3ನೇ ಟಿ20 ಪಂದ್ಯದಲ್ಲಿ ಭಾರತಕ್ಕೆ 7 ವಿಕೆಟ್ ಸುಲಭ ಜಯ
ಪಂದ್ಯ ಗೆದ್ದು ಸರಣಿ ಜಯದಾಸೆ ಜೀವಂತವಾಗಿರಿಸಿಕೊಂಡ ಪಾಂಡ್ಯ ಪಡೆ
ಸ್ಪೋಟಕ ಅರ್ಧಶತಕ ಸಿಡಿಸಿ ಮಿಂಚಿದ ಸೂರ್ಯಕುಮಾರ್ ಯಾದವ್
ಪ್ರಾವಿಡೆನ್ಸ್(ಗಯಾನ): ಸೂರ್ಯಕುಮಾರ್ ಯಾದವ್ ಸ್ಫೋಟಿಸಿದಾಗ ಭಾರತ ಗೆಲುವು ನಿಶ್ಚಿತ. ಏಕಾಂಗಿಯಾಗಿ ಪಂದ್ಯ ಗೆಲ್ಲಿಸಬಲ್ಲ ಸಾಮರ್ಥ್ಯವಿರುವ ವಿಶ್ವ ನಂ.1 ಬ್ಯಾಟರ್ ಸೂರ್ಯ, ಮಂಗಳವಾರ ವಿಂಡೀಸ್ ವಿರುದ್ಧದ 3ನೇ ಟಿ20ಯಲ್ಲಿ ಲಯಕ್ಕೆ ಮರಳಿ ಭಾರತದ 7 ವಿಕೆಟ್ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. 5 ಪಂದ್ಯಗಳ ಸರಣಿಯಲ್ಲಿ ಜಯದ ಖಾತೆ ತೆರೆದಿರುವ ಭಾರತ, ಸರಣಿ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಮೊದಲೆರೆಡು ಪಂದ್ಯಗಳಿಗೆ ಹೋಲಿಸಿದರೆ ಈ ಪಂದ್ಯದಲ್ಲಿ ಭಾರತದ ಯೋಜನೆಗಳು ಸುಧಾರಿಸಿದಂತೆ ಕಂಡು ಬಂತು. ನಿಕೋಲಸ್ ಪೂರನ್‌ರನ್ನು ಕಟ್ಟಿಹಾಕಲು ಭಾರತೀಯ ಸ್ಪಿನ್ನರ್‌ಗಳು ಯಶಸ್ವಿಯಾದರು. ನಾಯಕ ರೋವ್ಮನ್ ಪೋವೆಲ್(19 ಎಸೆತದಲ್ಲಿ 40 ರನ್)ರ ವೀರಾವೇಶದ ನೆರವಿನಿಂದ ವಿಂಡೀಸ್ 5 ವಿಕೆಟ್‌ಗೆ 159 ರನ್ ಕಲೆಹಾಕಿ, ಭಾರತಕ್ಕೆ ಸ್ಪರ್ಧಾತ್ಮಕ ಗುರಿ ನೀಡಿತು. ಪಾದಾರ್ಪಣಾ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಕೇವಲ 1 ರನ್‌ಗೆ ಔಟಾದರೆ, ಗಿಲ್(11 ಎಸೆತದಲ್ಲಿ 6 ರನ್) ಮತ್ತೊಮ್ಮೆ ವೈಫಲ್ಯ ಕಂಡರು. ಆದರೆ ಸೂರ್ಯ ಹಾಗೂ ತಿಲಕ್ ವರ್ಮಾ, ವಿಂಡೀಸ್ ಬೌಲರ್‌ಗಳನ್ನು ದಂಡಿಸಿದರು.
undefined
"ಪಾಂಡ್ಯಗೆ ಸಿಗಬೇಕಾದ ಬೆಂಬಲ ಕೋಚ್ ದ್ರಾವಿಡ್‌ನಿಂದ ಸಿಕ್ತಿಲ್ಲ": ಮಾಜಿ ಕ್ರಿಕೆಟಿಗನ ಅಚ್ಚರಿಯ ಹೇಳಿಕೆ..!
ಸಣ್ಣಗೆ ಮಳೆ ಬೀಳುತ್ತಿದ್ದ ಕಾರಣ, ಮೊದಲು 5 ಓವರ್ ಮುಕ್ತಾಯಕ್ಕೆ ಡಕ್ವರ್ತ್ ಯಿಸ್ ನಿಯಮದನ್ವಯ ಬೇಕಿದ್ದ ಗುರಿ ದಾಟುವುದು ಭಾರತದ ಉದ್ದೇಶವಾಗಿತ್ತು. ಹೀಗಾಗಿ ತಿಲಕ್ ಕ್ರೀಸ್ಗಿಳಿಯುತ್ತಿದ್ದಂತೆ ಸತತ 2 ಬೌಂಡರಿ ಬಾರಿಸಿದರು. 5 ಓವರಲ್ಲಿ ಭಾರತ 40 ರನ್ ಗಳಿಸಬೇಕಿತ್ತು. ತಂಡ 2 ವಿಕೆಟ್‌ಗೆ 43 ರನ್ ಕಲೆಹಾಕಿ ಮುಂದಿತ್ತು.
ಪವರ್-ಪ್ಲೇ ಮುಕ್ತಾಯಕ್ಕೆ 60 ರನ್ ಚಚ್ಚಿದ ಭಾರತ, ವಿಂಡೀಸ್‌ಗೆ ಪುಟಿದೇಳಲು ಬಿಡಲಿಲ್ಲ. ಸೂರ್ಯ 23 ಎಸೆತದಲ್ಲಿ ಅರ್ಧಶತಕ ಪೂರೈಸಿ ಶತಕದತ್ತ ಮುನ್ನುಗ್ಗಿದರು. ಆದರೆ 83 ರನ್ (44 ಎಸೆತ, 10 ಬೌಂಡರಿ, 4 ಸಿಕ್ಸರ್) ಗಳಿಸಿದ್ದಾಗ ಅವರ ಇನ್ನಿಂಗ್‌್ಸಗೆ ತೆರೆ ಬಿತ್ತು. ತಿಲಕ್ ಜೊತೆ 50 ಎಸೆತದಲ್ಲಿ 87 ರನ್‌ಗಳ ಜೊತೆಯಾಟವೂ ಕೊನೆಗೊಂಡಿತು. ತಿಲಕ್(49*), ಹಾರ್ದಿಕ್(20*) ಭಾರತವನ್ನು 13 ಎಸೆತ ಬಾಕಿ ಇರುವಂತೆಯೇ ದಡ ಸೇರಿಸಿದರು.
ವಿಂಡೀಸ್ ಎದುರಿನ 3ನೇ ಟಿ20 ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಮೇಜರ್ ಸರ್ಜರಿ, 2 ಬದಲಾವಣೆ..! ಭಾರತ ಸಂಭಾವ್ಯ ತಂಡ
ಇದಕ್ಕೂ ಮುನ್ನ ಕುಲ್ದೀಪ್ ಯಾದವ್, ವಿಂಡೀಸ್ ಓಟಕ್ಕೆ ಅಡ್ಡಿಯಾದರು. ಕಿಂಗ್(42), ಚಾರ್ಲ್ಸ್(12), ಪೂರನ್(20) ಅಪಾಯಕಾರಿಯಾಗಲು ಕುಲ್ದೀಪ್ ಬಿಡಲಿಲ್ಲ. ಹಾರ್ದಿಕ್, ಅಕ್ಷರ್ ಸಹ ಉತ್ತಮ ದಾಳಿ ಸಂಘಟಿಸಿ ವಿಂಡೀಸ್ ದೊಡ್ಡ ಮೊತ್ತ ಕಲೆಹಾಕದಂತೆ ನೋಡಿಕೊಂಡರು.
ಸ್ಕೋರ್:
ವಿಂಡೀಸ್ 20 ಓವರಲ್ಲಿ 159/5(ಕಿಂಗ್ 42, ಪೋವೆಲ್ 40*, ಕುಲ್ದೀಪ್ 3-28)
ಭಾರತ 17.5 ಓವರಲ್ಲಿ 164/3(ಸೂರ್ಯ 83, ತಿಲಕ್ 49*, ಜೋಸೆಫ್ 2-25)
ಪಂದ್ಯಶ್ರೇಷ್ಠ: ಸೂರ್ಯಕುಮಾರ್
ಟರ್ನಿಂಗ್ ಪಾಯಿಂಟ್
ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್ ವರ್ಮಾ ನಡುವಿನ ಜೊತೆಯಾಟ ಭಾರತದ ಗೆಲುವಿಗೆ ಪ್ರಮುಖ ಕಾರಣ. ಈ ಇಬ್ಬರ ಪೈಕಿ ಒಬ್ಬರು ಪವರ್-ಪ್ಲೇನಲ್ಲೇ ಔಟಾಗಿದ್ದರೆ ತಂಡದ ಮೇಲೆ ಒತ್ತಡ ಹೆಚ್ಚಾಗಿ ಸೋಲಿನತ್ತ ಮುಖ ಮಾಡುವ ಸಾಧ್ಯತೆ ಇತ್ತು.
ಇಂಟ್ರೆಸ್ಟಿಂಗ್ ಅಂಕಿ-ಅಂಶ:
01 ಬೌಲರ್
ಅಂ.ರಾ. ಟಿ20ಯಲ್ಲಿ ಅತಿವೇಗವಾಗಿ (30 ಪಂದ್ಯ) 50 ವಿಕೆಟ್ ಪೂರೈಸಿದ ಭಾರತೀಯ ಬೌಲರ್ ಕುಲ್ದೀಪ್. ಚಹಲ್(34 ಪಂದ್ಯ)ರ ದಾಖಲೆಯನ್ನು ಮುರಿದರು.
100 ಸಿಕ್ಸರ್
ಅಂ.ರಾ. ಟಿ20ಯಲ್ಲಿ 100 ಸಿಕ್ಸರ್ ಪೂರೈಸಿದ ಭಾರತದ 3ನೇ ಬ್ಯಾಟರ್ ಸೂರ್ಯಕುಮಾರ್(101). ರೋಹಿತ್(182), ಕೊಹ್ಲಿ(117) ಮೊದಲೆರಡು ಸ್ಥಾನದಲ್ಲಿದ್ದಾರೆ.