ಎಂ ಎಸ್ ಧೋನಿ ಫಾಲೋ ಮಾಡಲು ಹೋಗಿ ಎಡವಿಬಿದ್ದ ರೋಹಿತ್ ಶರ್ಮಾ..!

By Suvarna NewsFirst Published Aug 4, 2022, 1:55 PM IST
Highlights

ವಿಂಡೀಸ್ ಎದುರು ಪ್ರಯೋಗ ಮಾಡಲು ಹೋಗಿ ಕೈಸುಟ್ಟುಕೊಂಡ ರೋಹಿತ್ ಶರ್ಮಾ
ಧೋನಿಯಂತೆ ತಂತ್ರ ಮಾಡಲು ಹೋಗಿ ಪಂದ್ಯ ಕೈಚೆಲ್ಲಿದ ಹಿಟ್‌ಮ್ಯಾನ್
ಎಲ್ಲರೂ ಧೋನಿಯಂತಾಗಲೂ ಸಾಧ್ಯವಿಲ್ಲವೆಂದು ಟ್ರೋಲ್‌ಗೊಳಗಾದ ರೋಹಿತ್ ಶರ್ಮಾ

ಬೆಂಗಳೂರು(ಆ.04): ಮಹೇಂದ್ರ ಸಿಂಗ್ ಧೋನಿ ನಾಯಕನಾಗಿ ಕೆಲ ಆಚ್ಚರಿ ನಿರ್ಧಾರಗಳಿಂದ ಅದೆಷ್ಟೋ ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ. ಹಾಗಾಗಿಯೇ ಮಾಸ್ಟರ್ ಮೈಂಡ್, ಕೂಲ್ ಕ್ಯಾಪ್ಟನ್, ಗ್ರೇಟ್ ಕ್ಯಾಪ್ಟನ್, ಹೀಗೆ ನಾನಾ ಹೆಸರಿನಿಂದ ಮಹಿಯನ್ನ ಕರೆಯಲಾಗುತ್ತೆ. 2007ರ ಟಿ20 ವಿಶ್ವಕಪ್ ಫೈನಲ್​ನ ಕೊನೆ ಓವರ್​​ನಲ್ಲಿ ಜೋಗಿಂದರ್ ಶರ್ಮಾಗೆ ಬೌಲಿಂಗ್ ನೀಡಿದ್ದು, 2013ರ ಚಾಂಪಿಯನ್ಸ್ ಟ್ರೋಫಿ ಫೈನಲ್​ನಲ್ಲಿ ಧಾರಾಳವಾಗಿ ರನ್ ನೀಡಿದ್ದ ​ಇಶಾಂತ್ ಶರ್ಮಾಗೆ 18ನೇ ಓವರ್​ನಲ್ಲಿ ಬೌಲಿಂಗ್ ಮಾಡಲು ಅವಕಾಶ ನೀಡಿದ್ದು, 2016ರ ಟಿ20 ವರ್ಲ್ಡ್​ಕಪ್​ನಲ್ಲಿ ಬಾಂಗ್ಲಾ ವಿರುದ್ಧ ಲಾಸ್ಟ್ ಓವರ್​ನಲ್ಲಿ ಹಾರ್ದಿಕ್ ಪಾಂಡ್ಯರಿಂದ ಬೌಲಿಂಗ್ ಮಾಡಿಸಿದ್ದು, ಈ ಎಲ್ಲವೂ ಧೋನಿಯ ಕೆಲ ಅಚ್ಚರಿ ನಿರ್ಧಾರಗಳು ಅಷ್ಟೆ. ಈ ಎಲ್ಲಾ ಪಂದ್ಯಗಳನ್ನೂ ಟೀಂ ಇಂಡಿಯಾ ಗೆದ್ದಿದೆ.

ಭುವಿ ಬಿಟ್ಟು ಅವೇಶ್​ಗೆ ಬಾಲ್ ನೀಡಿದ್ದೇಕೆ..?: 

ಎಲ್ಲರೂ ಎಂ ಎಸ್ ಧೋನಿ ಆಗೋಕೆ ಆಗಲ್ಲ. ವಿಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಧೋನಿ ಫಾಲೋ ಮಾಡಲು ಹೋಗಿ ಕ್ಯಾಪ್ಟನ್ ರೋಹಿತ್ ಶರ್ಮಾ ಮುಖಭಂಗ ಅನುಭವಿಸಿದ್ದಾರೆ. ರೋಹಿತ್ ಮಾಡಿದ ಎಡವಟ್ಟಿನಿಂದ ಭಾರತ ಸೋಲು ಅನುಭವಿಸುವಂತಾಯ್ತು. 2ನೇ ಟಿ20 ಮ್ಯಾಚ್​ನಲ್ಲಿ ಭಾರತ ವಿರುದ್ಧ 139 ರನ್ ಟಾರ್ಗೆಟ್ ಬೆನ್ನಟ್ಟಿದ್ದ ವಿಂಡೀಸ್, ಕೊನೆ ಓವರ್​ನಲ್ಲಿ ಗೆಲುವಿಗೆ 10 ರನ್ ಹೊಡೆಯಬೇಕಿತ್ತು. ಭುವನೇಶ್ವರ್​ ಕುಮಾರ್​ ಅವರ ಬೌಲಿಂಗ್ ಕೋಟಾದಲ್ಲಿ ಇನ್ನೂ ಎರಡು ಓವರ್​ ಬಾಕಿ ಇದ್ದವು. ಎಲ್ಲರೂ ಅವರೇ ಬೌಲಿಂಗ್ ಮಾಡ್ತಾರೆ ಅಂದುಕೊಂಡಿದ್ದರು. ಆದ್ರೆ ಭುವಿ ಬಿಟ್ಟು ಕ್ಯಾಪ್ಟನ್ ರೋಹಿತ್, ಅವೇಶ್ ಖಾನ್​ಗೆ ಬಾಲ್ ನೀಡಿದ್ರು. 

ಅನಾನುಭವಿ ಅವೇಶ್, ಮೊದಲ ಎಸೆತದಲ್ಲಿ ನೋ ಬಾಲ್ ಹಾಕಿದ್ರು. ಮರು ಎಸೆತದಲ್ಲಿ ಸಿಕ್ಸ್ ಮತ್ತೊಂದು ಬಾಲ್​ನಲ್ಲಿ ಬೌಂಡ್ರಿ ಹೊಡೆಸಿಕೊಂಡ್ರು. ವಿಂಡೀಸ್ ಇನ್ನೂ 4 ಬಾಲ್ ಇರುವಾಗ್ಲೇ ಜಯ ಸಾಧಿಸಿ, ಸರಣಿಯನ್ನ 1-1ರಿಂದ ಸಮಬಲ ಮಾಡಿಕೊಳ್ತು. ಅನುಭವಿ ಭುವನೇಶ್ವರ್​ ಇದ್ದರೂ ಅವೇಶ್ ಖಾನ್​ಗೆ ಬಾಲ್ ನೀಡಿದ ರೋಹಿತ್​ ಮುಖಭಂಗ ಅನುಭವಿಸಿದ್ರು. ಧೋನಿ ಅಚ್ಚರಿ ನಿರ್ಧಾರಗಳಿಂದ ಸಕ್ಸಸ್ ಆಗಿದ್ದರು. ಆ ಸಕ್ಸಸ್​​ಗಳೇ ಮಹಿಯನ್ನ ಫೇಮಸ್ ಮಾಡಿಸಿದ್ವು. ಧೋನಿ ಫಾಲೋ ಮಾಡಲು ಹೋಗಿ ರೋಹಿತ್​, ಹಿಂಗುತಿಂದ ಮಂಗನಂತಾಗಿದ್ದಾರೆ. ತಮ್ಮ ಹಾರ್ಡ್​ ಡಿಷಿಶನ್​​​​​​​​​​​​ ಬಗ್ಗೆ ಸ್ಪಷ್ಟನೆ ಬೇರೆ ನೀಡಿದ್ದಾರೆ ನೋಡಿ.

Ind vs WI: ವಿಂಡೀಸ್ ಎದುರಿನ 3ನೇ ಟಿ20 ಪಂದ್ಯದಲ್ಲಿ ದಾಖಲೆ ಬರೆದ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ

ಅವಕಾಶಗಳನ್ನು ಕೊಡಬೇಕು ಎಂಬುದಷ್ಟೇ ಈ ನಿರ್ಧಾರದ ಹಿಂದಿದ್ದ ಉದ್ದೇಶ. ಭುವನೇಶ್ವರ್‌ ಕುಮಾರ್‌ ಅವರ ಸಾಮರ್ಥ್ಯದ ಬಗ್ಗೆ ನಮಗೆ ಚೆನ್ನಾಗಿ ಗೊತ್ತಿದೆ. ಆದರೆ, ಅವೇಶ್‌ ಖಾನ್​​​ಗೆ ಬೌಲಿಂಗ್‌ ಕೊಡದೇ ಇದ್ದರೆ ಅವರು ಭಾರತ ಪರ ಸ್ಲಾಗ್‌ ಓವರ್‌ಗಳಲ್ಲಿ ಏನು ಮಾಡಬಲ್ಲರು ಎಂಬುದು ತಿಳಿಯುವುದೇ ಇಲ್ಲ. ಇದು ಕೇವಲ ಒಂದು ಪಂದ್ಯವಷ್ಟೇ. ಇಲ್ಲಿ ಅನಗತ್ಯ ಆತಂಕ ಪಡುವ ಅನಿವಾರ್ಯತೆ ಇಲ್ಲ. ನಮ್ಮ ಆಟಗಾರರಿಗೆ ಅಗತ್ಯದ ಅವಕಾಶಗಳನ್ನು ನೀಡಿ ಬೆಂಬಲಿಸಬೇಕು ಎಂದು ರೋಹಿತ್‌ ಶರ್ಮಾ ಹೇಳಿದ್ದಾರೆ.

ರೋಹಿತ್​ ಏನೇ ಸ್ಪಷ್ಟನೆ ನೀಡಿದ್ರೂ ಕೇಳೋ ಫೇಷನ್ಸ್​ ಫ್ಯಾನ್ಸ್​ಗಿಲ್ಲ. ಹಾಗಾಗಿ ಹಿಟ್​​ಮ್ಯಾನ್ ಅವರನ್ನ ಟ್ರೋಲ್ ಮಾಡ್ತಿದ್ದಾರೆ. ಒಟ್ನಲ್ಲಿ ಗೆಲ್ಲಬಹುದಾಗಿದ್ದ 2ನೇ ಪಂದ್ಯವನ್ನ ಸೋಲಿಸಿ ಭಾರತೀಯ ಕ್ರಿಕೆಟ್ ಫ್ಯಾನ್ಸ್ ಪಾಲಿಗೆ ರೋಹಿತ್ ವಿಲನ್ ಆಗಿದ್ದಾರೆ.

click me!