ಪ್ರಧಾನಿ ನರೇಂದ್ರ ಮೋದಿ ದೀಪಾವಳಿ ಹಬ್ಬದ ಸಂಭ್ರಮ ಡಬಲ್ ಮಾಡಿದ್ದಾರೆ. ಆಯೋಧ್ಯೆಗೆ ಭೇಟಿ ನೀಡಿರುವ ಮೋದಿ ಶ್ರೀರಾಮನ ದರ್ಶನ ಪಡೆದಿದ್ದಾರೆ. ಈ ವೇಳೆ ವಿಶೇಷ ಪೂಜೆ ಸಲ್ಲಿಸಿ, ರಾಮ ಮಂದಿರ ನಿರ್ಮಾಣ ಕಾರ್ಯ ಪರಿಶೀಲನೆ ನಡೆಸಿದ್ದಾರೆ.
ಅಯೋಧ್ಯೆ(ಅ.23): ದೀಪಾವಳಿ ಹಬ್ಬಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಆಯೋಧ್ಯೆಗೆ ಭೇಟಿ ನೀಡಿದ್ದಾರೆ. ನೇರವಾಗಿ ರಾಮಜನ್ಮಭೂಮಿಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ, ರಾಮ ಲಲ್ಲಾ ದರ್ಶನ ಪಡೆದಿದ್ದಾರೆ. ಬಳಿಗ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಆರತಿ ಬೆಳಗಿ ವಿಶೇಷ ಪೂಜೆ ಸಲ್ಲಿಸಿದ ಮೋದಿ ಬಳಿಕ ರಾಮ ಮಂದಿರ ನಿರ್ಮಾಣ ಕಾರ್ಯವನ್ನು ವೀಕ್ಷಿಸಿದ್ದಾರೆ. ಮೋದಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಥ್ ನೀಡಿದರು. ರಾಮ ಮಂದಿರ ನಿರ್ಮಾಣದ ಕುರಿತ ಸಂಪೂರ್ಣ ಮಾಹಿತಿ ಪಡೆದುಕೊಂಡ ಮೋದಿ ಬಳಿಕ ಆದಿತ್ಯನಾಥ್ ಜೊತೆ ಚರ್ಚಿಸಿದರು. ಇದೀಗ ಮೋದಿ ಜೊತೆಗೆ ಶ್ರೀರಾಮನ ಪಟ್ಟಾಭಿಷೇಕದ ಸಾಂಕೇತಿಕ ಆಚರಣೆ ನೆರವೇರಿಸಲಿದ್ದಾರೆ.
ಸಂಜೆ 6.30ಕ್ಕೆ ಮೋದಿ ಸರಯೂ ನದಿ ತೀರದಲ್ಲಿ ಆರತಿ ಕಾರ್ಯಕ್ರಮ ವೀಕ್ಷಿಸಲಿದ್ದಾರೆ. ಬಳಿಕ ದೀಪೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ದೀಪೋತ್ಸವದ ಅಂಗವಾಗಿ 15 ಲಕ್ಷ ದೀಪಗಳನ್ನು ಬೆಳಗಿಸಲಾಗುವುದು.
undefined
ನ. 11ರಂದು ರಾಜ್ಯಕ್ಕೆ ನಮೋ ಆಗಮನ: ಒಕ್ಕಲಿಗರ ಮತ ಸೆಳೆಯಲು ಬಿಜೆಪಿ ಪ್ಲಾನ್
ಜೊತೆಗೆ ಕ್ವೀನ್ ಹ್ಯೂ ಸ್ಮಾರಕ ಪಾರ್ಕ್ ಉದ್ಘಾಟನೆ- ಮೊದಲಾದ ಕಾರ‍್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಕೊರಿಯಾ ರಾಣಿಯಾಗಿದ್ದ ಹ್ಯೂ ಹ್ವಾಂಗ್ ಓಕ್ ಕ್ರಿ.ಶ.48ರಲ್ಲಿ ಜೀವಿಸಿದ್ದರು ಎನ್ನಲಾಗಿದ್ದು, ಇವರ ಮೂಲ ಅಯೋಧ್ಯೆ ಹಾಗೂ ಮೂಲನಾಮ ಸುರಿರತ್ನ ಎಂದು ಹೇಳಲಾಗಿದೆ. ಆಗ ಕೊರಿಯಾಗೆ ವಲಸೆ ಹೋಗಿ ಹ್ಯೂ ಎಂದು ಹೆಸರು ಬದಲಿಸಿಕೊಂಡರು ಎಂಬ ಪ್ರತೀತಿ ಇದೆ. ಹೀಗಾಗಿ ಅವರ ಹೆಸರಿನಲ್ಲಿ ನಿರ್ಮಾಣ ಆಗಿರುವ ಪಾರ್ಕ್ ಅನ್ನು ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.
ಸಂಜೆ 22,000 ಸ್ವಯಂಸೇವಕರಿಂದ ಸರಯೂ ನದಿ ದಡ, ರಾಮ್ ಕಿ ಪೈಡಿಯಲ್ಲಿ 15 ಲಕ್ಷ ದೀಪಗಳ ಪ್ರಜ್ವಲಿಸಲಿದೆ. ಇನ್ನೂ 3 ಲಕ್ಷ ದೀಪಗಳು ನಗರದ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಪ್ರಜ್ವಲಿಸಲಿದೆ. ನದಿ ದಡದಲ್ಲಿನ ಪ್ರತಿ ಚೌಕದಲ್ಲಿ 256 ದೀಪಗಳನ್ನು ಇಡಲಾಗಿದೆ. ನದಿ ತಟದಲ್ಲಿ ಲೇಸರ್ ಶೋ, 3ಡಿ ಪ್ರೊಜೆಕ್ಷನ್ ಮ್ಯಾಪಿಂಗ್ ಶೋ, ಪಟಾಕಿ ಪ್ರದರ್ಶನಗಳು ನಡೆಯಲಿದೆ. ಭಾರತ, ರಷ್ಯಾ ಸೇರಿ ದೇಶ-ವಿದೇಶಗಳ ಸಾಂಸ್ಕೃತಿಕ ಕಲಾ ತಂಡಗಳಿಂದ ರಾಮಲೀಲಾ ಅಭಿನಯ ನಡೆಯಲಿದೆ. ಇನ್ನು ರಾಮ, ಸೀತೆ, ಲಕ್ಷ್ಮಣ, ಹನುಮಂತ, ಪುಷ್ಪಕ ವಿಮಾನ ಕುರಿತು ಪುರಾಣ ಹೇಳುವ ಅಭಿನಯಗಳು ನಡೆಯಲಿದೆ. ಸರಯೂ ನದಿ ದಂಡೆಯಲ್ಲಿ ಆರತಿ, ಎಲ್ಲ ಕಾರ‍್ಯಕ್ರಮದಲ್ಲಿ ಮೋದಿ ಭಾಗಿಯಾಗಲಿದ್ದಾರೆ.
ರೈತರಿಗೆ ಒಂದೇ ಕಡೆ ಎಲ್ಲ ಸೌಲಭ್ಯ: ದೇಶಾದ್ಯಂತ 600 ಕಿಸಾನ್ ಸಮೃದ್ಧಿ ಕೇಂದ್ರಗಳಿಗೆ Modi ಚಾಲನೆ
ಸುಪ್ರೀಂಕೋರ್ಚ್‌ನಲ್ಲಿ ರಾಮಮಂದಿರ ಪರ ತೀರ್ಪು ನೀಡಿದ ಬಳಿಕ ಪ್ರಧಾನಿ ಮೋದಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಿದ್ದರು. ಸುಮಾರು 1,800 ಕೋಟಿ ರು. ವೆಚ್ಚದಲ್ಲಿ ಮಂದಿರ ನಿರ್ಮಾಣವಾಗುತ್ತಿದೆ. ಶೇ.40ರಷ್ಟುಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, 2023ರ ಡಿಸೆಂಬರ್‌ವರೆಗೂ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಭವ್ಯ ರಾಮಮಂದಿರ ಅನಾವರಣವಾವಲಿದೆ.