Spot Fixing ಭಾರತದ ಲೀಗ್ ಕ್ರಿಕೆಟ್‌ನಲ್ಲಿ ಫಿಕ್ಸಿಂಗ್ ಭೂತ , IPL ಆಲ್ರೌಂಡರ್‌ಗೆ ಬೆಂಗಳೂರು ಬುಕ್ಕಿಯಿಂದ 40 ಲಕ್ಷ ರೂ ಆಫರ್!

By Suvarna NewsFirst Published Jan 16, 2022, 5:40 PM IST
Highlights
  • ಭಾರತ ಕ್ರಿಕೆಟ್‌ನಲ್ಲಿ  ಮತ್ತೆ ತಲೆ ಎತ್ತಿದ ಫಿಕ್ಸಿಂಗ್ ಭೂತ
  • ಬೆಂಗಳೂರಿನಿಂದ ಆಲ್ರೌಂಡರ್‌ಗೆ ಫಿಕ್ಸಿಂಗ್ ಆಫರ್
  • MI,KKR,PBKs ತಂಡದ ಪರ ಆಡಿದ್ದ ಕ್ರಿಕೆಟಿಗನಿಗೆ ಆಫರ್
  • ಬಿಸಿಸಿಐಗೆ ದೂರು ನೀಡಿದ ಆಲ್ರೌಂಡರ್, ಬೆಂಗಳೂರಿನಲ್ಲಿ ಕೇಸ್ ದಾಖಲು

ಬೆಂಗಳೂರು(ಜ16):  ಭಾರತೀಯ ಕ್ರಿಕೆಟ್‌ನಲ್ಲಿ ಫಿಕ್ಸಿಂಗ್(Spot Fixing) ಭೂತ ಮತ್ತೆ ತಲೆ ಎತ್ತಿದೆ. 2013ರ ಐಪಿಎಲ್ ಸ್ಫಾಟ್ ಫಿಕ್ಸಿಂಗ್ ಬಳಿಕ 2019ರಲ್ಲಿ ತಮಿಳುನಾಡು ಪ್ರಿಮಿಯರ್ ಲೀಗ್(TNPL Fixing) ಹಾಗೂ ಕರ್ನಾಟಕ ಪ್ರಿಮಿಯರ್ ಲೀಗ್(KPL Fixing) ಟೂರ್ನಿಯಲ್ಲಿ ಫಿಕ್ಸಿಂಗ್ ಆರೋಪಗಳು ಕೇಳಿಬಂದಿತ್ತು. ಬಳಿಕ ಫಿಕ್ಸಿಂಗ್ ಮಾತುಗಳು ತಣ್ಣಗಾಗಿತ್ತು. ಇದೀಗ ದೇಶಿ ಕ್ರಿಕೆಟ್‌ನಲ್ಲಿ ಮತ್ತೆ ಫಿಕ್ಸಿಂಗ್ ಆರೋಪ ಕೇಳಿಬಂದಿದೆ. ಐಪಿಎಲ್(IPL) ಟೂರ್ನಿಯಲ್ಲಿ ಆಲ್ರೌಂಡರ್ ಆಗಿ ಮಿಂಚಿದ ತಮಿಳನಾಡು ಮೂಲಕ ಸತೀಶ್ ರಾಜಗೋಪಾಲ್‌ಗೆ ಪಂದ್ಯ ಫಿಕ್ಸ್ ಮಾಡುವಂತೆ ಬುಕ್ಕಿ ಆಫರ್ ನೀಡಿದ ಪ್ರಕರಣ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ.

ತಮಿಳುನಾಡಿನ ಆಲ್ರೌಂಡರ್ ಸತೀಶ್ ರಾಜಗೋಪಾಲ್‌(sathish rajagopal) ಇನ್‌ಸ್ಟಾಗ್ರಾಂ ಖಾತೆಗೆ ಫಿಕ್ಸಿಂಗ್ ಆಫರ್ ನೀಡಲಾಗಿದೆ. ಮುಂಬರುವ ತಮಿಳುನಾಡು ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಪ್ರತಿ ಪಂದ್ಯ ಫಿಕ್ಸ್ ಮಾಡುವಂತೆ ಆಫರ್ ನೀಡಲಾಗಿದೆ. ಪ್ರತಿ ಪಂದ್ಯಕ್ಕೆ 40 ಲಕ್ಷ ರೂಪಾಯಿ ಆಫರ್ ನೀಡಲಾಗಿದೆ. ಬನ್ನಿ ಆನಂದ್ ಎಂಬಾತ ಫಿಕ್ಸಿಂಗ್ ಸಂದೇಶವನ್ನು ಇನ್‌ಸ್ಟಾಗ್ರಾಂ(Instagram) ಮೂಲಕ ಸತೀಶ್ ರಾಜಗೋಪಾಲ್‌ಗೆ ಕಳುಹಿಸಲಾಗಿದೆ. 

ಪಾಕ್ ಕ್ರಿಕೆಟಿಗ ಮಲಿಕ್ ದುಬಾರಿ ಮೊತ್ತದ ಮ್ಯಾಚ್‌ ಫಿಕ್ಸಿಂಗ್ ಆಫರ್‌ ನೀಡಿದ್ರು ಎಂದ ಶೇನ್ ವಾರ್ನ್‌..!

ಬೆಂಗಳೂರಿನ ಬುಕ್ಕಿ(Bengaluru bookie) ಈ ಕೆಲಸ ಮಾಡಿರುವುದು ಬೆಳಕಿಗೆ ಬಂದಿದೆ. ಈಗಾಗಲೇ ಇಬ್ಬರು ಕ್ರಿಕೆಟಿಗರು(Cricketers) ಫಿಕ್ಸಿಂಗ್  ಮಾಡಲು ಒಪ್ಪಿಕೊಂಡಿದ್ದಾರೆ. ಹೀಗಾಗಿ ಪ್ರತಿ ಪಂದ್ಯಕ್ಕೆ 40 ಲಕ್ಷ ರೂಪಾಯಿ ನೀಡುವುದಾಗಿ ಬನ್ನಿ ಆನಂದ್ ಇನ್‌ಸ್ಟಾಗ್ರಾಂನಲ್ಲಿ ಸತೀಶ್ ರಾಜಗೋಪಾಲ್‌ಗೆ ಆಫರ್ ನೀಡಲಾಗಿದೆ. ಆಫರ್ ತಿರಸ್ಕರಿಸಿದ ಸತೀಶ್ ರಾಜಗೋಪಾಲ್ ಬಿಸಿಸಿಐ ಭ್ರಷ್ಟಾಚಾರ ನಿಗ್ರಹದಳಕ್ಕೆ(bcci anti corruption unit) ಮಾಹಿತಿ ತಿಳಿಸಿದ್ದಾರೆ. 

ತಕ್ಷಣ ಕಾರ್ಯಪ್ರವೃತ್ತಗೊಂಡ ಬಿಸಿಸಿಐ(BCCI), ಸೌತ್ ಝೋನ್  ಆ್ಯಂಟಿ ಕರೆಪ್ಷನ್ & ಇಂಟಿಗ್ರಿಟಿ ಯೂನಿಟ್ ಗೆ ಮಾಹಿತಿ ನೀಡಿದ್ದಾರೆ. ಬನ್ನಿ ಆನಂದ್ ಇನ್‌ಸ್ಟಾಗ್ರಾಂ ಖಾತೆ ಬೆಂಗಳೂರಿನಿಂದ ನಿರ್ವಹಣೆಯಾಗುತ್ತಿದೆ. ಹೀಗಾಗಿ ಸೌತ್ ಜೋನ್ ಆ್ಯಂಟಿ ಕರೆಪ್ಷನ್ ಯೂನಿಟ್ ಬೆಂಗಳೂರಿನ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೀಗ ಇನ್‌ಸ್ಟಾಗ್ರಾಂ, ಐಪಿ ಅಡ್ರೆಸ್ ಸೇರಿದಂತೆ ಹಲವು ಮಾಹಿತಿಗಳನ್ನು ಜಾಲಾಡಿ ಮಾಹಿತಿ ಕಲೆಹಾಕುತ್ತಿದ್ದಾರೆ.

ಇಬ್ಬರು ಅಂತಾರಾಷ್ಟ್ರೀಯ ಆಟಗಾರರ ಮೇಲೆ 8 ವರ್ಷ ನಿಷೇಧ ಹೇರಿದ ಐಸಿಸಿ..!

ಸತೀಶ್ ರಾಜಗೋಪಾಲ್ ಕರಿಯರ್:
ಸತೀಶ್ ರಾಜಗೋಪಾಲ್ ತಮಿಳುನಾಡು ರಣಜಿ ತಂಡದ ಸದಸ್ಯರಾಗಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪಂಜಾಬ್ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಆಡಿದ್ದಾರೆ. ತಮಿಳುನಾಡು ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಸೂಪರ್ ಗಿಲ್ಲಿಸ್ ಪರ ಕಣಕ್ಕಿಳಿದಿದ್ದಾರೆ. 

KPL ಮ್ಯಾಚ್ ಫಿಕ್ಸಿಂಗ್ ಕೇಸ್‌ಗೂ ಡ್ರಗ್ಸ್‌ ಕನೆಕ್ಷನ್?

ಸತೀಶ್ ರಾಜಗೋಪಾಲ್ ಐಪಿಎಲ್ ಟೂರ್ನಿಯಲ್ಲಿ 34 ಪಂದ್ಯಗಳನ್ನಾಡಿದ್ದಾರೆ. 270 ರನ್ ಕಲೆಹಾಕಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಹೆಚ್ಚಾಗಿ ಅಬ್ಬರಿಸದ ರಾಜಗೋಪಾಲ್ ತಮಿಳುನಾಡು ಪರ ದೇಸಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ತಮಿಳನಾಡು ಪರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 41 ಪಂದ್ಯ ಆಡಿದ್ದಾರೆ. ಈ ಮೂಲಕ 1859 ರನ್ ಸಿಡಿಸಿದ್ದಾರೆ. ಇನ್ನು ಅಜೇಯ 204 ರನ್ ಸತೀಶ್ ರಾಜಗೋಪಾಲ್ ಗರಿಷ್ಠ ಸ್ಕೋರ್.  5 ಶತಕ ಹಾಗೂ 5 ಅರ್ಧಶತಕ ಸಿಡಿಸಿದ್ದಾರೆ.

57 ಲಿಸ್ಟ್ ಎ ಪಂದ್ಯವಾಡಿರುವ ಸತೀಶ್ 1297 ರನ್ ಸಿಡಿಸಿದ್ದಾರೆ. ಅಜೇಯ 91 ರನ್ ಗರಿಷ್ಠ ಸ್ಕೋರ್. ಇನ್ನು 67 ಟಿ20 ಪಂದ್ಯದಿಂದ 722 ರನ್ ಸಿಡಿಸಿದ್ದಾರೆ. ಬೌಲಿಂಗ್‌ನಲ್ಲಿ ಸತೀಶ್ ಮೋಡಿ ಮಾಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 17 ವಿಕೆಟ್ ಕಬಳಿಸಿದ್ದಾರೆ. ಇನ್ನು ಲಿಸ್ಟ್ ಎ ಕ್ರಿಕೆಟ್‌ನಲ್ಲಿ 39 ಹಾಗೂ ಟಿ20 ಪಂದ್ಯದಲ್ಲಿ 24 ವಿಕೆಟ್ ಕಬಳಿಸಿದ್ದಾರೆ.

click me!