
ಬೆಂಗಳೂರು(ಅ.29): ಹಲವು ವರ್ಷಗಳ ಕಾಲ ಜತೆಯಲ್ಲಿ ಆಡಿದ ಸೌರವ್ ಗಂಗೂಲಿ ಹಾಗೂ ರಾಹುಲ್ ದ್ರಾವಿಡ್ ಬುಧವಾರ( ಅ.30) ಇಲ್ಲಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿ ಭೇಟಿಯಾಗಲಿದ್ದಾರೆ. ಭಾರತೀಯ ಕ್ರಿಕೆಟ್‌ನ ಮಾರ್ಗಸೂಚಿ ಬಗ್ಗೆ ಮಾಜಿ ನಾಯಕರಿಬ್ಬರು ಚರ್ಚಿಸಲಿದ್ದಾರೆ.
ಇದನ್ನೂ ಓದಿ: ಗಂಗೂಲಿ ಅಥವಾ ಲಕ್ಷ್ಮಣ್? ICC ಪ್ರಶ್ನೆಗೆ ಫ್ಯಾನ್ಸ್ ಉತ್ತರ!
ಬಿಸಿಸಿಐ ಅಧ್ಯಕ್ಷರಾಗಿ ಸೌರವ್ ಅಧಿಕಾರ ಸ್ವೀಕರಿಸಿದ ಬಳಿಕ ಭಾರತೀಯ ಕ್ರಿಕೆಟ್‌ನಲ್ಲಿ ಧನಾತ್ಮಕ ವಾತಾವರಣ ಸೃಷ್ಟಿಯಾಗಿದೆ. ಜುಲೈನಲ್ಲಿ ಎನ್‌ಸಿಎ ಜವಾಬ್ದಾರಿ ವಹಿಸಿದ ದ್ರಾವಿಡ್, ಭಾರತೀಯ ಕ್ರಿಕೆಟ್‌ಗೆ ಮಾರ್ಗಸೂಚಿ ರಚಿಸಿದ್ದಾರೆ. ಈ ಭೇಟಿ ವೇಳೆ ಗಂಗೂಲಿ ತಮ್ಮ ಸಲಹೆಗಳನ್ನೂ ದ್ರಾವಿಡ್ ಜೊತೆ ಹಂಚಿಕೊಳ್ಳಲಿದ್ದಾರೆ.
ಇದನ್ನೂ ಓದಿ: ದ್ರಾವಿಡ್ ಭೇಟಿಯಾದ ಕೊಹ್ಲಿ; ನಿಜವಾದ ದಿಗ್ಗಜರ ಸಮಾಗಮ ಎಂದ ಫ್ಯಾನ್ಸ್!
ಪೃಥ್ವಿ ಶಾ ಡೋಪಿಂಗ್, ವೃದ್ಧಿಮಾನ್ ಸಾಹ, ಹಾರ್ದಿಕ್ ಪಾಂಡ್ಯ ಅವರ ಫಿಟ್ನೆಸ್ ನಿರ್ವಹಣೆಯಲ್ಲಿ ಎನ್‌ಸಿಎ ಎಡವಟ್ಟು ಮಾಡಿದ್ದು, ಅಂತಹ ಘಟನೆಗಳನ್ನು ತಪ್ಪಿಸುವುದು ಹೇಗೆ ಎನ್ನುವ ಬಗ್ಗೆ ಪ್ರಮುಖವಾಗಿ ಚರ್ಚೆಯಾಗಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕೋಲ್ಕತಾದಲ್ಲಿ ಮೊದಲ ಹಗಲು-ರಾತ್ರಿ ಟೆಸ್ಟ್?
ಬಿಸಿಸಿಐ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಸೌರವ್ ಗಂಗೂಲಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಗಂಗೂಲಿಯನ್ನು ಆತ್ಮೀಯವಾಗಿ ಸ್ವಾಗತಿಸಲು ಕರ್ನಾಟಕ ಕ್ರಿಕೆಟ್ ಸಂಸ್ಥೆ ಸಕಲ ಸಿದ್ಧತೆ ಮಾಡಿಕೊಂಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.