ಕೊಹ್ಲಿಗೆ ಮುಂದೈತೆ ತಲೆನೋವು; ರೋಹಿತ್ ಹೇಳಿಕೆಗೆ ಆಯ್ಕೆ ಸಮಿತಿ ಕಂಗಾಲು!

By Web Desk  |  First Published Nov 12, 2019, 5:05 PM IST

ಬಾಂಗ್ಲಾ ವಿರುದ್ದದ ಸರಣಿ ಗೆದ್ದ ಬೆನ್ನಲ್ಲೇ ನಾಯಕ ರೋಹಿತ್ ಶರ್ಮಾ ನೀಡಿದ ಹೇಳಿಕ ಸಾಕಷ್ಟು ಚರ್ಚೆಯಾಗುತ್ತಿದೆ. ನಾಯಕ ವಿರಾಟ್ ಕೊಹ್ಲಿಗೆ ತಲೆನೋವು ತಪ್ಪಿದ್ದಲ್ಲ ಎಂದು ರೋಹಿತ್ ಹೇಳಿಕೆ ಹಿಂದಿನ ಮರ್ಮವೇನು? ಇಲ್ಲಿದೆ ವಿವರ.


ಮುಂಬೈ(ನ.12): ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಲ್ಲಿಆರಂಭಿಕ ಹಿನ್ನಡೆ ಬಳಿಕ ಭರ್ಜರಿ ಕಮ್‌ಬ್ಯಾಕ್ ಮಾಡಿದ ರೋಹಿತ್ ಸೈನ್ಯ 2-1 ಅಂತರದಲ್ಲಿ ಸರಣಿ ಗೆದ್ದುಕೊಂಡಿತು. ಬಾಂಗ್ಲಾ ವಿರುದ್ದ ಯುವ ಆಟಗಾರರ ಪ್ರದರ್ಶನಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸರಣಿ ಗೆಲುವಿನ ಬಳಿಕ ರೋಹಿತ್ ಶರ್ಮಾ ನೀಡಿದ ಹೇಳಿಕೆ ಇದೀಗ  ಭಾರಿ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: 23 ಎಸೆತದಲ್ಲಿ ಅರ್ಧಶತಕ; 100ನೇ ಪಂದ್ಯದಲ್ಲಿ ರೋಹಿತ್ ದಾಖಲೆ!

Latest Videos

undefined

ನಾಗ್ಪುರದಲ್ಲಿನ 3ನೇ ಅಂತಿಮ ಟಿ20 ಪಂದ್ಯ ಗೆದ್ದು ಸರಣಿ ವಶಪಡಿಸಿಕೊಂಡ ಭಾರತ ಸಂಭ್ರಮ ಆಚರಿಸಿತು. ಬಳಿಕ ಸುದ್ದಿಗೋಷ್ಠಿ ನಡೆಸಿದ ನಾಯಕ ರೋಹಿತ್ ಶರ್ಮಾ, ಯುವ ಕ್ರಿಕೆಟಿಗರ ಪ್ರದರ್ಶನ ತೃಪ್ತಿ ನೀಡಿದೆ. ಅನುಭವಿ ಬೌಲರ್‌ಗಳ ಅನುಪಸ್ಥಿತಿಯಲ್ಲಿ ದೀಪಕ್ ಚಹಾರ್, ಯಜುವೇಂದ್ರ ಚಹಾಲ್, ಶಿವಂ ದುಬೆ, ಖಲೀಲ್ ಅಹಮ್ಮದ್ ಪ್ರದರ್ಶನದಿಂದ ತಂಡ ಸರಣಿ ಗೆದ್ದಿದೆ ಎಂದರು. ಇಷ್ಟೇ ಅಲ್ಲ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಆಯ್ಕೆ ಸಮಿತಿಗೆ ತಲೆನೋವು ತಪ್ಪಿದ್ದಲ್ಲ ಎಂದಿದ್ದಾರೆ.

ಇದನ್ನೂ ಓದಿ: ಕೊಹ್ಲಿ ಹುಟ್ಟು ಹಬ್ಬಕ್ಕೆ ಶುಭಕೋರಿದ ರೋಹಿತ್; ಗೆಳೆತನ ಹೀಗೆ ಇರಲಿ ಎಂದ ಫ್ಯಾನ್ಸ್!

ಯುವ ಕ್ರಿಕೆಟಿಗರ ಪ್ರದರ್ಶನದಿಂದ 2020ರ ಟಿ20 ವಿಶ್ವಕಪ್ ಟೂರ್ನಿ ಆಯ್ಕೆ ಸವಾಲಾಗಿ ಪರಿಣಮಿಸಲಿದೆ. ನಾಯಕ ಕೊಹ್ಲಿ ಹಾಗೂ ಆಯ್ಕೆ ಸಮಿಗೆ ತಂಡದ ಆಯ್ಕೆ ತಲೆನೋವಾಗಲಿದೆ ಎಂದಿದ್ದಾರೆ. ಕಾರಣ ಬೌಲಿಂಗ್ ವಿಭಾಗಲ್ಲಿ ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಹಾಗೂ ಭುವನೇಶ್ವರ್ ಕುಮಾರ್ ಖಾಯಂ ಸ್ಥಾನ ಪಡೆದುಕೊಂಡಿದ್ದಾರೆ. ಇದೀಗ ಯುವ ಬೌಲರ್‌ಗಳ ಪ್ರದರ್ಶನದಿಂದ ತಂಡದ ಆಯ್ಕೆ ಕಗ್ಗಂಟಾಗಲಿದೆ ಎಂದಿದ್ದಾರೆ.
 

click me!