ಐಪಿಎಲ್‌ ಹರಾಜಿಗೆ ಕ್ಷಣಗಣನೆ: 333 ಮಂದಿ ಹೆಸರು ಫೈನಲ್‌..!

By Kannadaprabha News  |  First Published Dec 12, 2023, 10:05 AM IST

ಪಟ್ಟಿಯಲ್ಲಿ 214 ಭಾರತೀಯರು, 119 ವಿದೇಶ ಆಟಗಾರರು ಇದ್ದಾರೆ. ಅಂತಾರಾಷ್ಟ್ರೀಯ ಪಂದ್ಯವಾಡಿದ 116 ಮಂದಿ ಜೊತೆ 215 ಅನ್‌ಕ್ಯಾಪ್ಡ್‌(ಅಂ.ರಾ. ಪಂದ್ಯವಾಡದ) ಆಟಗಾರರು ಅಂತಿಮ ಪಟ್ಟಿಯಲ್ಲಿದ್ದಾರೆ. ಸದ್ಯ 10 ತಂಡಗಳಲ್ಲಿ 77 ಸ್ಥಾನಗಳು ಖಾಲಿ ಇದ್ದು, ಈ ಪೈಕಿ 30 ಮಂದಿ ವಿದೇಶಿ ಆಟಗಾರರು ವಿವಿಧ ತಂಡಗಳಿಗೆ ಬಿಕರಿಯಾಗಲಿದ್ದಾರೆ.


ನವದೆಹಲಿ(ಡಿ.12): ಬಹುನಿರೀಕ್ಷಿತ 2024 ಐಪಿಎಲ್‌ನ ಆಟಗಾರರ ಹರಾಜು ಪಟ್ಟಿಯನ್ನು ಬಿಸಿಸಿಐ ಸೋಮವಾರ ಪ್ರಕಟಿಸಿದ್ದು, ಒಟ್ಟು 333 ಮಂದಿ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ.

ಪಟ್ಟಿಯಲ್ಲಿ 214 ಭಾರತೀಯರು, 119 ವಿದೇಶ ಆಟಗಾರರು ಇದ್ದಾರೆ. ಅಂತಾರಾಷ್ಟ್ರೀಯ ಪಂದ್ಯವಾಡಿದ 116 ಮಂದಿ ಜೊತೆ 215 ಅನ್‌ಕ್ಯಾಪ್ಡ್‌(ಅಂ.ರಾ. ಪಂದ್ಯವಾಡದ) ಆಟಗಾರರು ಅಂತಿಮ ಪಟ್ಟಿಯಲ್ಲಿದ್ದಾರೆ. ಸದ್ಯ 10 ತಂಡಗಳಲ್ಲಿ 77 ಸ್ಥಾನಗಳು ಖಾಲಿ ಇದ್ದು, ಈ ಪೈಕಿ 30 ಮಂದಿ ವಿದೇಶಿ ಆಟಗಾರರು ವಿವಿಧ ತಂಡಗಳಿಗೆ ಬಿಕರಿಯಾಗಲಿದ್ದಾರೆ.

Latest Videos

undefined

23 ಮಂದಿಗೆ ₹2 ಕೋಟಿ: ಪಟ್ಟಿಯಲ್ಲಿ ಗರಿಷ್ಠ ಮೂಲ ಬೆಲೆ ₹2 ಕೋಟಿ ಹೊಂದಿರುವ 23 ಆಟಗಾರರಿದ್ದಾರೆ. ಇನ್ನು13 ಮಂದಿ 1.5 ಕೋಟಿ ರು. ಮೂಲಬೆಲೆ ಹೊಂದಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಹರಾಜು ಪ್ರಕ್ರಿಯೆ ಡಿ.19ರಂದು ದುಬೈನಲ್ಲಿ ನಡೆಯಲಿದೆ. ಆಟಗಾರರ ಹರಾಜು ಭಾರತೀಯ ಕಾಲಮಾನ ಮಧ್ಯಾಹ್ನ 2.30ರಿಂದ ಆರಂಭವಾಗಲಿದೆ.

Vijay Hazare Trophy: ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಮಯಾಂಕ್ ಅಗರ್‌ವಾಲ್ ನೇತೃತ್ವದ ಕರ್ನಾಟಕ

ರಾಜ್ಯದ 11 ಮಂದಿ

ಹರಾಜು ಪಟ್ಟಿಯಲ್ಲಿ ಕರ್ನಾಟಕದ 11 ಮಂದಿ ಇದ್ದಾರೆ. ಅನುಭವಿಗಳಾದ ಮನೀಶ್‌ ಪಾಂಡೆ ಜೊತೆಗೆ ಶುಭಾಂಗ್‌ ಹೆಗ್ಡೆ, ಚೇತನ್‌, ಬಿ.ಆರ್‌.ಶರತ್‌, ಕೆ.ಎಲ್‌.ಶ್ರೀಜಿತ್‌, ನಿಹಾಲ್‌ ಉಳ್ಳಾಲ, ವೆಂಕಟೇಶ್‌, ಮನ್ವಂತ್‌ ಕುಮಾರ್‌, ಮೋನಿಶ್‌, ಅಭಿಲಾಶ್‌ ಶೆಟ್ಟಿ ಹಾಗೂ ಜೆ.ಸುಚಿತ್‌ ವಿವಿಧ ತಂಡಗಳಿಗೆ ಬಿಕರಿಯಾಗುವ ನಿರೀಕ್ಷೆಯಲ್ಲಿದ್ದಾರೆ.

ಆಸೀಸ್‌ನ ಹೆಡ್‌ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

ದುಬೈ: ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಭಾರತವನ್ನು ಸೋಲಿಸಿ ಆಸ್ಟ್ರೇಲಿಯಾ ಪ್ರಶಸ್ತಿ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದ ಟ್ರ್ಯಾವಿಸ್‌ ಹೆಡ್‌ ಐಸಿಸಿ ನವೆಂಬರ್ ತಿಂಗಳ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಭಾರತದ ಮೊಹಮದ್‌ ಶಮಿ, ಆಸೀಸ್‌ನ ಗ್ಲೆನ್‌ ಮ್ಯಾಕ್ಸ್‌ವೆಲ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು. ಅವರನ್ನು ಹಿಂದಿಕ್ಕಿ ಪ್ರಶಸ್ತಿ ಪಡೆದಿದ್ದಾರೆ.

IPL ಟೂರ್ನಿಯಲ್ಲಿ ಆರೆಂಜ್ ಕ್ಯಾಪ್ ಗೆದ್ದ 6 ಭಾರತೀಯರಿವರು: ಈ ಲಿಸ್ಟ್‌ನಲ್ಲಿದ್ದಾರೆ ಇಬ್ಬರು ಕನ್ನಡಿಗರು..!

ಅಂಡರ್‌-19 ವಿಶ್ವಕಪ್‌: ಜ.20ಕ್ಕೆ ಭಾರತ-ಬಾಂಗ್ಲಾ

ದುಬೈ: 2024ರ ಜನವರಿಯಲ್ಲಿ ನಡೆಯಲಿರುವ ಐಸಿಸಿ ಅಂಡರ್‌-19 ವಿಶ್ವಕಪ್‌ನ ವೇಳಾಪಟ್ಟಿ ಬದಲಾವಣೆಯಾಗಿದ್ದು, ಜ.20ರಂದು ಭಾರತಕ್ಕೆ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಸವಾಲು ಎದುರಾಗಲಿದೆ. ಟೂರ್ನಿ ಶ್ರೀಲಂಕಾದಲ್ಲಿ ದ.ಆಫ್ರಿಕಾಕ್ಕೆ ಸ್ಥಳಾಂತರಗೊಂಡ ಕಾರಣ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಟೂರ್ನಿಯಲ್ಲಿ 16 ತಂಡಗಳು ಪಾಲ್ಗೊಳ್ಳಲಿದ್ದು, ತಲಾ 4 ತಂಡಗಳು 4 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಭಾರತ ‘ಎ’ ಗುಂಪಿನಲ್ಲಿ ಬಾಂಗ್ಲಾದೇಶ, ಐರ್ಲೆಂಡ್‌, ಅಮೆರಿ ಜೊತೆ ಸ್ಥಾನ ಗಿಟ್ಟಿಸಿಕೊಂಡಿದೆ. ಭಾರತ 2ನೇ ಪಂದ್ಯದಲ್ಲಿ ಜ.25ಕ್ಕೆ ಐರ್ಲೆಂಡ್‌, 28ರಂದು ಅಮೆರಿಕ ವಿರುದ್ಧ ಸೆಣಸಲಿದೆ.
 

click me!