T20 World Cup 2021: ಪಾಕಿಸ್ತಾನಕ್ಕೆ 148 ರನ್ ಟಾರ್ಗೆಟ್ ನೀಡಿದ ಆಫ್ಘಾನಿಸ್ತಾನ!

Published : Oct 29, 2021, 09:29 PM ISTUpdated : Oct 29, 2021, 09:38 PM IST
T20 World Cup 2021: ಪಾಕಿಸ್ತಾನಕ್ಕೆ  148 ರನ್ ಟಾರ್ಗೆಟ್ ನೀಡಿದ ಆಫ್ಘಾನಿಸ್ತಾನ!

ಸಾರಾಂಶ

ಪಾಕ್ ವಿರುದ್ಧ ಆಫ್ಘಾನಿಸ್ತಾನ ಸ್ಪರ್ಧಾತ್ಮಕ ಮೊತ್ತ ಪಾಕಿಸ್ತಾನಕ್ಕೆ 148 ರನ್ ಟಾರ್ಗೆಟ್ ದುಬೈನಲ್ಲಿ ನಡೆಯುತ್ತಿರುವ ಮಹತ್ವದ ಪಂದ್ಯ

ದುಬೈ(ಅ.29): T20 World Cup 2021 ಟೂರ್ನಿಯಲ್ಲಿನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಧೈರ್ಯ ಮಾಡಿದ ಆಫ್ಘಾನಿಸ್ತಾನ(Afghanistan) ಸ್ಮರ್ಧಾತ್ಮಕ ಮೊತ್ತ ಪೇರಿಸಿದೆ. ಪಾಕಿಸ್ತಾನ(Pakistan) ವಿರುದ್ಧ ದುಬೈ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆಫ್ಘಾನಿಸ್ತಾನ 6 ವಿಕೆಟ್ ನಷ್ಟಕ್ಕೆ 147 ರನ್ ಸಿಡಿಸಿದೆ.

T20 World Cup: ಬಾಂಗ್ಲಾ ಎದುರು ವಿಂಡೀಸ್‌ಗೆ ರೋಚಕ ಜಯ

ದುಬೈ(Dubai) ಕ್ರೀಡಾಂಗಣದಲ್ಲಿ ಟಾಸ್(Toss) ಗೆದ್ದು ಫೀಲ್ಡಿಂಗ್ ಆಯ್ಕೆಮಾಡಿಕೊಳ್ಳಲು ಎಲ್ಲಾ ತಂಡಗಳು ಬಯಸುತ್ತದೆ. ಕಾರಣ ಇಲ್ಲಿ ಚೇಸಿಂಗ್ ಮಾಡಿದ ತಂಡ ಹೆಚ್ಚು ಯಶಸ್ಸು ಸಾಧಿಸಿದೆ. ಆದರೆ ಆಫ್ಘಾನಿಸ್ತಾನ ದಿಟ್ಟವಾಗಿ ಬ್ಯಾಟಿಂಗ್ ಮಾಡಿಕೊಂಡಿತು. ಆರಂಭದಲ್ಲಿ ಆಫ್ಘಾನಿಸ್ತಾನ ಬಹುದೊಡ್ಡ ಎಡವಟ್ಟು ಮಾಡಿಕೊಂಡಿತಾ ಅನ್ನೋ ಅನುಮಾನಗಳು ವ್ಯಕ್ತವಾಯಿತು. ಕಾರಣ ಆರಂಭದಲ್ಲೇ ಆಫ್ಘಾನಿಸ್ತಾನ ಸತತ ವಿಕೆಟ್ ಕಳೆದುಕೊಂಡಿತು.

ಹಜ್ರತುಲ್ಲಾ ಜೈಜೈ ಡಕೌಟ್ ಆದರು. ಮೊಹಮ್ಮದ್ ಶೆಹಝಾದ್ ಕೇವಲ 8 ರನ್ ಸಿಡಿಸಿ ಔಟಾದರು. ಇತ್ತ ಅಸ್ಗರ್ ಆಫ್ಘಾನ್10 ರನ್ ಸಿಡಿಸಿ ಔಟಾದರು. ಈ ಮೂಲಕ ಆಫ್ಘಾನಿಸ್ತಾನ 33 ರನ್‌ಗೆ 3 ವಿಕೆಟ್ ಕಳೆದುಕೊಂಡಿತು. ತಂಡ ತೀವ್ರ ಸಂಕಷ್ಟಕ್ಕೆ ಸಿಲುಕಿತು. ಪಾಕಿಸ್ತಾನ ಬಲಿಷ್ಠ ಬೌಲಿಂಗ್ ದಾಳಿ ಮುಂದೆ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಧೈರ್ಯ ಬ್ಯಾಟಿಂಗ್ ಪ್ರದರ್ಶನದಲ್ಲಿ ಇರಲಿಲ್ಲ.

Puneeth Rajkumar Death ನಿಧನಕ್ಕೆ ಕಂಬನಿ ಮಿಡಿದ ಸೆಹ್ವಾಗ್, ಕುಂಬ್ಳೆ, ಉತ್ತಪ್ಪ ..!

 ರೆಹಮಾನುಲ್ಲಾ ಗುರ್ಬಾಜ್ ಕೇವಲ 10 ರನ್ ಸಿಡಿಸಿ ಔಟಾದರು. ಕರೀಮ್ ಜನತ್ ಕೇವಲ 15 ರನ್ ಸಿಡಿಸಿ ಔಟಾದರು. 64ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡ ಆಪ್ಘಾನಿಸ್ತಾನ ಅಲ್ಪ ಮೊತ್ತಕ್ಕೆ ಆಲೌಟ್ ಆಗುವ ಭೀತಿ ಎದುರಿಸಿತು. ನಜೀಬುಲ್ಲಾ ಜರ್ದಾನ್ 22 ರನ್ ಕಾಣಿಕೆ ನೀಡಿತು. ಕೊಂಚ ಚೇತರಿಸಿಕೊಂಡ ಆಫ್ಘಾನಿಸ್ತಾನ ತಂಡಕ್ಕೆ ನಾಯಕ ಮೊಹಮ್ಮದ್ ನಬಿ ಹಾಗೂ ಗುಲ್ಬಾದಿನ್ ನೈಬ್ ಆಸರೆಯಾದರು.

ಇವರಿಬ್ಬರ ಜೊತೆಯಾಟದಿಂದ ಆಫ್ಘಾನಿಸ್ತಾನ ಚೇತರಿಸಿಕೊಂಡಿತು. ಸ್ಫೋಟಕ ಬ್ಯಾಟಿಂಗ್ ಮೂಲಕ ಅಲ್ಪಮೊತ್ತಕ್ಕೆ ಕುಸಿಯ ಭೀತಿಯಲ್ಲಿದ್ದ ತಂದ ರನ್ ವೇಗ ಹೆಚ್ಚಿಸಿದರು. ಮೊಹಮ್ಮದ್ ನಬಿ 32 ಎಸೆತದಲ್ಲಿ 5 ಬೌಂಡರಿ ಮೂಲಕ ಅಜೇಯ 35 ರನ್ ಸಿಡಿಸಿದರು. ಇತ್ತ ಗುಲ್ಬಾದಿನ್ 25 ಎಸೆದಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 35 ರನ್ ಸಿಡಿಸಿದರು. 

ಮೊಹಮ್ಮದ್ ನಬಿ ಹಾಗೂ ಗುಲ್ಬಾದಿನ್ ನೈಬ್ ಜೊತೆಯಾಟದಿಂದ ಆಫ್ಘಾನಿಸ್ತಾನ 6 ವಿಕೆಟ್ ಕಳೆದುಕೊಂಡು 147 ರನ್ ಸಿಡಿಸಿತು. ಇದೀಗ ಚೇಸಿಂಗ್‌ನಲ್ಲಿ ಮೊದಲೇ ಬಲಿಷ್ಠವಾಗಿರುವ ಪಾಕಿಸ್ತಾನ ಗೆಲುವಿಗೆ 148 ರನ್ ಗಳಿಸಬೇಕಿದೆ.

ICC T20 World Cup: ಪಾಕಿಸ್ತಾನದ ಜಯದ ಓಟಕ್ಕೆ ಬ್ರೇಕ್‌ ಹಾಕುತ್ತಾ ಆಫ್ಘನ್‌?

ಪಾಕಿಸ್ತಾನ ಪರ ಇಮಾದ್ ವಾಸಿಮ್ 2 ವಿಕೆಟ್ ಕಬಳಿಸಿದ್ದಾರೆ. ಇನ್ನು ಶಾಹೀನ್ ಆಫ್ರಿದಿ 1, ಹ್ಯಾರಿಸ್ ರೌಫ್, ಹಸನ್ ಆಲಿ ಹಾಗೂ ಶದಬ್ ಖಾನ್ ತಲಾ ಒಂದೊಂದು ವಿಕೆಟ್ ಕಬಳಿಸಿದರು. ಈ ಮೂಲಕ ಮತ್ತೆ ಪಾಕಿಸ್ತಾನ ಬೌಲರ್‌ಗಳು ಮಿಂಚಿನ ಪ್ರದರ್ಶನ ನೀಡಿ ಆಫ್ಘಾನಿಸ್ತಾನ ತಂಡವನ್ನು 147 ರನ್‌ಗೆ ಕಟ್ಟಿಹಾಕಿದ್ದಾರೆ.

ಅಂಕಪಟ್ಟಿ:
2ನೇ ಗುಂಪಿನಲ್ಲಿ ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನ ಸದ್ಯ ಐಸಿಸಿ ವಿಶ್ವಕಪ್ ಟಿ20 ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ(points Table) ಅಗ್ರಸ್ಥಾನದಲ್ಲಿದೆ. ಪಾಕಿಸ್ತಾನ ಸತತ 2 ಗೆಲುವಿನೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಆಫ್ಘಾನಿಸ್ತಾನ 2ನೇ ಸ್ಥಾನದಲ್ಲಿದೆ. ಪಾಕಿಸ್ತಾನ ತಂಡ ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ 10 ವಿಕೆಟ್ ಗೆಲುವು ಸಾಧಿಸಿತ್ತು. 2ನೇ ಸ್ಥಾನದಲ್ಲಿ ನ್ಯೂಜಿಲೆಂಜ್ ವಿರುದ್ಧ ಗೆಲುವು ದಾಖಲಿಸಿತ್ತು. ಇದೀಗ ಆಫ್ಘಾನಿಸ್ತಾನ ವಿರುದ್ಧವೂ ಗೆಲುವಿನ ವಿಶ್ವಾಸದಲ್ಲಿದೆ. 

ಸ್ಕಾಟ್‌ಲೆಂಡ್ ವಿರುದ್ಧ ಗೆಲುವು ಸಾಧಿಸಿದ ನಮಿಬಿಯಾ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಇನ್ನು ಪಾಕಿಸ್ತಾನ ವಿರುದ್ಧ ಸೋಲು ಅನುಭವಿಸಿರುವ ನ್ಯೂಜಿಲೆಂಡ್ 4ನೇ ಸ್ಥಾನದಲ್ಲಿದ್ದರೆ, ಭಾರತ 5ನೇ ಸ್ಥಾನದಲ್ಲಿದೆ. ಇತ್ತ ಆಫ್ಘಾನಿಸ್ತಾನ ಹಾಗೂ ನಮಿಬಿಯಾ ವಿರುದ್ಧ ಸೋಲು ಕಂಡ ಸ್ಕಾಟ್‌ಲೆಂಡ್ ಕೊನೆಯ ಹಾಗೂ 6ನೇ ಸ್ಥಾನದಲ್ಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿರಾಟ್ ಕೊಹ್ಲಿಯಲ್ಲ, ಈ ಆಟಗಾರ ಹೆಚ್ಚು ಹಾರ್ಡ್‌ ವರ್ಕ್ ಮಾಡುವ ಆಟಗಾರ ಎಂದ ಯಶಸ್ವಿ ಜೈಸ್ವಾಲ್!
14 ವರ್ಷದ ವೈಭವ್ ಸೂರ್ಯವಂಶಿ 95 ಎಸೆತಕ್ಕೆ 171; ಯುವ ಭಾರತಕ್ಕೆ 234 ರನ್ ಜಯ!