
ನಾಗ್ಪುರ: ರಣಜಿ ಟ್ರೋಫಿ ದೇಸಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಮುಂಬೈ ತಂಡ ವಿದರ್ಭ ವಿರುದ್ಧ ಸಂಕಷ್ಟದ ಲ್ಲಿದೆ. ವಿದರ್ಭದ 383 ರನ್‌ಗೆ ಉತ್ತರವಾಗಿ ಮುಂಬೈ 2ನೇ ದಿನದಂತ್ಯಕ್ಕೆ 7 ವಿಕೆಟ್‌ಗೆ 188 ರನ್ ಗಳಿಸಿದ್ದು, ಇನ್ನೂ 195 ರನ್ ಹಿನ್ನಡೆಯಲ್ಲಿದೆ.
ಮೊದಲ ದಿನ 5 ವಿಕೆಟ್‌ಗೆ 308 ರನ್ ಗಳಿಸಿದ ವಿದರ್ಭ, 75 ರನ್ ಸೇರಿಸಿತು. ಯಶ್ ರಾಥೋಡ್ 54 ರನ್ ಗಳಿಸಿದರು. ಶಿವಂ ದುಬೆ 5 ವಿಕೆಟ್ ಕಿತ್ತರು. ಬಳಿಕ ಬ್ಯಾಟಿಂಗ್ ಆರಂಭಿಸಿದ ಮುಂಬೈ ವೈಫಲ್ಯ ಅನುಭವಿಸಿತು. ಸ್ಟಾರ್ ಆಟಗಾರರಾದ ಅಜಿಂಕ್ಯ ರಹಾನೆ(18), ಸೂರ್ಯಕುಮಾರ್ (0), ಶಿವಂ ದುಬೆ(0) ಒಂದೇ ಓವರ್‌ನಲ್ಲಿ ಪಾರ್ಥ ರೇಖಡೆಗೆ ವಿಕೆಟ್ ಒಪ್ಪಿಸಿದರು. ಶಾರ್ದೂಲ್ ಠಾಕೂರ್ 37, ಸಿದ್ದೇಶ್ ಲಾಡ್ 35 ರನ್ ಸಿಡಿಸಿದರು. ಸದ್ಯ ಆಕಾಶ್ ಆನಂದ್ (ಔಟಾಗದೆ 67) ಹಾಗೂ ತನುಶ್ ಕೋಟ್ಯನ್ (ಔಟಾಗದೆ 5) ಕ್ರೀಸ್‌ನಲ್ಲಿದ್ದಾರೆ.
ಇಂದಿನಿಂದ ಮುಂಬೈ vs ವಿದರ್ಭ, ಗುಜರಾತ್ vs ಕೇರಳ ಸೆಮೀಸ್ ಫೈಟ್ ಆರಂಭ
ಇದಕ್ಕೂ ಮೊದಲು ಮೊದಲ ದಿನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವಿದರ್ಭ ಆರಂಭಿಕ ಆಘಾತ ಅನುಭವಿಸಿತು. ಅಥರ್ವ ತೈಡೆ ಕೇವಲ 4 ರನ್‌ಗೆ ವಿಕೆಟ್ ಒಪ್ಪಿಸಿದರು. ಆದರೆ ಧ್ರುವ್ ಶೋರೆ 109 ಎಸೆತಗಳಲ್ಲಿ 74, ದ್ಯಾನಿಶ್ ಮಲೇವಾರ್ 157 ಎಸೆತಗಳಲ್ಲಿ 79 ರನ್ ಸಿಡಿಸಿ ತಂಡವನ್ನು ಆಧರಿಸಿದರು. ದೇಸಿ ಟೂರ್ನಿಗಳಲ್ಲಿ ಅಬ್ಬರದ ಪ್ರದರ್ಶನ ಮುಂದುವರಿಸಿದ ಕರುಣ್ ನಾಯರ್ 70 ಎಸೆತಕ್ಕೆ 45 ರನ್ ಗಳಿಸಿ ಔಟಾದರು. ಕರುಣ್ ಹಾಗೂ ದ್ಯಾನಿಶ್ 4ನೇ ವಿಕೆಟ್‌ಗೆ 78 ರನ್ ಸಿಡಿಸಿದರು.
ಚಾಂಪಿಯನ್ಸ್ ಟ್ರೋಫಿಯಲ್ಲಿ ಫಾರ್ಮ್ ಮರಳಲು ಹಾತೊರೆಯುತ್ತಿದ್ದಾರೆ ಈ 7 ಕ್ರಿಕೆಟ್ ಸ್ಟಾರ್ಸ್!
ಅಜರುದ್ದೀನ್ 149: ಕೇರಳ 7ಕ್ಕೆ 418
ಅಹಮದಾಬಾದ್: ಗುಜರಾತ್ ವಿರುದ್ಧ ಸೆಮಿಫೈನಲ್‌ನಲ್ಲಿ ಕೇರಳ ದೊಡ್ಡ ಮೊತ್ತ ಕಲೆಹಾಕಿದೆ. ತಂಡ 2ನೇ ದಿನದಂತ್ಯಕ್ಕೆ 7 ವಿಕೆಟ್‌ಗೆ 418
ರನ್ ಗಳಿಸಿದೆ. ನಾಯಕ ಸಚಿನ್ ಬೇಬಿ 69 ರನ್ ಗಳಿಸಿ ಔಟಾದರು. ಆದರೆ 6ನೇ ವಿಕೆಟ್‌ಗೆ ಮೊಹಮ್ಮದ್ ಅಜರುದ್ದೀನ್ ಹಾಗೂ ಸಲ್ಮಾನ್ ನಿಜಾರ್ (202 ಎಸೆತದಲ್ಲಿ 52) 149 ರನ್ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು. ಅಜರುದ್ದೀನ್ 303 ಎಸೆತಗಳಲ್ಲಿ ಔಟಾಗದೆ 149 ರನ್ ಸಿಡಿಸಿದ್ದಾರೆ. ಇದು ಅವರ 2ನೇ ಪ್ರಥಮ ದರ್ಜೆ ಶತಕ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.