T20 World Cup: ವೇಗಿ ಉಮ್ರಾನ್‌ ಮಲಿಕ್ ಟೀಂ ಇಂಡಿಯಾ ನೆಟ್ ಬೌಲರ್‌

By Suvarna NewsFirst Published Oct 10, 2021, 1:56 PM IST
Highlights

* ಸನ್‌ರೈಸರ್ಸ್ ಹೈದರಾಬಾದ್ ವೇಗಿ ಉಮ್ರಾನ್ ಮಲಿಕ್‌ ಖುಲಾಯಿಸಿದ ಅದೃಷ್ಟ

* ಮಾರಕ ಬೌಲಿಂಗ್ ಮೂಲಕ ಗಮನ ಸೆಳೆದಿರುವ ಹೈದರಾಬಾದ್ ವೇಗಿ

* ಟಿ20 ವಿಶ್ವಕಪ್‌ ಟೂರ್ನಿಗೆ ಟೀಂ ಇಂಡಿಯಾ ನೆಟ್‌ ಬೌಲರ್‌ ಆಗಿ ಮಲಿಕ್ ಆಯ್ಕೆ

ದುಬೈ(ಅ.10): 14ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ (IPL 2021) ಲೀಗ್ ಟೂರ್ನಿಯಲ್ಲಿ ಅತೀ ವೇಗದ ಎಸೆತವನ್ನು ಎಸೆದು ದಾಖಲೆ ಬರೆದ ಜಮ್ಮು-ಕಾಶ್ಮೀರದ ಯುವ ವೇಗಿ ಉಮ್ರಾನ್ ಮಲಿಕ್ (Umran Malik) ಅವರನ್ನು ಐಸಿಸಿ ಟಿ20 ವಿಶ್ವಕಪ್‌ಗೆ (T20 World Cup) ಭಾರತ ಕ್ರಿಕೆಟ್ ತಂಡದ ನೆಟ್‌ ಬೌಲರ್‌ ಆಗಿ ಆಯ್ಕೆ ಮಾಡಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ (SunRisers Hyderabad) ಒರ ಆಡಿದ್ದ ಉಮ್ರಾನ್ ಮಲಿಕ್‌ ಗಂಟೆಗೆ 153 ಕಿಲೋ ಮೀಟರ್‌ ವೇಗದಲ್ಲಿ ಬೌಲಿಂಗ್ ಮಾಡಿ ಗಮನ ಸೆಳೆದಿದ್ದರು. ಉಮ್ರಾನ್‌ ಮಲಿಕ್‌ ಅವರ ಬೌಲಿಂಗ್‌ ಬಗ್ಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ (Virat Kohli) ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಈ ಟೂರ್ನಮೆಂಟ್‌ನಿಂದ ಪ್ರತಿವರ್ಷ ಹೊಸ ಹೊಸ ಪ್ರತಿಭೆಗಳು ಬೆಳಕಿಗೆ ಬರುತ್ತಿವೆ. 150+ ಕಿಲೋ ಮೀಟರ್‌ ವೇಗದಲ್ಲಿ ಬೌಲಿಂಗ್‌ ಮಾಡುತ್ತಿರುವುದನ್ನು ನೋಡಿದರೆ ಖುಷಿಯಾಗುತ್ತಿದೆ. ಇಲ್ಲಿಂದ ಮುಂದೆ ಹೇಗೆ ಅವರು ಬೆಳವಣಿಗೆ ಹೊಂದುತ್ತಾರೆ ಎನ್ನುವುದು ಮುಖ್ಯವಾಗುತ್ತದೆ. ಉಮ್ರಾನ್ ಅವರ ಪ್ರಗತಿಯ ಮೇಲೆ ಕಣ್ಣಿಡಬೇಕಿದೆ ಎಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ದದ ಪಂದ್ಯ ಮುಕ್ತಾಯದ ಬಳಿಕ ವಿರಾಟ್ ಕೊಹ್ಲಿ ಹೇಳಿದ್ದರು.

T20 World Cup ಟೂರ್ನಿಯಿಂದ 'ಬ್ಯಾಟ್ಸ್‌ಮನ್‌' ಬದಲು ‘ಬ್ಯಾಟರ್‌’ ಪದ ಬಳಕೆ

ಹೌದು, 21 ವರ್ಷದ ಯುವ ವೇಗಿ ಉಮ್ರಾನ್ ಮಲಿಕ್‌ ಯುಎಇನಲ್ಲಿಯೇ ಉಳಿಯಲಿದ್ದು, ನೆಟ್ ಬೌಲರ್‌ ಆಗಿ ಟೀಂ ಇಂಡಿಯಾ (Team India) ಬಯೋ ಬಬಲ್‌ ಕೂಡಿಕೊಳ್ಳಲಿದ್ದಾರೆ ಎಂದು ಸನ್‌ರೈಸರ್ಸ್‌ ಹೈದರಾಬಾದ್‌ ಫ್ರಾಂಚೈಸಿಯ ಉನ್ನತ ಮೂಲಗಳು ಪಿಟಿಐಗೆ ತಿಳಿಸಿವೆ ಎಂದು ವರದಿಯಾಗಿದೆ. ಇದೇ ಮೊದಲ ಬಾರಿಗೆ ಐಪಿಎಲ್‌ಗೆ ಪಾದಾರ್ಪಣೆ ಮಾಡಿರುವ ಉಮ್ರಾನ್ ಮಲಿಕ್‌ ಮೂರು ಪಂದ್ಯಗಳನ್ನಾಡಿ 2 ವಿಕೆಟ್ ಕಬಳಿಸಿದ್ದರು. 

ಇದೇ ವೇಳೆ ಸದ್ಯ ಪರ್ಪಲ್ ಕ್ಯಾಪ್ ಒಡೆಯ ಹರ್ಷಲ್ ಪಟೇಲ್ (Harshal Patel) ಅವರನ್ನು ನೆಟ್‌ ಬೌಲರ್‌ ಆಗಿ ಉಳಿಸಿಕೊಳ್ಳಲು ಟೀಂ ಇಂಡಿಯಾ ಚಿಂತನೆ ನಡೆಸುತ್ತಿದೆ ಎನ್ನಲಾಗುತ್ತಿದೆ. ರಾಯಲ್ ಚಾಲೆಂಜರ್ಸ್‌ ಬೆಂಗಳೂರು (Royal Challengers Bangalore) ತಂಡದ ಪರ ಹರ್ಷಲ್ ಪಟೇಲ್‌ 30 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದಾರೆ.

ಹಾರ್ದಿಕ್‌ ಶೀಘ್ರ ಬೌಲಿಂಗ್‌ ಆರಂಭಿಸಲಿದ್ದಾರೆ: ರೋಹಿತ್‌ ಶರ್ಮಾ

ಅಬುಧಾಬಿ: ಕಳಪೆ ಲಯ ಹಾಗೂ ಫಿಟ್‌ನೆಸ್‌ ಸಮಸ್ಯೆ ಎದುರಿಸುತ್ತಿರುವ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ ಬಗ್ಗೆ ಪ್ರತಿಕ್ರಿಯಿಸಿರುವ ಟೀಂ ಇಂಡಿಯಾದ ಉಪನಾಯಕ ರೋಹಿತ್‌ ಶರ್ಮಾ (Rohit Sharma), ‘ಹಾರ್ದಿಕ್‌ ಸಾಮರ್ಥ್ಯದ ಮೇಲೆ ನನಗೆ ನಂಬಿಕೆ ಇದೆ’ಎಂದಿದ್ದಾರೆ. 

‘ಹಾರ್ದಿಕ್‌ ಪಾಂಡ್ಯ (Hardik Pandya) ಪ್ರತಿ ದಿನವೂ ಪ್ರಗತಿ ಹೊಂದುತ್ತಿದ್ದಾರೆ. ಮುಂದಿನ ವಾರದಿಂದ ಅವರು ಬೌಲಿಂಗ್‌ ಮಾಡಬಹುದು. ಆದರೆ ಗೊತ್ತಿಲ್ಲ. ಈ ಬಗ್ಗೆ ಫಿಸಿಯೋ ಮತ್ತು ವೈದ್ಯರು ಸರಿಯಾದ ಮಾಹಿತಿ ನೀಡಬೇಕು. ಅವರು ಬ್ಯಾಟಿಂಗ್‌ನಲ್ಲಿ ಈಗ ನಿರಾಸೆ ಅನುಭವಿಸರಬಹುದು. ಆದರೆ ಅವರು ಗುಣಮಟ್ಟದ ಆಟಗಾರ. ತಂಡಕ್ಕೆ ನೆರವಾಗಲಿದ್ದಾರೆ’ ಎಂದಿದ್ದಾರೆ.

IPL 2021: ಇಶಾನ್ ಕಿಶನ್‌ ಯಶಸ್ಸಿನ ಹಿಂದಿದೆ ವಿರಾಟ್ ಕೊಹ್ಲಿ ಕೈವಾಡ..!

ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯು ಅಕ್ಟೋಬರ್ 17ರಿಂದ ಆರಂಭವಾಗಲಿದೆ. ಮೊದಲಿಗೆ ಅರ್ಹತಾ ಸುತ್ತಿನ ಪಂದ್ಯಗಳು ಆರಂಭವಾಗಲಿದ್ದು, ಅಕ್ಟೋಬರ್ 23ರಿಂದ ಸೂಪರ್ 12 ಪಂದ್ಯಗಳು ಆರಂಭವಾಗಲಿವೆ. ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿತಾ ಅಕ್ಟೋಬರ್ 24ರಂದು ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ

click me!