
ದುಬೈ(ಫೆ.18) ಬಿಸಿಸಿಐ, ಐಸಿಸಿ ಹಾಗೂ ಪಾಕ್ ಕ್ರಿಕೆಟ್ ಮಂಡಳಿ(ಪಿಸಿಬಿ) ನಡುವೆ ಭಾರೀ ತಿಕ್ಕಾಟಕ್ಕೆ ಕಾರಣವಾಗಿದ್ದ ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿಗೆ ಬುಧವಾರ(ಫೆ.19) ಚಾಲನೆ ಸಿಗಲಿದೆ. ಪಾಕಿಸ್ತಾನ ಹಾಗೂ ದುಬೈನ ಕ್ರೀಡಾಂಗಣಗಳು ವಿಶ್ವದ ಬಲಿಷ್ಠ ತಂಡಗಳ ನಡುವಿನ ಜಿದ್ದಾಜಿದ್ದಿನ ಹಣಾಹಣಿಗೆ ಸಜ್ಜಾಗಿವೆ.
ಈ ಬಾರಿ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ ಸೇರಿದಂತೆ ಒಟ್ಟು 8 ತಂಡಗಳು ಪಾಲ್ಗೊಳ್ಳಲಿದ್ದು, ಪಾಕ್‌ನ ಕರಾಚಿ, ರಾವಲ್ಪಿಂಡಿ ಹಾಗೂ ಲಾಹೋರ್, ಯುಎಇಯ ದುಬೈ ಕ್ರೀಡಾಂಗಣಗಳಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ. ಭಾರತ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದ್ದು, ಇತರೆಲ್ಲಾ ಪಂದ್ಯಗಳು ಪಾಕ್‌ನಲ್ಲಿ ಆಯೋಜನೆಗೊಳ್ಳಲಿವೆ.
ಉದ್ಘಾಟನಾ ಪಂದ್ಯದಲ್ಲಿ ಬುಧವಾರ ಹಾಲಿ ಚಾಂಪಿಯನ್ ಪಾಕಿಸ್ತಾನ ಹಾಗೂ ಮಾಜಿ ಚಾಂಪಿಯನ್ ನ್ಯೂಜಿಲೆಂಡ್ ಸೆಣಸಾಡಲಿವೆ. 2013ರ ಚಾಂಪಿಯನ್ ಭಾರತ ತಂಡ ಗುರುವಾರ ಬಾಂಗ್ಲಾದೇಶ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ 8 ಸೈನ್ಯ ಸಜ್ಜು; ಟೀಂ ಇಂಡಿಯಾ ವೀಕ್ನೆಸ್ ಏನು?
Bಟೂರ್ನಿ ಮಾದರಿ ಹೇಗೆ?:
Bಟೂರ್ನಿಯಲ್ಲಿರುವ 8 ತಂಡಗಳನ್ನು ತಲಾ 4 ತಂಡಗಳ 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಪ್ರತಿ ತಂಡ ಗುಂಪು ಹಂತದಲ್ಲಿ ಇತರ ತಂಡಗಳ ವಿರುದ್ಧ 1 ಬಾರಿ ಸೆಣಸಾಡಲಿವೆ. ಅಂದರೆ, ಪ್ರತಿ ತಂಡಕ್ಕೆ 3 ಪಂದ್ಯಗಳಿರಲಿವೆ. ಗುಂಪು ಹಂತದಲ್ಲಿ ಅಗ್ರ-2 ಸ್ಥಾನ ಪಡೆದ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಅಲ್ಲಿ ಗೆಲ್ಲುವ ತಂಡಗಳು ಫೈನಲ್‌ಗೇರಲಿವೆ.
ಭಾರತ ಫೈನಲ್‌ಗೇರಿದ್ರೆ ಪಂದ್ಯ ಲಾಹೋರ್‌ನಿಂದ ದುಬೈಗೆ ಶಿಫ್ಟ್
ಭಾರತ ಟೂರ್ನಿಯಲ್ಲಿ ತನ್ನ ಎಲ್ಲಾ ಪಂದ್ಯಗಳನ್ನು ದುಬೈ ಕ್ರೀಡಾಂಗಣದಲ್ಲಿ ಆಡಲಿದೆ. ಇತರೆಲ್ಲಾ ತಂಡಗಳ ಪಂದ್ಯಗಳು ಪಾಕ್‌ನ ಕ್ರೀಡಾಂಗಣಗಳಲ್ಲಿ ನಿಗದಿಯಾಗಿದೆ. ಸೆಮಿಫೈನಲ್ ಪಂದ್ಯಗಳಿಗೆ ದುಬೈ, ಲಾಹೋರ್ ಆತಿಥ್ಯ ವಹಿಸಲಿದೆ. ಭಾರತ ಸೆಮಿಫೈನಲ್‌ಗೇರಿದರೆ ಆ ಪಂದ್ಯ ದುಬೈನಲ್ಲಿ ನಡೆಯಲಿದ್ದು, ಮತ್ತೊಂದು ಸೆಮಿಫೈನಲ್ ಲಾಹೋರ್‌ನಲ್ಲಿ ನಡೆಯಲಿದೆ. ಇನ್ನು, ಭಾರತ ಫೈನಲ್‌ಗೇರಿದರೆ ಪಂದ್ಯ ಲಾಹೋರ್‌ನಿಂದ ದುಬೈಗೆ ಸ್ಥಳಾಂತರಗೊಳ್ಳಲಿದೆ. ಭಾರತ ಹೊರತುಪಡಿಸಿ ಇತರ ತಂಡಗಳು ಫೈನಲ್‌ಗೇರಿದರೆ ಪಂದ್ಯ ಲಾಹೋರ್‌ನಲ್ಲಿ ನಡೆಯಲಿದೆ.
‘ಎ’ ಗುಂಪು
ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಬಾಂಗ್ಲಾದೇಶ
‘ಬಿ ಗುಂಪು
ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ
ಪಂದ್ಯ ಆತಿಥ್ಯ ಹಾಗೂ ಆಸನ ಸಾಮರ್ಥ್ಯ
ಕರಾಚಿ: 30000 ಆಸನ ಸಾಮರ್ಥ್ಯ, 3: ಪಂದ್ಯ
ಲಾಹೋರ್: 34000ಆಸನ ಸಾಮರ್ಥ್ಯ, 5: ಪಂದ್ಯ
ರಾವಲ್ಪಿಂಡಿ: 20000ಆಸನ ಸಾಮರ್ಥ್ಯ, 3: ಪಂದ್ಯ
ದುಬೈ: 25000ಆಸನ ಸಾಮರ್ಥ್ಯ, 5: ಪಂದ್ಯ
₹19.4 ಕೋಟಿ
ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡಕ್ಕೆ ₹19.4 ಕೋಟಿ ನಗದು ಬಹುಮಾನ ಸಿಗಲಿದೆ.
₹9.72 ಕೋಟಿ
ಈ ಬಾರಿ ರನ್ನರ್-ಅಪ್ ತಂಡ ₹9.72 ಕೋಟಿ ಮೊತ್ತ ತನ್ನದಾಗಿಸಿಕೊಳ್ಳಲಿದೆ.
ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿನ ಸ್ಮರಣೀಯ ಇನ್ನಿಂಗ್ಸ್‌ಗಳಿವು!
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.