ಉಪನಾಯಕ ರಾಹುಲ್​ ಇನ್ನೂ ಚೇತರಿಸಿಕೊಂಡಿಲ್ಲ, ಆಗ್ಲೇ ಇಂಜುರಿ ಲಿಸ್ಟ್​ಗೆ ಕ್ಯಾಪ್ಟನ್ ರೋಹಿತ್​..!

Published : Aug 04, 2022, 02:50 PM IST
ಉಪನಾಯಕ ರಾಹುಲ್​ ಇನ್ನೂ ಚೇತರಿಸಿಕೊಂಡಿಲ್ಲ, ಆಗ್ಲೇ ಇಂಜುರಿ ಲಿಸ್ಟ್​ಗೆ ಕ್ಯಾಪ್ಟನ್ ರೋಹಿತ್​..!

ಸಾರಾಂಶ

ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಕ್ಯಾಪ್ಟನ್ ರೋಹಿತ್ ಶರ್ಮಾ ಪದೇ ಪದೇ ಗಾಯಕ್ಕೆ ತುತ್ತಾಗುತ್ತಿರುವ ನಾಯಕ ರೋಹಿತ್ ಶರ್ಮಾ, ಉಪನಾಯಕ ಕೆ ಎಲ್ ರಾಹುಲ್ ಮಹತ್ವದ ಸರಣಿಗೂ ಮುನ್ನ ಟೀಂ ಇಂಡಿಯಾದಲ್ಲಿ ಶುರುವಾಯ್ತು ಇಂಜುರಿ ಆತಂಕ

ಬೆಂಗಳೂರು(ಆ.04): ಟೀಂ ಇಂಡಿಯಾ ಕ್ಯಾಪ್ಟನ್ ಮತ್ತು ವೈಸ್ ಕ್ಯಾಪ್ಟನ್​ಗಳ ಇಂಜುರಿ ಮಿಸ್ಟರಿ ಮುಗಿಯುವಂತೆ ಕಾಣ್ತಿಲ್ಲ. ಒಬ್ಬರು ಫಿಟ್ ಆದ್ರೆ ಇನ್ನೊಬ್ಬರು ಇಂಜುರಿಯಾಗ್ತಾರೆ. ಒಬ್ಬರೆ ಇಂಜುರಿಯಾದ್ರೆ, ಇನ್ನೊಬ್ಬ ಫಿಟ್ ಆಗ್ತಾರೆ. ಹಾಗಾಗಿದೆ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅವರು ಇಂಜುರಿ ಟ್ರ್ಯಾಜಿಡಿ ಸ್ಟೋರಿ. ಕನ್ನಡಿಗ ರಾಹುಲ್​ ಇಂಜುರಿಯಿಂದ ರಿಕವರಿಯಾಗ್ತಿದ್ದು, ಏಷ್ಯಾಕಪ್​​​ಗೆ ಕಮ್​ಬ್ಯಾಕ್ ಮಾಡಲಿದ್ದಾರೆ. ಆದ್ರೆ ಏಷ್ಯಾಕಪ್ ಆರಂಭಕ್ಕೂ ಮುನ್ನವೇ ರೋಹಿತ್ ಶರ್ಮಾ ಇಂಜುರಿ ಲಿಸ್ಟ್​ಗೆ ಸೇರಿದ್ದಾರೆ.

ಇನ್ನಿಂಗ್ಸ್ ಮಧ್ಯೆಯೇ ಮೈದಾನದಿಂದ ಹೊರನಡೆದ ರೋಹಿತ್: 

ಮೊನ್ನೆ ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಗೆಲುವಿಗೆ 165 ರನ್ ಬೆನ್ನಟ್ಟಿದ್ದ ಟೀಂ ಇಂಡಿಯಾ, ಉತ್ತಮ ಆರಂಭವನ್ನೇ ಪಡೆಯಿತು. ರೋಹಿತ್ ಶರ್ಮಾ, ಒಂದು ಬೌಂಡ್ರಿ, ಒಂದು ಸಿಕ್ಸರ್ ಸಹಿತ 11 ರನ್ ಬಾರಿಸಿ, ಸಿಡಿಯುವ ಮುನ್ಸೂಚನೆ ನೀಡಿದ್ದರು, ಆದರೆ 2ನೇ ಓವರ್​​ನಲ್ಲಿ ಅಲ್ಜಾರಿ ಜೋಸೆಫ್​ಗೆ ಒಂದು ಸಿಕ್ಸ್ ಮತ್ತು ಒಂದು ಬೌಂಡ್ರಿ ಬಾರಿಸಿದ ರೋಹಿತ್​, ಅದೇ ಓವರ್​​​ನಲ್ಲಿ ಬೆನ್ನು ನೋವಿಗೆ ತುತ್ತಾಗಿ ಮೈದಾನದಿಂದ ಹೊರ ನಡೆದರು. ಮತ್ತೆ ಅವರು ಬ್ಯಾಟಿಂಗ್ ಮಾಡಲು ಬರಲಿಲ್ಲ.

ರೋಹಿತ್ ಗಾಯದ ಸಮಸ್ಯೆಯ ತೀವ್ರತೆ ಎಷ್ಟಿದೆ ಎಂಬುದು ಇನ್ನು ಗೊತ್ತಾಗಿಲ್ಲ. ಬ್ಯಾಕ್‌ ಟು ಬ್ಯಾಕ್‌ ಟಿ20 ಪಂದ್ಯಗಳನ್ನಾಡಿರುವುದರಿಂದ ರೋಹಿತ್​ಗೆ ಬೆನ್ನು ನೋವು ಕಾಣಿಸಿಕೊಂಡಿದೆ ಎಂದು ಹೇಳಲಾಗ್ತಿದೆ. ಶನಿವಾರ ನಡೆಯುವ 4ನೇ ಟಿ20 ಪಂದ್ಯದ ವೇಳೆಗೆ ರಿಕವರಿಯಾಗ್ತಾರೆ ಎಂದು ಅಂದಾಜಿಸಲಾಗಿದೆ. ತಮ್ಮ ಇಂಜುರಿ ಬಗ್ಗೆ ರೋಹಿತ್ ಶರ್ಮಾ ಸಹ ಮಾತನಾಡಿದ್ದಾರೆ.  ಸದ್ಯಕ್ಕೆ ಹೆಚ್ಚಿನ ಸಮಸ್ಯೆ ಇಲ್ಲ. ಮುಂದಿನ ಪಂದ್ಯಕ್ಕೆ ಇನ್ನು ಕೆಲ ದಿನಗಳು ಬಾಕಿ ಇದೆ. ಅಷ್ಟರಲ್ಲಿ ಚೇತರಿಸಿಕೊಳ್ಳುವ ವಿಶ್ವಾಸವಿದೆ ಎಂದು ಪಂದ್ಯದ ನಂತರ ರೋಹಿತ್ ಹೇಳಿದ್ದಾರೆ.

ಏಷ್ಯಾಕಪ್​​​​ಗೆ ದಿನಗಣನೆ, ಆತಂಕ ಮೂಡಿಸಿದ ರೋಹಿತ್​ ಇಂಜುರಿ:

ಅಕ್ಟೋಬರ್​-ನವೆಂಬರ್​ನಲ್ಲಿ ಆಸ್ಟ್ರೇಲಿಯಾದಲ್ಲಿ ಐಸಿಸಿ ಟಿ20 ವಿಶ್ವಕಪ್. ಆಗಸ್ಟ್ 27ರಿಂದ ಮಿನಿ ವಿಶ್ವಕಪ್ ಎಂದು ಬಿಂಬಿಸಲಾಗ್ತಿರೋ ಏಷ್ಯಾಕಪ್ ನಡೆಯಲಿದೆ. ವಿಂಡೀಸ್ ಸರಣಿಗೆ ಪ್ರಯೋಗಗಳನ್ನು ಸ್ಟಾಪ್ ಮಾಡಿ, ಏಷ್ಯಾಕಪ್​ನಿಂದಲೇ ಬಲಿಷ್ಠ ಭಾರತ ತಂಡ ಕಣಕ್ಕಿಳಿಯಲಿದೆ ಬಿಸಿಸಿಐ. ಇಂತಹ ಮಹತ್ವದ ಟೂರ್ನಿಗೂ ಮುನ್ನ ರೋಹಿತ್ ಶರ್ಮಾ ಇಂಜುರಿಯಾಗಿರೋದು ಬಿಸಿಸಿಐಗೆ ತಲೆ ನೋವು ಹೆಚ್ಚಿಸಿದೆ. ರೋಹಿತ್ ನಾಯಕತ್ವದಲ್ಲೇ ಒಮ್ಮೆ ಏಷ್ಯಾಕಪ್ ಗೆದ್ದಿರುವ ಟೀಂ ಇಂಡಿಯಾ, ಈ ಸಲವೂ ಗೆದ್ದು ಟಿ20 ವರ್ಲ್ಡ್​ಕಪ್​ಗೆ ಭರ್ಜರಿ ಸಿದ್ದತೆ ಮಾಡಿಕೊಳ್ಳೋ ಪ್ಲಾನ್​ನಲ್ಲಿತ್ತು. ಆದ್ರೆ ಹಿಟ್​ಮ್ಯಾನ್ ಇಂಜುರಿ ಭಾರತೀಯರ ಪ್ಲಾನ್​ಗಳೆಲ್ಲವನ್ನೂ ಉಲ್ಟಾ ಮಾಡಿಬಿಟ್ಟಿದೆ.

ಎಂ ಎಸ್ ಧೋನಿ ಫಾಲೋ ಮಾಡಲು ಹೋಗಿ ಎಡವಿಬಿದ್ದ ರೋಹಿತ್ ಶರ್ಮಾ..!

ರೋಹಿತ್​ಗೆ ಬೆನ್ನು ನೋವು ನಿನ್ನೆ ಮೊನ್ನೆಯದಲ್ಲ..!: 

ಇನ್ನು ರೋಹಿತ್ ಇಂಜುರಿ ಬಗ್ಗೆ ಆತಂಕ ಮೂಡಿಸೋದಕ್ಕೂ ಕಾರಣವಿದೆ. ಹಿಟ್​ಮ್ಯಾನ್​​​​ಗೆ ಬೆನ್ನು ನೋವು ಕಾಣಿಸಿಕೊಳ್ತಿರೋದು ನಿನ್ನೆ ಮೊನ್ನೆಯಿಂದಲ್ಲ. ಸುಮಾರು ವರ್ಷದಿಂದ ಅವರು ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಪದೇ ಪದೇ ಕಾಣಿಸಿಕೊಳ್ಳುವ ಬೆನ್ನು ನೋವಿನಿಂದಲೇ ರೋಹಿತ್ ಶರ್ಮಾ ಅದೆಷ್ಟೋ ಸರಣಿಗಳನ್ನ ಮಿಸ್ ಮಾಡಿಕೊಂಡಿದ್ದಾರೆ. ಹಾಗಾಗಿಯೇ ಆತಂಕ ಹೆಚ್ಚಾಗಿರೋದು. ಏಷ್ಯಾಕಪ್​ನಿಂದ ಹೊರಗುಳಿದರೆ ಪರವಾಗಿಲ್ಲ. ಟಿ20 ವರ್ಲ್ಡ್​ಕಪ್ ಮಿಸ್ ಮಾಡಿಕೊಂಡರೆ ಟೀಂ ಇಂಡಿಯಾಗೆ ದೊಡ್ಡ ಲಾಸ್.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?
ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿ ಗೆಲುವಿನ ಬೆನ್ನಲ್ಲೇ ಐಸಿಸಿ ರ್‍ಯಾಂಕಿಂಗ್‌ ಪ್ರಕಟ; ಕೊಹ್ಲಿಗೆ ಜಾಕ್‌ಪಾಟ್!