ಈ ವರ್ಷ ವಿರಾಟ್ ಕೊಹ್ಲಿ ಸ್ಟ್ರಾಂಗ್ ಕಮ್​ಬ್ಯಾಕ್..! ವಿಶ್ವಕಪ್‌ಗೂ ಮುನ್ನ ಗುಡ್‌ನ್ಯೂಸ್

By Suvarna News  |  First Published Jul 27, 2023, 6:13 PM IST

2023ರಲ್ಲಿ ಭರ್ಜರಿ ಫಾರ್ಮ್‌ಗೆ ಮರಳಿರುವ ವಿರಾಟ್ ಕೊಹ್ಲಿ
ಏಷ್ಯಾಕಪ್, ವಿಶ್ವಕಪ್‌ಗೂ ಮುನ್ನ ಅಭಿಮಾನಿಗಳಿಗೆ ಗುಡ್‌ನ್ಯೂಸ್
ಮತ್ತೊಮ್ಮೆ ವಿರಾಟ್ ಕೊಹ್ಲಿ ಯುಗಾರಂಭ


ಬೆಂಗಳೂರು(ಜು.27): ಯೆಸ್, ವಿರಾಟ್ ಕೊಹ್ಲಿ ಇನ್​ಕಮ್ ಕಮ್ಮಿಯಾಗಿದೆ. ಕಮ್ಮಿ ಏನು ಆಗಿಲ್ಲ. ಕೊಹ್ಲಿಗಿಂತ ಜಪಾನ್​ನ ನವೋಮಿ ಒಸಾಕಾ ಇನ್​ಕಮ್ ಜಾಸ್ತಿಯಾಗಿದೆ. ಹೀಗಾಗಿ ವಿರಾಟ್ 2ನೇ ಸ್ಥಾನಕ್ಕೆ ಜಾರಿದ್ದಾರೆ. ಆದ್ರೆ ಸಂಭಾವನೆ ವಿಷ್ಯದಲ್ಲಿ ಮಾತ್ರ ಕಿಂಗ್ ಕೊಹ್ಲಿ ಕೆಳಗಿಳಿದಿದ್ದಾರೆ. ಆಟದ ವಿಷ್ಯದಲ್ಲಿ ಈಗಲೂ ವಿರಾಟ್ ನಂಬರ್ 1 ಪ್ಲೇಯರ್. ಈ ವರ್ಷ ಅವರನ್ನ ಕಂಟ್ರೋಲ್ ಮಾಡೋಕೆ ಎದುರಾಳಿಗಳಿಂದ ಸಾಧ್ಯವಾಗಿಲ್ಲ. ವಿರಾಟ್ ಕೊಹ್ಲಿಯ ಯುಗ ಮತ್ತೊಮ್ಮೆ ಆರಂಭವಾಗಿದೆ.

ಒನ್​ಡೇ ವರ್ಲ್ಡ್​ಕಪ್ ದೃಷ್ಟಿಯಿಂದ ಕೊಹ್ಲಿಯನ್ನ ಟಿ20 ಟೀಮ್​ಗೆ ಸೆಲೆಕ್ಟ್ ಮಾಡ್ತಿಲ್ಲ. ಟಿ20 ಟೀಮ್​ನಿಂದ ಬಿಟ್ರೆ ಏನಂತೆ. ಟೆಸ್ಟ್ ಮತ್ತು ಒನ್​ಡೇಯಲ್ಲಿ ರನ್ ಹೊಳೆಯನ್ನೇ ಹರಿಸ್ತಿದ್ದಾರೆ. ಅವರ ಆಟಕ್ಕೆ ಕ್ರಿಕೆಟ್ ಫ್ಯಾನ್ಸ್ ಫಿದಾ ಆಗಿದ್ದಾರೆ. ದೂರದ ವೆಸ್ಟ್ ಇಂಡೀಸ್​​ನಲ್ಲೂ ಕಿಂಗ್ ಕೊಹ್ಲಿಗೆ ಬಿಗ್ ಫ್ಯಾನ್ಸ್ ಇದ್ದಾರೆ. 76ನೇ ಸೆಂಚುರಿ ಹೊಡೆದ್ಮೇಲೆ ಅವರೆಲ್ಲಾ ಕೊಹ್ಲಿಯನ್ನ ಕೊಂಡಾಡಿದ್ದಾರೆ.

Latest Videos

undefined

2023ರಲ್ಲಿ ಕೊಹ್ಲಿ ಗರಿಷ್ಠ ರನ್ ಸರದಾರ.!

ಬರೋಬ್ಬರಿ ಎರಡೂವರೆ ವರ್ಷ ಶತಕದ ಬರ ಎದುರಿಸಿದ್ದ ವಿರಾಟ್ ಕೊಹ್ಲಿ 2022ರಲ್ಲಿ ಏಷ್ಯಾಕಪ್​ನಲ್ಲಿ ಅಫ್ಘನ್ ವಿರುದ್ಧ ಸೆಂಚುರಿ ಸಿಡಿಸೋ ಮೂಲಕ ಶತಕದ ಬರ ನೀಗಿಸಿಕೊಂಡರು. ವೆಸ್ಟ್ ಇಂಡೀಸ್​ನಲ್ಲಿ ಶತಕ ಸಿಡಿಸೋ ಮೂಲಕ 2018ರ ಬಳಿಕ ವಿದೇಶದಲ್ಲಿ ಟೆಸ್ಟ್ ಶತಕದ ಬರದಿಂದ ಹೊರಬಂದರು. ಈಗ ಈ ವರ್ಷ ಗರಿಷ್ಠ ರನ್ ಸರದಾರ ಎನಿಸಿಕೊಂಡಿದ್ದಾರೆ.

Ind vs WI ವಿಂಡೀಸ್‌ ಎದುರಿನ ಏಕದಿನ ಸರಣಿಯಿಂದ ಟೀಂ ಇಂಡಿಯಾ ಪ್ರಮುಖ ವೇಗಿ ಔಟ್..!

ಈ ವರ್ಷ ಕೊಹ್ಲಿ ಆಡಿರುವುದು ಎರಡು ಮಾದರಿಯಿಂದ 19 ಇನ್ನಿಂಗ್ಸ್ ಆಡಿ 54.66ರ ಸರಾಸರಿಯಲ್ಲಿ 984 ರನ್ ಹೊಡೆದಿದ್ದಾರೆ. ಎರಡು ಟೆಸ್ಟ್ ಶತಕ, ಎರಡು ಒನ್​ಡೇ ಶತಕ ಸೇರಿ 4 ಸೆಂಚುರಿ ಬಾರಿಸಿದ್ದಾರೆ. ಎರಡು ಅರ್ಧಶತಕಗಳೂ ಅವರ ಖಾತೆಯಲ್ಲಿವೆ. ಅಲ್ಲಿಗೆ ವಿರಾಟ್ ಕೊಹ್ಲಿ ತಮ್ಮ ಹಳೆಯ ಖದರ್​ಗೆ ಮರಳಿದ್ದಾರೆ.

ಈ ವರ್ಷ ರನ್ ಶಿಖರವೇರಲಿದ್ದಾರೆ ಕೊಹ್ಲಿ 

2023ಲ್ಲಿ ಕೊಹ್ಲಿ ಇದುವರೆಗೂ ಆಡಿರುವುದು ಕೇವಲ 19 ಇನ್ನಿಂಗ್ಸ್ ಮಾತ್ರ. ಈ ವರ್ಷ ಅವರು ಇನ್ನೂ ಕನಿಷ್ಟ 25 ಇನ್ನಿಂಗ್ಸ್​ಗಳನ್ನಾಡಲಿದ್ದಾರೆ. ಅದ್ಭುತ ಲಯದಲ್ಲಿರುವ ವಿರಾಟ್, ಈ ವರ್ಷ ರನ್ ಶಿಖರವೇರೋದು ಗ್ಯಾರಂಟಿ.  ಏಷ್ಯಾಕಪ್ ಮತ್ತು ಒನ್​ಡೇ ವರ್ಲ್ಡ್​ಕಪ್ ಟೂರ್ನಿಗಳು ಬೇರೆ ನಡೆಯುತ್ತವೆ. ಈ ಎರಡು ಟೂರ್ನಿಯಲ್ಲಿ ಈ ಹಿಂದೆ ವಿರಾಟ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಒಟ್ನಲ್ಲಿ ಕ್ರಿಕೆಟ್​ನಲ್ಲಿ ಈ ವರ್ಷ ಕಿಂಗ್ ಕೊಹ್ಲಿ ವರ್ಷ ಆಗಲಿದೆ.

click me!