ರಣಜಿ ಟ್ರೋಫಿ ಟೂರ್ನಿಗೆ ಇಂದಿನಿಂದ ಚಾಲನೆ ಸಿಕ್ಕಿದೆ. ಕರ್ನಾಟಕ ತಂಡವು ಮೊದಲ ಪಂದ್ಯದಲ್ಲಿ ಮಧ್ಯ ಪ್ರದೇಶವನ್ನು ಎದುರಿಸುತ್ತಿದೆ
ಇಂದೋರ್: ಹಲವು ಖ್ಯಾತ ಕ್ರಿಕೆಟಿಗರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಭವಿಷ್ಯ ನಿರ್ಧರಿಸುವ ಹಾಗೂ ಯುವ ಕ್ರಿಕೆಟಿಗರಿಗೆ ಭಾರತ ತಂಡದ ಪಾದಾರ್ಪಣೆಗೆ ದಾರಿ ತೋರಿಸುವ 2024-25ರ ಋತುವಿನ ರಣಜಿ ಟ್ರೋಫಿ ದೇಸಿ ಕ್ರಿಕೆಟ್ ಟೂರ್ನಿಗೆ ಶುಕ್ರವಾರ ಚಾಲನೆ ಸಿಕ್ಕಿದೆ. ಕರ್ನಾಟಕ ಸೇರಿದಂತೆ ಒಟ್ಟು 32 ಎಲೈಟ್ ತಂಡಗಳ ನಡುವಿನ ಮಹಾ ಹಣಾಗಣಿಗೆ ದೇಶದ ವಿವಿಧ ನಗರಗಳು ಆತಿಥ್ಯ ವಹಿಸಲಿವೆ.
ಮಯಾಂಕ್ ಅಗರ್‌ವಾಲ್ ನಾಯಕತ್ವದಲ್ಲಿ ಕಣಕ್ಕಿಳಿದಿರುವ 8 ಬಾರಿ ಚಾಂಪಿಯನ್ ಕರ್ನಾಟಕ ತಂಡ ಮಧ್ಯಪ್ರದೇಶ ವಿರುದ್ದ ದಿಟ್ಟ ಆರಂಭ ಪಡೆದಿದೆ. ಈ ಪಂದ್ಯಕ್ಕೆ ಪಂದ್ಯಕ್ಕೆ ಇಂದೋರ್ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಮಧ್ಯ ಪ್ರದೇಶ ಎದುರು ಟಾಸ್ ಗೆದ್ದ ಕರ್ನಾಟಕ ತಂಡವು ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡಿದ ಪ್ರಸಿದ್ಧ್ ಕೃಷ್ಣ, ಮಧ್ಯ ಪ್ರದೇಶ ತಂಡವು ಖಾತೆ ತೆರೆಯುವ ಮುನ್ನವೇ ವಿಕೆಟ್ ಕೀಪರ್ ಬ್ಯಾಟರ್ ಹಿಮಾಂಶು ಮಂತ್ರಿ ಅವರನ್ನು ಎಲ್‌ಬಿ ಬಲೆಗೆ ಕೆಡಹುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಮಧ್ಯ ಪ್ರದೇಶ ತಂಡವು ಒಂದು ವಿಕೆಟ್ ಕಳೆದುಕೊಂಡು 32 ರನ್ ಗಳಿಸಿದೆ.
undefined
ಪಾಕ್ ಎದುರು ಬ್ರೂಕ್ ತ್ರಿಶತಕ, ರೂಟ್ ದ್ವಿಶತಕ: ಇಂಗ್ಲೆಂಡ್ 823
ಇನ್ನು ಈ ಬಾರಿ ಟೂರ್ನಿಯಲ್ಲಿ ತಲಾ 8 ತಂಡಗಳ 4 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಪ್ರತಿ ತಂಡಗಳು ಗುಂಪಿನ ಇತರ 7 ತಂಡಗಳ ವಿರುದ್ಧ ಒಮ್ಮೆ ಆಡಲಿದೆ. ಗುಂಪು ಹಂತದ ಪಂದ್ಯಗಳ ಮುಕ್ತಾಯಕ್ಕೆ ಅಗ್ರ-2 ಸ್ಥಾನ ಪಡೆಯುವ ತಂಡಗಳು ಕ್ವಾರ್ಟ‌್ರಫೈನಲ್ ಪ್ರವೇಶಿಸಲಿವೆ. ಟೂರ್ನಿಯ ಗುಂಪು ಹಂತದ ಪಂದ್ಯಗಳು 2025 ರ ಫೆ.2ರಂದು ಕೊನೆಗೊಳ್ಳಲಿದೆ. ಕ್ವಾರ್ಟರ್ ಫೈನಲ್ ಫೆ.8ರಿಂದ, ಸೆಮಿಫೈನಲ್ ಫೆ.17ರಿಂದ, ಫೈನಲ್ ಫೆ.26ರಿಂದ ಮಾ.2ರ ವರೆಗೆ ನಡೆಯಲಿದೆ.
ಕಪಿಲ್ ದೇವ್ ನಾಯಕತ್ವದಲ್ಲಿ ಟೀಂ ಇಂಡಿಯಾ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದಿದ್ದೇ ರತನ್ ಟಾಟಾ ನೆರವಿನಿಂದ!
ನೀಗುತ್ತಾ ಕಪ್ ಬರ?
ಕರ್ನಾಟಕ ತಂಡ ದಶಕಗಳಿಂದಲೂ ರಣಜಿ ಟ್ರೋಫಿ ಬರ ಎದುರಿಸುತ್ತಿದೆ. ರಾಜ್ಯ ತಂಡ 2013-14 ಹಾಗೂ 2014-15 ರಲ್ಲಿ ಸತತವಾಗಿ 2 ಬಾರಿ ಚಾಂಪಿ ಯನ್ ಆಗಿತ್ತು. ಆ ಬಳಿಕ ನಡೆದ 8 ಋತುವಿನಲ್ಲಿ ಒಮ್ಮೆಯೂ ಕರ್ನಾಟಕ ಫೈನಲ್‌ಗೂ ಪ್ರವೇಶಿಸಿಲ್ಲ. ಕಳೆದ ವರ್ಷ ಕ್ವಾರ್ಟರ್ ಫೈನಲ್‌ನಲ್ಲಿ ಪರಾಭವಗೊಂಡಿದ್ದ ರಾಜ್ಯ ತಂಡ ಈ ಬಾರಿಯಾದರೂ ಪ್ರಶಸ್ತಿ ಗೆಲ್ಲುವ ಗೆಲ್ಲುವ ಕಾತರದಲ್ಲಿದೆ. ಮಯಾಂಕ್, ಮನೀಶ್ ಸೇರಿ ಪ್ರಮುಖ ಅನುಭವಿಗಳ ಜೊತೆ ಯುವ ಆಟಗಾರರೂ ತಂಡದಲ್ಲಿದ್ದಾರೆ.