ತಾನೇ ತೋಡಿಕೊಂಡ ಹಳ್ಳಕ್ಕೆ ತಾವೇ ಬಿದ್ದರಾ ಶುಭ್‌ಮನ್ ಗಿಲ್..?

By Suvarna NewsFirst Published Jul 27, 2023, 6:24 PM IST
Highlights

ಆರಂಭಿಕನಾಗಿ ಸಕ್ಸಸ್‌ ಕಂಡಿದ್ದ ಗಿಲ್‌, ಮೂರನೇ ಕ್ರಮಾಂಕದಲ್ಲಿ ಫೇಲ್
ವಿಂಡೀಸ್ ಎದುರು ಮೂರು ಇನಿಂಗ್ಸ್‌ನಲ್ಲೂ ವೈಫಲ್ಯ ಕಂಡ ಪಂಜಾಬ್ ಬ್ಯಾಟರ್
ತಾವೇ ಕೇಳಿ ಪಡೆದುಕೊಂಡ ಸ್ಥಾನದಿಂದ ಇದೀಗ ತಂಡದಿಂದಲೇ ಕಿಕ್‌ ಔಟ್ ಆಗುವ ಭೀತಿ

ಬೆಂಗಳೂರು(ಜು.27): ಲೈಫ್​ನಲ್ಲಿ ಎಲ್ಲ ಆಸೆಗಳಿಗೂ ಮಿತಿ ಇರಬೇಕು. ಅತಿಯಾದ್ರೆ ಅಮೃತವೂ ವಿಷವಾಗುತ್ತದೆ. ಆತಿಯಾಸೆ ಗತಿಗೇಡು. ಅತಿಯಾಸೆಯಿಂದ ಮನುಷ್ಯ ನೆಮ್ಮದಿಯನ್ನೇ ಕಳೆದುಕೊಳ್ತಾನೆ. ಈ ಗಾದೆ ಸದ್ಯಕ್ಕೆ ಟೀಂ ಇಂಡಿಯಾ ಬ್ಯಾಟರ್ ಶುಭ್‌ಮನ್ ಗಿಲ್​ಗೆ ಸೂಟ್ ಆಗ್ತಿದೆ. ಸುಮ್ಮನಿರಲಾರದವರು ಇರುವೆ ಬಿಟ್ಟುಕೊಂಡ್ರು ಅಂತರಲ್ಲಾ ಹಾಗೆ ಆಗಿದೆ ಪಂಜಾಬ್ ಪುತ್ತರ್ ಲೈಫ್. ಮಾಡಿದ ತಪ್ಪಿಗೆ ಸಪ್ಪೆ ಮೊರೆ ಹಾಕಿಕೊಂಡು ತಲೆ ತಗ್ಗಿಸಿಕೊಂಡು ನಿಂತಿದ್ದಾರೆ.

ಮೂರು ಇನ್ನಿಂಗ್ಸ್​ನಲ್ಲೂ ಮುಗ್ಗರಿಸಿದ..!

ಟೀಂ ಇಂಡಿಯಾ ಮೂರು ಫಾರ್ಮ್ಯಾಟ್​ನಲ್ಲೂ ಶುಭ್‌ಮನ್ ಗಿಲ್ ಓಪನರ್​. ಆರಂಭಿಕನಾಗಿ 6 ಸೆಂಚುರಿ, 9 ಹಾಫ್ ಸೆಂಚುರಿ ಹೊಡೆದಿದ್ದಾರೆ. ಮೂರು ಮಾದರಿಯಲ್ಲೂ ಟೀಂ ಇಂಡಿಯಾಗೆ ಉತ್ತಮ ಆರಂಭ ಒದಗಿಸಿಕೊಡುತ್ತಿದ್ದರು. ಓಪನರ್ ಆಗಿ ಸ್ಟ್ರೈಕ್​ರೇಟ್​, ಸರಾಸರಿ ಎಲ್ಲವೂ ಉತ್ತಮವಾಗಿದೆ. ಮೂರು ಫಾರ್ಮ್ಯಾಟ್​ಗೂ ಒಳ್ಳೆ ಓಪನರ್ ಸಿಕ್ಕಿದ ಅಂತ ಫ್ಯಾನ್ಸ್ ಅಂದುಕೊಳ್ಳುತ್ತಿದ್ದರು. ಗಿಲ್ ಸಹ ಓಪನರ್ ಆಗಿ ಗಿಲ್ಲಿ ದಾಂಡು ಆಡುತ್ತಿದ್ದರು.

ಈ ವರ್ಷ ವಿರಾಟ್ ಕೊಹ್ಲಿ ಸ್ಟ್ರಾಂಗ್ ಕಮ್​ಬ್ಯಾಕ್..! ವಿಶ್ವಕಪ್‌ಗೂ ಮುನ್ನ ಗುಡ್‌ನ್ಯೂಸ್

ಆದರೆ ಟೀಮ್​ನಿಂದ ಚೇತೇಶ್ವರ್ ಪೂಜಾರ ಡ್ರಾಪ್ ಮಾಡಿದ್ಮೇಲೆ ಟೆಸ್ಟ್ ತಂಡದಲ್ಲಿ 3ನೇ ಕ್ರಮಾಂಕ ಖಾಲಿಯಾಯ್ತು. ಓಪನರ್ ಆಗಿದ್ದ ಶುಭ್‌ಮನ್ ಗಿಲ್, ನಂಬರ್ 3 ಸ್ಲಾಟ್​ನಲ್ಲಿ ಆಡ್ತೀನಿ ಅಂತ ಕೋಚ್ ರಾಹುಲ್ ದ್ರಾವಿಡ್ ಬಳಿ ಕೇಳಿಕೊಂಡ್ರು. ಅದಕ್ಕೆ ದ್ರಾವಿಡ್ ತಥಾಸ್ತು ಅಂದ್ರು. ಆದ್ರೆ ಈಗ ಆಗಿರೋದೇನು..? ಆಡಿದ ಮೂರು ಇನ್ನಿಂಗ್ಸ್​ನಲ್ಲೂ ಮುಗ್ಗರಿಸಿದ್ದಾರೆ ಗಿಲ್.

ಗಿಲ್ ಸೈಲೆಂಟ್​, ಜೈಸ್ವಾಲ್ ವೈಲೆಂಟ್..!

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ 6 ರನ್​ಗೆ ಔಟಾಗಿದ್ದ ಗಿಲ್, ಸೆಕೆಂಡ್ ಟೆಸ್ಟ್​ನ ಫಸ್ಟ್ ಇನ್ನಿಂಗ್ಸ್​ನಲ್ಲಿ 10 ರನ್​ಗೆ ನಿರ್ಗಮಿಸಿದ್ರು. ಇನ್ನು 2ನೇ ಇನ್ನಿಂಗ್ಸ್​ನಲ್ಲಿ ಅಜೇಯ 29 ರನ್ ಹೊಡೆದ್ರೂ ತೆಗೆದುಕೊಂಡ ಎಸೆತ ಬರೋಬ್ಬರಿ 37. ವೇಗವಾಗಿ ಬ್ಯಾಟಿಂಗ್ ಮಾಡಿ ಬೇಗ ಡಿಕ್ಲೇರ್ ಮಾಡಿಕೊಳ್ಳಬೇಕು ಅಂತ ಹೇಳಿ ಕಳುಹಿಸಿದ್ರೂ ಕ್ರೀಸಿಗೆ ಬಂದ ಗಿಲ್ ಬ್ಯಾಟ್ ಬೀಸೋ ಬದಲು ಕುಟುಕುತ್ತಾ ನಿಂತು ಬಿಟ್ರು. ಇವರಿಗಿಂತ ಲೇಟಾಗಿ ಕ್ರೀಸಿಗೆ ಬಂದ ಇಶಾನ್ ಕಿಶನ್ 33 ಬಾಲ್​ನಲ್ಲಿ 52 ರನ್ ಬಾರಿಸಿದ್ರೆ, ಗಿಲ್ ಮಾತ್ರ 37 ಬಾಲ್​ನಲ್ಲಿ ಕೇವಲ ಒಂದು ಬೌಂಡ್ರಿ ಸಹಿತ 29 ರನ್ ಗಳಿಸಿದ್ರು.

Ind vs WI ವಿಂಡೀಸ್‌ ಎದುರಿನ ಏಕದಿನ ಸರಣಿಯಿಂದ ಟೀಂ ಇಂಡಿಯಾ ಪ್ರಮುಖ ವೇಗಿ ಔಟ್..!

ಸತತ ವಿಫಲವಾದ್ರೆ ಗಿಲ್ ಕಿಕೌಟ್ ಆಗ್ತಾರಾ..?

ಆರಂಭಿಕನಾಗಿ ಸಕ್ಸಸ್ ಆಗಿದ್ದ ಗಿಲ್, ಅಲ್ಲಿಯೇ ಆಡಬೇಕಿತ್ತು. ಅದನ್ನ ಬಿಟ್ಟು 3ನೇ ಕ್ರಮಾಂಕವನ್ನ ಕೇಳಿ ಪಡೆದಿದ್ದಾರೆ. ಸಕ್ಸಸ್ ಆದ್ರೆ ಸಮಸ್ಯೆಯಿಲ್ಲ. ಆಕಸ್ಮಾತ್ ವಿಫಲವಾದ್ರೆ ಟೆಸ್ಟ್ ಟೀಮ್​ನಿಂದಲೇ ಕಿಕೌಟ್ ಆಗಲಿದ್ದಾರೆ. ಯಾಕಂದ್ರೆ ಈಗ ಆರಂಭಿಕ ಸ್ಥಾನ ಖಾಲಿ ಇಲ್ಲ. ಗಿಲ್ ಬದಲು ಓಪನರ್ ಆಗಿರುವ ಯಶಸ್ವಿ ಜೈಸ್ವಾಲ್ ಶತಕ ಸಿಡಿಸೋ ಮೂಲಕ ಆ ಸ್ಥಾನವನ್ನ ಭದ್ರಪಡಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ-ಜೈಸ್ವಾಲ್ ಜೋಡಿ ಸಕ್ಸಸ್ ಆಗಿದೆ. ಅಲ್ಲಿಗೆ ಗಿಲ್​ಗೆ ಅತಿಯಾಸೆ ಗತಿಗೇಡು ಅನ್ನುವಂತಾಗಿದೆ.

click me!