ವಾಂಖೇಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಮುಂಬೈ ಇಂಡಿಯನ್ಸ್ ತಂಡವು 29 ರನ್ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಗೆಲುವಿನ ಖಾತೆ ತೆರೆದಿದೆ. 17ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೂ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ಪಟ್ಟ ಕಟ್ಟಲಾಗಿತ್ತು. ಹೀಗಾಗಿ ಈ ಇಬ್ಬರ ನಡುವೆ ವೈಮನಸ್ಸು ಉಂಟಾಗಿದೆ ಎಂದೆಲ್ಲಾ ವರದಿಯಾಗಿತ್ತು.
ಮುಂಬೈ(ಏ.08): ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿದ್ದ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಕೊನೆಗೂ ಗೆಲುವಿನ ಖಾತೆ ತೆರೆದಿದೆ. 17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ತಂಡವು ಗೆಲುವು ಸಾಧಿಸುತ್ತಿದ್ದಂತೆಯೇ ಮಾಜಿ ನಾಯಕ ರೋಹಿತ್ ಶರ್ಮಾ ಮೂರು ಪದದ ಒಂದು ಪೋಸ್ಟ್ ಹಾಕುವ ಮೂಲಕ ಗಮನ ಸೆಳೆದಿದ್ದಾರೆ.
ಇಲ್ಲಿನ ವಾಂಖೇಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಮುಂಬೈ ಇಂಡಿಯನ್ಸ್ ತಂಡವು 29 ರನ್ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಗೆಲುವಿನ ಖಾತೆ ತೆರೆದಿದೆ. 17ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೂ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ಪಟ್ಟ ಕಟ್ಟಲಾಗಿತ್ತು. ಹೀಗಾಗಿ ಈ ಇಬ್ಬರ ನಡುವೆ ವೈಮನಸ್ಸು ಉಂಟಾಗಿದೆ ಎಂದೆಲ್ಲಾ ವರದಿಯಾಗಿತ್ತು. ಇದೆಲ್ಲದರ ನಡುವೆ ಮುಂಬೈ ಇಂಡಿಯನ್ಸ್ ತಂಡವು ಹ್ಯಾಟ್ರಿಕ್ ಸೋಲು ಅನುಭವಿಸಿದ್ದರಿಂದಾಗಿ ಪಾಂಡ್ಯ ಮೇಲೆ ಮುಂಬೈ ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದರು. ಆದರೆ ಇದೀಗ ಮುಂಬೈ ಇಂಡಿಯನ್ಸ್ ತಂಡವು ಗೆಲುವು ಸಾಧಿಸುತ್ತಿದ್ದಂತೆಯೇ ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಮಾಜಿ ನಾಯಕ "Off the mark"(ಜಯದ ಖಾತೆ ತೆರೆದಿದ್ದೇವೆ) ಎಂದು ಬರೆದುಕೊಂಡಿದ್ದಾರೆ.
ಕಾನೂನಿನ ಲೋಪದಿಂದಾಗಿ ಫಿಕ್ಸಿಂಗ್ ಕೇಸ್‌ನಿಂದ ಶ್ರೀಶಾಂತ್ ಬಚಾವಾದರು! ಸ್ಪೋಟಕ ಮಾಹಿತಿ ಬಿಚ್ಚಿಟ್ಟ ತನಿಖಾಧಿಕಾರಿ
𝗢𝗳𝗳 𝘁𝗵𝗲 𝗺𝗮𝗿𝗸 🏁 pic.twitter.com/9Zo5heBN80
— Rohit Sharma (@ImRo45)ಇನ್ನು ಪಂದ್ಯದ ಬಗ್ಗೆ ಹೇಳುವುದಾದರೇ, ಹ್ಯಾಟ್ರಿಕ್ ಸೋಲಿನೊಂದಿಗೆ 17ನೇ ಆವೃತ್ತಿ ಐಪಿಎಲ್‌ನಲ್ಲಿ ಅಭಿಯಾನ ಆರಂಭಿಸಿದ್ದ 5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕೊನೆಗೂ ಗೆಲುವಿನ ಖಾತೆ ತೆರೆದಿದೆ. ಬ್ಯಾಟರ್‌ಗಳ ಸ್ಫೋಟಕ ಆಟದ ನೆರವಿನಿಂದ ಭಾನುವಾರದ ಮೊದಲ ಪಂದ್ಯದಲ್ಲಿ ಮುಂಬೈಗೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 29 ರನ್ ಗೆಲುವು ಲಭಿಸಿತು. ಡೆಲ್ಲಿಗಿದು 5 ಪಂದ್ಯಗಳಲ್ಲಿ4ನೇ ಸೋಲು.
ಮೊದಲು ಬ್ಯಾಟ್ ಮಾಡಿದ ಮುಂಬೈ 5 ವಿಕೆಟ್ ನಷ್ಟಕ್ಕೆ 234 ರನ್ ಕಲೆಹಾಕಿತು. ಇದು ಯಾವುದೇ ಆಟಗಾರ ವೈಯಕ್ತಿಕ ಅರ್ಧಶತಕ ಗಳಿಸದೆ ತಂಡವೊಂದು ಸೇರಿಸಿದ ಗರಿಷ್ಠ ಮೊತ್ತ, ದೊಡ್ಡ ಮೊತ್ತ ನೋಡಿಯೇ ಕಂಗಾಲಾದ ಡೆಲ್ಲಿ ಕ್ಯಾಪಿಟಲ್ಸ್ ಕೆಲ ಹೋರಾಟದ ಹೊರತಾಗಿಯೂ 8 ವಿಕೆಟ್‌ಗೆ 205 ರನ್ ಗಳಿಸಿ ಸೋಲೊಪ್ಪಿಕೊಂಡಿತು.
IPL 2024 ಲಖನೌ ಆಲ್ರೌಂಡ್ ಶೋಗೆ ಮಂಡಿಯೂರಿದ ಗುಜರಾತ್ ಟೈಟಾನ್ಸ್
ಪವರ್-ಪ್ಲೇನಲ್ಲಿ ದೊಡ್ಡ ಮೊತ್ತ ಸೇರಿಸಬೇಕಿದ್ದ ತಂಡ ಕಲೆಹಾಕಿದ್ದು 46 ರನ್. ವಾರ್ನರ್ 10 ರನ್‌ಗೆ ವಿಕೆಟ್ ಒಪ್ಪಿಸಿದ್ದರಿಂದ ಬಳಿಕ ಬ್ಯಾಟರ್‌ಗಳು ಒತ್ತಡಕ್ಕೊಳಗಾದರು. ಈ ನಡುವೆ ಪೃಥ್ವಿ ಶಾ 66 ರನ್ ಸಿಡಿಸಿ ಔಟಾದರೆ, ಅಭಿಷೇಕ್ ಪೊರೆಲ್ 31 ಎಸೆತದಲ್ಲಿ 41 ರನ್ ಸಿಡಿಸಿದರು. ಕೊನೆಯಲ್ಲಿ ಅಬ್ಬರಿಸಿದ ಸ್ಟಬ್ 25 ಎಸೆತಗಳಲ್ಲಿ 3 ಬೌಂಡರಿ, 7 ಸಿಕ್ಸರ್‌ನೊಂದಿಗೆ 71 ರನ್ ಚಚ್ಚಿದರೂ ಪಂದ್ಯ ಅದಾಗಲೇ ಮುಂಬೈ ಪಾಲಾಗಿತ್ತು. ಕೋಟ್ಜೀ 4 ವಿಕೆಟ್ ಕಿತ್ತರೆ, ಬೂಮ್ರಾ 4 ಓವರಲ್ಲಿ 22 ರನ್‌ಗೆ 2 ವಿಕೆಟ್ ಕಬಳಿಸಿದರು.
ಸ್ಫೋಟಕ ಬ್ಯಾಟಿಂಗ್: 3 ಸೋಲಿನಿಂದ ಕಂಗೆಟ್ಟಿದ್ದ ಮುಂಬೈ ಈ ಪಂದ್ಯದಲ್ಲಿ ಸ್ಪಷ್ಟ ಗುರಿಯೊಂದಿಗೆ ಕಣಕ್ಕಿಳಿದಿತ್ತು. ರೋಹಿತ್ ಶರ್ಮಾ(27 ಎಸೆತದಲ್ಲಿ 49), ಇಶಾನ್ ಕಿಶನ್ (23 ಎಸೆತದಲ್ಲಿ 42) ಆರಂಭದಲ್ಲೇ ಡೆಲ್ಲಿ ಬೌಲರ್‌ಗಳನ್ನು ಚೆಂಡಾಡಿದರು. ಆದರೆ ಪವರ್-ಪ್ಲೇಗೆ 75 ರನ್ ಗಳಿಸಿದ್ದ ತಂಡ ಬಳಿಕ ಕುಸಿಯಿತು. ನಂತರದ 9 ಓವರ್‌ಗಳಲ್ಲಿ ತಂಡ 63 ರನ್ ಸೇರಿಸಿ 4 ವಿಕೆಟ್ ಕಳೆದುಕೊಂಡಿತು. ಆದರೆ ರೊಮಾರಿಯೊ ಶೆಫರ್ಡ್ ಕೊನೆ ಓವರಲ್ಲಿ 32 ರನ್ ಸೇರಿದಂತೆ ಒಟ್ಟು 10 ಎಸೆತಗಳಲ್ಲಿ 39 ರನ್ ಚಚ್ಚಿದರು. ಟಿಮ್ ಡೇವಿಡ್ 21 ಎಸೆತಕ್ಕೆ 45 ರನ್ ಸಿಡಿಸಿ ತಂಡವನ್ನು 230ರ ಗಡಿ ದಾಟಿಸಿದರು.