ಡ್ರೆಸಿಂಗ್ ರೂಂಗೆ ಕಿರುಚಾಡಿಕೊಂಡು ಬಂದು ಮೋಸದಿಂದ ಗೆದ್ದಿರಿ ಎಂದ ಪಾಕಿಸ್ತಾನದ ಸ್ಟಾರ್ ಕ್ರಿಕೆಟಿಗನಿಗೆ ಬೂಟ್ ನಲ್ಲಿ ಒದೆಯಲು ಹೋಗಿದ್ದ ರವಿ ಶಾಸ್ತ್ರಿ.
ರವಿಶಂಕರ್ ಜಯದ್ರಿತ ಶಾಸ್ತ್ರಿ ಅಲಿಯಾಸ್ ರವಿ ಶಾಸ್ತ್ರಿ ಟೀಂ ಇಂಡಿಯಾದ ಮಾಜಿ ಕೋಚ್ (ಜುಲೈ 2017 ರಿಂದ ನವೆಂಬರ್ 2021), ಮಾಜಿ ಆಲ್‌ರೌಂಡರ್‌ಗಳಲ್ಲಿ ಒಬ್ಬರು. ಎಡಗೈ ಸ್ಪಿನ್ನರ್ , ಅವರ ವೃತ್ತಿ ಜೀವನದಲ್ಲಿ 230 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿ 6,500 ರನ್ , 250 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಭಾರತದ ಎರಡು ಪ್ರಮುಖ ವಿಜಯಗಳಲ್ಲಿ ರವಿಶಾಸ್ತ್ರಿ ಅವರ ಪಾತ್ರ ಕೂಡ ಇದೆ. ಮೊದಲ ಗೆಲುವು 1983 ರ ವಿಶ್ವಕಪ್, ಮತ್ತು ಭಾರತೀಯ ಕ್ರಿಕೆಟ್ ತಂಡಕ್ಕೆ ಎರಡನೇ ಪ್ರಮುಖ ಗೆಲುವು 1985 ರ ಬೆನ್ಸನ್ ಮತ್ತು ಹೆಡ್ಜಸ್ ಸರಣಿಯಲ್ಲಿ ಬಂದಿತ್ತು.
1985 ರಲ್ಲಿ ಭಾರತವು ಪಾಕಿಸ್ತಾನವನ್ನು ನಿರ್ಣಾಯಕ ಸರಣಿಗಾಗಿ ಆತಿಥ್ಯ ವಹಿಸಿದಾಗ ರವಿಶಾಸ್ತ್ರಿ ಪಾಕಿಸ್ತಾನದ ಪ್ರಮುಖ ಆಟಗಾರ ಜಾವೇದ್ ಮಿಯಾಂದಾದ್ ವಿರುದ್ಧ ಗಲಾಟೆ ಮಾಡಿದ್ದರು. ಹೈದರಾಬಾದ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡೆದಿತ್ತು. ಈ ಪಂದ್ಯದ ಅಂತಿಮ ಎಸೆತದಲ್ಲಿ ಟ್ರೋಫಿ ಗೆಲ್ಲಲು ಪಾಕಿಸ್ತಾನಕ್ಕೆ ಕೇವಲ ಎರಡು ರನ್‌ಗಳ ಅಗತ್ಯವಿದ್ದುದರಿಂದ ಇನ್ನೇನು ಪಾಕ್ ಗೆದ್ದೇ ಬಿಡುತ್ತೆ ಅನ್ನುವ ಮಟ್ಟಕ್ಕೆ ಅವರಲ್ಲಿ ಉತ್ಸಾಹವು ಏರಿತ್ತು. ಆದರೆ ಅಬ್ದುಲ್ ಖಾದಿರ್ ರನ್ ಔಟ್ ಆಗುತ್ತಿದ್ದಂತೆ ಮಿಲಿಯನ್ ಪಾಕಿಸ್ತಾನಿಯರ ಹೃದಯ ಒಡೆದೇ ಹೊಯ್ತು. ಭಾರತವು ಸರಣಿಯನ್ನು ಗೆದ್ದಿತು.
undefined
ಈ ಸೋಲು ಪಾಕಿಸ್ತಾನಕ್ಕೆ ಭಾರಿ ನಿರಾಸೆ ತಂದಿತು. ಪಾಕ್ ಸ್ಟಾರ್ ಆಟಗಾರ ಜಾವೇದ್ ಮಿಯಾಂದಾದ್ ತಮ್ಮ ತಂಡದ ಸೋಲನ್ನು ಒಪ್ಪಿಕೊಳ್ಳಲು ಸಾಧ್ಯವಾಗದೆ ಟೀಂ ಇಂಡಿಯಾದ ಡ್ರೆಸ್ಸಿಂಗ್ ರೂಮ್‌ಗೆ ನುಗ್ಗಿ ನೀವು ಮೋಸದಿಂದ ಗೆದ್ದಿದ್ದೀರಿ ಎಂದು ಅರಚತೊಡಗಿದ. ಭಾರತೀಯ ಆಟಗಾರರು 'ಚೀಟಿಂಗ್' ಎಂಬ ಪದವನ್ನು ಕೇಳಿದ ತಕ್ಷಣ ಕೋಪಗೊಂಡರು. ಎರಡೂ ತಂಡಗಳ ಮಧ್ಯೆ ವಾಗ್ವಾದ ಜೋರಾಗಿಯೇ ನಡೆಯಿತು.
ತಮ್ಮ ಕೋಪ ಮತ್ತು ಆಕ್ರಮಣಶೀಲತೆಗೆ ಹೆಸರಾಗಿದ್ದ ಕೆಲವೇ ಕೆಲವು ಭಾರತೀಯ ಕ್ರಿಕೆಟಿಗರಲ್ಲಿ ರವಿಶಾಸ್ತ್ರಿ ಕೂಡ ಒಬ್ಬರು. ಇದರ ಪರಿಣಾಮವಾಗಿ ಭಾರತ ತಂಡ ಮೋಸ ಮಾಡಿ ಗೆದ್ದಿದೆ ಎಂದು ಜಾವೇದ್ ಮಿಯಾಂದಾದ್ ಹೇಳುವುದನ್ನು ಕೇಳಿದ ಮರುಕ್ಷಣವೇ ರವಿಶಾಸ್ತ್ರಿ ಉಗ್ರವಾಗಿ ಕೋಪಗೊಂಡು ಪಾಕಿಸ್ತಾನಿ ಬ್ಯಾಟ್ಸ್‌ಮನ್‌ನನ್ನು ಶೂ ನಿಂದ ಥಳಿಸಲು ಮುಂದಾಗಿದ್ದರು. ಅದು ಕಷ್ಟವಾದ ಸನ್ನಿವೇಶವಾಗಿತ್ತು. ಯಾವಾಗ ರವಿಶಾಸ್ತ್ರಿ ಆಕ್ರಮಣಕ್ಕೆ ಮುಂದಾಗುತ್ತಿದ್ದಾರೆಂದು ಗೊತ್ತಾಯ್ತೋ , ಪಾಕ್ ನ ಇಮ್ರಾನ್ ಖಾನ್ ಪರಿಸ್ಥಿತಿಯನ್ನು ಶಾಂತಗೊಳಿಸಲು ರವಿಶಾಸ್ತ್ರಿ ಮತ್ತು ಜಾವೇದ್ ಮಿಯಾಂದಾದ್ ನಡುವೆ ಮಧ್ಯಪ್ರವೇಶಿಸಬೇಕಾಯಿತು.
ಅತ್ಯಂತ ಕೆಟ್ಟ ಪರಿಸ್ಥಿತಿಯ ಜಗಳದ ನಂತರವೂ ರವಿಶಾಸ್ತ್ರಿ ಮತ್ತು ಜಾವೇದ್ ಮಿಯಾಂದಾದ್ ಅವರು ತಮ್ಮ ಮುಂದಿನ ಪಂದ್ಯಕ್ಕಾಗಿ ಪುಣೆಯಲ್ಲಿ ಮತ್ತೊಮ್ಮೆ ಭೇಟಿಯಾದರು. ಆಗ ಇಬ್ಬರೂ ಕೂಡ ಅಸಾಧಾರಣ ವೃತ್ತಿಪರತೆಯನ್ನು ಪ್ರದರ್ಶಿಸಿದರು. ಇಬ್ಬರೂ ಕುಳಿತುಕೊಂಡು ಪರಸ್ಪರ ಆರೋಗ್ಯಕರ ಸಮಾಲೋಚನೆಯನ್ನು ನಡೆಸಿದರು. ಇದು ಅವರ ಸಂಭವನೀಯ ಸಂಘರ್ಷದ ಎಲ್ಲಾ ವರದಿಗಳನ್ನು ಕೊನೆಗೊಳಿಸಿತು.
ವೃತ್ತಿಜೀವನದಲ್ಲಿ ರವಿಶಾಸ್ತ್ರಿ ಅವರು ಟೀಂ ಇಂಡಿಯಾದ ಪ್ರತಿಷ್ಠೆಯನ್ನು ಹಾಳುಮಾಡುವ ಎದುರಾಳಿಗಳ ವಿರುದ್ಧ ಮಾತಿನ ಯುದ್ಧ ನಡೆಸಿರುವ ಹಲವಾರು ಉದಾಹರಣೆಗಳಿವೆ. ಅಪ್ರತಿಮ ಆಲ್‌ರೌಂಡರ್ ದೇಶದಾದ್ಯಂತದ ಅನೇಕ ಮಹತ್ವಾಕಾಂಕ್ಷಿ ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿದೆ.