22 ಗ್ರ್ಯಾನ್ ಸ್ಲಾಂ ಒಡೆಯ ರಾಫೆಲ್ ನಡಾಲ್ ಸ್ಪರ್ಧಾತ್ಮಕ ಟೆನಿಸ್ ಬದುಕಿಗೆ ವಿದಾಯ ಘೋಷಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಸ್ಪೇನ್: ಟೆನಿಸ್ ಜಗತ್ತು ಕಂಡ ದಿಗ್ಗಜ ಆಟಗಾರ, 22 ಟೆನಿಸ್ ಗ್ರ್ಯಾನ್ ಸ್ಲಾಂ ಒಡೆಯ ಸ್ಪೇನ್‌ನ ರಾಫೆಲ್ ನಡಾಲ್ ಇಂದು ಸ್ಪರ್ಧಾತ್ಮಕ ಟೆನಿಸ್ ವೃತ್ತಿಬದುಕಿಗೆ ವಿದಾಯ ಘೋಷಿಸಿದ್ದಾರೆ. ಕಿಂಗ್ ಆಫ್ ಕ್ಲೇ ಕೋರ್ಟ್ ಖ್ಯಾತಿಯ ನಡಾಲ್, ಭಾವನಾತ್ಮಕ ವಿಡಿಯೋ ಮೂಲಕ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಸ್ಪೇನ್ ಪರ ಡೇವಿಸ್ ಕಪ್ ಫೈನಲ್, ರಾಫೆಲ್ ನಡಾಲ್ ಆಡಲಿರುವ ಕಟ್ಟಕಡೆಯ ಸ್ಪರ್ಧಾತ್ಮಕ ಟೆನಿಸ್ ಪಂದ್ಯ ಎನಿಸಲಿದೆ. ಡೇವಿಸ್ ಕಪ್ ಫೈನಲ್ ಪಂದ್ಯವು ನವೆಂಬರ್‌ನಲ್ಲಿ ನಡೆಯಲಿದೆ. ರಾಫೆಲ್ ನಡಾಲ್ ಜಯಿಸಿದ 22 ಟೆನಿಸ್ ಗ್ರ್ಯಾನ್ ಸ್ಲಾಂ ಪೈಕಿ 14 ಗ್ರ್ಯಾನ್ ಸ್ಲಾಂಗಳು ಫ್ರೆಂಚ್ ಓಪನ್ ಟೂರ್ನಿಯಲ್ಲಿ ಜಯಿಸಿದ್ದಾಗಿದೆ.
ರಾಫೆಲ್ ನಡಾಲ್ ಇದುವರೆಗೂ ಒಟ್ಟು 92 ಎಟಿಪಿ ಸಿಂಗಲ್ಸ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಪೈಕಿ 36 ಮಾಸ್ಟರ್ಸ್ ಪ್ರಶಸ್ತಿಗಳಾಗಿರುವುದು ಇನ್ನೊಂದು ವಿಶೇಷ. ಇದಷ್ಟೇ ಅಲ್ಲದೇ ರಾಫೆಲ್ ನಡಾಲ್, ಸ್ಪೇನ್ ಪರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಟೆನಿಸ್ ಇತಿಹಾಸದಲ್ಲೇ ಸಿಂಗಲ್ಸ್ ವಿಭಾಗದಲ್ಲಿ ಗೋಲ್ಡನ್ ಗ್ರ್ಯಾನ್ ಸ್ಲಾಂ ಜಯಿಸಿದ ಕೇವಲ ಮೂರು ಆಟಗಾರರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಗೋಲ್ಡನ್ ಗ್ರ್ಯಾನ್ ಸ್ಲಾಂ ಅಂದರೆ ಟೆನಿಸ್ ಸಿಂಗಲ್ಸ್‌ನಲ್ಲಿ ಒಂದೇ ವರ್ಷದಲ್ಲಿ 4 ಗ್ರ್ಯಾನ್ ಸ್ಲಾಂ ಹಾಗೂ ಅದೇ ವರ್ಷ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದರೆ, ಅಂತಹ ಸಾಧನೆಯನ್ನು ಗೋಲ್ಡನ್ ಗ್ರ್ಯಾನ್ ಸ್ಲಾಂ ಎಂದು ಕರೆಯಲಾಗುತ್ತದೆ.
ರೋಹಿತ್ ಶರ್ಮಾ ನಿವೃತ್ತಿ ಬಗ್ಗೆ ತುಟಿಬಿಚ್ಚಿದ ಬಾಲ್ಯದ ಕೋಚ್ ದಿನೇಶ್ ಲಾಡ್!
Mil gracias a todos
Many thanks to all
Merci beaucoup à tous
Grazie mille à tutti
谢谢大家
شكرا لكم جميعا
תודה לכולכם
Obrigado a todos
Vielen Dank euch allen
Tack alla
Хвала свима
Gràcies a tots pic.twitter.com/7yPRs7QrOi
"ನಾನು ವೃತ್ತಿಪರ ಟೆನಿಸ್‌ಗೆ ವಿದಾಯ ಘೋಷಿಸುತ್ತಿದ್ದೇನೆ. ಕಳೆದ ಎರಡು ವರ್ಷಗಳಲ್ಲಿ ನಾನು ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೇನೆ. ನಿವೃತ್ತಿ ಎನ್ನುವುದು ಸಹಜವಾಗಿಯೇ ಒಂದು ಕಠಿಣ ನಿರ್ಧಾರ. ಒಂದಲ್ಲಾ ಒಂದು ದಿನ ಇದು ಆಗಲೇಬೇಕು. ಪ್ರತಿ ಆರಂಭಕ್ಕೂ ಒಂದು ಕೊನೆ ಇರಲೇಬೇಕು" ಎಂದು ರಾಫೆಲ್ ನಡಾಲ್ ಹೇಳಿಕೊಂಡಿದ್ದಾರೆ.