
ನವದೆಹಲಿ: ಭಾರತದ ಮಾಜಿ ವೇಗಿ ಶ್ರೀಶಾಂತ್ ವಿರುದ್ಧ ಐಪಿಎಲ್‌ನ ಸ್ಪಾಟ್ ಪ್ರಕರಣದಲ್ಲಿ ಸಾಕ್ಷ್ಯಾಧಾ ರಗಳಿದ್ದರೂ ಕಾನೂನಿನಲ್ಲಿನ ಲೋಪದಿಂದಾಗಿ ಬಚಾವಾದರು ಎಂದು ಬಿಸಿಸಿಐನ ಮಾಜಿ ಭದ್ರತಾ ಅಧಿಕಾರಿ, ಫಿಕಿಂಗ್ ತನಿಖಾಧಿಕಾರಿಯಾಗಿದ್ದ ನೀರಜ್ ಕುಮಾರ್ ಸ್ಫೋಟಕ ಮಾಹಿತಿ ನೀಡಿದ್ದಾರೆ.
ನೀರಜ್ ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. 'ಜಿಂಬಾಬ್ವೆ, ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ಕ್ರೀಡೆಯಲ್ಲಿನ ಫಿಕ್ಸಿಂಗ್ ಗೆ ಕಠಿಣ ಕಾನೂನುಗಳಿವೆ. ಆದರೆ ಭಾರತದಲ್ಲಿ ಸೂಕ್ತ ಕಾನೂನಿಲ್ಲ, ಫಿಕ್ಸಿಂಗ್ ಪ್ರಕರಣಗಳು ನ್ಯಾಯಾಲಯಕ್ಕೆ ಹೋದರೆ, ಮೋಸ ಹೋದ ವ್ಯಕ್ತಿಯನ್ನು ನಮಗೆ ತೋರಿಸಿ ಎಂದು ನ್ಯಾಯಾಲಯ ಹೇಳುತ್ತದೆ. ಹೀಗಾದರೆ ಕಠಿಣ ಶಿಕ್ಷೆ ಸಾಧ್ಯವೇ' ಎಂದು ಪ್ರಶ್ನಿಸಿದ್ದಾರೆ.
ಶ್ರೀಶಾಂತ್ 2013ರಲ್ಲಿ ಫಿಕ್ಸಿಂಗ್‌ನಲ್ಲಿ ಸಿಕ್ಕಿ ಬಿದ್ದಿದ್ದರು. ಆದರೆ 2019ರಲ್ಲಿ ಸುಪ್ರೀಂ ಕೋರ್ಟ್ ಶ್ರೀಶಾಂತ್ ಮೇಲೆ ಹೇರಲಾಗಿದ್ದ ಆಜೀವ ನಿಷೇಧ ಶಿಕ್ಷೆಯನ್ನು ಪುನರ್‌ಪರಿಶೀಲಿಸುವಂತೆ ಬಿಸಿಸಿಐಗೆ ಸೂಚಿಸಿತ್ತು.
IPL 2024: ಚೆನ್ನೈನಲ್ಲಿಂದು ಸಿಎಸ್‌ಕೆ vs ಕೆಕೆಆರ್ ನಡುವೆ ಹೈವೋಲ್ಟೇಜ್ ಕದನ..!
ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದ ಕೇರಳ ಮೂಲದ ವೇಗಿ ಎಸ್ ಶ್ರೀಶಾಂತ್, 2013ರಲ್ಲಿ ಸ್ಪಾಟ್ ಫಿಕ್ಸಿಂಗ್ ಮಾಡಿ ಸಿಕ್ಕಿಬಿದ್ದು ಬಂಧನಕ್ಕೆ ಒಳಗಾಗಿದ್ದು, 2015ರವರೆಗೂ ಕಂಬಿ ಎಣಿಸಿದ್ದ ಶ್ರೀಶಾಂತ್, ಕಾನೂನು ಹೋರಾಟ ನಡೆಸಿ ಬಂಧನ ಮುಕ್ತರಾಗಿದ್ದರು. ನ್ಯಾಯಮೂರ್ತಿ ಅಶೋಕ್ ಭೂಷಣ್ ಮತ್ತು ಕೆ.ಎಂ ಜೋಸೆಫ್ ಅವರಿದ್ದು ನ್ಯಾಯಪೀಠ ಈ ನಿರ್ಧಾರ ಪ್ರಕಟಿಸಿದ್ದು, ಶ್ರೀಶಾಂತ್ ಅಜೀವ ಶಿಕ್ಷೆಯ ಬದಲಾಗಿ ಶಿಕ್ಷೆಯ ಪ್ರಮಾಣ ಕಡಿಮೆಗೊಳಿಸಿತ್ತು.
13-09-2013ರಲ್ಲಿ ಶ್ರೀಶಾಂತ್ ಮೇಲೆ ಅಜೀವ ನಿಷೇಧ ಶಿಕ್ಷೆ ವಿಧಿಸಲಾಗಿತ್ತು. ಶ್ರೀಶಾಂತ್ ಜೊತೆ ರಾಜಸ್ಥಾನ ರಾಯಲ್ಸ್ ಆಟಗಾರರಾದ ಅಜಿತ್ ಚಂಡೀಲಾ ಹಾಗೂ ಅಂಕಿತ್ ಚವ್ಹಾಣ್ ಮೇಲೂ ಅಜೀವ ನಿಷೇಧ ಹೇರಲಾಗಿತ್ತು. ಆದರೆ ಫಿಕ್ಸಿಂಗ್ ನಡೆಸಿದ ಕುರಿತು ಯಾವುದೇ ಸಾಕ್ಷಿ ಇಲ್ಲದ ಕಾರಣ ಕೋರ್ಟ್ ಶ್ರೀಶಾಂತ್ ಮೇಲಿನ ಆರೋಪಗಳನ್ನು ತಳ್ಳಿಹಾಕಿತು. ಅಲ್ಲದೆ ಕೇಸ್‌ನಿಂದ ಮುಕ್ತಗೊಳಿಸಿತು.
ಕಾನೂನು ಹೋರಾಟದಲ್ಲಿ ಶ್ರೀಶಾಂತ್ ಮೇಲುಗೈ ಸಾಧಿಸುತ್ತಿದ್ದಂತೆ ಬಿಸಿಸಿಐ ಪಟ್ಟು ಸಡಿಲಿಸಿತು. ಎಸ್ ಶ್ರೀಶಾಂತ್ ಮೇಲಿನ ನಿಷೇಧದ ಅವಧಿಯನ್ನು 7 ವರ್ಷಕ್ಕೆ ಕಡಿತಗೊಳಿಸಿತು. ನಿಷೇಧ ಶಿಕ್ಷೆ ಮುಗಿಸಿದ ಬಳಿಕ 2020ರ ಬಳಿಕ ಕ್ರಿಕೆಟ್‌ಗೆ ಮರಳಿದ್ದ ಶ್ರೀಶಾಂತ್, ಕೇರಳ ಪರ ರಣಜಿ ತಂಡದಲ್ಲೂ ಆಡಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.