ನಿವೃತ್ತಿ ಘೋಷಿಸಿ ವಿದೇಶಿ ಟಿ20 ಲೀಗ್‌ನಲ್ಲಿ ಪಾಲ್ಗೊಳ್ಳುವ ಕ್ರಿಕೆಟಿಗರಿಗೆ ಬ್ರೇಕ್‌ ಹಾಕಲು BCCI ಮಾಸ್ಟರ್ ಪ್ಲಾನ್‌..!

By Naveen Kodase  |  First Published Jul 8, 2023, 12:41 PM IST

ಬಿಸಿಸಿಐ ಅಪೆಕ್ಸ್‌ ಕೌನ್ಸಿಲ್ ಸಭೆಯಲ್ಲಿ ಮಹತ್ವದ ತೀರ್ಮಾನ
ವಿದೇಶಿ ಲೀಗ್‌ನಲ್ಲಿ ಆಡುವ ಕನಸು ಕಾಣುತ್ತಿರುವ ಮಾಜಿ ಕ್ರಿಕೆಟಿಗರಿಗೆ ಶಾಕ್
ಇದಕ್ಕಾಗಿಯೇ ಹೊಸ ಪಾಲಿಸಿ ತರುವ ಬಗ್ಗೆ ತುಟಿಬಿಚ್ಚಿದ ಜಯ್ ಶಾ


ಮುಂಬೈ(ಜು.08): ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಯಶಸ್ಸು ಗಳಿಸಿದ ಮೇಲೆ ಜಗತ್ತಿನಾದ್ಯಂತ ಹಲವು ಟಿ20 ಲೀಗ್ ಟೂರ್ನಿಗಳು ಜನ್ಮತಾಳಿವೆ. ಐಪಿಎಲ್ ಟೂರ್ನಿಯನ್ನೇ ಕಾಫಿ ಮಾಡಿರುವ ಉಳಿದ ಟಿ20 ಲೀಗ್‌ಗಳು ಮರ್ಕ್ಯೂ ಆಟಗಾರರನ್ನಾಗಿ ವಿದೇಶಿ ಆಟಗಾರನ್ನು ಆಯ್ದುಕೊಳ್ಳಲು ಅವಕಾಶ ನೀಡಿವೆ. ಆದರೆ ವಿದೇಶಿ ಟಿ20 ಟೂರ್ನಿಗಳಲ್ಲಿ ಭಾರತದ ಯಾವೊಬ್ಬ ಹಾಲಿ ಕ್ರಿಕೆಟಿಗನು ಪಾಲ್ಗೊಳ್ಳಲುವ ಅವಕಾಶವನ್ನು ಬಿಸಿಸಿಐ ನೀಡಿಲ್ಲ. 

ಟೀಂ ಇಂಡಿಯಾ ಹಾಲಿ ಕ್ರಿಕೆಟಿಗರು ವಿದೇಶಿ ಟಿ20 ಲೀಗ್‌ನಲ್ಲಿ ಪಾಲ್ಗೊಳ್ಳುವುದಕ್ಕೆ ನಿಷೇಧ ಹೇರಿದ್ದು, ಕಠಿಣ ನಿಯಮಾವಳಿಗಳನ್ನು ತಂದಿದೆ. ಹೀಗಿದ್ದೂ ಇತ್ತೀಚೆಗಿನ ದಿನಗಳಲ್ಲಿ ಕೆಲವು ಕ್ರಿಕೆಟಿಗರು ಭಾರತ ಹಾಗೂ ಅಂತಾರಾಷ್ಟ್ರೀಯ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿ, ವಿದೇಶಿ ಟಿ20 ಲೀಗ್‌ನಲ್ಲಿ ಪಾಲ್ಗೊಳ್ಳಲಾರಂಭಿಸಿದ್ದಾರೆ. ಆದರೆ ಈ ರೀತಿ ಮಾಡುವುದಕ್ಕೂ ಬ್ರೇಕ್‌ ಹಾಕಲು ಬಿಸಿಸಿಐ ಮುಂದಾಗಿರುವಂತೆ ಕಂಡುಬಂದಿದ್ದು, ಈ ಕುರಿತಂತೆ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಗುಟ್ಟೊಂದನ್ನು ಬಿಚ್ಚಿಟ್ಟಿದ್ದಾರೆ.

Latest Videos

undefined

"ಅತ್ತಿಗೆ ನನಗೆ 30 ಲಕ್ಷ ರುಪಾಯಿ ಸಾಕು.": ಧೋನಿ ಬಗ್ಗೆ ನೀವೆಲ್ಲೂ ಕೇಳಿರದ ಆ ದಿನಗಳ ಕಥೆ ಮೆಲುಕು ಹಾಕಿದ ಮಾಜಿ ಕ್ರಿಕೆಟಿಗ..!

ಮುಂಬೈನಲ್ಲಿ ಶುಕ್ರವಾರ ಬಿಸಿಸಿಐ ಅಪೆಕ್ಸ್‌ ಕೌನ್ಸಿಲ್‌ ಮೀಟಿಂಗ್‌ನಲ್ಲಿ ಹಲವು ವಿಚಾರಗಳನ್ನು ಚರ್ಚಿಸಲಾಯಿತು. ಈ ಕುರಿತಂತೆ ಉದ್ದೇಶಪೂರ್ವಕವಾಗಿ ನಿವೃತ್ತಿ ತೆಗೆದುಕೊಂಡು, ವಿದೇಶಿ ಲೀಗ್‌ನಲ್ಲಿ ಪಾಲ್ಗೊಳ್ಳಲಿಚ್ಚಿಸುವ ಆಟಗಾರರಿಗೆ ಬ್ರೇಕ್‌ ಹಾಕುವ ಸುಳಿವನ್ನು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಬಿಚ್ಚಿಟ್ಟಿದ್ದಾರೆ. ವಿದೇಶಿ ಟಿ20 ಲೀಗ್‌ನಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದಲೇ ಕೆಲವು ಕ್ರಿಕೆಟಿಗರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುತ್ತಿರುವುದು ಬಿಸಿಸಿಐ ಅಪೆಕ್ಸ್ ಬಾಡಿಯ ಅಸಮಾಧಾನಕ್ಕೆ ಗುರಿಯಾಗಿದೆ.

"ಉದ್ದೇಶಪೂರ್ವಕವಾಗಿಯೇ ಅವಧಿಗೂ ಮುನ್ನ ನಿವೃತ್ತಿ ನಿರ್ಧಾರ ಪ್ರಕಟಿಸುತ್ತಿರುವ ಚಾಳಿಗೆ ಕಡಿವಾಣ ಹಾಕಲು ನಾವು ಸದ್ಯದಲ್ಲಿಯೇ ಒಂದು ಪಾಲಿಸಿಯನ್ನು ಜಾರಿಗೆ ತರಲಿದ್ದೇವೆ. ಒಂದು ತಿಂಗಳು ಅಥವಾ ಸ್ವಲ್ಪ ದಿನಗಳ ಬಳಿಕ ಪಾಲಿಸಿ ನೀತಿ-ನಿಯಮಗಳು ತೀರ್ಮಾನವಾದ ಬಳಿಕ ಅದನ್ನು ಒಪ್ಪಿಗೆಗಾಗಿ ಅಪೆಕ್ಸ್‌ ಕೌನ್ಸಿಲ್‌ಗೆ ಕಳಿಸಿಕೊಡಲಾಗುವುದು" ಎಂದು ಜಯ್ ಶಾ ತಿಳಿಸಿದ್ದಾರೆ.

ಕಂಫರ್ಟ್​​ ಝೋನ್​ನಿಂದ ಹೊರ ಬಂದು ಅಬ್ಬರಿಸಲು ವಿರಾಟ್ ಕೊಹ್ಲಿ ರೆಡಿ..!

ಇತ್ತೀಚೆಗಷ್ಟೇ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರಾದ ಇರ್ಫಾನ್ ಪಠಾಣ್‌, ಯೂಸುಫ್‌ ಪಠಾಣ್‌, ಪಾರ್ಥಿವ್ ಪಟೇಲ್‌, ಎಸ್‌ ಶ್ರೀಶಾಂತ್ ಹಾಗೂ ಸ್ಟುವರ್ಟ್‌ ಬಿನ್ನಿ ತಾವು ಜಿಮ್ ಆಫ್ರೋ ಟಿ10 ಲೀಗ್‌ನಲ್ಲಿ ಪಾಲ್ಗೊಳ್ಳುವುದಾಗಿ ಘೋಷಿಸಿದ್ದರು. ಇನ್ನು ಯೂಸುಫ್ ಪಠಾಣ್ ಹಾಗೂ ರಾಬಿನ್ ಉತ್ತಪ್ಪ ಈ ವರ್ಷಾರಂಭದಲ್ಲಿ ಯುಎಇನಲ್ಲಿ ನಡೆದ ILT20 ಲೀಗ್‌ನಲ್ಲಿ ಪಾಲ್ಗೊಂಡಿದ್ದರು. ಇನ್ನು ಅಂಬಟಿ ರಾಯುಡು ಈ ಮೊದಲು ತಾವು ಯುಎಸ್‌ಎ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದರು.  ಆದರೆ ಇದೀಗ ವೈಯುಕ್ತಿಕ ಕಾರಣದಿಂದಾಗಿ ಈ ಟೂರ್ನಿಯಿಂದ ಅಂಬಟಿ ರಾಯುಡು ಹಿಂದೆ ಸರಿದಿದ್ದಾರೆ. 

click me!