IPL 2024: ಚೆನ್ನೈನಲ್ಲಿಂದು ಸಿಎಸ್‌ಕೆ vs ಕೆಕೆಆರ್ ನಡುವೆ ಹೈವೋಲ್ಟೇಜ್‌ ಕದನ..!

By Naveen Kodase  |  First Published Apr 8, 2024, 10:45 AM IST

ಆರಂಭದಲ್ಲೇ ಫಿಲ್ ಸಾಲ್ಟ್ ಹಾಗೂ ಸುನಿಲ್ ನರೈನ್ ರನ್ ಮಳೆ ಹರಿಸುತ್ತಿದ್ದಾರೆ. ಇದರ ಜತೆಗೆ ಶ್ರೇಯಸ್ ಅಯ್ಯರ್, ಆಂಡ್ರೆ ರಸೆಲ್, ರಿಂಕು ಸಿಂಗ್ ಅವರಂತಹ ಬ್ಯಾಟರ್‌ಗಳು ಯಾವುದೇ ಕ್ಷಣದಲ್ಲಿ ಬೇಕಿದ್ದರೂ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ.


ಚೆನ್ನೈ: ತವರಲ್ಲಿ ಮೊದಲೆರಡು ಪಂದ್ಯ ಗೆದ್ದು ಬಳಿಕ ತವರಿನಾಚೆಯ ಎರಡೂ ಪಂದ್ಯಗಳಲ್ಲಿ ಸೋತಿರುವ ಹಾಲಿ ಚಾಂಪಿಯನ್ ಚೆನ್ನೈ ತಂಡ ಈಗ ಬಲಿಷ್ಠ ಕೋಲ್ಕತಾದ ಸವಾಲು ಎದುರಿಸಲು ಸಜ್ಜಾಗಿದೆ. ಚೆಪಾಕ್‌ನಲ್ಲಿ ಪಂದ್ಯ ನಡೆಯಲಿದ್ದು, ಸಿಎಸ್‌ ಗೆಲುವಿನ ಹಳಿಗೆ ಮರಳುವ ಕಾತರದಲ್ಲಿದೆ.

ಸತತ ಸೋಲು ಕಂಡ ಹೊರತಾಗಿಯೂ ಚೆನ್ನೈ ತಂಡ ತವರಿನಲ್ಲಿ ಎಷ್ಟು ಬಲಿಷ್ಠ ಎಂಬುದು ಕೆಕೆಆರ್‌ಗೆ ಅರಿವಿದೆ. ಆದರೆ ಶಿವಂ ದುಬೆ ಹೊರತುಪಡಿಸಿ ಇತರ ಯಾವ ಬ್ಯಾಟರ್ ಕೂಡಾ ನಿರ್ಭೀತಿಯಿಂದ ಬ್ಯಾಟ್ ಬೀಸುತ್ತಿಲ್ಲ. ಅಜಿಂಕ್ಯ ರಹಾನೆ, ಡ್ಯಾರಿಲ್ ಮಿಚೆಲ್ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಬೇಕಿದ್ದರೆ ಈ ಪಂದ್ಯದಲ್ಲಿ ಅಬ್ಬರಿಸಬೇಕು. ಸ್ಫೋಟಕ ಬ್ಯಾಟರ್ ಸಮೀರ್ ಮೇಲ್ಕ್ರಮಾಂಕದಲ್ಲಿ ಆಡಿದರೂ ಅಚ್ಚರಿಯಿಲ್ಲ. ಕಳೆದ ಪಂದ್ಯಕ್ಕೆ ಅಲಭ್ಯರಾಗಿದ್ದ ಮುಸ್ತಾಫಿಜುರ್, ಪತಿರನ ಕೆಕೆಆರ್ ವಿರುದ್ಧ ಆಡುವ ಬಗ್ಗೆ ಖಚಿತತೆಯಿಲ್ಲ.

Tap to resize

Latest Videos

IPL 2024 ಲಖನೌ ಆಲ್ರೌಂಡ್‌ ಶೋಗೆ ಮಂಡಿಯೂರಿದ ಗುಜರಾತ್ ಟೈಟಾನ್ಸ್‌

ಮತ್ತೊಂದೆಡೆ ಕೆಕೆಆರ್ ಟೂರ್ನಿಯಲ್ಲಿ ಅಜೇಯವಾಗಿ ಉಳಿದಿದ್ದು, ಸತತ 4ನೇ ಜಯದ ನಿರೀಕ್ಷೆಯಲ್ಲಿದೆ. ಆಕ್ರಮಣಕಾರಿ ಬ್ಯಾಟರ್‌ಗಳು ತಂಡದ ಪ್ಲಸ್ ಪಾಯಿಂಟ್. ಅಬ್ಬರಿಸುತ್ತಿರುವ ನರೈನ್, ರಸೆಲ್, ರಿಂಕು ಸಿಂಗ್ ಚೆನ್ನೈ ಬ್ಯಾಟರ್‌ಗಳಿಗೆ ಕಠಿಣ ಸವಾಲಾಗಿ ಪರಿಣಮಿಸಬಹುದು.

ಆರಂಭದಲ್ಲೇ ಫಿಲ್ ಸಾಲ್ಟ್ ಹಾಗೂ ಸುನಿಲ್ ನರೈನ್ ರನ್ ಮಳೆ ಹರಿಸುತ್ತಿದ್ದಾರೆ. ಇದರ ಜತೆಗೆ ಶ್ರೇಯಸ್ ಅಯ್ಯರ್, ಆಂಡ್ರೆ ರಸೆಲ್, ರಿಂಕು ಸಿಂಗ್ ಅವರಂತಹ ಬ್ಯಾಟರ್‌ಗಳು ಯಾವುದೇ ಕ್ಷಣದಲ್ಲಿ ಬೇಕಿದ್ದರೂ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಅಯ್ಯರ್ ಪಡೆ ಇದೀಗ ಅಜೇಯ ನಾಗಾಲೋಟ ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದೆ.

#PinkPromise: ಆರ್‌ಸಿಬಿ-ರಾಯಲ್ಸ್ ನಡುವಿನ ಪಂದ್ಯ 13 ಸಿಕ್ಸರ್ ಸಿಡಿಸಿದ ಬ್ಯಾಟರ್ಸ್‌, 78 ಮನೆ ಬೆಳಗಿದ ಸೋಲಾರ್ ಬೆಳಕು

ಸಂಭವನೀಯ ಆಟಗಾರರ ಪಟ್ಟಿ

ಚೆನ್ನೈ ಸೂಪರ್ ಕಿಂಗ್ಸ್:

ರಚಿನ್ ರವೀಂದ್ರ, ಋತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಶಿವಂ ದುಬೆ, ಡ್ಯಾರೆಲ್ ಮಿಚೆಲ್, ರವೀಂದ್ರ ಜಡೇಜಾ, ಸಮೀರ್ ರಿಜ್ವಿ, ಎಂ ಎಸ್ ಧೋನಿ(ನಾಯಕ) ದೀಪಕ್ ಚಹರ್, ತುಷಾರ್ ದೇಶಪಾಂಡೆ, ಮಹೀಶ್ ತೀಕ್ಷಣ.

ಕೋಲ್ಕತಾ ನೈಟ್ ರೈಡರ್ಸ್‌:

ಸುನಿಲ್ ನರೈನ್, ಫಿಲ್ ಸಾಲ್ಟ್, ಅಂಗ್‌ಕೃಷ್ ರಘುವಂಶಿ, ಶ್ರೇಯಸ್ ಅಯ್ಯರ್(ನಾಯಕ), ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣ್‌ದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.

ಪಂದ್ಯ ಆರಂಭ: ಸಂಜೆ 7.30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ
 

click me!