ಭಾರತ ಎದುರಿನ ಮೊದಲ ಟೆಸ್ಟ್‌ಗೆ ವೆಸ್ಟ್ ಇಂಡೀಸ್‌ ತಂಡ ಪ್ರಕಟ; 2 ವರ್ಷಗಳ ಬಳಿಕ ದೈತ್ಯ ಕ್ರಿಕೆಟಿಗ ಕಮ್‌ಬ್ಯಾಕ್‌..!

By Naveen Kodase  |  First Published Jul 8, 2023, 10:26 AM IST

ಭಾರತ-ವೆಸ್ಟ್ ಇಂಡೀಸ್ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ
ಮೊದಲ ಟೆಸ್ಟ್ ಪಂದ್ಯ ಜುಲೈ 12ರಿಂದ ಆರಂಭ
ಮೊದಲ ಟೆಸ್ಟ್‌ಗೆ ಬಲಿಷ್ಠ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಪ್ರಕಟ


ಜಮೈಕಾ(ಜು.08): ಭಾರತ ಎದುರು ಜುಲೈ 12ರಿಂದ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದ್ದು, ಇದೀಗ ಮೊದಲ ಟೆಸ್ಟ್ ಪಂದ್ಯಕ್ಕೆ ಆತಿಥೇಯ ವೆಸ್ಟ್‌ ಇಂಡೀಸ್ ತಂಡ ಪ್ರಕಟವಾಗಿದ್ದು, ದೈತ್ಯ ಕ್ರಿಕೆಟಿಗ ರಕೀಂ ಕಾರ್ನ್‌ವಾಲ್‌ ಬರೋಬ್ಬರಿ ಎರಡು ವರ್ಷಗಳ ಬಳಿಕ ವಿಂಡೀಸ್ ಟೆಸ್ಟ್‌ ತಂಡಕ್ಕೆ ಕಮ್‌ಬ್ಯಾಕ್‌ ಮಾಡಿದ್ದಾರೆ. ಇನ್ನುಳಿದಂತೆ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲು ಕಿರ್ಕ್‌ ಮೆಕೆಂಜಿ ಹಾಗೂ ಎಲಿಕ್‌ ಅಥಂಜೆ ಸ್ಥಾನ ಪಡೆದಿದ್ದಾರೆ.

ಜಮೈಕಾ ಮೂಲದ ಕಿರ್ಕ್‌ ಮೆಕೆಂಜಿ ಹಾಗೂ ಡೋಮಿನಿಕ್‌ನ ಕಿರ್ಕ್‌ ಮೆಕೆಂಜಿ ಇಬ್ಬರು ಅಗ್ರಕ್ರಮಾಂಕದ ಎಡಗೈ ಬ್ಯಾಟರ್‌ ಆಗಿದ್ದು, ಕಿರ್ಕ್‌ ಮೆಕೆಂಜಿ ಬಲಗೈ ಆಫ್‌ಸ್ಪಿನ್ ಬೌಲಿಂಗ್ ಕೂಡಾ ಮಾಡಬಲ್ಲವರಾಗಿದ್ದಾರೆ.  22 ವರ್ಷದ ಕಿರ್ಕ್ ಮೆಕೆಂಜಿ ಬಾಂಗ್ಲಾದೇಶ ಪ್ರವಾಸದಲ್ಲಿ ವೆಸ್ಟ್ ಇಂಡೀಸ್ 'ಎ' ತಂಡದ ಪರ 96 ಮತ್ತು 86 ರನ್ ಬಾರಿಸಿದ್ದರು. ಇನ್ನು ಎಲಿಕ್ ಅಥಂಜಿ ಕೂಡಾ ಅದೇ ಸರಣಿಯಲ್ಲಿ 85 ಹಾಗೂ 45 ರನ್‌ ಬಾರಿಸಿ ಮಿಂಚಿದ್ದರು.

Latest Videos

undefined

ಈ ಇಬ್ಬರು ಯುವ ಆಟಗಾರರ ಆಯ್ಕೆಯ ಕುರಿತಂತೆ ಪ್ರತಿಕ್ರಿಯಿಸಿರುವ ವೆಸ್ಟ್‌ ಇಂಡೀಸ್ ಕ್ರಿಕೆಟ್ ಮಂಡಳಿ ಆಯ್ಕೆ ಸಮಿತಿ ಮುಖ್ಯಸ್ಥ ಡೆಸ್ಮೆಂಡ್ ಹೇಯ್ನ್ಸ್‌, "ಇತ್ತೀಚೆಗಷ್ಟೇ ವೆಸ್ಟ್ ಇಂಡೀಸ್ 'ಎ' ತಂಡವು ಬಾಂಗ್ಲಾದೇಶ ಪ್ರವಾಸ ಮಾಡಿದಾಗ ಈ ಇಬ್ಬರು ಆಟಗಾರರು ಬ್ಯಾಟಿಂಗ್‌ನಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದರು. ಹೀಗಾಗಿಯೇ ಕಿರ್ಕ್‌ ಮೆಕೆಂಜಿ ಹಾಗೂ ಎಲಿಕ್‌ ಅಥಂಜೆ ಅವರನ್ನು ಆಯ್ಕೆ ಮಾಡಿದ್ದೇವೆ" ಎಂದು ಹೇಳಿದ್ದಾರೆ. "ಈ ಇಬ್ಬರು ಯುವ ಆಟಗಾರರು ಒಳ್ಳೆಯ ಸ್ಕೋರ್ ಗಳಿಸಿದರು ಹಾಗೂ ಒಳ್ಳೆಯ ಪ್ರಬುದ್ಧತೆಯ ಆಟ ಪ್ರದರ್ಶಿಸಿದರು. ತಂಡದಲ್ಲಿ ಅವರು ಸ್ಥಾನ ಪಡೆಯಲು ಅರ್ಹರಾಗಿದ್ಧಾರೆ ಎಂದು ನಂಬಿದ್ದೇವೆ ಎಂದು ಡೆಸ್ಮಂಡ್ ಹೇಯ್ನ್ಸ್‌ ಹೇಳಿದ್ದಾರೆ.

ಇನ್ನು ವಿಂಡೀಸ್ ದೈತ್ಯ ಕ್ರಿಕೆಟಿಗ ರಾಕೀಂ ಕಾರ್ನ್‌ವಾಲ್‌ ಕೂಡಾ ಟೆಸ್ಟ್ ತಂಡಕ್ಕೆ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ರಾಕೀಂ ಕಾರ್ನ್‌ವಾಲ್‌ 2021ರ ನವೆಂಬರ್‌ನಲ್ಲಿ ಕಡೆಯ ಬಾರಿಗೆ ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸಿದ್ದರು. ಇನ್ನು ವೆಸ್ಟ್ ಇಂಡೀಸ್ ತಂಡದಲ್ಲಿ ಎಡಗೈ ಸ್ಪಿನ್ನರ್ ಜೋಮೆಲ್ ವಾರ್ವಿಕನ್ ಕೂಡಾ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ವೆಸ್ಟ್‌ ಇಂಡೀಸ್ ಪ್ರವಾಸಕ್ಕೆ ಭಾರತ ಕ್ರಿಕೆಟ್‌ ತಂಡ ಪ್ರಕಟ; ಇಬ್ಬರು ತಾರಾ ಆಟಗಾರರಿಗೆ ರೆಸ್ಟ್‌

ಟೆಸ್ಟ್‌ ಸರ​ಣಿಯ ಮೊದಲ ಪಂದ್ಯ ಜುಲೈ 12ರಿಂದ ಡೊಮಿ​ನಿ​ಕಾ​ದಲ್ಲಿ ಆರಂಭ​ವಾ​ಗ​ಲಿ​ದ್ದು, ಜುಲೈ 20ರಿಂದ 2ನೇ ಟೆಸ್ಟ್‌ ಪಂದ್ಯ ಟ್ರಿನಿ​ಡಾ​ಡ್‌​ನ​ಲ್ಲಿ ನಡೆ​ಯ​ಲಿದೆ. ಬಳಿಕ ಜುಲೈ 27, 29ರಂದು ಮೊದ​ಲೆ​ರಡು ಏಕ​ದಿನಕ್ಕೆ ಬಾರ್ಬ​ಡಾ​ಸ್‌​, ಆಗಸ್ಟ್‌ 1ರಂದು 3ನೇ ಏಕ​ದಿ​ನಕ್ಕೆ ಟ್ರಿನಿ​ಡಾಡ್‌ ಆತಿಥ್ಯ ವಹಿ​ಸ​ಲಿದೆ. ಇನ್ನು ಆಗಸ್ಟ್‌ 3ರಿಂದ ಟ್ರಿನಿ​ಡಾ​ಡ್‌​ನಲ್ಲೇ 5 ಪಂದ್ಯಗಳ ಟಿ20 ಸರಣಿ ಆರಂಭ​ವಾ​ಗ​ಲಿದ್ದು, 2 ಮತ್ತು 3ನೇ ಪಂದ್ಯ ಕ್ರಮ​ವಾಗಿ ಆಗಸ್ಟ್‌ 6, 8ಕ್ಕೆ ಗಯಾ​ನ​ದಲ್ಲಿ, 4 ಮತ್ತು 5ನೇ ಪಂದ್ಯ ಆಗಸ್ಟ್ 12 ಮತ್ತು 13ರಂದು ಫ್ಲೋರಿಡಾ​ದಲ್ಲಿ ನಡೆ​ಯ​ಲಿದೆ. 

ಮೊದಲ ಟೆಸ್ಟ್‌ಗೆ ವೆಸ್ಟ್‌ ಇಂಡೀಸ್‌ ತಂಡ ಹೀಗಿದೆ:  

ಕ್ರೆಗ್ ಬ್ರಾಥ್‌ವೇಟ್‌(ನಾಯಕ), ಜೆರ್ಮೈನ್‌ ಬ್ಲಾಕ್‌ವುಡ್‌(ಉಪನಾಯಕ), ಎಲಿಕ್ ಅಥಂಜೆ, ಜೋಮೆಲ್ ವಾರ್ವಿಕನ್, ತೇಗ್‌ನಾರಾಯಣ್‌ ಚಂದ್ರಪಾಲ್, ರಾಕೀಂ ಕಾರ್ನ್‌ವಾಲ್, ಜೋಶ್ವಾ ಡಿ ಸಿಲ್ವಾ, ಶೆನೊನ್‌ ಗೇಬ್ರಿಯಲ್‌, ಜೇಸನ್ ಹೋಲ್ಡರ್, ಅಲ್ಜರಿ ಜೋಸೆಫ್‌, ರೈಮನ್‌ ರೀಫರ್, ಕೀಮರ್ ರೋಚ್‌, ಜೊಮೆಲ್‌ ವಾರ್ರಿಕನ್‌.

click me!