ಪಾಕಿಸ್ತಾನ ವಿರುದ್ಧ ವಿರಾಟ್ ಕೊಹ್ಲಿಯ ಅಬ್ಬರದ ಆಟದಿಂದ ಟೀಂ ಇಂಡಿಯಾ ಗೆಲುವು ದಾಖಲಿಸಿದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆದಿದೆ. ಅಜೇಯ 82 ರನ್ ಸಿಡಿಸಿದ ಕೊಹ್ಲಿ ಹಲವು ದಾಖಲೆ ಮುರಿದಿದ್ದಾರೆ.
ಮೆಲ್ಬೋರ್ನ್(ಅ.23): ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ ಟೂರ್ನಿ ಪಂದ್ಯದಲ್ಲಿ ಕೇವಲ 43 ಎಸೆತದಲ್ಲಿ ಅರ್ಧಶತಕ ಸಿಡಿಸಿದ ವಿರಾಟ್ ಕೊಹ್ಲಿ, ಬಳಿಕ 10 ಎಸೆತದಲ್ಲಿ 32 ರನ್ ಸಿಡಿಸಿದ್ದಾರೆ. ವಿರಾಟ್ ಕೊಹ್ಲಿ 53 ಎಸೆತದಲ್ಲಿ ಅಜೇಯ 82 ರನ್‌ನಿಂದ ಟೀಂ ಇಂಡಿಯಾ 4 ವಿಕೆಟ್ ಗೆಲುವು ದಾಖಲಿಸಿದೆ. ಟೀಂ ಇಂಡಿಯಾ ರೋಚಕ ಗೆಲುವಿನಲ್ಲಿ ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ ಕೊಹ್ಲಿ ಹಲವು ದಾಖಲೆ ಬರೆದಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಸಿಡಿಸಿದ ದಾಖಲೆ ಇದೀಗ ಕೊಹ್ಲಿ ಪಾಲಾಗಿದೆ. ಟಿ20 ಮಾದರಿಯಲ್ಲಿ ಕೊಹ್ಲಿ 3,794 ರನ್ ಸಿಡಿಸಿದ್ದಾರೆ. ಈ ಮೂಲಕ ನಾಯಕ ರೋಹಿತ್ ಶರ್ಮಾರನ್ನು ಹಿಂದಿಕ್ಕಿದ್ದಾರೆ. ರೋಹಿತ್ ಶರ್ಮಾ 3,741 ರನ್ ಸಿಡಿಸಿದ್ದಾರೆ.
ಪಾಕಿಸ್ತಾನ ತಂಡಕ್ಕೆ ವಿರಾಟ್ ಕೊಹ್ಲಿ ಯಾವತ್ತೂ ದುಸ್ವಪ್ನವಾಗಿ ಕಾಡಿದ್ದಾರೆ. ಕಾರಣ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ದ ಕೊಹ್ಲಿ 5 ಪಂದ್ಯ ಆಡಿದ್ದಾರೆ. ಇದರಲ್ಲಿ 4 ಅರ್ಧಶತಕ ಸಿಡಿಸಿದ್ದಾರೆ. 2012ರಲ್ಲಿ ಪಾಕಿಸ್ತಾನ ವಿರುದ್ದ ಕೊಹ್ಲಿ ಅಜೇಯ 72 ರನ್ ಸಿಡಿಸಿದ್ದಾರೆ. 2014ರಲ್ಲಿ 32 ಎಸೆತದಲ್ಲಿ ಅಜೇಯ 36 ರನ್ ಸಿಡಿಸಿದ್ದಾರೆ. 2016ರಲ್ಲಿ 37 ಎಸೆತದಲ್ಲಿ 55 ರನ್ ಸಿಡಿಸಿದ್ದಾರೆ. 2021ರಲ್ಲಿ 49 ಎಸೆತದಲ್ಲಿ 57 ರನ್ ಸಿಡಿಸಿದ್ದಾರೆ. ಇದೀಗ 53 ಎಸೆತದಲ್ಲಿ ಅಜೇಯ 82 ರನ್ ಸಿಡಿಸಿದ್ದಾರೆ.
undefined
ರೋಚಕ ಗೆಲುವು ಮಾತ್ರವಲ್ಲ,ದಾಖಲೆ ನಿರ್ಮಿಸಿದ ಪಾಕಿಸ್ತಾನ ಧೂಳೀಪಟ ಮಾಡಿದ ಭಾರತ!
ಟಿ20 ಕ್ರಿಕೆಟ್ ಮಾದರಿಯಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ 500ಕ್ಕಿಂತ ಹೆಚ್ಚು ರನ್ ಸಿಡಿಸಿದ ಮೊದಲ ಆಸ್ಟ್ರೇಲಿಯೇತರ ಕ್ರಿಕೆಟಿಗ ಅನ್ನೋ ದಾಖಲೆಯನ್ನು ಕೊಹ್ಲಿ ಬರೆದಿದ್ದಾರೆ. ಇನ್ನು 5ನೇ ವಿಕೆಟ್‌ಗೆ ಹಾರ್ದಿಕ್ ಪಾಂಡ್ಯ ಜೊತೆ ಸೇರಿ 113 ರನ್ ಜೊತೆಯಾಟ ನೀಡಿದ್ದಾರೆ. ಈ ಮೂಲಕ ಗರಿಷ್ಠ ಜೊತೆಯಾಟ ದಾಖಲೆಯನ್ನು ಬರೆದಿದ್ದಾರೆ.
ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ 14ನೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಇದು ಟಿ20 ಮಾದರಿಯಲ್ಲಿ ಕ್ರಿಕೆಟಿಗ ಪಡೆದ ಗರಿಷ್ಠ ಪಂದ್ಯಶ್ರೇಷ್ಠ ಪ್ರಶಸ್ತಿಯಾಗಿದೆ. ಕೊಹ್ಲಿ ನಂತರದ ಸ್ಥಾನವನ್ನು ಆಫ್ಘಾನಿಸ್ತಾನದ ನಾಯಕ ಮೊಹಮ್ಮದ್ ನಬಿ ಪಡೆದುಕೊಂಡಿದ್ದಾರೆ. ನಬಿ 13 ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ 927ರನ್ ಸಿಡಿಸಿದ್ದಾರೆ. ಮೂಲಕ ರೋಹಿತ್ ಶರ್ಮಾ ಹಿಂದಿಕ್ಕಿದ್ದಾರೆ. ರೋಹಿತ್ ಶರ್ಮಾ 851 ರನ್ ಸಿಡಿಸಿದ್ದಾರೆ.
ವಿರಾಟ್ ಕಿಂಗ್ ಕೊಹ್ಲಿ ಚಾಂಪಿಯನ್ ಆಟ; ಪಾಕ್ ಸದೆ ಬಡಿದ ಟೀಂ ಇಂಡಿಯಾ
ವಿರಾಟ್ ಕೊಹ್ಲಿ ಆಟಕ್ಕೆ ಪ್ರಶಂಸೆಗಳ ಸುರಿಮಳೆ ವ್ಯಕ್ತವಾಗುತ್ತಿದೆ. ದಿಗ್ಗಜ ಕ್ರಿಕೆಟಿಗರು ಸೇರಿದಂತೆ ಅಭಿಮಾನಿಗಳು ಕೊಹ್ಲಿ ಬ್ಯಾಟಿಂಗ್ ಕೊಂಡಾಡಿದ್ದಾರೆ. ಕಳಪೆ ಫಾರ್ಮ್ ಸೇರಿದಂತೆ ಹಲವು ಕಾರಣಗಳಿಂದ ಟೀಕೆಗೆ ಒಳಗಾಗಿದ್ದ ವಿರಾಟ್ ಕೊಹ್ಲಿ ತಮ್ಮ ನೈಜ ಪ್ರದರ್ಶನದ ಮೂಲಕ ಮತ್ತೆ ಘರ್ಜಿಸಿದ್ದಾರೆ.ಇಂದಿನ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಹೆಚ್ಚಿತ್ತು. ಆದರೆ ಸಂಪೂರ್ಣ ಪಂದ್ಯಕ್ಕೆ ಮಳೆ ಕೂಡ ಅನುವು ಮಾಡಿಕೊಟ್ಟಿತು. ಭಾರತ ತಂಡದ ರೋಚಕ ಗೆಲುವು ಭಾರತದ ದೀಪಾವಳಿ ಸಂಭ್ರಮ ಹೆಚ್ಚಿಸಿದೆ. ಇದೀಗ ಎಲ್ಲೆಡೆ ಪಟಾಕಿ ಸಿಡಿಸಿ ಸಂಭ್ರಮ ಆಚರಿಸಲಾಗುತ್ತಿದೆ.
ವಿರಾಟ್ ಕೊಹ್ಲಿ 53 ಎಸೆತದಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ ಅಜೇಯ 82 ರನ್ ಸಿಡಿಸಿದ್ದಾರೆ. ಕೊಹ್ಲಿ 154.72 ಸ್ಟ್ರೈಕ್ ರೇಟ್ ಮೂಲಕ ಬ್ಯಾಟ್ ಬೀಸಿದ್ದಾರೆ.