
ಸೂರತ್(ಡಿ.01): ವಿಜಯ್ ಹಜಾರೆ ಟೂರ್ನಿಯ ಫೈನಲ್ ಪಂದ್ಯದಲ್ಲಿ ತಮಿಳುನಾಡು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿದ್ದ ಕರ್ನಾಟಕ ಇದೀಗ ಸಯ್ಯದ್ ಮುಷ್ತಾಕ್ ಆಲಿ ಟೂರ್ನಿಯಲ್ಲೂ ತಮಿಳುನಾಡಿಗೆ ಕರ್ನಾಟಕ ಶಾಕ್ ನೀಡಿದೆ. ಫೈನಲ್ ಪಂದ್ಯದಲ್ಲಿ ಅಬ್ಬರಿಸಿದ ಕರ್ನಾಟಕ 1 ರನ್ ಗೆಲುವು ಸಾಧಿಸಿದೆ.
ಇದನ್ನೂ ಓದಿ: ವಿಜಯ್ ಹಜಾರೆ ಟ್ರೋಫಿ; ತಮಿಳುನಾಡು ಮಣಿಸಿ ಕಪ್ ಗೆದ್ದ ಕರ್ನಾಟಕ!
ತಮಿಳುನಾಡು ಗೆಲುವಿಗೆ 181 ರನ್ ಟಾರ್ಗೆಟ್ ನೀಡಿದ್ದ ಕರ್ನಾಟಕ, ಉತ್ತಮ ಬೌಲಿಂಗ್ ದಾಳಿ ಸಂಘಟಿಸಿತು. ವಿಜಯ್ ಹಜಾರೆ ಫೈನಲ್ ಸೋಲಿಗೆ ಸೇಡು ತೀರಿಸಲು ಸಜ್ಜಾದ ತಮಿಳುನಾಡು ತಿರುಗೇಟು ನೀಡೋ ಪ್ರಯತ್ನ ಮಾಡಿತು. ಆರಂಭದಲ್ಲಿ ಕರ್ನಾಟಕ ಯಶಸ್ಸು ಸಾಧಿಸಿತು., ಶಾರುಖ್ ಖಾನ್ 16 ಹಾಗೂ ಹರಿ ನಿಶಾಂತ್ 14 ರನ್ ಸಿಡಿಸಿ ಔಟಾದರು.
ವಾಶಿಂಗ್ಟನ್ ಸುಂದರ್ 24 ಹಾಗೂ ನಾಯಕ ದಿನೇಶ್ ಕಾರ್ತಿಕ್ 20 ರನ್ ಸಿಡಿಸಿ ಔಟಾದರು. ಬಾಬಾ ಅಪರಾಜಿತ್ ಹಾಗೂ ವಿಜಯ್ ಶಂಕರ್ ಜೊತೆಯಾಟ ಕರ್ನಾಟಕದ ಆತಂಕಕ್ಕೆ ಕಾರಣವಾಯಿತು. ಅಪರಾಜಿತ್ 40 ರನ್ ಸಿಡಿಸಿ ಔಟಾದರು. ಆದರೆ ವಿಜಯ್ ಶಂಕರ್ ಅಬ್ಬರ ಮಂದುವರಿಯಿತು.
ತಮಿಳುನಾಡು ಗೆಲುವಿಗೆ ಅಂತಿಮ 6 ಎಸೆತದಲ್ಲಿ 13 ರನ್ ಅವಶ್ಯಕತೆ ಇತ್ತು. 44 ರನ್ ಸಿಡಿಸಿ ಮುನ್ನಗ್ಗುತ್ತಿದ್ದ ಶಂಕರ್ ರನೌಟ್‌ಗೆ ಬಲಿಯಾದರು. ಈ ವೇಳೆ ತಮಿಳುನಾಡು ಗೆಲುವಿಗೆ 1 ಎಸೆತದಲ್ಲಿ 3 ರನ್ ಬೇಕಿತ್ತು. ಗೌತಮ್ ಕೆ ಅದ್ಬುತ ಬೌಲಿಂಗ್‌ನಿಂದ ಕರ್ನಾಟಕ 1 ರನ್ ಗೆಲುವು ಸಾಧಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಡೀಸೆಂಟ್ ಆರಂಭ ಪಡೆಯಿತು. ಕೆಎಲ್ ರಾಹುಲ್ ಹಾಗೂ ದೇವದತ್ತ್ ಪಡಿಕ್ಕಲ್ 39 ರನ್ ಜೊತೆಯಾಟ ನೀಡಿದರು. ರಾಹುಲ್ 15 ಎಸೆತದಲ್ಲಿ 22 ರನ್ ಸಿಡಿಸಿ ಔಟಾದರು. ಆದರೆ ಮಯಾಂಕ್ ಅಗರ್ವಾಲ್ ಅಬ್ಬರಿಸಲಿಲ್ಲ. ಮಯಾಂಕ್ ಡಕೌಟ್ ಆಗಿ ಪೆವಿಲಿಯನ್ ಸೇರಿದರು.
ಎಂದಿನಂತೆ ಪಡಿಕ್ಕಲ್ ಅಬ್ಬರ ಆರಂಭಗೊಂಡಿತು. 23 ಎಸೆತದಲ್ಲಿ 3 ಬೌಂಡರಿ, 2 ಸಿಕ್ಸರ್ ನೆರವಿನಿಂದ 32 ರನ್ ಸಿಡಿಸಿ ಔಟಾದರು. ನಾಯಕ ಮನೀಶ್ ಪಾಂಡೆ ಹಾಗೂ ರೋಹನ್ ಕದಮ್ ಜೊತೆಯಾಟದಿಂದ ಕರ್ನಾಟಕ ದಿಟ್ಟ ತಿರುಗೇಟು ನೀಡಿತು. ಮನೀಶ್ ಪಾಂಡೆ ಆಕರ್ಷ ಹಾಫ್ ಸೆಂಚುರಿ ಸಿಡಿಸಿದರು.
ರೋಹನ್ ಕದಮ್ 28 ಎಸೆತದಲ್ಲಿ 35 ರನ್ ಸಿಡಿಸಿ ಔಟಾದರು. ಕರುಣ್ ನಾಯರ್ 8 ಎಸೆತದಲ್ಲಿ ಅಜೇಯ 17 ರನ್ ಸಿಡಿಸಿದರು. ಇನ್ನು ಮನೀಶ್ ಅಜೇಯ 60 ರನ್ ಸಿಡಿಸಿದರು. ಈ ಮೂಲಕ ಕರ್ನಾಟಕ 5 ವಿಕೆಟ್ ನಷ್ಟಕ್ಕೆ 180 ರನ್ ಸಿಡಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.