ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಬಿಸಿಸಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಲಿದ್ದಾರೆ. ಅಧ್ಯಕ್ಷ ಗಾದಿಗೇರೋ ಮುನ್ನ ಕೊಲ್ಕತಾ ಪ್ರಿನ್ಸ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಗಂಗೂಲಿ ಮೊದಲ ಕಾರ್ಯವೇನು? ಈ ಕುರಿತ ಸ್ವತಃ ಗಂಗೂಲಿ ಮಾತನಾಡಿದ್ದಾರೆ.
ಮಂಬೈ(ಅ.14): ಬಿಸಿಸಿಐ ನೂನತ ಅಧ್ಯಕ್ಷರಾಗಿ ಮಾಜಿ ನಾಯಕ, ಬಂಗಾಳ ಕ್ರಿಕೆಟ್ ಸಂಸ್ಛೆ ಅಧ್ಯಕ್ಷ ಸೌರವ್ ಗಂಗೂಲಿ ಆಯ್ಕೆ ಬಹುತೇಕ ಖಚಿತಗೊಂಡಿದೆ. ಬಿಸಿಸಿಐ ಚುನಾವಣೆಗೆ ಗಂಗೂಲಿ ಒಮ್ಮತದ ಅಭ್ಯರ್ಥಿಯಾಗಿದ್ದಾರೆ. ಇಷ್ಟೇ ಅಲ್ಲ ಕಣದಲ್ಲಿದ್ದ ಕರ್ನಾಟಕ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಹಿಂದೆ ಸರಿದಿರುವ ಕಾರಣ, ಗಂಗೂಲಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಬಿಸಿಸಿಐ ಅಧ್ಯಕ್ಷಗಾದಿಗೇರಲು ತಯಾರಿ ನಡೆಸಿರುವ ಗಂಗೂಲಿ ಇದೀಗ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಸೌರವ್ ಗಂಗೂಲಿಗೆ ಬಿಸಿಸಿಐ ಅಧ್ಯಕ್ಷ, ಬ್ರಿಜೇಶ್ ಪಟೇಲ್‌ಗೆ ಐಪಿಎಲ್ ಹೊಣೆ?
undefined
ಬಿಸಿಸಿಐ ಅಧ್ಯಕ್ಷನಾಗಿ ಸೇವೆ ಸಲ್ಲಿಸುವುದು ಅತ್ಯಂತ ಶ್ರೇಷ್ಠ ಅವಕಾಶ. ನಾನು ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದೇನೆ. ನಾಯಕನಾಗಿ ತಂಡವನ್ನು ಮುನ್ನಡೆಸಿದ್ದೇನೆ. ಇದೀಗ ಬಿಸಿಸಿಐ ಅಧ್ಯಕ್ಷನಾಗುತ್ತಿರುವುದು ಸಂತಸ ತಂದಿದೆ. ಕ್ರಿಕೆಟ್ ನನಗೆ ಎಲ್ಲವನ್ನೂ ಕೊಟ್ಟಿದೆ. ಇದೀಗ ಕ್ರಿಕೆಟ್‌ಗಾಗಿ ನಾನು ಕೊಡುಗೆ ಸಲ್ಲಿಸಲು ಉತ್ತಮ ಅವಕಾಶ. ಬಂಗಾಳ ಕ್ರಿಕಟ್ ಸಂಸ್ಥೆಯ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಇದೀಗ ಬಿಸಿಸಿಐ ಎಂದು ಸೌರವ್ ಗಂಗೂಲಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಸೌರವ್ ಗಂಗೂಲಿಗೆ ಮತ್ತೆ ಸ್ವಹಿತಾಸಕ್ತಿ ಸಂಕಷ್ಟ!
ಅಧ್ಯಕ್ಷನಾದ ಬಳಿಕ ಪ್ರಥಮ ದರ್ಜೆ ಕ್ರಿಕೆಟ್ ಆಡುತ್ತಿರುವ ಕ್ರಿಕೆಟಿಗರ ಆರ್ಥಿಕ ಸ್ಥಿತಿಗತಿ ಉತ್ತಮ ಪಡಿಸಿವುದು ನನ್ನ ಮೊದಲ ಕೆಲಸ. ದೇಸಿ ಕ್ರಿಕೆಟ್ ಆಡುವ ಕ್ರಿಕೆಟಿಗರ ವೇತನ, ದಿನಭತ್ಯೆ ಸೇರಿದಂತೆ ಇತರ ವೆಚ್ಚಗಳನ್ನು ಹೆಚ್ಚಿಸುವುದಾಗಿ ಹೇಳಿದ್ದಾರೆ. ಕಳೆದ 3 ವರ್ಷಗಳಿಂದ ಬಿಸಿಸಿಐ COAಗೆ ಪತ್ರ ಬರೆದಿದ್ದೇನೆ. ಆದರೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ನಾನು ಅಧಿಕಾರ ವಹಿಸಿಕೊಂಡ ಬಳಿಕ ಪ್ರಥಮ ದರ್ಜೆ ಕ್ರಿಕೆಟಿಗರ ಆರ್ಥಿಕ ಸಂಕಷ್ಟವನ್ನು ಬಗೆಹರಿಸುತ್ತೇನೆ ಎಂದಿದ್ದಾರೆ.