ಟೀಂ​ ಇಂಡಿಯಾದಲ್ಲಿ ಸೂರ್ಯಕುಮಾರ್ ಯಾದವ್ ಮೇನಿಯಾ..!

Published : Aug 04, 2022, 03:41 PM IST
ಟೀಂ​ ಇಂಡಿಯಾದಲ್ಲಿ ಸೂರ್ಯಕುಮಾರ್ ಯಾದವ್ ಮೇನಿಯಾ..!

ಸಾರಾಂಶ

* ಆಕರ್ಷಕ ಬ್ಯಾಟಿಂಗ್ ಮೂಲಕ ಗಮನ ಸೆಳೆಯುತ್ತಿರುವ ಸೂರ್ಯಕುಮಾರ್ ಯಾದವ್ * ಮೂರನೇ ಟಿ20 ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಚಚ್ಚಿದ ಸೂರ್ಯ * ಐಸಿಸಿ ಟಿ20 ರ‍್ಯಾಂಕಿಂಗ್‌​​​ನಲ್ಲಿ 2ನೇ ಸ್ಥಾನಕ್ಕೆ ಲಗ್ಗೆಯಿಟ್ಟ ಸೂರ್ಯಕುಮಾರ್

ಬೆಂಗಳೂರು(ಆ.04): ಕ್ರಿಕೆಟ್ ಆಟದಲ್ಲಿ ಆಟಗಾರರನ್ನು ಅಡ್ಡ ಹೆಸರಿನಿಂದ ಕರೆಯುವುದು ಕಾಮನ್​​​​. ಹಾಗೇನೆ ಸ್ಕೈರನ್ನೂ ಕೂಡ. Sky ಅಂದ್ರೆ ಸೂರ್ಯ ಕುಮಾರ್​ ಯಾದವ್​ ಅಂತ. ಹೆಸರಿನಲ್ಲಿದ್ದಂತೆ ಸೂರ್ಯ ಕ್ರಿಕೆಟ್​​​​ ಅಂಗಳ ಅದ್ಭುತ ಆಟದಿಂದಾಗಿ ಬೆಳಗುತ್ತಿದ್ದಾರೆ. ಸದ್ಯ ಟೀಂ​ ಇಂಡಿಯಾದಲ್ಲಿ ಈ 31ರ ಸ್ಕೈ ನದ್ದೇ ಮೇನಿಯಾ ಅಂದ್ರು ತಪ್ಪಲ್ಲ ಬಿಡಿ. ಹೌದು, ಸದಾ ನಿರ್ಭೀತಿ ಆಟಕ್ಕೆ ಸೂರ್ಯಕುಮಾರ್​​ ಯಾದವ್ ಫೇಮಸ್​​​​​​. ಆ ಆಟ ವಿಂಡೀಸ್ ಎದುರಿನ 3ನೇ ಟಿ20 ಪಂದ್ಯದಲ್ಲಿ ಮತ್ತೆ ಮರುಕಳಿಸ್ತು. ಅಟ್ಯಾಕಿಂಗ್​ ಬ್ಯಾಟಿಂಗ್​​​ ಹಾಗೂ ಸ್ಟೈಲಿಸ್​ ಹೊಡೆತಗಳ ಮೂಲಕ ಗಮನ ಸೆಳೆದ ಸೂರ್ಯ ಬಿರುಸಿನ 76 ರನ್​ ಬಾರಿಸಿ, ಗೆಲುವಿಗೆ ಕಾರಣರಾಗಿದ್ರು. ಸದ್ಯ ಸ್ಕೈ ಆರಂಭಿಕನಾಗಿ ಅರ್ಧಶತಕ ಸಿಡಿಸೋದ್ರೊಂದಿಗೆ ತಾನು ಎಲ್ಲಾ ಸ್ಲಾಟ್​​​ನಲ್ಲೂ ಹೀಗೆ ಆಡಬಲ್ಲೆ ಎಂದು ಸಾಬೀತು ಮಾಡಿದ್ದಾರೆ.

ಸ್ಕೈ ಓಪನರ್​​​, ಮಿಡಲ್ ಆರ್ಡರ್​​​​ & ಫಿನಿಶರ್​​​ ಎಲ್ಲಾ:

ಇಂತಹ ಬಹುಮುಖ ಪ್ರತಿಭೆ ಕ್ರಿಕೆಟರ್ಸ್​ ಇರೋದು ಕಮ್ಮಿ. ಆ ವಿಚಾರದಲ್ಲಿ ಟೀಂ ಇಂಡಿಯಾ ಅದೃಷ್ಟ ಮಾಡಿದೆ. ಯಾಕಂದ್ರೆ ಸ್ಕೈ ಅಂತ ಕರೆಸಿಕೊಳ್ಳುವ ಸೂರ್ಯ ಎಲ್ಲಾ ಸ್ಲಾಟ್​​​ನಲ್ಲೂ ಆಡಬಲ್ಲ ಟ್ಯಾಲೆಂಟೆಡ್​​ ಪ್ಲೇಯರ್​​​. ಮೊದಲು ಮಧ್ಯಕ್ರಮಾಂಕದಲ್ಲಿ ಸಕ್ಸಸ್​ ಕಂಡು, ಬಳಿಕ ಆರಂಭಿಕನಾಗಿ ಬಡ್ತಿ ಪಡಿದಿದ್ರು. ಸದ್ಯ ಈ ಆರಂಭಿಕನ ಜವಾಬ್ದಾರಿ ಜೊತೆ ಫಿನಿಶರ್ ಆಗಿಯೂ ಹೊರಹೊಮ್ಮಿದ್ದಾರೆ. ವಿಂಡೀಸ್​​ ಎದುರು 3ನೇ ಟಿ20  ಪಂದ್ಯದಲ್ಲಿ ಓಪನರ್ ಆಗಿ ಅರ್ಧಶತಕ ಸಿಡಿಸಿದ್ದಲ್ಲದೇ ಸುದೀರ್ಘ ಕಾಲ ಬ್ಯಾಟಿಂಗ್ ನಡೆಸಿದ್ರು. ಚೇಸಿಂಗ್ ವೇಳೆಯೂ ನಿರ್ಭೀತಿ ಆಟದೊಂದಿಗೆ ತಂಡದ ಗೆಲುವಿನ ಈಸಿಯಾಗಿಸಿದ್ರು. ಹೀಗಾಗಿ ಸೂರ್ಯನೊಳಗೊಬ್ಬ ಮಿಡಲ್ ಆರ್ಡರ್​​, ಓಪನರ್​ ಮತ್ತು ಫಿನಿಶರ್​​ ಇದ್ದಾನೆ ಅನ್ನೋದು ಪ್ರೂವ್ ಆಗಿದೆ.

ವಿಕೆಟ್ ಕೀಪರ್ ತಲೆಯ ಮೇಲೆ ಚೆಂಡನ್ನು ಬೌಂಡರಿಗಟ್ಟಿದ ಸೂರ್ಯಕುಮಾರ್ ಯಾದವ್..! ವಿಡಿಯೋ ವೈರಲ್

ಎಲ್ಲಾ ಬೌಲರ್ಸ್​ ಮೇಲೆ 140 ಪ್ಲಸ್​ ಸ್ಟೈಕ್​ರೇಟ್​​: 

ಹೌದು, ಸೂರ್ಯ ಬ್ಯಾಟಿಂಗ್​​ ಅಂದ್ರೆ ಎಂತಹ ಬೌಲರ್​ ಆದ್ರೂ ಥಂಡಾ ಹೊಡಿತಾರೆ. ಯಾಕಂದ್ರೆ ಸ್ಕೈ ಸ್ಟ್ರೈಕ್​ರೇಟೆ ಹಾಗಿದೆ. ಇವರು ರೈಟ್​​​​ ಆರ್ಮ್​ ಪೇಸರ್​​ಗೆ 152 ಸ್ಟ್ರೈಕರೇಟ್​ ಹೊಂದಿದ್ರೆ, ಲೆಫ್ಟಿ ಪೇಸ್​​ 159.23, ಆಫ್​ ಬ್ರೇಕರ್​​ 146.21, ಲೆಗ್ ಬ್ರೇಕರ್​​​ 143.82 ಹಾಗೂ ಲೆಫ್ಟ್​ ಆರ್ಥಡಕ್ಸ್​​​​ ಬೌಲರ್​​​ ಎದುರು 116.58ರ ಸ್ಟೈಕ್​ರೇಟ್​ ಹೊಂದಿದ್ದಾರೆ. 

ಟಿ20 ರ‍್ಯಾಂಕಿಂಗ್‌​​ನಲ್ಲಿ 2ನೇ ಸ್ಥಾನಕ್ಕೆ ಲಗ್ಗೆ : 

ರಣಭಯಂಕರ ಸ್ಕೈ, ಐಸಿಸಿ ಟಿ20 ರ‍್ಯಾಂಕಿಂಗ್‌​​​ನಲ್ಲಿ 2ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಸೂರ್ಯಕುಮಾರ್ 816 ಪಾಯಿಂಟ್ಸ್​​ ಹೊಂದಿದ್ದು, ಇನ್ನೂ 2 ಪಾಯಿಂಟ್ಸ್​ ಸಂಪಾದಿಸಿದ್ರೆ ನಂ.1 ಸ್ಥಾನದಲ್ಲಿರೋ ಪಾಕ್​​​ನ ಬಾಬರ್ ಅಜಾಮ್​​​ರನ್ನ ಹಿಂದಿಕ್ಕಲಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಂಗಳೂರು ಕಮಿಷನರ್ ಸುದ್ದಿಗೋಷ್ಠಿ: ಹಲವು ನಿಯಮ, ಈ ಬಾರಿ ಆರ್‌ಸಿಬಿ ಪಂದ್ಯಕ್ಕೆ ಚಿನ್ನಸ್ವಾಮಿ ಪ್ರವೇಶ ಸುಲಭವಿಲ್ಲ!
ಐಪಿಎಲ್ ಸಮರಕ್ಕೆ ತಂಡಗಳು ಸಜ್ಜು! ಹಾಲಿ ಚಾಂಪಿಯನ್ ಆರ್‌ಸಿಬಿ ತಂಡದ ಬಲ ಹಾಗೂ ದೌರ್ಬಲ್ಯಗಳೇನು?