ಒಂದೇ ತಂಡದಲ್ಲಿ ಆಡುತ್ತಿದ್ದಾರೆ ಜೆನ್‌ಝಿ ರಾಹುಲ್ ದ್ರಾವಿಡ್ ಹಾಗೂ ವೀರೇಂದರ್ ಸೆಹ್ವಾಗ್, ಏನಿದು ಅಚ್ಚರಿ?

Published : Aug 27, 2026, 01:03 PM IST
Dravid Sehwag Sons Selected for India U19 Team

ಸಾರಾಂಶ

ರಾಹುಲ್ ದ್ರಾವಿಡ್ ಹಾಗೂ ವೀರೇಂದ್ರ ಸೆಹ್ವಾಗ್ ಮತ್ತೆ ಒಂದೇ ತಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಯಾಗಿ ಆಡಲಿದ್ದಾರೆ. ಆದರೆ ಇದು ಜೆನ್‌ಝಿ ಸೆಹ್ವಾಗ್ ಹಾಗೂ ದ್ರಾವಿಡ್. ಏನಿದು ಅಚ್ಚರಿ ನಡೆ, ಯಾವ ತಂಡ?

ನವದೆಹಲಿ (ಆ.27) ರಾಹುಲ್ ದ್ರಾವಿಡ್ ಹಾಗೂ ವೀರೇಂದರ್ ಸೆಹ್ವಾಗ್ ಕ್ರಿಕೆಟ್‌ಗೆ ವಿದಾಯ ಹೇಳಿ ಹಲವು ವರ್ಷಗಳು ಉರುಳಿದೆ. ಈ ಪೈಕಿ ಸೆಹ್ವಾಗ್ ತಮ್ಮದೆ ಸ್ಕೂಲ್, ಅಕಾಡೆಮಿಯಲ್ಲಿ ತೊಡಗಿಸಿಕೊಂಡರೆ ರಾಹುಲ್ ದ್ರಾವಿಡ್ ಕೋಚ್ ಆಗಿ ಗಮನಸೆಳೆದಿದ್ದರು. ದಿಗ್ಗಜ ದ್ರಾವಿಡ್ ಹಾಗೂ ಸೆಹ್ವಾಗ್ ಬ್ಯಾಟಿಂಗ್ ಹಲವು ದಾಖಲೆಗಳ ನಿರ್ಮಾಣಕ್ಕೂ ಕಾರಣವಾಗಿದೆ. ಇದೀಗ ಸೆಹ್ವಾಗ್ ಹಾಗೂ ದ್ರಾವಿಡ್ ಮತ್ತೆ ಒಂದೇ ತಂಡದಲ್ಲಿ ಆಡುತ್ತಿದ್ದಾರೆ. ಇಬ್ಬರು ಜೊತೆಯಾಗಿ ಕಣಕ್ಕಿಳಿಯುತ್ತಿದ್ದಾರೆ. ಹೌದು ಈ ಬಾರಿ ಜೆನ್‌ಝಿ ದ್ರಾವಿಡ್ ಹಾಗೂ ಸೆಹ್ವಾಗ್ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಮತ್ತೆ ಬ್ಯಾಟ್ ಹಿಡಿದು ಮೈದಾನಕ್ಕಿಳಿಯುತ್ತಿರುವುದು ರಾಹುಲ್ ದ್ರಾವಿಡ್ ಹಾಗೂ ವೀರೇಂದರ್ ಸೆಹ್ವಾಗ್ ಪುತ್ರರು. ಇಬ್ಬರು ದಿಗ್ಗಜರ ಪುತ್ರರು ಒಂದೇ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದು ಜೆನ್‌ಝಿ ದ್ರಾವಿಡ್ ಹಾಗೂ ಸೆಹ್ವಾಗ್. ದಿಗ್ಗಜರು ಟೀಂ ಇಂಡಿಯಾಗೆ ಆಡಿ ವಿದಾಯ ಹೇಳಿದ ಬಳಿಕ ಇದೀಗ ಇವರ ಪುತ್ರರು ಒಂದೇ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.

ಅಂಡರ್ 19 ತಂಡದಲ್ಲಿ ಇಬ್ಬರು ದಿಗ್ಗಜರ ಪುತ್ರರಿಗೆ ಸ್ಥಾನ

ರಾಹುಲ್ ದ್ರಾವಿಡ್ ಹಾಗೂ ವೀರೇಂದರ್ ಸೆಹ್ವಾಗ್ ಪುತ್ರರಿಬ್ಬರೂ ಭಾರತದ ಅಂಡರ್ 19 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಸರಣಿಗಾಗಿ ಭಾರತ ಆಯ್ಕೆ ಮಾಡಿದ ಅಂಡರ್ 19 ತಂಡದಲ್ಲಿ ಅನ್ವಯ್ ದ್ರಾವಿಡ್ ಹಾಗೂ ಆರ್ಯವೀರ್ ಸೆಹ್ವಾಗ್ ಸ್ಥಾನ ಪಡೆದಿದ್ದಾರೆ. ಜೆನ್‌ಝಿ ಕಿಡ್ ಇದೀಗ ಭಾರತ ಅಂಡರ್ 19 ತಂಡದಲ್ಲಿ ಸೆಹ್ವಾಗ್ ಹಾಗೂ ದ್ರಾವಿಡ್ ನೆನಪಿಸಲಿದ್ದಾರೆ.

ಸೆಪ್ಟೆಂಬರ್ 18 ರಿಂದ ಭಾರತ ಹಾಗೂ ಆಸ್ಟ್ರೇಲಿಯಾ ಅಂಡರ್ 19 ಸರಣಿ ನಡೆಯಲಿದೆ. ಮೂರು ಏಕದಿನ ಹಾಗಗೂ ಎರಡು ಬಹು ದಿನಗಳ ಪಂದ್ಯ ಸೇರಿದೆ. ಬಿಸಿಸಿಐ ಆಯ್ಕೆ ಸಮಿತಿ ಇತ್ತೀಚೆಗೆ ಸಭೆ ಸೇರಿ ಚರ್ಚೆ ನಡೆಸಿತು. ಇಂದು ಆಯ್ಕೆ ಸಮಿತಿ ಅಂಡರ್ 19 ತಂಡದ ಪಟ್ಟಿ ಘೋಷಿಸಿದೆ. ಈ ಪೈಕಿ ಮೂರು ಪಂದ್ಯಗಳ ಏಕದಿನ ಸರಣಿಗೆ ಅನ್ವಯ್ ದ್ರಾವಿಡ್ ಹಾಗೂ ಆರ್ಯವೀರ್ ಸೆಹ್ವಾಗ್ ಸ್ಥಾನ ಪಡೆದಿದ್ದಾರೆ. ಆದರೆ ಮಲ್ಟಿ ಡೇ ಪಂದ್ಯಕ್ಕೆ ಸ್ಥಾನ ಪಡೆದಿಲ್ಲ. ಅಂಡರ್ 19 ತಂಡವನ್ನು ಲಕ್ಷ್ಯ ರಾಯ್‌ಚಂದಾನಿ ಮುನ್ನಡೆಸಲಿದ್ದಾರೆ.

ಅಂಡರ್ 19 ಏಕದಿನ ತಂಡ

ಲಕ್ಷ್ಯ ರಾಯ್‌ಚಂದಾನಿ (ನಾಯಕ), ಯಶ್‌ಬರ್ದನ್ ಚೌಹಾನ್ (ಉಪನಾಯಕ), ರಜತ್ ಬಘೇಲ್ (ವಿಕೆಟ್‌ಕೀಪರ್), ಆರ್ಯವೀರ್ ಸೆಹ್ವಾಗ್, ವಿ.ಕೆ. ವಿನೀತ್, ಕುಶಾಗ್ರ ಓಝಾ, ಅರ್ಜುನ್ ರಾಜ್‌ಪುತ್, ಮನಲ್ ಚೌಹಾನ್, ಅನ್ವಯ್ ದ್ರಾವಿಡ್ (ವಿಕೆಟ್‌ಕೀಪರ್), ವಿ. ಯಶ್ವೀರ್, ರೋಹಿತ್ ಯಾದವ್, ಶಾವಿನ್ ವಿನೋಧ್, ಮೋಹಿತ್ ಉಲ್ವಾ, ಚಿಗುರುಪತಿ ವೆಂಕಟ, ಕಾವ್ಯ ಪಟೇಲ್.

ಅಂಡರ್ 19 ಮಲ್ಟಿ ಡೇ ತಂಡ

ಯಶ್‌ಬರ್ದನ್ ಚೌಹಾನ್ (ನಾಯಕ), ಲಕ್ಷ್ಯ ರಾಯ್‌ಚಂದಾನಿ (ಉಪನಾಯಕ), ಸಾಗರ್ ವಿರ್ಕ್, ಕುಶಾಗ್ರ ಓಝಾ, ಮನಲ್ ಚೌಹಾನ್, ಕುಶ್ ಪಟೇಲ್, ಮಾನವ್ ಕೃಷ್ಣ (ವಿಕೆಟ್‌ಕೀಪರ್), ಅಭಿಪ್ರಯ್ ಬಿಸ್ವಾಸ್ (ವಿಕೆಟ್‌ಕೀಪರ್), ರೋಹಿತ್ ಯಾದವ್, ಇಶಾನ್ ಓಂ, ಆಯಾನ್ ಅಕ್ರಮ್, ಪ್ರಣವ್ ರಾಗವೇಂದ್ರ, ಪ್ರಿಯಾನ್ಶು ಸಿಂಗ್, ಮೋಹಿತ್ ಉಲ್ವಾ, ಆರ್ಯನ್ ಯಾದವ್.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

W,W,W,W,W,W,W,W: ಖಾತೆಯನ್ನೇ ತೆರೆಯದ ​8 ಬ್ಯಾಟರ್ಸ್‌ ! ಕೇವಲ 35 ರನ್‌ಗಳಿಗೆ ಇಡೀ ತಂಡವೇ ಆಲೌಟ್..!
ಜೋಸ್ ಬಟ್ಲರ್ ವಿಶ್ವ ದಾಖಲೆ ಮುರಿದು ಮತ್ತೆ ನಂ.1 ಸ್ಥಾನಕ್ಕೇರಿದ ಕೀರನ್ ಪೊಲ್ಲಾರ್ಡ್..! ಟಿ20 ಕ್ರಿಕೆಟ್‌ನಲ್ಲಿ ದೈತ್ಯ ಕ್ರಿಕೆಟಿಗ ಅಗ್ರಸ್ಥಾನಕ್ಕೆ ಲಗ್ಗೆ