ಆರ್‌ಸಿಬಿ ಸಂಭಾವ್ಯ ರೀಟೈನ್ ಆಟಗಾರರ ಪಟ್ಟಿ ಪ್ರಕಟ; ಈ ಮೂವರಿಗೆ ಗೇಟ್‌ಪಾಸ್?

By Naveen KodaseFirst Published Sep 25, 2024, 1:41 PM IST
Highlights

ಮುಂಬರುವ ಐಪಿಎಲ್ ಮೆಗಾ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು 5 ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಮುಂದಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಬೆಂಗಳೂರು: ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು 18ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಸಜ್ಜಾಗುತ್ತಿದೆ. 2025ರ ಐಪಿಎಲ್ ಟೂರ್ನಿಗೂ ಮುನ್ನ ಮೆಗಾ ಹರಾಜು ನಡೆಯಲಿದ್ದು, ಬಿಸಿಸಿಐ ಸದ್ಯದಲ್ಲಿಯೇ ಫ್ರಾಂಚೈಸಿಗಳಿಗೆ ರೀಟೈನ್ ರೂಲ್ಸ್ ತಿಳಿಸಲಿದೆ. ಇದಕ್ಕೂ ಮುನ್ನವೇ ಎಲ್ಲಾ ಐಪಿಎಲ್ ಫ್ರಾಂಚೈಸಿಗಳು ತೆರೆ ಮರೆಯಲ್ಲಿ ತಾವು ಉಳಿಸಿಕೊಳ್ಳಲಿರುವ ಆಟಗಾರರ ಶಾರ್ಟ್‌ಲಿಸ್ಟ್‌ ಮಾಡತೊಡಗಿವೆ.

ಸದ್ಯದ ವರದಿಯ ಪ್ರಕಾರ, ಒಂದು ಫ್ರಾಂಚೈಸಿಗೆ ರೈಟ್ ಟು ಮ್ಯಾಚ್ ಕಾರ್ಡ್‌ ಸೇರಿದಂತೆ ಗರಿಷ್ಠ 6 ಆಟಗಾರರು ಮೀರದಂತೆ ಅವಕಾಶ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇನ್ನು ಕಳೆದ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪ್ಲೇ ಆಫ್ ಪ್ರವೇಶಿಸಿದ್ದ ಆರ್‌ಸಿಬಿ ತಂಡವು ಈ ಬಾರಿ ಶತಾಯಗತಾಯ ಕಪ್ ಗೆಲ್ಲುವ ಪಣ ತೊಟ್ಟಿದೆ. ಹೀಗಾಗಿ ಈ 5 ಆಟಗಾರರನ್ನು ತಂಡದಲ್ಲೇ ಉಳಿಸಿಕೊಂಡು ಐಪಿಎಲ್ ಮೆಗಾ ಹರಾಜಿನಲ್ಲಿ ಪಾಲ್ಗೊಳ್ಳಲು ತೀರ್ಮಾನಿಸಿದಂತಿದೆ. ಆರ್‌ಸಿಬಿ ರೀಟೈನ್ ಮಾಡಿಕೊಳ್ಳಲು ಮುಂದಾಗಿರುವ ಆ 5 ಆಟಗಾರರು ಯಾರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Latest Videos

ಧೋನಿಯ ಕಣ್ಣು ನೋಡೋಕೂ ಭಯ ಆಗ್ತಿತ್ತು: ಕ್ಯಾಪ್ಟನ್ ಕೂಲ್ ಬೇರೆ ಮುಖನ ಬಿಚ್ಚಿಟ್ಟ ಸಿಎಸ್‌ಕೆ ಮಾಜಿ ಕ್ರಿಕೆಟರ್

1. ವಿರಾಟ್ ಕೊಹ್ಲಿ:

ಚೊಚ್ಚಲ ಆವೃತ್ತಿಯ ಐಪಿಎಲ್‌ನಿಂದಲೂ ಆರ್‌ಸಿಬಿಯ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡು ಬಂದಿರುವ ವಿರಾಟ್ ಕೊಹ್ಲಿ, ತಂಡದ ಮೊದಲ ಆಯ್ಕೆಯ ರೀಟೈನ್ ಆಟಗಾರ ಎನಿಸಿಕೊಳ್ಳಲಿದ್ದಾರೆ. ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಕೊಹ್ಲಿ 741 ರನ್ ಬಾರಿಸಿ, ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

2. ಮೊಹಮ್ಮದ್ ಸಿರಾಜ್:

ಆರ್‌ಸಿಬಿ ತಂಡದ ಪ್ರಮುಖ ವೇಗಿಗಳಲ್ಲಿ ಒಬ್ಬರೆನಿಸಿಕೊಂಡಿರುವ ಹೈದರಾಬಾದ್ ಮೂಲದ ವೇಗಿ ಮೊಹಮ್ಮದ್ ಸಿರಾಜ್ ಅವರ ಕಳೆದ ಕೆಲ ವರ್ಷಗಳ ಪ್ರದರ್ಶನ ಅಷ್ಟೇನೂ ಉತ್ತಮವಾಗಿರಲಿಲ್ಲ. ಹೀಗಿದ್ದೂ ಯಾವುದೇ ಕ್ಷಣದಲ್ಲಿ ಮಿಂಚಬಲ್ಲ ವೇಗಿಯಾಗಿರುವುದರಿಂದ ಸಿರಾಜ್ ಅವರನ್ನು ಆರ್‌ಸಿಬಿ ಫ್ರಾಂಚೈಸಿ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚು.

3. ಯಶ್ ದಯಾಳ್:

ಎಡಗೈ ವೇಗಿ ಯಶ್ ದಯಾಳ್ ಅವರನ್ನು ಆರ್‌ಸಿಬಿ ಖರೀದಿಸಿದಾಗ ಹಲವು ಮಂದಿ ಬೆಂಗಳೂರು ಫ್ರಾಂಚೈಸಿಯನ್ನು ಟೀಕಿಸಿದ್ದರು. ಆದರೆ ಯಶ್ ದಯಾಳ್ ಮಾರಕ ದಾಳಿ ನಡೆಸಿ ಗಮನ ಸೆಳೆದಿದ್ದು, ಆರ್‌ಸಿಬಿ ತಂಡದಲ್ಲೇ ಉಳಿದರೆ ಅಚ್ಚರಿಯಾಗುವಂತಹದ್ದು ಏನೂ ಇಲ್ಲ.

ವಿರಾಟ್ ಕೊಹ್ಲಿ ಯಾಕೆ ಐಪಿಎಲ್ ಹರಾಜಿಗೆ ಬರ್ತಿಲ್ಲ? ಅಷ್ಟಕ್ಕೂ ಆರ್‌ಸಿಬಿಗೂ, ಕೊಹ್ಲಿಗೂ ಏನು ಸಂಬಂಧ?

4. ರಜತ್ ಪಾಟೀದಾರ್:

ಆರ್‌ಸಿಬಿ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಅಸ್ತ್ರ ರಜತ್ ಪಾಟೀದಾರ್, ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ಪಾಟೀದಾರ್ ವಿಸ್ಪೋಟಕ ಬ್ಯಾಟಿಂಗ್‌ ಆರ್‌ಸಿಬಿ ಅಭಿಮಾನಿಗಳ ಕಣ್ಣಿಗೆ ಹಬ್ಬದ ಸಂಭ್ರಮ ಮನೆಮಾಡುವಂತೆ ಮಾಡಿತ್ತು.

5. ವಿಲ್ ಜ್ಯಾಕ್ಸ್‌:

ಕಳೆದ ಆವೃತ್ತಿಯಲ್ಲಿ ಆಡಲು ಕೆಲವೇ ಪಂದ್ಯಗಳಲ್ಲಿ ಅವಕಾಶ ಸಿಕ್ಕಿದರೂ ಅದನ್ನು ಸರಿಯಾಗಿಯೇ ಬಳಸಿಕೊಂಡಿರುವ ವಿಲ್ ಜ್ಯಾಕ್ಸ್‌, ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದರು. ಹೀಗಾಗಿ ಮತ್ತೊಮ್ಮೆ ಜ್ಯಾಕ್ಸ್‌ ಆರ್‌ಸಿಬಿ ತಂಡದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ.

ಮೂವರು ವಿದೇಶಿಗರಿಗೆ ಗೇಟ್‌ಪಾಸ್:

ಆರ್‌ಸಿಬಿ ತಂಡದ ಹಾಲಿ ನಾಯಕ ಫಾಫ್ ಡು ಪ್ಲೆಸಿಸ್‌ ಅವರನ್ನು ಬೆಂಗಳೂರು ಫ್ರಾಂಚೈಸಿಯು ಕೈಬಿಡುವ ಸಾಧ್ಯತೆಯಿದೆ. ವಯಸ್ಸು ಹಾಗೂ ಕಳೆದ ಆವೃತ್ತಿಯಲ್ಲಿ ಫಾಫ್ ಪ್ರದರ್ಶನ ಅಷ್ಟೇನೂ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಇನ್ನು ಇದರ ಜತೆಗೆ ಗ್ಲೆನ್ ಮ್ಯಾಕ್ಸ್‌ವೆಲ್‌ಗೂ ಗೇಟ್‌ಪಾಸ್ ಸಿಗುವುದು ಬಹುತೇಕ ಖಚಿತ ಎನಿಸಿದೆ. ಯಾಕೆಂದರೆ ಮ್ಯಾಕ್ಸಿ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ದಯನೀಯ ಬ್ಯಾಟಿಂಗ್ ವೈಪಲ್ಯ ಅನುಭವಿಸಿದ್ದರು. ಇನ್ನು ದುಬಾರಿ ಮೊತ್ತಕ್ಕೆ ಆರ್‌ಸಿಬಿ ಪಾಳಯ ಸೇರಿಕೊಂಡಿದ್ದ ಆಸ್ಟ್ರೇಲಿಯಾದ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಸಾಧಾರಣ ಪ್ರದರ್ಶನ ತೋರಿದ್ದರು. ಹೀಗಾಗಿ ಗ್ರೀನ್‌ಗೂ ಆರ್‌ಸಿಬಿ ಗೇಟ್‌ಪಾಸ್ ಕೊಟ್ಟರೆ ಅಚ್ಚರಿಯೇನಿಲ್ಲ.
 

click me!