ವಿಶ್ವ ಜಿಎಸ್ ಮೋಟಾರ್‌ಸೈಕಲ್ ರೇಸ್ ಸ್ಪರ್ಧೆ: ಭಾರತಕ್ಕೆ ಕೀರ್ತಿ ತಂದ ಬೈಕರ್ ಶಹಾನ್

By Kannadaprabha NewsFirst Published Sep 25, 2024, 10:23 AM IST
Highlights

23 ರಾಷ್ಟ್ರಗಳು ಪಾಲ್ಗೊಂಡಿದ್ದ, ಆರು ದಿನಗಳ ಕಾಲ ನಡೆದ 1300 ಕಿ.ಮೀ. ದೂರದ ಸಾಹಸಿಕ ಸ್ಪರ್ಧೆಯಲ್ಲಿ ಬೆಂಗಳೂರಿನ ಸರ್ದಾರ್ ಶಹಾನ್ ಖಾನ್ ಹಾಗೂ ದೇವ್, ಕೇರಳದ ಆನಂದ್ ಅವರನ್ನೊಳಗೊಂಡ ತಂಡ ಉತ್ತಮ ಪ್ರದರ್ಶನ ನೀಡಿ ಜಗತ್ತಿನ ಶ್ರೇಷ್ಠ ಬೈಕ್ ರೇಸ್ ಪಟುಗಳ ಮೆಚ್ಚುಗೆ ಗಳಿಸಿದ್ದಾರೆ.

ಬೆಂಗಳೂರು: ಇತ್ತೀಚೆಗೆ ನಮೀಬಿಯಾದಲ್ಲಿ ನಡೆದ ವಿಶ್ವ ಜಿಎಸ್ ಮೋಟಾರ್‌ಸೈಕಲ್ ರೇಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಬೆಂಗಳೂರಿನ ಸರ್ದಾರ್ ಶಹಾನ್ ಖಾನ್ ಹಾಗೂ ದೇವ್, ಕೇರಳದ ಆನಂದ್ ಅವರನ್ನೊಳಗೊಂಡ ತಂಡ ಅಗ್ರ-10ರಲ್ಲಿ ಸ್ಥಾನ ಪಡೆಯುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ. 23 ರಾಷ್ಟ್ರಗಳು ಪಾಲ್ಗೊಂಡಿದ್ದ, ಆರು ದಿನಗಳ ಕಾಲ ನಡೆದ 1300 ಕಿ.ಮೀ. ದೂರದ ಸಾಹಸಿಕ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಜಗತ್ತಿನ ಶ್ರೇಷ್ಠ ಬೈಕ್ ರೇಸ್ ಪಟುಗಳ ಮೆಚ್ಚುಗೆ ಗಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಪತ್ರಕರ್ತರ ಜೊತೆ ತಮ್ಮ ರೇಸ್‌ನ ಅನುಭವ ಹಂಚಿಕೊಂಡ ಶಹಾನ್, ಬೆಟ್ಟ, ಗುಡ್ಡ, ನದಿ, ಮರು ಭೂಮಿಯಲ್ಲಿ ನಡೆದ ಸ್ಪರ್ಧೆ ವಿಶೇಷ ಅನುಭವ ನೀಡಿದೆ. ವಿಶ್ವದ ಶ್ರೇಷ್ಠ ರೇಸರ್‌ಗಳೊಂದಿಗೆ ಸ್ಪರ್ಧಿಸಿ 10ನೇ ಸ್ಥಾನ ಪಡೆದಿದ್ದು ದೊಡ್ಡ ಸಾಧನೆ. ಭಾರತ ತಂಡ ಈ ಹಂತ ತಲುಪಿದ್ದು ಇದೇ ಮೊದಲು ಎಂದು ಹೇಳಿದರು. ತಂದೆ ಸರ್ಫ್‌ರಾಜ್ ಖಾನ್ ನನಗೆ ಬೈಕ್ ರೇಸ್ ನ ಮೊದಲ ಗುರು. ಅವರೂ ಸಹ ಬೈಕ್‌ ರೇಸ್ ಪ್ರಿಯರು. ರೇಸ್‌ನಲ್ಲಿ ಗಾಯಗೊಂಡರೂ ವಿಶ್ರಾಂತಿ ಪಡೆಯದೆ ರೇಸ್ ಮುಂದುವರಿಸಲು ನನ್ನ ತಾಯಿ ಹುಸ್ನಾ ಖಾನ್ ಸ್ಫೂರ್ತಿ ಎಂದರು.

Latest Videos

ಭಾರತದ ಸರಣಿಗೂ ತಟ್ಟಿದ ಬಾಂಗ್ಲಾ ಹಿಂಸಾಚಾರ ಬಿಸಿ! ಸ್ಟೇಡಿಯಂ ಸುತ್ತ ಬಿಗಿ ಭದ್ರತೆ

21ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಬೈಕ್‌ ರೇಸ್‌ನಲ್ಲಿ ಪಾಲ್ಗೊಂಡ ಶಹಾನ್, ರೇಸ್ ವೇಳೆ ಗಾಯಗೊಂಡು ನಿತ್ರಾಣಗೊಂಡರೂ ವಿಚಲಿತಾರಾಗದೆ 18ನೇ ಸ್ಥಾನದಲ್ಲಿದ್ದ ಭಾರತ ತಂಡವನ್ನು ಅಗ್ರ-10 ಹಂತಕ್ಕೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು ಎಂದು ಸಹ ಸ್ಪರ್ಧಿ ದೇವ್ ಮೆಚ್ಚುಗೆ ವ್ಯಕ್ತಪಡಿಸಿದರು.

ಶಹಾನ್ ಖಾನ್ ತಾಯಿ ಹುಸ್ನಾ ಸರ್ಫ್‌ರಾಜ್ ಖಾನ್ ಮಾತನಾಡಿ, ಶಹಾನ್‌ಗೆ ಮೊದಲಿನಿಂದಲೂ ಬೈಕ್ ರೇಸ್ ಬಗ್ಗೆ ಆಸಕ್ತಿಯಿದ್ದ ಕಾರಣ ಮನೆಯಲ್ಲೂ ಸಂಪೂರ್ಣ ಬೆಂಬಲ ನೀಡಿದೆವು. ಪುತ್ರನ ಸಾಧನೆ ಖುಷಿ ತಂದಿದೆ ಎಂದರು. ಜಿಎಸ್ ಬೈಕ್ ರೇಸ್ 2 ವರ್ಷಕ್ಕೊಮ್ಮೆ ನಡೆಯುತ್ತದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಭಾರತದ ಅರ್ಹತಾ ಸುತ್ತಿನಲ್ಲಿ 150ಕ್ಕೂ ಹೆಚ್ಚಿನ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಇದರಲ್ಲಿ ಶಹಾನ್, ದೇವ್ ಹಾಗೂ ಆನಂದ್‌ ಆಯ್ಕೆಯಾಗಿದ್ದರು.

ವಿರಾಟ್ ಕೊಹ್ಲಿ ಯಾಕೆ ಐಪಿಎಲ್ ಹರಾಜಿಗೆ ಬರ್ತಿಲ್ಲ? ಅಷ್ಟಕ್ಕೂ ಆರ್‌ಸಿಬಿಗೂ, ಕೊಹ್ಲಿಗೂ ಏನು ಸಂಬಂಧ?

ಭಾರತದ ಚೆಸ್‌ ಸಾಧಕರಿಗೆ ತವರಿನಲ್ಲಿ ಅದ್ಧೂರಿ ಸ್ವಾಗತ

ಚೆನ್ನೈ: ಹಂಗೇರಿಯಲ್ಲಿ ನಡೆದ 45ನೇ ಚೆಸ್‌ ಒಲಿಂಪಿಯಾಡ್‌ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದು ಭಾರತಕ್ಕೆ ಆಗಮಿಸಿದ ಚೆಸ್‌ ಪಟುಗಳಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಮಂಗಳವಾರ ಡಿ.ಗುಕೇಶ್‌, ಆರ್‌.ಪ್ರಜ್ಞಾನಂದ, ಆರ್‌.ವೈಶಾಲಿ ಹಾಗೂ ಪುರುಷರ ತಂಡದ ನಾಯಕ ಶ್ರೀನಾಥ್‌ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಅವರಿಗೆ ಕುಟುಂಬಸ್ಥರು, ಅಭಿಮಾನಿಗಳು ಹೂ ಹಾರ ಹಾಕಿ, ಸಿಹಿ ಹಂಚಿ ಸ್ವಾಗತಿಸಿದರು. ಇದೇ ವೇಳೆ ಮಹಿಳಾ ತಂಡದ ಆಟಗಾರ್ತಿಯರಾದ ವಂತಿಕಾ ಅಗರ್‌ವಾಲ್‌, ತಾನಿಯಾ ಸಚ್‌ದೇವ್‌, ತಂಡದ ನಾಯಕ ಅಭಿಜೀತ್‌ ಕುಂಟೆ ಡೆಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಅವರಿಗೆ ಅಭಿಮಾನಿಗಳು, ಭಾರತೀಯ ಚೆಸ್‌ ಸಂಸ್ಥೆ ಅಧಿಕಾರಿಗಳು ಭವ್ಯ ಸ್ವಾಗತ ಕೋರಿದರು.

click me!