ಆಸ್ಟ್ರೇಲಿಯಾ ಸೊಕ್ಕಡಗಿಸಿ 22 ವರ್ಷಗಳ ಬಳಿಕ ಕಾಂಗರೂ ನೆಲದಲ್ಲಿ ಏಕದಿನ ಸರಣಿ ಗೆದ್ದ ಪಾಕಿಸ್ತಾನ!

By Naveen Kodase  |  First Published Nov 10, 2024, 5:21 PM IST

ಆಸೀಸ್ ನೆಲದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ಬರೋಬ್ಬರಿ 22 ವರ್ಷಗಳ ಬಳಿಕ ಏಕದಿನ ಸರಣಿ ಜಯಿಸುವಲ್ಲಿ ಯಶಸ್ವಿಯಾಗಿದೆ.


ಪರ್ತ್‌: ಪಾಕಿಸ್ತಾನ ಸೀಮಿತ ಓವರ್‌ಗಳ ತಂಡದ ನಾಯಕನಾದ ಬೆನ್ನಲ್ಲೇ ಮೊಹಮ್ಮದ್ ರಿಜ್ವಾನ್ ತಮ್ಮ ಮೊದಲ ಅಗ್ನಿಪರೀಕ್ಷೆಯನ್ನು ಯಶಸ್ವಿಯಾಗಿ ಪಾಸ್ ಮಾಡಿದ್ದಾರೆ. ಆಸ್ಟ್ರೇಲಿಯಾ ತಂಡವನ್ನು ಅವರದ್ದೇ ನೆಲದಲ್ಲಿ ಬರೋಬ್ಬರಿ 22 ವರ್ಷಗಳ ಬಳಿಕ ಮಣಿಸುವ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 

ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವಿನ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಪಾಕ್ ಬೌಲರ್‌ಗಳ ಸಂಘಟಿತ ಪ್ರದರ್ಶನದ ಎದುರು ಆಸೀಸ್ ಬ್ಯಾಟರ್‌ಗಳು ತತ್ತರಿಸಿ ಹೋದರು. ಶಾಹೀನ್ ಅಫ್ರಿದಿ, ನಸೀಂ ಶಾ ಹಾಗೂ ಹ್ಯಾರಿಸ್ ರೌಫ್ ಮಾರಕ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ತಂಡವು 140 ರನ್‌ಗಳಿಗೆ ಸರ್ವಪತನ ಕಂಡಿತು. ಶಾಹೀನ್ ಅಫ್ರಿದ ಹಾಗೂ ನಸೀಂ ಶಾ ತಲಾ 3 ವಿಕೆಟ್ ಕಬಳಿಸಿದರೆ, ಹ್ಯಾರಿಸ್ ರೌಫ್ 2 ಹಾಗೂ ಹುಸನೈನ್ ಒಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.

Tap to resize

Latest Videos

undefined

ಬಾಲಿವುಡ್ ನಟ ಗೋವಿಂದ ಅಳಿಯ ಐಪಿಎಲ್ ಹರಾಜಿಗೆ ಎಂಟ್ರಿ; ಮೂಲ ಬೆಲೆ ಒಂದೂವರೆ ಕೋಟಿ ರುಪಾಯಿ!

ಇನ್ನು ಸುಲಭ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು ಮೊದಲ ವಿಕೆಟ್‌ಗೆ ಸೈಮ್ ಆಯುಬ್ ಹಾಗೂ ಅಬ್ದುಲ್ಲಾ ಶಫೀಕ್ 84 ರನ್‌ಗಳ ಜತೆಯಾಟವಾಡಿದರು. ಆದರೆ ಕೇವಲ 2 ರನ್ ಅಂತರದಲ್ಲಿ ಎರಡು ವಿಕೆಟ್ ಕಳೆದುಕೊಂಡ ಪಾಕ್ ತಂಡ ಕೊಂಚ ಆತಂಕಕ್ಕೆ ಒಳಗಾಯಿತು. ಆದರೆ ಮೂರನೇ ವಿಕೆಟ್‌ಗೆ ನಾಯಕ ಮೊಹಮ್ಮದ್ ರಿಜ್ವಾನ್(30) ಹಾಗೂ ಬಾಬರ್ ಅಜಂ(28) ಮುರಿಯದ 58 ರನ್‌ಗಳ ಜತೆಯಾಟವಾಡುವ ಮೂಲಕ ಇನ್ನೂ 139 ಎಸೆತ ಬಾಕಿ ಇರುವಂತೆಯೇ ತಂಡವನ್ನು ಅನಾಯಾಸವಾಗಿ ಗೆಲುವಿನ ದಡ ಸೇರಿಸಿದರು.

ಕಾಲೇಜ್‌ನಲ್ಲೇ ಲವ್‌ನಲ್ಲಿ ಬಿದ್ದ ಸಂಜು ಸ್ಯಾಮ್ಸನ್; ಯಾವ ಸಿನಿಮಾಗೂ ಕಮ್ಮಿಯಿಲ್ಲ ಟೀಂ ಇಂಡಿಯಾ ಕ್ರಿಕೆಟರ್ ಲವ್ ಸ್ಟೋರಿ

22 ವರ್ಷಗಳ ಬಳಿಕ ಆಸೀಸ್‌ ನೆಲದಲ್ಲಿ ಸರಣಿ ಜಯ: ಪಾಕಿಸ್ತಾನ ಕ್ರಿಕೆಟ್ ತಂಡವು ಬರೋಬ್ಬರಿ 22 ವರ್ಷಗಳ ಬಳಿಕ ಆಸ್ಟ್ರೇಲಿಯಾ ನೆಲದಲ್ಲಿ ಏಕದಿನ ಸರಣಿ ಜಯಿಸುವ ಮೂಲಕ ಕಾಂಗರೂ ಪಡೆಯ ಸೊಕ್ಕಡಗಿಸುವಲ್ಲಿ ಯಶಸ್ವಿಯಾಗಿದೆ. ಪಾಕಿಸ್ತಾನ ತಂಡವು 2002ರಲ್ಲಿ ಕೊನೆಯ ಬಾರಿಗೆ ಆಸೀಸ್ ನೆಲದಲ್ಲಿ ಏಕದಿನ ಸರಣಿ ಜಯಿಸಿತ್ತು. ಕಾಕತಾಳೀಯ ಎನ್ನುವಂತೆ 2002ರಲ್ಲಿ ಪಾಕ್ ತಂಡವು ಆಸೀಸ್ ಪ್ರವಾಸ ಮಾಡಿದ್ದಾಗ ಮೊದಲ ಪಂದ್ಯ ಸೋತು ಹಿನ್ನಡೆ ಅನುಭವಿಸಿತ್ತು. ಇದಾದ ಬಳಿಕ ಸತತ ಎರಡು ಪಂದ್ಯಗಳನ್ನು ಜಯಿಸುವ ಮೂಲಕ ಏಕದಿನ ಸರಣಿ ಕೈವಶ ಮಾಡಿಕೊಂಡಿತ್ತು. ಇದೀಗ ಅದೇ ರೀತಿ ಮೊಹಮ್ಮದ್ ರಿಜ್ವಾನ್ ಪಡೆ ಕೂಡಾ ಮೊದಲ ಪಂದ್ಯ ಸೋತು ಆನಂತರ ಸತತ ಎರಡು ಪಂದ್ಯ ಗೆದ್ದು ಏಕದಿನ ಸರಣಿ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

click me!