ಮೊದಲ ಸ್ಯಾಲರಿ ಕತೆ ಬಿಚ್ಚಿಟ್ಟ ಆರ್ ಅಶ್ವಿನ್!

Published : Nov 12, 2019, 09:22 PM IST
ಮೊದಲ ಸ್ಯಾಲರಿ ಕತೆ ಬಿಚ್ಚಿಟ್ಟ ಆರ್ ಅಶ್ವಿನ್!

ಸಾರಾಂಶ

ಟೀಂ ಇಂಡಿಯಾ ಸ್ಪಿನ್ನರ್ ಆರ್ ಅಶ್ವಿನ್ ಆರ್ ಅಶ್ವಿನ್ ತಮ್ಮ ಮೊದಲ ಸ್ಯಾರಿಯನ್ನು ಏನು ಮಾಡಿದರು. ಹಳೇ ನೆನಪನ್ನು ಅಶ್ವಿನ್ ಮೆಲಕು ಹಾಕಿದ್ದಾರೆ. ಆರ್ ಅಶ್ವಿನ್ ಮೊದಲ ಸ್ಯಾಲರಿ ವಿವರ ಇಲ್ಲಿದೆ.

ಇಂದೋರ್(ನ.12): ಟೀಂ ಇಂಡಿಯಾ ಸ್ಪಿನ್ನರ್ ಆರ್ ಅಶ್ವಿನ್ , ಬಾಂಗ್ಲಾದೇಶ ವಿರುದ್ದದ ಟೆಸ್ಟ್ ಸರಣಿಯಲ್ಲಿ ಮಿಂಚಲು ತಯಾರಿ ಆರಂಭಿಸಿದ್ದಾರೆ. ಇಂದೋರ್‌ನಲ್ಲಿ ಅಭ್ಯಾಸ ನಡೆಸುತ್ತಿರುವ ಅಶ್ವಿನ್ ತಮ್ಮ ಮೊದಲ ವೇತನವನ್ನು ಏನು ಮಾಡಿದರು ಅನ್ನೋದನ್ನು ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ಹರಿಣಗಳ ವಿರುದ್ಧ ಸ್ಪಿನ್ ಮೋಡಿ; ಕುಂಬ್ಳೆ ಸಾಲಿಗೆ ಸೇರಿದ ಅಶ್ವಿನ್!

ಸಾಮಾಜಿಕ ಜಾಲತಾಣದಲ್ಲಿ ಆಸ್ಕ್ ಅಶ್ವಿನ್ ಅಭಿಯಾನದಡಿ, ಅಭಿಮಾನಿಗಳು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಹೀಗೆ ಅಭಿಮಾನಿಯೋರ್ವ ಮೊದಲ ಸ್ಯಾಲರಿಯಲ್ಲಿ ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಉತ್ತರಿಸಿದ ಅಶ್ವಿನ್ ಮೊದಲ ಸ್ಯಾಲರಿಯನ್ನು  ತಾಯಿಗೆ ನೀಡಿದೆ ಎಂದು ಉತ್ತರಿಸಿದ್ದಾರೆ.

 

ಆರ್ ಅಶ್ವಿನ್ ನವೆಂಬರ್ 13 ರಂದು ವೆಡ್ಡಿಂಗ್ ಆ್ಯನಿವರ್ಸರಿ ಆಚರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಮತೊರ್ವ ಅಭಿಮಾನಿ ವೆಡ್ಡಿಂಗ್ ಆ್ಯನಿವರ್ಸರಿಗೆ ನಿಮ್ಮ ಪ್ಲಾನ್ ಏನು ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಉತ್ತರಿಸಿರುವ ಅಶ್ವಿನ್, ಇಂದೋರ್‌ನಲ್ಲಿ ಸಿಗೋಣ ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:ಅಶ್ವಿನ್, ಜಡೇಜಾಗೆ ಮೊದಲ ಆದ್ಯತೆ; ವರಸೆ ಬದಲಿಸಿದ ಕೊಹ್ಲಿ!

ಸೌತ್ ಆಫ್ರಿಕಾ ಟೆಸ್ಟ್ ಸರಣಿ ಬಳಿಕ ಇದೀಗ ಬಾಂಗ್ಲಾದೇಶ ವಿರುದ್ದದ ಟೆಸ್ಟ್ ಸರಣಿಗೆ ಸಜ್ಜಾಗಿರುವ ಅಶ್ವಿನ್ ನವೆಂಬರ್ 14 ರಿಂದ ಇಂದೋರ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ ಆಡಲಿದ್ದಾರೆ. ನವೆಂಬರ್ 22 ರಿಂದ ಕೋಲ್ಕತಾದಲ್ಲಿ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ನಡೆಯಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿ20 ವಿಶ್ವಕಪ್ ಟೂರ್ನಿಗೂ ಮೊದಲೇ ಭಾರತ ತಂಡದಲ್ಲಿ ದೊಡ್ಡ ಪ್ರಯೋಗದ ಸುಳಿವು ಬಿಚ್ಚಿಟ್ಟ ಸೂರ್ಯಕುಮಾರ್ ಯಾದವ್!
WPL 2026: ಹೊಸದಾಗಿ ಕ್ಯೂಟ್ ಫೋಟ್ ಶೇರ್ ಮಾಡಿದ RCB ಬ್ಯೂಟಿ ಲಾರೆನ್ ಬೆಲ್!