ಲಾರಾ ದಾಖಲೆ ಮುರಿಯಲು ಟೀಂ ಇಂಡಿಯಾ ಕ್ರಿಕೆಟಿಗನಿಗೆ ಸಾಧ್ಯ; ವಾರ್ನರ್!

Published : Dec 02, 2019, 10:16 AM IST
ಲಾರಾ ದಾಖಲೆ ಮುರಿಯಲು ಟೀಂ ಇಂಡಿಯಾ ಕ್ರಿಕೆಟಿಗನಿಗೆ ಸಾಧ್ಯ; ವಾರ್ನರ್!

ಸಾರಾಂಶ

ಟೀಂ ಇಂಡಿಯಾ ಕ್ರಿಕೆಟಿಗನಿಗೆ  ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ಅಜೇಯ 400 ರನ್ ದಾಖಲೆ ಮುರಿಯಲು ಸಾಧ್ಯ ಎಂದು ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಹೇಳಿದ್ದಾರೆ. ವಾರ್ನರ್ ಸೂಚಿಸಿದ ಕ್ರಿಕೆಟಿಗ ಯಾರು? ಇಲ್ಲಿದೆ ವಿವರ

ಅಡಿ​ಲೇ​ಡ್‌(ಡಿ.02): ಪಾಕಿ​ಸ್ತಾನ ವಿರುದ್ಧ 2ನೇ ಟೆಸ್ಟ್‌​ನಲ್ಲಿ ಡೇವಿಡ್‌ ವಾರ್ನರ್‌ 335 ರನ್‌ ಗಳಿ​ಸಿದ್ದು, ಬ್ರಿಯಾನ್‌ ಲಾರಾ ಅಜೇಯ 400 ರನ್‌ ದಾಖಲೆ ಮುರಿ​ಯುವ ಅವ​ಕಾಶ ತಪ್ಪಿ​ಸಿ​ಕೊಂಡಿ​ದ್ದ​ರು. ಆಸ್ಟ್ರೇಲಿಯಾ ಇನಿಂಗ್ಸ್ ಡಿಕ್ಲೇರ್ ಮಾಡದಿದ್ದರೆ ವಾರ್ನರ್, ವಿಂಡೀಸ್ ದಿಗ್ಗಜನ ದಾಖಲೆ ಮುರಿಯುವ ಎಲ್ಲಾ ಸಾಧ್ಯತೆ ಇತ್ತು. ಆದರೆ ಲಾರಾ ದಾಖಲೆ ಮುರಿಯುವ ಕುರಿತು ವಾರ್ನರ್ ಹೇಳಿಕೆ ಟೀಂ ಇಂಡಿಯಾ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. 

ಇದನ್ನೂ ಓದಿ: ನಂಬಿ ಬಂದ ಸ್ನೇಹಿತನನ್ನು ನಡು ದಾರಿಯಲ್ಲಿ ಬಿಟ್ಟ ರೋಹಿತ್!.

 ಲಾರಾ ದಾಖ​ಲೆ​ ಮುರಿ​ಯ​ಬಲ್ಲ ಬ್ಯಾಟ್ಸ್‌​ಮನ್‌ ಯಾರು ಎಂಬ ಪ್ರಶ್ನೆಗೆ ಉತ್ತ​ರಿ​ಸಿದ ವಾರ್ನರ್‌, ಭಾರತದ ‘ರೋಹಿತ್‌ ಶರ್ಮಾ ಈ ದಾಖಲೆ ಮುರಿ​ಯುವ ಸಾಧ್ಯ​ತೆ​ಯಿ​ದೆ. ಒಂದಲ್ಲ ಒಂದು ದಿನ ಖಂಡಿ​ತ​ವಾಗಿ ರೋಹಿತ್‌ ಇದನ್ನು ಮುರಿ​ಯು​ತ್ತಾರೆ. ರೋಹಿತ್ ಶರ್ಮಾಗೆ ಇಂತಹ ದೊಡ್ಡ ಇನಿಂಗ್ಸ್ ಕಟ್ಟುವ ಸಾಮರ್ಥ್ಯವಿದೆ ಎಂದಿದ್ದಾರೆ. 

ಇದನ್ನೂ ಓದಿ: ಮತ್ತೆ ಮತ್ತೆ ನೋಡಬೇಕೆನಿಸುವ ರೋಹಿತ್ ಹಿಡಿದ ಅದ್ಭುತ ಕ್ಯಾಚ್..!

ನಾವು ದೊಡ್ಡ ಬೌಂಡರಿ ಗೆರೆ ಹೊಂದಿ​ದ್ದೇವೆ. ಚೆಂಡನ್ನು ಬೌಂಡರಿ ಗೆರೆ ದಾಟಿ​ಸು​ವುದು ಕೆಲ​ವೊಮ್ಮೆ ಬಹಳ ಕಷ್ಟ​ವಾ​ಗು​ತ್ತ​ದೆ. ಒಮ್ಮೆ ಆಯಾ​ಸ​ವಾದರೆ ಚೆಂಡನ್ನು ಬೌಂಡ​ರಿಗೆ ಹೊಡೆ​ಯು​ವುದು ಕಷ್ಟ​ವಾ​ಗು​ತ್ತದೆ’ ಎಂದರು. ದಕ್ಷಿಣ ಆಫ್ರಿಕಾ ಟೆಸ್ಟ್‌ ಸರ​ಣಿಯ 4 ಇನ್ನಿಂಗ್ಸ್‌​ಗ​ಳಲ್ಲಿ ರೋಹಿತ್‌ ಒಂದು ದ್ವಿಶ​ತಕ ಸಹಿತ 529 ರನ್‌ ಕಲೆ​ಹಾ​ಕಿ​ದ್ದ​ರು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

WPLನ ಹೊಸ ತಾರೆ: ಯಾರು ಈ 16ರ ಹರೆಯದ ಚೋಟಿ ಶಫಾಲಿ
ಧನಶ್ರೀ ವರ್ಮಾ ಜತೆಗಿನ ವಿಚ್ಛೇದನದ ಬಳಿಕ ಯಜುವೇಂದ್ರ ಚಾಹಲ್‌ಗೆ ಇನ್ನೊಂದು ಆಘಾತ!