ಟಿ20 ಕ್ರಿಕೆಟ್‌ಗೆ ನಿವೃತ್ತಿ ಕುರಿತಂತೆ BCCIಗೆ ಸೆಡ್ಡು ಹೊಡೆದ್ರಾ ಕ್ಯಾಪ್ಟನ್‌ ರೋಹಿತ್ ಶರ್ಮಾ..?

By Suvarna News  |  First Published Aug 9, 2023, 5:02 PM IST

ರೋಹಿತ್ ಶರ್ಮಾ ಟಿ20 ಕ್ರಿಕೆಟ್ ಬದುಕು ಮುಗೀತಾ?
ಗಾಳಿ ಸುದ್ದಿಗಳಿಗೆ ತೆರೆ ಎಳೆದ ಹಿಟ್‌ಮ್ಯಾನ್‌
ಬಿಸಿಸಿಐಗೆ ಪರೋಕ್ಷ ಸವಾಲೆಸೆದರಾ ಟೀಂ ಇಂಡಿಯ ನಾಯಕ


ಬೆಂಗಳೂರು(ಆ.09): ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸದ್ಯ ಟಿ20 ತಂಡದಿಂದ ಹೊರಗುಳಿದಿದ್ದಾರೆ. ಕಳೆದ ವರ್ಷ ನಡೆದ ಟಿ20 ವಿಶ್ವಕಪ್​ ನಂತರ ಇವರಿಬ್ಬರು  ಯಾವುದೇ ಟಿ20 ಪಂದ್ಯವಾಡಿಲ್ಲ. ಸದ್ಯ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಿಂದಲೂ ರೆಸ್ಟ್ ನೀಡಲಾಗಿದೆ.  ಇದರಿಂದ ಇವರ ಟಿ20 ಕರಿಯರ್ ಆಲ್​ಮೋಸ್ಟ್ ಕ್ಲೋಸ್ ಅನ್ನೋ ಮಾತುಗಳು ಕೇಳಿಬರ್ತಿವೆ. 

ಏಕದಿನ ವಿಶ್ವಕಪ್ ಮುಗಿದ ಕೆಲವೇ ತಿಂಗಳಲ್ಲಿ ಟಿ20 ವಿಶ್ವಕಪ್ ಸಮರ ನಡೆಯಲಿದೆ. 2007ರ ನಂತರ ಭಾರತ ಟಿ20 ವಿಶ್ವಕಪ್ ಸಮರ ಗೆದ್ದಿಲ್ಲ. ಅಲ್ಲದೇ ಕಳೆದೆರೆಡು ಟಿ20 ವಿಶ್ವಕಪ್​ ಟೂರ್ನಿಗಳಲ್ಲಿ ತಂಡ ಹೀನಾಯ ಪ್ರದರ್ಶನ ನೀಡಿದೆ. ಇದರಿಂದ 2024ರಲ್ಲಿ ಶತಾಯ ಗತಾಯ ಟಿ20 ವಿಶ್ವಕಪ್​ ಗೆಲ್ಲಲೇಬೇಕು ಅಂತ ಪಣ ಬಿಸಿಸಿಐ ಪಣ ತೊಟ್ಟಿದೆ. 

Latest Videos

undefined

ಕೊಹ್ಲಿಗೀಗ 34 ವರ್ಷವಾದ್ರೆ, ರೋಹಿತ್ ಶರ್ಮಾಗೆ 36 ವರ್ಷ ವಯಸ್ಸಾಗಿದೆ. ಇದರಿಂದ ಇವರಿಬ್ಬರನ್ನ ಟಿ20 ಕ್ರಿಕೆಟ್​ನಿಂದ ಹೊರಗಿಟ್ಟು, ಮುಂದಿನ ವರ್ಷ ನಡೆಯೋ ಟಿ20 ವಿಶ್ವಕಪ್ ವೇಳೆಗೆ, ಕಂಪ್ಲೀಟ್​ ಯಂಗ್ ಟೀಮ್ ಕಟ್ಟೋದು ಬಿಸಿಸಿಐ ಪ್ಲಾನ್​ ಆಗಿದೆ. ಆದ್ರೆ, ಮತ್ತೊಂದೆಡೆ ರೋಹಿತ್ ಶರ್ಮಾ ಮಾತ್ರ ಇನ್ನು ಟಿ20ವಿಶ್ವಕಪ್ ಆಡುವ ಕನಸು ಕಾಣ್ತಿದ್ದಾರೆ. 

T20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ ಬಾರಿಸಿದವರು ಯಾರು? ಗೇಲ್‌ ದಾಖಲೆ ಮುರಿಯಲು ಸಾಧ್ಯನಾ..?

ಟಿ20 ಕ್ರಿಕೆಟ್​ನಲ್ಲಿ ನನ್ನ ಆಟ ಇನ್ನು ಮುಗಿದಿಲ್ಲ..!

ಯೆಸ್, ಅಮೇರಿಕಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಿಟ್​ಮ್ಯಾನ್ 2024ರ ವಿಶ್ವಕಪ್ ಆಡುವ ಆಸೆ ವ್ಯಕ್ತಪಡಿಸಿದ್ದಾರೆ. ಅಕಾಡೆಮಿಯೊಂದರ ಉದ್ಘಾಟನೆ ವೇಳೆ ರೋಹಿತ್ ಶರ್ಮಾ​, ತಮ್ಮ ರಿಟೈರ್​​ಮೆಂಟ್​ಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸುತ್ತಾ, ಮುಂದಿನ ವರ್ಷ ವಿಂಡೀಸ್ ಮತ್ತು ಅಮೇರಿಕಾದಲ್ಲಿ T20 ವಿಶ್ವಕಪ್ ನಡೆಯಲಿದೆ. ನಾನು ಆ ಮೆಗಾ ಟೂರ್ನಿಯಲ್ಲಿ ಆಡಲು ಬಯಸಿದ್ದೇನೆ  ಅಂತ ಹೇಳಿದ್ದಾರೆ. 

ಮತ್ತೆ ಟಿ20 ತಂಡದಲ್ಲಿ ಸ್ಥಾನ ಸಿಗೋದು ಅನುಮಾನ..!

ಯೆಸ್, ರೋಹಿತ್​ಯೇನೋ ತಮ್ಮ ಮನದಾಸೆಯನ್ನ ಹೊರಹಾಕಿದ್ದಾರೆ. ಆದ್ರೆ, ಟಿ20 ತಂಡದಲ್ಲಿ ರೋಹಿತ್​ಗೆ ಮತ್ತೆ ಸ್ಥಾನ ಸಿಗೋದು ಅನುಮಾನವಾಗಿದೆ. ಕೇವಲ ವಯಸ್ಸಿನ ಕಾರಣದಿಂದ ಈ ಮಾತನ್ನ ಹೇಳ್ತಿಲ್ಲ. ವಯಸ್ಸಿನ ಜೊತೆಗೆ  ಚುಟಕು ಕ್ರಿಕೆಟ್​ನಲ್ಲಿ ರೋಹಿತ್ ಪ್ರದರ್ಶನವೂ ಹೇಳಿಕೊಳ್ಳುವಂತಿಲ್ಲ. ಕಳೆದ ಟಿ20 ವಿಶ್ವಕಪ್​ನಲ್ಲಿ ರೋಹಿತ್ ಶರ್ಮಾ ಫೇಲ್ ಆಗಿದ್ರು. ಅಲ್ಲದೇ, ಐಪಿಎಲ್‌ನಲ್ಲೂ ರೋಹಿತ್ ಘರ್ಜಿಸ್ತಿಲ್ಲ. 

ಸೂರ್ಯನಬ್ಬರಕ್ಕೆ ಕರಗಿದ ವೆಸ್ಟ್‌ ಇಂಡೀಸ್‌; ಟೀಂ ಇಂಡಿಯಾಗೆ ಮೊದಲ ಟಿ20 ಗೆಲುವು..!

ಒಟ್ಟಿನಲ್ಲಿ ಟಿ20 ವಿಶ್ವಕಪ್ ತಂಡದಲ್ಲಿ ರೋಹಿತ್​ಗೆ ಸ್ಥಾನ ಸಿಗುತ್ತೋ ಇಲ್ವೋ ಗೊತ್ತಿಲ್ಲ. ಆದ್ರೆ, ಬಿಸಿಸಿಐ ಮತ್ತು ಸೆಲೆಕ್ಟರ್ಸ್​ಗೆ ಮಾತ್ರ ಟಿ20 ಕ್ರಿಕಟ್​ನಲ್ಲಿ ನನ್ನ ಆಟ ಇನ್ನು ಮುಗಿದಿಲ್ಲ ಅನ್ನೋ ಸಂದೇಶ ರವಾನಿಸಿದ್ದಾರೆ. 

ಮಹೇಶ್ ಗುರಣ್ಣನವರ್, ಸ್ಪೋರ್ಟ್ಸ್ ಬ್ಯರೋ, ಏಷ್ಯಾನೆಟ್ ಸುವರ್ಣ ನ್ಯೂಸ್

click me!