T20 World Cup 2021: ಪಾಕ್ ವಿರುದ್ಧ ಟಾಸ್ ಗೆದ್ದ ಆಫ್ಘಾನಿಸ್ತಾನ!

Published : Oct 29, 2021, 07:18 PM ISTUpdated : Oct 29, 2021, 07:36 PM IST
T20 World Cup 2021: ಪಾಕ್ ವಿರುದ್ಧ ಟಾಸ್ ಗೆದ್ದ ಆಫ್ಘಾನಿಸ್ತಾನ!

ಸಾರಾಂಶ

ಆಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಟಾಸ್ ಗೆದ್ದ ಆಫ್ಘಾನಿಸ್ತಾನ ಬ್ಯಾಟಿಂಗ್ ಆಯ್ಕೆ ದುಬೈ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯ

ದುಬೈ(ಅ.29):  T20 World Cup 2021 ಟೂರ್ನಿಯಲ್ಲಿ ಮತ್ತೊಂದು ರೋಚಕ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಆಫ್ಘಾನಿಸ್ತಾನ(Afghanistan) ಹಾಗೂ ಪಾಕಿಸ್ತಾನ(Pakistan) ದುಬೈನಲ್ಲಿ ಮುಖಾಮುಖಿಯಾಗುತ್ತಿದೆ. ಈ ಪಂದ್ಯದಲ್ಲಿ ಟಾಸ್(Toss) ಗೆದ್ದಿರುವ ಆಫ್ಘಾನಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 

T20 World Cup 2021: ವಾರ್ನರ್ ಅಬ್ಬರಕ್ಕೆ ಸೋಲಿಗೆ ಶರಣಾದ ಶ್ರೀಲಂಕಾ, 2ನೇ ಸ್ಥಾನಕ್ಕೆ ಆಸ್ಟ್ರೇಲಿಯಾ!

ಪಾಕಿಸ್ತಾನ ತಂಡ: 
ಮೊಹಮ್ಮದ್ ರಿಜ್ವಾನ್, ಬಾಬರ್ ಅಜಮ್, ಫಕರ್ ಜಮಾನ್, ಮೊಹಮ್ಮದ್ ಹಫೀಜ್, ಶೋಯಿಬ್ ಮಿಲ್ಕ್, ಆಸಿಫ್ ಆಲಿ, ಇಮಾದ್ ವಾಸಿಮ್, ಶದಬ್ ಖಾನ್, ಹಸನ್ ಆಲಿ, ಹ್ಯಾರಿಸ್ ರೌಫ್, ಶಾಹಿನ್ ಆಫ್ರಿದಿ

ಆಫ್ಘಾನಿಸ್ತಾನ ತಂಡ:
ಹಜ್ರತುಲ್ಲಾ ಜಜೈ, ಮೊಹಮ್ಮದ್ ಶಹಝಾದ್, ರಹಮಾನುಲ್ಲಾ ಗರ್ಬಾಜ್, ನಜೀಬುಲ್ಲಾ ಜರ್ದಾನ್, ಮೊಹಮ್ಮದ್ ನಬಿ, ಅಸ್ಗರ್ ಆಫ್ಘಾನ್, ಗುಲ್ಬಾದಿನ್ ನೈಬ್, ರಶೀದ್ ಖಾನ್, ಕರೀಮ್ ಜನ್, ನವೀನ್ ಉಲ್ ಹಕ್, ಮಜೀಬ್ ಯುಆರ್ ರಹೆಮಾನ್

T20 World Cup: ಟೀಂ ಇಂಡಿಯಾ ವಿಶ್ವಕಪ್‌ ಗೆಲ್ಲಲಿದೆ ಎಂದು ಭವಿಷ್ಯ ನುಡಿದ ಸೆಹ್ವಾಗ್

ಬಲಿಷ್ಠ ಭಾರತ(Team India) ಹಾಗೂ ನ್ಯೂಜಿಲೆಂಡ್(New zealand) ತಂಡವನ್ನು ಮಣಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಪಾಕಿಸ್ತಾನ ತಂಡ ಇಂದು ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದೆ. ಇತ್ತ ಆಫ್ಘಾನಿಸ್ತಾನ ತನ್ನ ಸ್ಪಿನ್ ಅಸ್ತ್ರದ ಮೂಲಕ ಪಾಕಿಸ್ತಾನ ಕಟ್ಟಿಹಾಕುವ ಯತ್ನದಲ್ಲಿದೆ. 

ದುಬೈ ಕ್ರೀಡಾಂಗಣದಲ್ಲಿ ಇಂದಿನ ಪಂದ್ಯಕ್ಕೆ ಬಳಸಿರುವ ಪಿಚ್ ಮೊದಲು ಬ್ಯಾಟಿಂಗ್‌ಗೆ ನೆರವು ನೀಡುವಂತಿದೆ. ಹೀಗಾಗಿ ಆಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ಮಾಡಿ ಉತ್ತಮ ರನ್ ಪೇರಿಸುವ ಲೆಕ್ಕಾಚಾರದಲ್ಲಿದೆ. ಆದರೆ ದುಬೈ ಕ್ರೀಡಾಂಗಣದಲ್ಲಿ ಚೇಸಿಂಗ್ ಮಾಡಿದ ತಂಡ ಹೆಚ್ಚು ಗೆಲುವು ಸಾಧಿಸಿದೆ. ಹೀಗಾಗಿ ಇಂದಿನ ಹೋರಾಟ ತೀವ್ರ ಕುತೂಹಲ ಕೆರಳಿಸಿದೆ.

ದುಬೈ ಕ್ರೀಡಾಂಗಣದಲ್ಲಿ ಇದೇ ಮೊದಲ ಬಾರಿಗೆ ಟಾಸ್ ಗೆದ್ದ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಧೈರ್ಯ ಮಾಡಿದೆ. ಈ ವಿಚಾರದಲ್ಲಿ ಆಫ್ಘಾನಿಸ್ತಾನ ತಂಡವನ್ನು ಶ್ಲಾಘಿಸಲೇಬೇಕು. ದಿಟ್ಟ ನಿರ್ಧಾರದ ಮೂಲಕ ಬ್ಯಾಟಿಂಗ್ ಮಾಡಿಕೊಂಡು ಪಾಕಿಸ್ತಾನ ತಂಡವನ್ನು ಕಟ್ಟಿಹಾಕುವ ಲೆಕ್ಕಾಚಾರದಲ್ಲಿದೆ.

T20 World Cup 2021: ಮೊಹಮ್ಮದ್ ಶಮಿ ನಿಂದನೆ ಹಿಂದೆ ಪಾಕಿಸ್ತಾನ ಪಿತೂರಿ ಬಯಲು!

ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನ ಇದುವರೆಗೆ ಒಂದು ಬಾರಿ ಟಿ20 ಪಂದ್ಯದಲ್ಲಿ ಮುಖಾಮುಖಿಯಾಗಿದೆ. 2013ರಲ್ಲಿ ನಡೆದ ಈ ಪಂದ್ಯದಲ್ಲಿ ಪಾಕಿಸ್ತಾನ 6 ವಿಕೆಟ್ ಗೆಲುವು ಕಂಡಿದೆ.  ಯುಎಇನಲ್ಲಿ ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನ ಉತ್ತಮ ಗೆಲುವಿನ ರೆಕಾರ್ಡ್ ಹೊಂದಿದೆ.  UAEನಲ್ಲಿ ಪಾಕಿಸ್ತಾನ 38 ಪಂದ್ಯದಲ್ಲಿ 24 ಗೆಲುವು ಕಂಡಿದೆ. ಇತ್ತ ಆಫ್ಘಾನಿಸ್ತಾನದ ರೆಕಾರ್ಡ್ ಮತ್ತೂ ಉತ್ತಮವಾಗಿದೆ.  UAEನಲ್ಲಿ ಆಡಿದ 34 ಪಂದ್ಯದಲ್ಲಿ 27 ಗೆಲುವು ಕಂಡಿದೆ. ಹೀಗಾಗಿ ಇಂದಿನ ಹೋರಾಟದಲ್ಲಿ ಯಾರು ಗೆಲುವು ಸಾಧಿಸುತ್ತಾರೆ ಅನ್ನೋ ಕುತೂಹಲ ಮನೆ ಮಾಡಿದೆ.

2016ರ ಬಳಿಕ ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನ ಇತರ ತಂಡಗಳ ವಿರುದ್ಧ ಯುಎಇ ನೆಲದಲ್ಲಿ 13 ಪಂದ್ಯ ಆಡಿದೆ. ಇದರಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡಿದೆ. ಹೀಗಾಗಿ ಒಬ್ಬರ ಗೆಲುವಿನ ಓಟ ಇಂದು ಬ್ರೇಕ್ ಆಗಲಿದೆ. 

T20 World Cup 2021 ಟೂರ್ನಿಯಲ್ಲಿ ಬಲಿಷ್ಠ ತಂಡಗಳ ಪೈಕಿ ಪಾಕಿಸ್ತಾನ ಮಂಚೂಣಿಯಲ್ಲಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಪಾಕಿಸ್ತಾನ ತಂಡ ಹೆಚ್ಚು ಬಲಿಷ್ಠವಾಗಿದೆ. ಹೀಗಾಗಿ ಆರಂಭಿಕ ಪಂದ್ಯದಲ್ಲಿ ಟೀಂ ಇಂಡಿಯಾ ಮಣಿಸಿದ ಪಾಕಿಸ್ತಾನ, 2ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿತ್ತು.

ಅಂಕಪಟ್ಟಿ:
ಅಂಕಪಟ್ಟಿಯಲ್ಲಿ ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನ ಮೊದಲೆರೆಡು ಸ್ಥಾನದಲ್ಲಿದೆ. ಪಾಕಿಸ್ತಾನ 2 ಪಂದ್ಯಗಳನ್ನು ಮೊದಲ ಸ್ಥಾನದಲ್ಲಿದ್ದರೆ, ಆಫ್ಘಾನಿಸ್ತಾನ ಆಡಿದ 1ರಲ್ಲಿ 1 ಗೆಲುವು ಸಾಧಿಸಿ 2ನೇ ಸ್ಥಾನದಲ್ಲಿದೆ. ಇನ್ನು ನಮಿಬಿಯಾ 3ನೇ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್ 4 ಮತ್ತು ಭಾರತ 5ನೇ ಸ್ಥಾನದಲ್ಲಿದೆ. ಆಡಿದ 2ರಲ್ಲಿ ಸೋಲು ಕಂಡಿರುವ ಸ್ಕಾಟ್‌ಲೆಂಡ್ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Mock Auction: 30.5 ಕೋಟಿ ರೂಪಾಯಿ ದಾಖಲೆ ಮೊತ್ತಕ್ಕೆ ಕೆಕೆಆರ್‌ಗೆ ಕ್ಯಾಮರೂನ್‌ ಗ್ರೀನ್‌!
ಐಪಿಎಲ್ ಹರಾಜು ಇತಿಹಾಸದಲ್ಲೇ ಟಾಪ್ 6 ದುಬಾರಿ ಆಟಗಾರರಿವರು!