W,W,W,W,W,W,W,W: ಖಾತೆಯನ್ನೇ ತೆರೆಯದ ​8 ಬ್ಯಾಟರ್ಸ್‌ ! ಕೇವಲ 35 ರನ್‌ಗಳಿಗೆ ಇಡೀ ತಂಡವೇ ಆಲೌಟ್..!

Published : Aug 27, 2026, 11:55 AM IST
Cricket Score board

ಸಾರಾಂಶ

2026ರ ಮಹಿಳಾ ಕಾಂಟಿನೆಂಟಲ್ ಕಪ್ ಟೂರ್ನಿಯಲ್ಲಿ, ಟರ್ಕಿ ತಂಡವು ಆಸ್ಟ್ರಿಯಾ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಟರ್ಕಿಯ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಆಸ್ಟ್ರಿಯಾ ತಂಡವು ಕೇವಲ 35 ರನ್‌ಗಳಿಗೆ ಸರ್ವಪತನ ಕಂಡಿತು, ಇದರಲ್ಲಿ ಎಂಟು ಆಟಗಾರ್ತಿಯರು ಶೂನ್ಯಕ್ಕೆ ಔಟಾದರು. ಈ ಸುಲಭ ಗುರಿಯನ್ನು ಟರ್ಕಿ ತಂಡವು 5.3 ಓವರ್‌ಗಳಲ್ಲಿ ತಲುಪಿ ಗೆಲುವಿನ ನಗೆ ಬೀರಿತು.

ಬೆಂಗಳೂರು: 2026ರ ಮಹಿಳಾ ಕಾಂಟಿನೆಂಟಲ್ ಕಪ್ ಟೂರ್ನಿಯಲ್ಲಿ ಆಸ್ಟ್ರೀಯಾ ಎದುರು ಟರ್ಕಿ ಮಹಿಳಾ ತಂಡವು ದೊಡ್ಡ ಅಂತರದ ಗೆಲುವು ದಾಖಲಿಸುವ ಮೂಲಕ ಶುಭಾರಂಭ ಮಾಡಿದೆ. ಟರ್ಕಿ ತಂಡದ ಮಾರಕ ದಾಳಿಗೆ ತತ್ತರಿಸಿದ ಆಸ್ಟ್ರೀಯಾ ತಂಡವು ಕೇವಲ 8.1 ಓವರ್‌ಗಳಲ್ಲಿ 35 ರನ್‌ಗಳಿಗೆ ಸರ್ವಪತನ ಕಂಡಿತು. ಆಸ್ಟ್ರೀಯಾ ನೀಡಿದ ಸಾಧಾರಣ ಗುರಿಯನ್ನು ಟರ್ಕಿ ತಂಡವು ಅನಾಯಾಸವಾಗಿ ಗೆಲುವಿನ ದಡ ತಲುಪಿತು. ಆಸ್ಟ್ರೀಯಾದ ಗುರಿಯನ್ನು ಟರ್ಕಿ ಕೇವಲ 5.3 ಓವರ್‌ಗಳಲ್ಲಿ ಗುರಿ ಮುಟ್ಟಿತು. ಬನ್ನಿ ಈ ಪಂದ್ಯ ಹೇಗಿತ್ತು ಎನ್ನುವುದನ್ನು ವಿವರವಾಗಿ ನೋಡೋಣ.

ಆಸ್ಟ್ರೀಯಾದ ಎಂಟು ಬ್ಯಾಟರ್ಸ್‌ ಖಾತೆ ತೆರೆಯುವ ಮುನ್ನವೇ ಔಟ್!

ಟರ್ಕಿಯ ಮಾರಕ ದಾಳಿಯ ಎದುರು ಆಸ್ಟ್ರೀಯಾದ ಮಹಿಳಾ ಬ್ಯಾಟರ್ಸ್‌ ಬಳಿ ಉತ್ತರವೇ ಇರಲಿಲ್ಲ. ಆಸ್ಟ್ರೀಯಾ ಬ್ಯಾಟರ್ಸ್‌ ಸಂಪೂರ್ಣ ವೈಫಲ್ಯ ಅನುಭವಿಸಿದರು. ಟರ್ಕಿ ಬೌಲಿಂಗ್ ಹೇಗಿತ್ತು ಅಂದ್ರೆ ಆಸ್ಟ್ರೀಯಾದ ಎಂಟು ಬ್ಯಾಟರ್ ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು. ಆಸ್ಟ್ರೀಯಾದ ನಾಯಕಿ ಪ್ರಿಯಾ ಸಬು, ಆಶಿ ಚೋಪ್ರಾ, ಎಂ ಪಥಿರಂಗೆಲೆ, ಪ್ರವೀತಾ ಗಣೇಶನ್, ವೆರೆ ಪೋಲಿಚ್, ಪ್ರೀತಾ ಗಣೇಶನ್ ಹಾಗೂ ಅಂಜುಮನ್ ಹೀರಾ ಶೂನ್ಯ ಸುತ್ತಿ ವಿಕೆಟ್ ಒಪ್ಪಿಸಿದರು. ಇನ್ನು ಅಶ್ಮಾನ್ ಸೈಫಿ ಖಾತೆ ತೆರೆಯದೇ ಅಜೇಯರಾಗುಳಿದರು.

ಆಸ್ಟ್ರೀಯಾ ಪರ ಶ್ರಿಯಾ ರೆಡ್ಡಿ 8 ರನ್ ಗಳಿಸಿದ್ದೇ ತಂಡದ ಪರ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿಕೊಂಡಿತು. ಶೀತಲ್ ಭಾರದ್ವಾಜ್ ಐದು ರನ್ ಹಾಗೂ ಹಾದಿಯಾ ಸಿದ್ದಿಕಿ 3 ರನ್ ಗಳಿಸಿದರು. ಈ ಸಣ್ಣ ಕೊಡುಗೆ ತಂಡವನ್ನು ಸಾಧಾರಣ ಮೊತ್ತದಿಂದ ಪಾರು ಮಾಡಲು ಸಾಕಾಗಲಿಲ್ಲ. ಟರ್ಕಿ ಬೌಲರ್‌ಗಳು ನಿರಂತರವಾಗಿ ವಿಕೆಟ್ ಕಬಳಿಸುವ ಮೂಲಕ ಆಸ್ಟ್ರೀಯಾ ಬ್ಯಾಟರ್‌ಗಳ ಮೇಲೆ ಒತ್ತಡ ಹೇರುತ್ತಾ ಬಂದರು. ಟರ್ಕಿ ಪರ ಹಸೇರ್ ಸಿಲಿಕ್ ಕೇವಲ ಆರು ರನ್ ನೀಡಿ 4 ವಿಕೆಟ್ ಕಬಳಿಸುವ ಮೂಲಕ ಯಶಸ್ವಿ ಬೌಲರ್ ಎನಿಸಿಕೊಂಡರು. ಇನ್ನು ಟರ್ಕಿ ನಾಯಕಿ ಕುಬ್ರಾಖಾನ್ ವರ್ಸಿ ಎರಡು ಓವರ್‌ಗಳಲ್ಲಿ ಕೇವಲ ಐದು ರನ್ ನೀಡಿ ಮೂರು ಪ್ರಮುಖ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಇದರಲ್ಲಿ ಒಂದು ಮೇಡನ್ ಓವರ್ ಕೂಡಾ ಸೇರಿದೆ. ಇನ್ನುಳಿದಂತೆ ಎಝಿ ನೂರ್ ಕೆಲಿಕ್ ಒಂದು ವಿಕೆಟ್ ಪಡೆದರೆ, ಆಸ್ಟ್ರೀಯಾದ ಇಬ್ಬರು ಬ್ಯಾಟರ್ಸ್ ರನೌಟ್ ಆಗಿ ಪೆವಿಲಿಯನ್ ಹಾದಿ ಹಿಡಿದರು. ನಿರಂತರವಾಗಿ ಆಸ್ಟ್ರೀಯಾ ಬ್ಯಾಟರ್ಸ್ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ್ದರಿಂದ ಒಂದೂ ಒಳ್ಳೆಯ ಜತೆಯಾಟ ಮೂಡಿ ಬರಲು ಸಾಧ್ಯವಾಗಲಿಲ್ಲ.

ಸುಲಭ ಗೆಲುವು ದಾಖಲಿಸಿದ ಟರ್ಕಿ:

ಆಸ್ಟ್ರೀಯಾ ನೀಡಿದ್ದ 36 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಟರ್ಕಿ ತಂಡವು ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡು ಕೊಂಚ ಆರಂಭಿಕ ಆಘಾತ ಅನುಭವಿಸಿತು. ಆಸ್ಟ್ರೀಯಾ ಪರ ಎಂ ಪಥಿರಂಗೆಲೆ ಎರಡು ವಿಕೆಟ್ ಕಬಳಿಸುವ ಮೂಲಕ, ಟರ್ಕಿಗೆ ಆಘಾತ ನೀಡುವಲ್ಲಿ ಯಶಸ್ವಿಯಾದರು. ಆದರೆ ಮೂರನೇ ವಿಕೆಟ್‌ಗೆ ಟರ್ಕಿ ಪರ ಝರಾ ಆಂಡರ್ 13 ರನ್ ಹಾಗೂ ಮೆಲಿಕೆ ಬೈರಾಮ್ 11 ರನ್ ಸಿಡಿಸುವ ಮೂಲಕ ಯಾವುದೇ ಅಪಾಯವಿಲ್ಲದೇ ತಂಡವನ್ನು ಗೆಲುವಿನ ದಡ ಸೇರಿಸಿದರು. 36 ರನ್‌ಗಳ ಸುಲಭ ಗುರಿಯನ್ನು ಟರ್ಕಿ ಕೇವಲ ಎರಡು ವಿಕೆಟ್ ಕಳೆದುಕೊಂಡು 5.3 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತು. ಇದರೊಂದಿಗೆ ಮಹಿಳಾ ಕಾಂಟಿನೆಂಟಲ್ ಕಪ್ ಟೂರ್ನಿಯಲ್ಲಿ ಭರ್ಜರಿ ಶುಭಾರಂಭ ಮಾಡಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೋಸ್ ಬಟ್ಲರ್ ವಿಶ್ವ ದಾಖಲೆ ಮುರಿದು ಮತ್ತೆ ನಂ.1 ಸ್ಥಾನಕ್ಕೇರಿದ ಕೀರನ್ ಪೊಲ್ಲಾರ್ಡ್..! ಟಿ20 ಕ್ರಿಕೆಟ್‌ನಲ್ಲಿ ದೈತ್ಯ ಕ್ರಿಕೆಟಿಗ ಅಗ್ರಸ್ಥಾನಕ್ಕೆ ಲಗ್ಗೆ
ICC Test Rankings: ನಂಬರ್ ಒನ್ ಪಟ್ಟ ಕಳೆದುಕೊಂಡ ಬುಮ್ರಾ; 15 ವರ್ಷಗಳ ವೃತ್ತಿಜೀವನದಲ್ಲೇ ಮೊದಲ ಬಾರಿ ಅಗ್ರಸ್ಥಾನಕ್ಕೇರಿದ ಆಸೀಸ್ ವೇಗಿ