ಪಾಕ್‌ನಲ್ಲಿ ಉಸಿರುಗಟ್ಟುವ ವಾತಾವರಣ; ಸತ್ಯ ಬಾಯ್ಬಿಟ್ಟ ಲಂಕಾ ಕ್ರಿಕೆಟ್ ಮುಖ್ಯಸ್ಥ!

By Web DeskFirst Published Oct 14, 2019, 11:59 AM IST
Highlights

ಶ್ರೀಲಂಕಾ ತಂಡದ ಜೊತೆ ಪಾಕಿಸ್ತಾನ ಪ್ರವಾಸ ಮಾಡಿದ್ದ ಕ್ರಿಕೆಟ್ ಮುಖ್ಯಸ್ಥ ಶಮ್ಮಿ ಸಿಲ್ವಾ ಇದೀಗ ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಪಾಕಿಸ್ತಾನ ಪ್ರವಾಸ ಮಾಡಲು   ಯೋಚಿಸಬೇಕಿದೆ ಎಂದಿದ್ದಾರೆ. 

ಕೊಲೊಂಬೊ(ಅ.14): ಕ್ರಿಕೆಟ್ ಸರಣಿಗಾಗಿ ಶ್ರೀಲಂಕಾ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿದೆ. ಪಾಕಿಸ್ತಾನದಲ್ಲಿ ಏಕದಿನ ಹಾಗೂ ಟಿ20 ಸರಣಿ ಆಡಿರುವ ಶ್ರೀಲಂಕಾ ಇದೀಗ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದೆ. 2009ರ ಭಯೋತ್ಪಾದಕ ದಾಳಿ ಬಳಿಕ ಮತ್ತೆ ಪಾಕಿಸ್ತಾನಕ್ಕೆ ಕಾಲಿಟ್ಟಿರುವ ಲಂಕಾ ತಂಡಕ್ಕೆ ಗರಿಷ್ಠ ಭದ್ರತೆ ನೀಡಲಾಗಿತ್ತು. ಇದೀಗ ಲಂಕಾ ತಂಡದ ಜೊತೆ ಪ್ರವಾಸ ಮಾಡಿದ್ದ  ಕ್ರಿಕೆಟ್ ಮುಖ್ಯಸ್ಥ ಶಮ್ಮಿ ಸಿಲ್ವಾ ಪಾಕಿಸ್ತಾನದಲ್ಲಿನ ವಾತಾವರಣವನ್ನು ಬಹಿರಂಗ ಪಡಿಸಿದ್ದಾರೆ.

ಇದನ್ನೂ ಓದಿ: ಭಾರತದ ಮೇಲೆ ಗೂಬೆ ಕೂರಿಸಿದ ಪಾಕ್ ಸಚಿವನಿಗೆ ಲಂಕಾ ಚಾಟಿ!

ಪಾಕಿಸ್ತಾನ ಅಹಿತರ ಘಟನೆ ನಡೆಯದಂತೆ ಗರಿಷ್ಠ ಭದ್ರತೆ ನೀಡಿದೆ. ಲಂಕಾ ತಂಡದ ಜೊತೆ ನಾನು ಕೂಡ ಪ್ರವಾಸ ಮಾಡಿದ್ದೆ.  ಆದರೆ 3 ರಿಂದ 4 ದಿನ ಹೊಟೆಲ್‌ನಲ್ಲೇ ತಂಗಬೇಕು. ಹೊರಗಡೆ ಹೋಗುವಂತಿಲ್ಲ. ನನಗೆ ಸಾಧ್ಯವಾಗಲಿಲ್ಲ. ಇನ್ನು ಆಟಗಾರರಿಗೆ ಹೇಗೆ ಸಾಧ್ಯ.  ಪಾಕಿಸ್ತಾನದಲ್ಲಿ ಉಸಿರುಗಟ್ಟುವ ವಾತಾವರಣವಿದೆ ಎಂದು ಶಮ್ಮಿ ಸಿಲ್ವಾ ಹೇಳಿದ್ದಾರೆ.

ಇದನ್ನೂ ಓದಿ:  ಪಾಕಿಸ್ತಾನ ಪ್ರವಾಸಕ್ಕೆ 10 ಲಂಕಾ ಕ್ರಿಕೆಟಿಗರ ನಕಾರ!

ಪರಿಸ್ಥಿತಿ ಈ ರೀತಿ ಇರುವುದರಿಂದ ಟೆಸ್ಟ್ ಸರಣಿಗೂ ಮೊದಲು ಶ್ರೀಲಂಕಾ ಆಟಗಾರರ ಅಭಿಪ್ರಾಯ ಕೇಳಬೇಕಿದೆ ಎಂದಿದ್ದಾರೆ. ಈ ಮೂಲಕ ಪಾಕ್ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸುವ ಸೂಚನೆ ನೀಡಿದ್ದಾರೆ.

ಲಂಕಾ ಆಟಗಾರರು ತಂಗುವ ಹೊಟೆಲ್, ಸಾಗುವ ಮಾರ್ಗ ಸೇರಿದಂತೆ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಗುತ್ತೆ. ಪಾಕಿಸ್ತಾನ ಕ್ರಿಕೆಟ್ ನಮಗೆ ಸಹಯಾ ಮಾಡಿದೆ. ಹೀಗಾಗಿ ನಾವು ಪಾಕಿಸ್ತಾನ ಪ್ರವಾಸಕ್ಕೆ ಒಪ್ಪಿದ್ದೇವೆ. ಹಾಗಂತ ನಾವು ಎಷ್ಟು ದಿನ ಇದನ್ನು ಸಹಿಸಿಕೊಂಡು ಪಾಕಿಸ್ತಾನದಲ್ಲಿರಬೇಕು ಎಂದು ಶಮ್ಮಿ ಸಿಲ್ವಾ ಪ್ರಶ್ನಿಸಿದ್ದಾರೆ. 

ಇದನ್ನೂ ಓದಿ: ಕ್ರಿಕೆಟಿಗರ ಟಿ ಟಾಲೆಂಜ್‌ನಲ್ಲಿ ಪೈಲೆಟ್ ಅಭಿನಂದನ್ ಎಳೆದುತಂದ ಪಾಕಿಸ್ತಾನಿ ಫ್ಯಾನ್ಸ್!

ಪಾಕಿಸ್ತಾನ ವಿರುದ್ದ ಏಕದಿನ ಸರಣಿಯನ್ನು 0-2 ಅಂತರದಲ್ಲಿ ಸೋತ ಶ್ರೀಲಂಕಾ, ಟಿ20 ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿತು. ಬಳಿಕ ತವರಿಗೆ ಮರಳಿರುವ ಶ್ರೀಲಂಕಾ ಇನ್ನು ಟೆಸ್ಟ್ ಸರಣಿಗಾಗಿ ಡಿಸೆಂಬರ್‌ನಲ್ಲಿ ಮತ್ತೆ ಪಾಕಿಸ್ತಾನ ಪ್ರವಾಸ ಕೈಗೊಳ್ಳಬೇಕಿದೆ.

click me!