Virat Kohli Steps Down as Captain : ಟೆಸ್ಟ್ ತಂಡದ ನಾಯಕ ಸ್ಥಾನದಿಂದ ಕೆಳಗಿಳಿದ ವಿರಾಟ್ ಕೊಹ್ಲಿ!

Suvarna News   | Asianet News
Published : Jan 15, 2022, 07:01 PM ISTUpdated : Jan 15, 2022, 07:43 PM IST
Virat Kohli Steps Down as Captain : ಟೆಸ್ಟ್ ತಂಡದ ನಾಯಕ ಸ್ಥಾನದಿಂದ ಕೆಳಗಿಳಿದ ವಿರಾಟ್ ಕೊಹ್ಲಿ!

ಸಾರಾಂಶ

ಟೆಸ್ಟ್ ತಂಡದ ನಾಯಕ ಸ್ಥಾನಕ್ಕೆ ರಾಜೀನಾಮೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಸರಣಿ ಸೋಲಿನ ಹಿನ್ನಲೆಯಲ್ಲಿ ನಿರ್ಧಾರ ಎರಡು ತಿಂಗಳ ಅವಧಿಯಲ್ಲಿ ಮೂರೂ ಮಾದರಿಯ ಕ್ರಿಕೆಟ್ ನ ನಾಯಕ ಸ್ಥಾನದಿಂದ ಔಟ್

ನವದೆಹಲಿ  (ಜ. 15): ದಕ್ಷಿಣ ಆಫ್ರಿಕಾ (South Africa) ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಸೋಲು ಕಂಡ ಒಂದು ದಿನದ ಬಳಿಕ ಭಾರತ ಟೆಸ್ಟ್ ತಂಡದ (India Test Team) ನಾಯಕ ಸ್ಥಾನಕ್ಕೆ ವಿರಾಟ್ ಕೊಹ್ಲಿ (Virat Kohli) ರಾಜೀನಾಮೆ ಸಲ್ಲಿಸಿದ್ದಾರೆ. ಟ್ವಿಟರ್ ಮೂಲಕ ತಮ್ಮ ಅಚ್ಚರಿಯ ನಿರ್ಧಾರವನ್ನು ತಿಳಿಸಿದ ವಿರಾಟ್ ಕೊಹ್ಲಿ, ಕಳೆದ ಎರಡು ತಿಂಗಳ ಅವಧಿಯಲ್ಲಿ ಭಾರತ ತಂಡದ ಮೂರೂ ಮಾದರಿಯ ಕ್ರಿಕೆಟ್ ನ ನಾಯಕ ಸ್ಥಾನದಿಂದ ಕೆಳಗಿಳಿದಂತಾಗಿದೆ. ಏಕದಿನ ಹಾಗೂ ಟಿ20 ಮಾದರಿಯ ನಾಯಕತ್ವವನ್ನು ಈಗಾಗಲೇ ಬಿಸಿಸಿಐ, ರೋಹಿತ್‌ ಶರ್ಮಗೆ (Rohit Sharma) ನೀಡಿದ್ದರೆ, ಟೆಸ್ಟ್ ತಂಡಕ್ಕೆ ಯಾರು ನಾಯಕರಾಗಲಿದ್ದಾರೆ ಎನ್ನುವ ಕುತೂಹಲ ಈಗ ಆರಂಭವಾಗಿದೆ.

2014-15ರ ಋತುವಿನಲ್ಲಿ ಎಂಎಸ್ ಧೋನಿ (MS Dhoni) ಟೆಸ್ಟ್ ತಂಡದ ನಾಯಕ ಸ್ಥಾನಕ್ಕೆ ಹಠಾತ್ ಆಗಿ ರಾಜೀನಾಮೆ ನೀಡಿದ ಬಳಿಕ, ಆಸ್ಟ್ರೇಲಿಯಾ (Australia) ಪ್ರವಾಸದ ಸರಣಿಯಲ್ಲಿಯೇ ಪೂರ್ಣ ಪ್ರಮಾಣದ ಟೆಸ್ಟ್ ತಂಡದ ನಾಯಕರಾಗಿ ನೇಮಕವಾಗಿದ್ದ ವಿರಾಟ್ ಕೊಹ್ಲಿ, ಈವರೆಗೂ ಅಡಿದ 68 ಪಂದ್ಯಗಳಿಂದ 40 ಗೆಲುವು ದಾಖಲಿಸಿದ ಶ್ರೇಯ ಹೊಂದಿದ್ದಾರೆ. ಆ ಮೂಲಕ ಗೆಲುವುಗಳ ಲೆಕ್ಕಾಚಾರದಲ್ಲಿ ಭಾರತೀಯ ಕ್ರಿಕೆಟ್ ನ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಎನ್ನುವ ಶ್ರೇಯ ಇವರದಾಗಿದೆ.

ಟ್ವಿಟರ್ ನಲ್ಲಿ ತಮ್ಮ ಪೋಸ್ಟ್ ಹಂಚಿಕೊಂಡಿರುವ ವಿರಾಟ್ ಕೊಹ್ಲಿ ನಾಯಕನ ಜವಾಬ್ದಾರಿಯನ್ನು ಸೂಕ್ತವಾಗಿ ನಿರ್ವಹಿಸುವಲ್ಲಿ ಕಾರಣರಾದ ಬಿಸಿಸಿಐ (BCCI), ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ (Ravi Shastri ) ಹಾಗೂ ಮಾಜಿ ನಾಯಕ ಎಂಎಸ್ ಧೋನಿಗೆ (MS Dhoni) ಥ್ಯಾಂಕ್ಸ್ ಹೇಳಿದ್ದಾರೆ. ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಭಾರತ ತಂಡ, ತವರಿನಲ್ಲಿ ಅತ್ಯಂತ ಬಲಿಷ್ಠ ತಂಡವಾಗಿ ರೂಪುಗೊಂಡಿತ್ತು.
 


ಇದು ಏಳು ವರ್ಷಗಳ ಕಠಿಣ ಪರಿಶ್ರಮ ಹಾಗೂ ಪ್ರತಿದಿನದ ನಿರಂತರ ಪರಿಶ್ರಮದಿಂದಾಗಿ ತಂಡವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲುಸಾಧ್ಯವಾಗಿದೆ. ನಾನು ನನ್ನ ಕೆಲಸವನ್ನು ಸಂಪುರ್ಣ ಪ್ರಾಮಾಣಿಕತೆಯಿಂದ ಹಾಗೂ ನನ್ನ ಜವಾಬ್ದಾರಿಯ ಮೇಲೆ ಸ್ವಲ್ಪವೂ ಚ್ಯುತಿ ಬಾರದಂತೆ ಕೆಲಸ ನಿರ್ವಹಿಸಿದ್ದೇನೆ. ಆದರೆ, ಎಲ್ಲಾ ಒಳ್ಳೆಯದಕ್ಕೂ ಯಾವುದೋ ಒಂದು ಹಂತದಲ್ಲಿ ಕೊನೆ ಎನ್ನುವುದು ಇದ್ದೇ ಇರುತ್ತದೆ. ಭಾರತ ಟೆಸ್ಟ್ ತಂಡದ ನಾಯಕನಾಗಿ ನನಗೆ ಈಗ ಬಂದಿದೆ" ಎಂದು ವಿರಾಟ್ ಕೊಹ್ಲಿ ಟ್ವಿಟರ್ ನಲ್ಲಿ ಪ್ರಕಟಿಸಿರುವ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

BCCI on Virat Kohli : ನಾಯಕ ಸ್ಥಾನದಿಂದ ಕೆಳಗಿಳಿಯಿರಿ ಎಂದು ಕೊಹ್ಲಿಗೆ ಯಾರೊಬ್ಬರೂ ಹೇಳಿರಲಿಲ್ಲ!
"ನನ್ನ ಈ ಪ್ರಯಾಣದಲ್ಲಿ ಸಾಕಷ್ಟು ಏರಿಳಿತಗಳಿದ್ದವು. ಆದರೆ, ನಮ್ಮ ತಂಡದಲ್ಲಿ ಎಂದಿಗೂ ಪ್ರಯತ್ನದ ಕೊರತೆ ಅಥವಾ ನಂಬಿಕೆಯ ಕೊರತೆ ಇದ್ದಿರಲಿಲ್ಲ. ಮಾಡುವ ಪ್ರತಿ ಕೆಲಸವನ್ನು ಶೇ. 120ರ ಶ್ರಮದಲ್ಲಿಮಾಡಬೇಕು ಎಂದು ಬಯಸುವವನು ನಾನು. ಹಾಗೆ ಮಾಡದೇ ಇದ್ದಲ್ಲಿ ಅದು ಸರಿಯಾದ ಕೆಲಸವಲ್ಲ ಎನ್ನುವುದು ನನ್ನ ಅಭಿಪ್ರಾಯ. ನನ್ನ ಹೃದಯದಲ್ಲಿ ಈ ವಿಚಾರವಾಗಿ ಸಂಪೂರ್ಣವಾಗಿ ಸ್ಪಷತೆ ಇದೆ ಹಾಗೂ ನನ್ನ ತಂಡಕಕೆ ಅಪ್ರಾಮಾಣಿಕನಾಗಿರಲಿ ಸಾಧ್ಯವಿಲ್ಲ.

ಇಷ್ಟು ಸುದೀರ್ಘ ಅವಧಿಗೆ ದೇಶವನ್ನು ಮುನ್ನಡೆಸುವ ಅವಕಾಶವನ್ನು ನೀಡಿದ್ದಕ್ಕಾಗಿ ಬಿಸಿಸಿಐಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಮತ್ತು ಮೊದಲ ದಿನದಿಂದ ತಂಡಕ್ಕಾಗಿ ನಾನು ಹೊಂದಿದ್ದ ದೃಷ್ಟಿಕೋನವನ್ನು ಪಾಲಿಸಿದ ಮತ್ತು ಯಾವುದೇ ಪರಿಸ್ಥಿತಿಯಲ್ಲಿ ತಂಡವನ್ನು ಎಂದಿಗೂ ಬಿಟ್ಟುಕೊಡದ ತಂಡದ ಎಲ್ಲಾ ಸಹ ಆಟಗಾರರಿಗೆ ಧನ್ಯವಾದ ತಿಳಿಸುತ್ತೇನೆ. ನನ್ನ ಈ ಪ್ರಯಾಣವನ್ನು ಇಷ್ಟು ಸ್ಮರಣೀಯ ಹಾಗೂ ಸುಂದರಗೊಳಿಸಿದ್ದೇ ನೀವುಗಳು. ಟೆಸ್ಟ್ ಕ್ರಿಕೆಟ್ ನಲ್ಲಿ ನಮ್ಮ ತಂಡದ ವಾಹನ ಸತತವಾಗಿ ಮೇಲಕ್ಕೇರುವಂತೆ ಮಾಡುವ ಇಂಜಿನ್ ಆಗಿದ್ದ ರವಿ ಭಾಯ್ ಹಾಗೂ ಸಿಬ್ಬಂದಿ ತಂಡಕ್ಕೆ. ತಂಡದ ಕುರಿತಾಗಿ ನನಗಿದ್ದ ದೃಷ್ಟಿಕೋನವನ್ನು ಸಾಕಾರಗೊಳಿಸಲು ನೀವೆಲ್ಲರೂ ದೊಡ್ಡ ಪಾತ್ರ ನಿಭಾಯಿಸಿದ್ದೀರಿ.

Sourav Ganguly On Virat : ಕೊಹ್ಲಿಯನ್ನ ಇಷ್ಟಪಡ್ತೇನೆ, ಆದ್ರೆ ಸಿಕ್ಕಾಪಟ್ಟೆ ಜಗಳಗಂಟ!
ಕೊನೆಯದಾಗಿ, ನಾಯಕನಾಗಿ ನನ್ನನ್ನು ನಂಬಿದ, ಭಾರತೀಯ ಕ್ರಿಕೆಟ್ ಅನ್ನು ಮುನ್ನಡೆಸಬಲ್ಲ ಸಮರ್ಥ ವ್ಯಕ್ತಿ ಎಂದುಕೊಂಡ ಎಂಎಸ್ ಧೋನಿಗೆ ದೊಡ್ಡ ಧನ್ಯವಾದ" ಎಂದು ಕೊಹ್ಲಿ ಬರೆದಿದ್ದಾರೆ. ಟೆಸ್ಟ್ ತಂಡವನ್ನು ನಂ.1 ಪಟ್ಟಕ್ಕೇರಿಸಿದ ವಿರಾಟ್ ಕೊಹ್ಲಿ, ವಿದೇಶದ ನೆಲದಲ್ಲಿ ಸಾಕಷ್ಟು ಸ್ಮರಣೀಯ ಗೆಲುವುಗಳನ್ನು ತಮ್ಮ ನಾಯಕತ್ವದ ಅವಧಿಯಲ್ಲಿ ಸಾಧಿಸಿದ್ದಾರೆ. 2021ರಲ್ಲಿ ತಂಡವನ್ನು ಮೊದಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್‌ ನಲ್ಲಿ ಮುನ್ನಡೆಸಿದ್ದ 33 ವರ್ಷದ ಕಿಂಗ್ ಕೊಹ್ಲಿ, ಒಟ್ಟಾರೆಯಾಗಿ ಟೆಸ್ಟ್ ಕ್ರಿಕೆಟ್ ನ ನಾಲ್ಕನೇ ಅತ್ಯಂತ ಯಶಸ್ವಿ ನಾಯಕ ಎನಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆ್ಯಶಸ್ ಸರಣಿ: ಸತತ ಎರಡು ಪಂದ್ಯ ಗೆದ್ದು ಬೀಗಿದ್ದ ಆಸೀಸ್‌ಗೆ ಆಘಾತ, ಸ್ಟಾರ್ ಬೌಲರ್ ಹೊರಕ್ಕೆ!
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!