ಬಿಸಿಸಿಐ ವಾರ್ಷಿಕ ಸಭೆಯಲ್ಲಿ ಸೌರವ್ ಗಂಗೂಲಿ ಟೀಂ ಹಲವು ನಿರ್ಧಾರಗಳನ್ನು ಕೈಗೊಂಡಿದೆ. ಆಯ್ಕೆ ಸಮಿತಿ ಅಧಿಕಾರವಧಿಗೆ ಅಂತ್ಯಹಾಡಿದ್ದರೆ, ಗಂಗೂಲಿ ಅಧಿಕಾರವದಿ ವಿಸ್ತರಣೆಗೆ ಕೋರಲಾಗಿದೆ. ಇನ್ನು ಐಸಿಸಿಯಲ್ಲಿ ಭಾರತದ ಪ್ರತಿನಿಧಿಯನ್ನು ಆಯ್ಕೆ ಮಾಡಲಾಗಿದೆ.
ಮುಂಬೈ(ಡಿ.02): ಟೀಮ್ ಇಂಡಿಯಾದ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್ ಅಧಿಕಾರಾವಧಿ ಭಾನುವಾರ ನಡೆದ ವಾರ್ಷಿಕ ಸಭೆಯೊಂದಿಗೆ ಕೊನೆಗೊಂಡಿದ್ದು, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ದೃಢೀಕರಿಸಿದರು. ಆಯ್ಕೆ ಸಮಿತಿಯ ಅಧಿಕಾರಾವಧಿ ವಿಸ್ತರಿಸಲು ಗಂಗೂಲಿ ಮುಂದಾಗದೇ ಇರುವ ಕಾರಣ ಪ್ರಸಾದ್ ಅಧಿಕಾರ ಅವಧಿ ಮುಕ್ತಾಯವಾಗಿದೆ.
ಇದನ್ನೂ ಓದಿ: 3 ತಿಂಗಳಲ್ಲಿ ಹೊರಬೀಳಲಿದೆ ಧೋನಿ ಕ್ರಿಕೆಟ್ ಭವಿಷ್ಯ!
undefined
ಅವಧಿ ಮೀರಲು ಸಾಧ್ಯವಿಲ್ಲ, ಅವರು ಉತ್ತಮ ಕೆಲಸ ಮಾಡಿದ್ದಾರೆ. ವರ್ಷಕ್ಕೊಮ್ಮೆ ಸಮಿತಿ ನೇಮಿಸುವುದು ಸರಿಯಲ್ಲ. ಕೆಲವು ನಿಯಮಗಳನ್ನು ನಿಗದಿಪಡಿಸುತ್ತೇವೆ’ ಎಂದು ಗಂಗೂಲಿ ತಿಳಿಸಿದರು. ಪ್ರಸಾದ್ ಹಾಗೂ ಸದಸ್ಯ ಗಗನ್ ಖೋಡಾ 2015ರಲ್ಲಿ ನೇಮಕಗೊಂಡಿದ್ದರು. ಬಿಸಿಸಿಐ ಹಳೆಯ ಸಂವಿಧಾನದಂತೆ ಆಯ್ಕೆಗಾರರ ಅಧಿಕಾರಾವಧಿ 4 ವರ್ಷ. ತಿದ್ದುಪಡಿಯಾದ ಸಂವಿಧಾನದ ಪ್ರಕಾರ 5 ವರ್ಷ ಸದಸ್ಯರಾಗಿ ಇರಬಹುದು. 2016ರಲ್ಲಿ ನೇಮಕಗೊಂಡಿದ್ದ ಜತಿನ್ ಪರಂಜ್ಪೆ, ಶರಣ್ದೀಪ್ ಸಿಂಗ್, ದೇವಾಂಗ್ ಗಾಂಧಿ ಇನ್ನೊಂದು ವರ್ಷ ಇರಲಿದ್ದಾರೆ.
ಇದನ್ನೂ ಓದಿ: ಪಿಂಕ್ ಬಾಲ್ ಟೆಸ್ಟ್ ಯಶಸ್ವಿ ಬೆನ್ನಲ್ಲೆ ಅಚ್ಚರಿಯ ಹೇಳಿಕೆ ನೀಡಿದ ದಾದಾ.
MSK ಟೀಂ ಅಧಿಕಾರವದಿ ಅಂತ್ಯವಾಗಿದ್ದರೆ, 88ನೇ ವಾರ್ಷಿಕ ಸಭೆಯಲ್ಲಿ ಬಿಸಿಸಿಐನ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಅಧಿಕಾರಾವಧಿ ವಿಸ್ತರಣೆ ಮಾಡಲು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲಾಗಿದೆ. ಇಲ್ಲಿನ ಪ್ರಧಾನ ಕಚೇರಿಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು. ಬಿಸಿಸಿಐ ನೂತನ ನಿಯಮದಂತೆ ಅಕ್ಟೋಬರ್ 23 ರಂದು ಅಧಿಕಾರ ಸ್ವೀಕರಿಸಿದ ಗಂಗೂಲಿ, ಮುಂದಿನ ವರ್ಷ ತಮ್ಮ ಸ್ಥಾನ ತೊರೆಯಬೇಕಿದೆ. ಆದರೆ ಸುಪ್ರೀಂ ಅವಕಾಶ ಕಲ್ಪಿಸಿದರೆ, ಗಂಗೂಲಿ 2024 ರವರೆಗೆ ಮುಂದುವರಿಯಬಹುದಾಗಿದೆ.
ಇದನ್ನೂ ಓದಿ:ಕಲಿತಿದ್ದು ನಿಮ್ಮಿಂದಲೇ; ಸೌರವ್ ಗಂಗೂಲಿಗೆ ಪುತ್ರಿ ಟಕ್ಕರ್!
ಗಂಗೂಲಿ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸಭೆಯಲ್ಲಿ, ಬಿಸಿಸಿಐ ಪದಾಧಿಕಾರಿಗಳ ಅಧಿಕಾರಾವಧಿ ವಿಸ್ತರಣೆ ಬಗ್ಗೆ ಚರ್ಚಿಸಲಾಯಿತು. ‘ಪ್ರಸ್ತಾಪಿಸಿದ ತಿದ್ದುಪಡಿಗಳನ್ನು ಮಾಡಿದ್ದು, ಅಂಗೀಕಾರಕ್ಕಾಗಿ ಸುಪ್ರೀಂ ಕೋರ್ಟ್‌ಗೆ ಹಸ್ತಾಂತರಿಸಿದ್ದೇವೆ’ ಎಂದು ಬಿಸಿಸಿಐ ಉನ್ನತ ಅಧಿಕಾರಿ ತಿಳಿಸಿದರು.
ಬಿಸಿಸಿಐ ನೂತನ ಸಂವಿಧಾನದ ಪ್ರಕಾರ, ಮಂಡಳಿ ಅಥವಾ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ 2-3 ವರ್ಷ ಆಡಳಿತ ನಡೆಸಿರುವವರು ಮುಂದಿನ ಕನಿಷ್ಠ 3 ವರ್ಷಗಳ ಕಾಲ ಕೂಲಿಂಗ್ ಅವಧಿಯನ್ನು ಅನುಸರಿಸಬೇಕು. ಗಂಗೂಲಿ, ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ 2ನೇ ಬಾರಿ ಅಧಿಕಾರದಲ್ಲಿ ಮುಂದುವರಿದಿದ್ದರು. ಈ ಸಂದರ್ಭದಲ್ಲಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೇರಿದ್ದರು. ಡಿ.3ರಂದು ಸುಪ್ರೀಂ ತೀರ್ಪಿನ ಬಳಿಕ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ನೇಮಕಾತಿ ಬಗ್ಗೆ ಬಿಸಿಸಿಐ ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಐಸಿಸಿನಲ್ಲಿ ಜಯ್ ಭಾರತ ಪ್ರತಿನಿಧಿ:
ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಪ್ರಧಾನ ಕಾರ್ಯ ನಿರ್ವಾಹಕ ಸಮಿತಿ ಸಭೆಗಳಲ್ಲಿ ಇನ್ನು ಭಾರತವನ್ನು ಜಯ್ ಶಾ ಪ್ರತಿನಿಧಿಸಲಿದ್ದಾರೆ. 33 ತಿಂಗಳು ಸುಪ್ರೀಂ ಕೋರ್ಟ್ ನೇಮಿತ ಆಡಳಿತ ಸಮಿತಿ (ಸಿಒಎ) ಅಧಿಕಾರ ನಡೆಸಿದ್ದು, ಆಗ ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ ಭಾರತದ ಪ್ರತಿನಿಧಿ ಆಗಿದ್ದರು. ಬಿಸಿಸಿಐ ಪೂರ್ಣ ಅಧಿಕಾರ ಪಡೆದಿದ್ದು, ದೇಶ ಪ್ರತಿನಿಧಿಸುವುದು ಕಾರ್ಯದರ್ಶಿ ಜವಾಬ್ದಾರಿ. ಆದರೆ ಐಸಿಸಿ ಮಂಡಳಿ ಸಭೆಗೆ ಪ್ರತಿನಿಧಿ ಯಾರೆಂದು ನಿರ್ಧರಿಸಿಲ್ಲ.