ಭಾರತದಲ್ಲಿ ಟಿ20 ಆಡಲು ಸಜ್ಜಾದ ಸಚಿನ್, ಲಾರಾ, ಸೆಹ್ವಾಗ್!

By Web DeskFirst Published Oct 15, 2019, 8:37 PM IST
Highlights

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, ಸ್ಫೋಟಕ ಬ್ಯಾಟ್ಸ್‌ಮನ್ ವಿರೇಂದ್ರ ಸೆಹ್ವಾಗ್, ವಿಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ಸೇರಿದಂತೆ ಸ್ಟಾರ್ ಕ್ರಿಕೆಟಿಗರು ಮತ್ತೆ ಮೈದಾನಕ್ಕಿಳಿಯುತ್ತಿದ್ದಾರೆ. ಭಾರತದಲ್ಲಿ ಆಯೋಜಿಸಿರುವ ವಿಶೇಷ ಟಿ20 ಲೀಗ್ ಟೂರ್ನಿಯಲ್ಲಿ ದಿಗ್ಗಜರ ಸಮಾಗಮವಾಗಲಿದೆ. ಈ ಟೂರ್ನಿ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಮುಂಬೈ(ಅ.15): ಮಾಜಿ ಕ್ರಿಕೆಟಿಗರು ಮತ್ತೆ ಕಣಕ್ಕಿಳಿಯುತ್ತಿದ್ದಾರೆ ಎಂದರೆ ಅಭಿಮಾನಿಗಳ ಕಿವಿ ನೆಟ್ಟಗಾಗುವುದು ಖಚಿತ. ಕಾರಣ ಕ್ರಿಕೆಟ್‌ಗೆ ವಿದಾಯ ಹೇಳಿದರೂ ಮಾಜಿ ಕ್ರಿಕೆಟಿಗರು ಅಭಿಮಾನಿಗಳ ಫೇವರಿಟ್ ಕ್ರಿಕೆಟಿಗರು. ಮಾಜಿ ಕ್ರಿಕೆಟಿಗರು ಈಗಾಗಲೇ ಮಾಸ್ಟರ್ ಟಿ20 ಲೀಗ್, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ ಶೇನ್ ವಾರ್ನ್ ಪ್ರಮುಖವಾಗಿ ಕಾಣಿಸಿಕೊಂಡ ಆಲ್ ಸ್ಟಾರ್ಸ್ ಟೂರ್ನಿಗಳಿವೆ. ಇದೀಗ ತೆಂಡೂಲ್ಕರ್, ವಿಂಡೀಸ್ ದಿಗ್ಗಜ ಬ್ರಿಯಾನ್ ಲಾರಾ, ವಿರೇಂದ್ರ ಸೆಹ್ವಾಗ್ ಸೇರಿದಂತೆ ಪ್ರಮುಖ ಮಾಜಿ ಕ್ರಿಕೆಟಿಗರು ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಇದನ್ನೂ ಓದಿ: 22ನೇ ವಸಂತಕ್ಕೆ ಕಾಲಿಟ್ಟ ಸಾರಾ ತೆಂಡುಲ್ಕರ್, ಸಚಿನ್ ಪುತ್ರಿ ಬ್ಯೂಟಿಗೆ ಬಾಲಿವುಡ್ ಬೋಲ್ಡ್!

ರೋಡ್ ಸೇಫ್ಟಿ ಟಿ20 ಲೀಗ್ ಹೆಸರಿನ ನೂತನ ಲೀಗ್ ಭಾರತದಲ್ಲಿ ಆಯೋಜನೆಗೊಳ್ಳುತ್ತಿದೆ. ಇದಕ್ಕೆ ಬಿಸಿಸಿಐನಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಭಾರತ ಸೇರಿದಂತೆ ಆಸ್ಟ್ರೇಲಿಯಾ, ಸೌತ್ ಆಫ್ರಿಕಾ, ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್ ಒಟ್ಟು 5 ದೇಶದ ಮಾಜಿ ಕ್ರಿಕೆಟಿಗರು ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 

ಇದನ್ನೂ ಓದಿ: ಕಾಡಿ ಬೇಡಿ ಓಪನರ್ ಆಗಿದ್ದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್..!

ಸಚಿನ್, ಲಾರಾ, ಸೆಹ್ವಾಗ್ ಹೊರತು ಪಡಿಸಿದರೆ, ಆಸ್ಟ್ರೇಲಿಯಾ ಮಾಜಿ ವೇಗಿ ಬ್ರೆಟ್ ಲೀ, ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್, ಸೌತ್ ಆಫ್ರಿಕಾದ ಜಾಂಟಿ ರೋಡ್ಸ್ ಸೇರಿದಂತೆ ಸ್ಟಾರ್ ಮಾಜಿ ಕ್ರಿಕೆಟಿಗರು ಪಾಲ್ಗೊಳ್ಳುತ್ತಿದ್ದಾರೆ. ಈ ಟೂರ್ನಿ ಮೂಲಕ ಮಾಜಿ ಕ್ರಿಕೆಟಿಗರು ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಲಿದ್ದಾರೆ.

ಇದನ್ನೂ ಓದಿ: ಭಾರತ-ಸೌತ್ ಆಫ್ರಿಕಾ ಸರಣಿ; ಯಾರು ಮರೆತಿಲ್ಲ 4 ಅತಿ ದೊಡ್ಡ ವಿವಾದ!

ಮಹಾರಾಷ್ಟ್ರ RTO(regional transport office)ಜೊತೆ ಸಹಭಾಗಿತ್ವ ಹೊಂದಿರುವ ಸ್ವಚ್ಚ ಭಾರತ್, ಸುರಕ್ಷಿತ್ ಭಾರತ್ ಟ್ರಸ್ಟ್ ಈ ಟೂರ್ನಿ ಆಯೋಜನೆ ಮಾಡುತ್ತಿದೆ.  ಪ್ರೋಫೆಶನಲ್ ಮ್ಯಾನೇಜ್ಮೆಂಟ್ ಗ್ರೂಪ್(PMG) ಕೂಡ ಈ ಟೂರ್ನಿಗೆ ಸಾಥ್ ನೀಡುತ್ತಿದೆ. ಸಚಿನ್ ತೆಂಡುಲ್ಕರ್ ಈ ಟೂರ್ನಿಯ ರಾಯಭಾರಿಯಾಗಿದ್ದಾರೆ.

2020ರಲ್ಲಿ ಈ ಟೂರ್ನಿಯ ಮೊದಲ ಆವೃತ್ತಿ ನಡೆಯಲಿದೆ. ಪ್ರತಿ ವರ್ಷ ಫೆಬ್ರವರಿ 2 ರಿಂದ 16ರ ವರೆಗೆ ರೋಡ್ ಸೇಫ್ಟಿ ಟೂರ್ನಿ ನಡೆಯಲಿದೆ. 

click me!