T20 World Cup: ಬಾಂಗ್ಲಾ ಎದುರು ವಿಂಡೀಸ್‌ಗೆ ರೋಚಕ ಜಯ

Suvarna News   | Asianet News
Published : Oct 29, 2021, 07:48 PM ISTUpdated : Oct 29, 2021, 08:42 PM IST
T20 World Cup: ಬಾಂಗ್ಲಾ ಎದುರು ವಿಂಡೀಸ್‌ಗೆ ರೋಚಕ ಜಯ

ಸಾರಾಂಶ

* ಬಾಂಗ್ಲಾದೇಶ ಎದುರು ವಿಂಡೀಸ್‌ಗೆ ರೋಚಕ ಜಯ * 3 ರನ್‌ಗಳ ಜಯ ಸಾಧಿಸಿ ಸೆಮೀಸ್ ಕನಸು ಜೀವಂತವಾಗಿರಿಸಿಕೊಂಡ ವಿಂಡೀಸ್‌ * ವೆಸ್ಟ್ ಇಂಡೀಸ್ ಎರಡು ಬಾರಿ ವಿಶ್ವಕಪ್ ಚಾಂಪಿಯನ್ ಆಗಿರುವ ತಂಡ

ಶಾರ್ಜಾ(ಅ.29): ಐಸಿಸಿ ಟಿ20 ವಿಶ್ವಕಪ್‌ (ICC T20 World Cup) ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ದ ಹಾಲಿ ಚಾಂಪಿಯನ್‌ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವು (West Indies Cricket) 3 ರನ್‌ಗಳ ರೋಚಕ ಜಯ ಸಾಧಿಸಿದೆ. ಇದರೊಂದಿಗೆ ಸೆಮೀಸ್‌ ಕನಸ್ಸನ್ನು ಜೀವಂತವಾಗಿರಿಸಿಕೊಂಡಿದೆ. ಇದೇ ವೇಳೆ ಬಾಂಗ್ಲಾದೇಶ ತಂಡದ ಸೆಮೀಸ್‌ ಕನಸು ಬಹುತೇಕ ಭಗ್ನವಾಗಿದೆ.

ಇಲ್ಲಿನ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್ ತಂಡವು 7 ವಿಕೆಟ್ ಕಳೆದುಕೊಂಡು 142 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ ಬಾಂಗ್ಲಾದೇಶ ತಂಡ (Bangladesh Cricket Team) ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಟಿ20 ಕ್ರಿಕೆಟ್‌ನಲ್ಲಿ ಇದೇ ಮೊದಲ ಬಾರಿಗೆ ಆರಂಭಿಕನಾಗಿ ಕಣಕ್ಕಿಳಿದಿದ್ದ ಶಕೀಬ್ ಅಲ್ ಹಸನ್ (Shakib Al Hasan) ಕೇವಲ 9 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನೋರ್ವ ಆರಂಭಿಕ ಬ್ಯಾಟ್ಸ್‌ಮನ್‌ ಮೊಹಮ್ಮದ್ ನಯೀಮ್‌ 17 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. 

ಇದಾದ ಬಳಿಕ ಲಿಟನ್ ದಾಸ್‌ (Liton Das) ಹಾಗೂ ಸೌಮ್ಯ ಸರ್ಕಾರ್ ಜೋಡಿ 31 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸೌಮ್ಯ ಸರ್ಕಾರ್ ಕೂಡಾ 17 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮುಷ್ಫಿಕುರ್ ರಹೀಮ್ ಕೇವಲ 8 ರನ್‌ಗೆ ವಿಕೆಟ್‌ ಒಪ್ಪಿಸಿದ್ದು ತಂಡಕ್ಕೆ ಕೊಂಚ ಹಿನ್ನೆಡೆಯಾಗಿ ಪರಿಣಮಿಸಿತು. 

T20 World Cup: ಬಾಂಗ್ಲಾದೇಶಕ್ಕೆ ಸ್ಪರ್ಧಾತ್ಮಕ ಗುರಿ ನೀಡಿದ ವೆಸ್ಟ್ ಇಂಡೀಸ್

ಹೋರಾಟ ತೋರಿದ ಲಿಟನ್ ದಾಸ್‌-ಮೊಹಮದುಲ್ಲಾ: ಮಧ್ಯಮ ಕ್ರಮಾಂಕದಲ್ಲಿ ಅನಿರೀಕ್ಷಿತ ವಿಕೆಟ್ ಪತನದ ಹೊರತಾಗಿಯೂ ಲಿಟನ್ ದಾಸ್ ಹಾಗೂ ಮೊಹಮ್ಮದುಲ್ಲಾ ಕೆಚ್ಚೆದೆಯ ಹೋರಾಟ ನಡೆಸುವ ಮೂಲಕ ಬಾಂಗ್ಲಾದೇಶಕ್ಕೆ ಗೆಲುವಿನ ಆಸೆ ಮೂಡಿಸಿದರು. ಲಿಟನ್‌ ದಾಸ್ 44 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರೆ ಮೊಹಮ್ಮದುಲ್ಲಾ 31 ರನ್‌ ಗಳಿಸಿ ಅಜೇಯರಾಗುಳಿದರು. ಕೊನೆಯ ಓವರ್‌ನಲ್ಲಿ ವಿಂಡೀಸ್ ಗೆಲ್ಲಲು 13 ರನ್‌ಗಳ ಅಗತ್ಯವಿತ್ತು. ಆದರೆ ರಸೆಲ್ ಕೇವಲ 9 ರನ್ ನೀಡುವ ಮೂಲಕ ವಿಂಡೀಸ್‌ಗೆ ಗೆಲುವು ತಂದಿತ್ತರು.

IPL: ಮುಂಬೈ ಇಂಡಿಯನ್ಸ್ ತಂಡದಿಂದ ಹಾರ್ದಿಕ್‌ ಪಾಂಡ್ಯಗೆ ಕೋಕ್?‌

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಕೂಡಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ರೋಸ್ಟನ್ ಚೇಸ್ (Roston Chase) 39 ರನ್‌ ಹಾಗೂ ನಿಕೋಲಸ್ ಪೂರನ್ (Nicholas Pooran) 40 ರನ್ ಸಿಡಿಸುವ ಮೂಲಕ ತಂಡ 142 ರನ್‌ ಬಾರಿಸಲು ಕಾರಣರಾದರು. ರಿಟೈರ್ಡ್‌ ಹರ್ಟ್ ಆಗಿ ಪೆವಿಲಿಯನ್ ಸೇರಿದ್ದ ಕೀರನ್ ಪೊಲ್ಲಾರ್ಡ್ (Kieron Pollard) ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿದ್ದು, ತಂಡಕ್ಕೆ ಗೆಲ್ಲಲು ಅನುಕೂಲವಾಯಿತು. 

ವೆಸ್ಟ್‌ ಇಂಡೀಸ್ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಕ್ರಿಸ್ ಗೇಲ್ (Chris Gayle) ಹಾಗೂ ಎವಿನ್ ಲೆವಿನ್‌ ಒಂದಂಕಿ ಮೊತ್ತಕ್ಕೆ ವಿಕೆಟ್‌ ಒಪ್ಪಿಸಿದರು. ರೋಸ್ಟನ್ ಚೇಸ್‌ ಹಾಗೂ ನಿಕೋಲಸ್ ಪೂರನ್‌ ದಿಟ್ಟ ಬ್ಯಾಟಿಂಗ್ ನಡೆಸುವ ಮೂಲಕ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು. 

ಬಾಂಗ್ಲಾದೇಶ ಪರ ಮೆಹದಿ ಹಸನ್‌ (Mahedi Hasan), ಮುಷ್ತಾಫಿಜುರ್ ರೆಹಮಾನ್ (Mustafizur Rahman) ಹಾಗೂ ಶೌರಿಪುಲ್‌ ಇಸ್ಲಾಂ ತಲಾ 2 ವಿಕೆಟ್ ಕಬಳಿಸುವ ಮೂಲಕ ವಿಂಡೀಸ್‌ ರನ್ ವೇಗಕ್ಕೆ ಕಡಿವಾಣ ಹಾಕಿದರು. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಮತ್ತಷ್ಟು ಪಾತಾಳಕ್ಕೆ ಕುಸಿದ ಟೀಂ ಇಂಡಿಯಾ!
ವಿರಾಟ್ ಕೊಹ್ಲಿಯಲ್ಲ, ಈ ಆಟಗಾರ ಹೆಚ್ಚು ಹಾರ್ಡ್‌ ವರ್ಕ್ ಮಾಡುವ ಆಟಗಾರ ಎಂದ ಯಶಸ್ವಿ ಜೈಸ್ವಾಲ್!