ಇಲ್ಲಿದೆ ಚಾಂಪಿಯನ್ಸ್ ಟ್ರೋಫಿ ಸಂಪೂರ್ಣ ವೇಳಾಪಟ್ಟಿ, ಭಾರತದ ಪಂದ್ಯ ಯಾವಾಗ? ಎಲ್ಲಿ?

Published : Feb 18, 2025, 03:14 PM ISTUpdated : Feb 18, 2025, 06:40 PM IST
ಇಲ್ಲಿದೆ ಚಾಂಪಿಯನ್ಸ್ ಟ್ರೋಫಿ ಸಂಪೂರ್ಣ ವೇಳಾಪಟ್ಟಿ, ಭಾರತದ ಪಂದ್ಯ ಯಾವಾಗ? ಎಲ್ಲಿ?

ಸಾರಾಂಶ

ಚಾಂಪಿಯನ್ಸ್ ಟ್ರೋಫಿಯ ಸಂಪೂರ್ಣ ವೇಳಾಪಟ್ಟಿ, ಭಾರತದ ಪಂದ್ಯದ ದಿನಾಂಕ, ಸಮಯ, ನೇರಪ್ರಸಾರ, ಲೈವ್‌ಸ್ಟ್ರೀಮ್ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ. 

ದುಬೈ(ಫೆ.18) ಚಾಂಪಿಯನ್ಸ್‌ ಟ್ರೋಫಿ ಫೆಬ್ರವರಿ 19 ರಿಂದ ಆರಂಭಗೊಳ್ಳುತ್ತಿದೆ. ಪಾಕಿಸ್ತಾನ ಆಯೋಜಿಸುತ್ತಿರುವ ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಹಲವು ಕಾರಣಗಳಿಂದ ಕುತೂಹಲ ಕೆರಳಿಸಿದೆ. ಫೈನಲ್ ಪಂದ್ಯ ಮಾರ್ಚ್ 9 ರಂದು ನಡೆಯಲಿದೆ. ಭದ್ರತೆ, ಗಡಿ, ಭಯೋತ್ಪಾದಕತೆ ಸೇರಿದಂತೆ ಹಲವು ಕಾರಣಗಳಿಂದ ಭಾರತ ತಂಡ ಪಾಕಿಸ್ತಾನಕ್ಕೆ ಪ್ರವಾಸ ಮಾಡುತ್ತಿಲ್ಲ. ಹೀಗಾಗಿ ಭಾರತದ ಪಂದ್ಯಗಳು ದುಬೈನಲ್ಲಿ ಆಯೋಜನೆಗೊಂಡಿದೆ. 

ನೇರಪ್ರಸಾರ
ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ನೇರ ಪ್ರಸಾರ ಮಾಡಲಿದೆ.
ಜಿಯೋಹಾಟ್‌ಸ್ಟಾರ್ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಮಾಡಲಿದೆ.

ನಾಳೆಯಿಂದ ಚಾಂಪಿಯನ್ಸ್ ಟ್ರೋಫಿ ಹೋರಾಟ, ಯಾವ ಗುಂಪಿನಲ್ಲಿದೆ ಭಾರತ?

ಪ್ರತಿ ಬಾರಿಯಂತೆ ಈ ಸಲವೂ 8 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ಇಂಗ್ಲೆಂಡ್‌, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ಕಣದಲ್ಲಿವೆ. ಮಿನಿ ವಿಶ್ವಕಪ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್‌ಗಳಾದ ವೆಸ್ಟ್‌ಇಂಡೀಸ್‌ ಹಾಗೂ ಶ್ರೀಲಂಕಾ ತಂಡಗಳಿಲ್ಲ. ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

ಚಾಂಪಿಯನ್ಸ್ ಟ್ರೋಫಿ 2025 ವೇಳಾಪಟ್ಟಿ

ಪಾಕಿಸ್ತಾನ-ನ್ಯೂಜಿಲೆಂಡ್‌ ಫೆ.19 ಕರಾಚಿ
ಭಾರತ-ಬಾಂಗ್ಲಾದೇಶ ಫೆ.20 ದುಬೈ
ಅಫ್ಘಾನಿಸ್ತಾನ-ದ.ಆಫ್ರಿಕಾ ಫೆ.21 ಕರಾಚಿ
ಆಸ್ಟ್ರೇಲಿಯಾ-ಇಂಗ್ಲೆಂಡ್‌ ಫೆ.22 ಲಾಹೋರ್‌
ಭಾರತ-ಪಾಕಿಸ್ತಾನ ಫೆ.23 ದುಬೈ
ಬಾಂಗ್ಲಾ-ನ್ಯೂಜಿಲೆಂಡ್ ಫೆ.24 ರಾವಲ್ಪಿಂಡಿ
ಆಸ್ಟ್ರೇಲಿಯಾ-ದ.ಆಫ್ರಿಕಾ ಫೆ.25 ರಾವಲ್ಪಿಂಡಿ
ಅಫ್ಘಾನಿಸ್ತಾನ-ಇಂಗ್ಲೆಂಡ್‌ ಫೆ.26 ಲಾಹೋರ್‌
ಪಾಕಿಸ್ತಾನ-ಬಾಂಗ್ಲಾ ಫೆ.27 ರಾವಲ್ಪಿಂಡಿ
ಆಫ್ಘನ್‌-ಆಸ್ಟ್ರೇಲಿಯಾ ಫೆ.28 ಲಾಹೋರ್‌
ದ.ಆಫ್ರಿಕಾ-ಇಂಗ್ಲೆಂಡ್‌ ಮಾ.1 ಕರಾಚಿ
ಭಾರತ-ನ್ಯೂಜಿಲೆಂಡ್‌ ಮಾ.2 ದುಬೈ

1ನೇ ಸೆಮಿಫೈನಲ್‌ ಮಾ.4 ದುಬೈ
2ನೇ ಸೆಮಿಫೈನಲ್‌ ಮಾ.5 ಲಾಹೋರ್‌
ಫೈನಲ್‌ ಮಾ.9 ಲಾಹೋರ್‌/ದುಬೈ

* ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 2.30ಕ್ಕೆ ಆರಂಭಗೊಳ್ಳುತ್ತಿದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಫಾರ್ಮ್‌ ಮರಳಲು ಹಾತೊರೆಯುತ್ತಿದ್ದಾರೆ ಈ 7 ಕ್ರಿಕೆಟ್ ಸ್ಟಾರ್ಸ್‌!
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ