ಸೌತ್ ಆಫ್ರಿಕಾ ವಿರುದ್ದದ 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆರಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಮೊದಲ ಎರಡು ಓವರ್‌ನಲ್ಲಿ 2 ವಿಕೆಟ್ ಕಳೆದುಕೊಂಡಿದ್ದ ಭಾರತ ಇದೀಗ ನಾಯಕನ ವಿಕೆಟ್ ಪತನಗೊಂಡಿದೆ.
ಜಾರ್ಜ್ ಪಾರ್ಕ್(ನ.10) ಸೌತ್ ಆಫ್ರಿಕಾ ವಿರುದ್ದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಸ್ಫೋಟಕ ಆರಂಭ ಪಡೆದಿತ್ತು. ಸಂಜು ಸ್ಯಾಮ್ಸನ್ ಸೆಂಚುರಿಯಿಂದ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿತ್ತು. ಆದರೆ 2ನೇ ಪಂದ್ಯದ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿದೆ. ಕಳೆದ ಪಂದ್ಯದಲ್ಲಿ ಅಬ್ಬರಿಸಿದ ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಬಹುಬೇಗನೆ ವಿಕೆಟ್ ಕೈಚೆಲ್ಲಿದ್ದಾರೆ. ಮೊದಲ ಎರಡು ಓವರ್‌ನಲ್ಲಿ ಭಾರತ 2 ವಿಕೆಟ್ ಕಳೆದುಕೊಂಡಿದೆ.
ದ್ವಿತೀಯ ಟಿ20 ಪಂದ್ಯದಲ್ಲಿ ಸೌತ್ ಆಫ್ರಿಕಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಲು ಸೈಂಟ್ ಜಾರ್ಜ್ ಪಾರ್ಕ್ ಮೈದಾನ ಸಹಕರಿಸುವಂತಿರಲಿಲ್ಲ. ಆದರೆ ಅನಿವಾರ್ಯವಾಗಿ ಬ್ಯಾಟಿಂಗ್ ಇಳಿದ ಭಾರತ ಖಾತೆ ತೆರೆಯುವ ಮುನ್ನವೇ ಸಂಜು ಸ್ಯಾಮ್ಸನ್ ವಿಕೆಟ್ ಕಳೆದುಕೊಂಡಿತು. ಆರಂಭಿಕ ಓವರ್‌ನ ಮೂರು ಬಾಲ್ ಎದುರಿಸಿದ ಸಂಜು ಸ್ಯಾಮ್ಸನ್ ರನ್ ಗಳಿಸದೆ ವಿಕೆಟ್ ಕೈಚೆಲ್ಲಿದರು. ಸಂಜು ಸ್ಯಾಮ್ಸನ್ ಶೂನ್ಯಕ್ಕೆ ಔಟಾದರು. ಇತ್ತ ಎರಡನೇ ಓವರ್‌ನಲ್ಲಿ ಅಭಿಷೇಕ್ ಶರ್ಮಾ ವಿಕೆಟ್ ಪತನಗೊಂಡಿತು. ಅಭಿಶಷೇಕ್ ಶರ್ಮಾ 4 ರನ್ ಸಿಡಿಸಿ ಔಟಾದರು. ಇನ್ನು ನಾಯಕ ಸೂರ್ಯಕುಮಾರ್ ಯಾದವ್ 4 ರನ್ ಸಿಡಿಸಿ ನಿರ್ಗಮಿಸಿದರುು. ಈ ಮೂಲಕ ಭಾರತ 3 ವಿಕೆಟ್ ಕಳೆದುಕೊಂಡಿದೆ.
ಸಂಜು ಸ್ಯಾಮ್ಸನ್ ಸೆಂಚುರಿಗೆ ರೋಹಿತ್ , ಯುವರಾಜ್ ಸೇರಿ ಹಲವರ ದಾಖಲೆ ಪುಡಿ ಪುಡಿ!
ಸೌತ್ ಆಫ್ರಿಕಾ ದಾಳಿಗೆ ಟೀಂ ಇಂಡಿಯಾ ತತ್ತರಿಸಿದೆ. ಮಾರ್ಕೋ ಜಾನ್ಸೀನ್ ಹಾಗೂ ಗೆರಾಲ್ಡ್ ಕೊಯೆಟ್ಜ್ ಅಬ್ಬರಕ್ಕೆ ಎರಡು ವಿಕೆಟ್ ಪತನಗೊಂಡಿತು. ಆ್ಯಂಡಿಲ್ ದಾಳಿಗೆ ಸೂರ್ಯಕುಮಾರ್ ಔಟಾದರು. ಸೌತ್ ಆಫ್ರಿಕಾ ಆರಂಭದಿಂದಲೇ ಮೇಲುಗೈ ಸಾಧಿಸಿದೆ. ಈ ಮೂಲಕ ಟೀಂ ಇಂಡಿಯಾ ಅಬ್ಬರಕ್ಕೆ ಬ್ರೇಕ್ ಹಾಕಿದೆ.
ಮೊದಲ ಪಂದ್ಯದ ಗೆಲುವಿನ ಬಳಿಕ ಟೀಂ ಇಂಡಿಯಾದಲ್ಲಿ ಕೆಲ ಬದಲಾವಣೆಯಾಗುವ ಸಾಧ್ಯತೆಗಳು ಕೇಳಿಬಂದಿತ್ತು. ಆದರೆ ನಾಯಕ ಸೂರ್ಯಕುಮಾರ್ ಯಾದವ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಟೀಂ ಇಂಡಿಯಾ ಪ್ಲೇಯಿಂಗ್ 11
ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್(ನಾಯಕ), ತಿಲಕ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಅಕ್ಸರ್ ಪಟೇಲ್, ಅರ್ಶದೀಪ್ ಸಿಂಗ್, ರವಿ ಬಿಶ್ನೋಯ್, ವರುಣ್ ಚಕ್ರವರ್ತಿ, ಅವೇಶ್ ಖಾನ್
ಕಿವೀಸ್ ಸರಣಿ 0-3 ವೈಟ್‌ವಾಶ್ ಬಗ್ಗೆ 6 ಗಂಟೆ ಪೋಸ್ಟ್‌ಮಾರ್ಟಂ!
ಸೌತ್ ಆಫ್ರಿಕಾ ಪ್ಲೇಯಿಂಗ್ 11
ರಿಯಾನ್ ರಿಕೆಲ್ಟನ್, ರೀಜಾ ಹೆಂಡ್ರಿಕ್ಸ್, ಆ್ಯಡಿನ್ ಮರ್ಕ್ರಮ್(ನಾಯಕ), ತ್ರಿಸ್ಟನ್ ಸ್ಟಬ್ಸ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೋ ಜಾನ್ಸೆನ್, ಆ್ಯಂಡಿಲ್ ಸಿಮೆಲೆನ್, ಗೆರಾಲ್ಡ್ ಕೊಯೆಟ್ಜ್, ಕೇಶವ ಮಹರಾಜ್, ಎನ್ ಪೀಟರ್