಆದವರ ಪಟ್ಟಿಯಲ್ಲಿ ರವಿ ಶಾಸ್ತ್ರಿಗೆ ಅಗ್ರಸ್ಥಾನ. ಇದೀಗ ಗಂಗೂಲಿ ಬಿಸಿಸಿಐ ಅಧ್ಯಕ್ಷ ಪಟ್ಟ ಒಲಿಯುತ್ತಿದ್ದಂತೆ, ಅಭಿಮಾನಿಗಳು ಶಾಸ್ತ್ರಿಯನ್ನು ಟ್ರೋಲ್ ಮಾಡಿದ್ದಾರೆ. ಹಿಂದಿನಿಂದಲೂ ಸೌರವ್ ಗಂಗೂಲಿ ಹಾಗೂ ರವಿ ಶಾಸ್ತ್ರಿ ನಡುವೆ ಮನಸ್ತಾಪವಿದೆ. ಮೊದಲ ಬಾರಿ ಕೋಚ್ ಆಯ್ಕೆ ಸಂದರ್ಭದಲ್ಲಿ ಸೌರವ್ ಗಂಗೂಲಿ, ರವಿ ಶಾಸ್ತ್ರಿ ಸಂದರ್ಶನ ಮಾಡಿರಲಿಲ್ಲ. ಗಂಗೂಲಿ ವಿರುದ್ದ ಹಲವು ಬಾರಿ ಶಾಸ್ತ್ರಿ ವಾಕ್ಸಮರ ನಡೆಸಿದ್ದಾರೆ. ಹೀಗಾಗಿ ಅಭಿಮಾನಿಗಳು ಮತ್ತೆ ಶಾಸ್ತ್ರಿಯನ್ನು ಟ್ರೋಲ್ ಮಾಡಿದ್ದಾರೆ.
ಇದನ್ನೂ ಓದಿ: ದಾದಾ'ಗಿರಿಯ ಆನ್ ಫೀಲ್ಡ್ Untold ಸ್ಟೋರಿ
ಗಂಗೂಲಿಯೇ ಬಾಸ್ ಆಗಿದ್ದಾರೆ. ಈಗ ಶಾಸ್ತ್ರಿ ಪರಿಸ್ಥಿತಿ ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಶಾಸ್ತ್ರಿ ಕೋಚ್ ಆಗಿ ಅವಧಿ ಪೂರ್ಣಗೊಳಿಸುವ ಸಾಧ್ಯತೆ ಕಡಿಮೆ ಎಂದು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.
ಅಕ್ಟೋಬರ್ 14ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.