ಮಕ್ಕಳೊಂದಿಗೆ ಗಲ್ಲಿ ಕ್ರಿಕೆಟ್ ಆಡಿದ ವಿರಾಟ್!

Published : Nov 12, 2019, 08:09 PM IST
ಮಕ್ಕಳೊಂದಿಗೆ ಗಲ್ಲಿ ಕ್ರಿಕೆಟ್ ಆಡಿದ ವಿರಾಟ್!

ಸಾರಾಂಶ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟೀಂ ಇಂಡಿಯಾ ಕ್ರಿಕೆಟಿಗರ ಜೊತೆಗಿನ ಅಭ್ಯಾಸಕ್ಕೆ ಚಕ್ಕರ್ ಹಾಕಿ ಮಕ್ಕಳ ಜೊತೆ ಗಲ್ಲಿ ಕ್ರಿಕೆಟ್ ಆಡಿದ್ದಾರೆ. ಕೊಹ್ಲಿ ವಿಡಿಯೋ ವೈರಲ್ ಆಗಿದೆ.

ಇಂದೋರ್(ನ.12): ಟೀಂ ಇಂಡಿಯಾ ವಿರಾಟ್ ಕೊಹ್ಲಿ ಬಾಂಗ್ಲಾದೇಶ ವಿರುದ್ದದ ಟೆಸ್ಟ್ ಸರಣಿಗಾಗಿ ಇಂಧೋರ್‌ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿದ್ದ ಕೊಹ್ಲಿ, ಇದೀಗ ಟೀಂ ಇಂಡಿಯಾ ಸೇರಿಕೊಂಡಿದ್ದಾರೆ. ಆದರೆ ಕೊಹ್ಲಿ ಅಭ್ಯಾಸ ಟೀಂ ಇಂಡಿಯಾ ಕ್ರಿಕೆಟಿಗರ ಜೊತೆ ಮಾಡಿಲ್ಲ. ಬದಲಾಗಿ ಮಕ್ಕಳ ಜೊತೆ ಇಂದೋರ್ ಗಲ್ಲಿಯಲ್ಲಿ ಕ್ರಿಕೆಟ್ ಆಡಿ ಗಮನಸೆಳೆದಿದ್ದಾರೆ.

ಇದನ್ನೂ ಓದಿ: ವಿದಾಯದ ನಂತರದ ಪ್ಲಾನ್ ಬಹಿರಂಗಪಡಿಸಿದ ವಿರಾಟ್ ಕೊಹ್ಲಿ!

ಇಂದೋರ್ ಕಾಂಪ್ಲೆಕ್ಸ್ ಒಂದರಲ್ಲಿ ಕೊಹ್ಲಿ ಚಿಕ್ಕ ಮಕ್ಕಳ ಜೊತೆ ಕಾಣಿಸಿಕೊಂಡಿದ್ದಾರೆ.  ಫ್ಲ್ಯಾಟ್ ಬ್ಯಾಟ್ ಹಿಡಿದು ಟೆನಿಸ್ ಬಾಲ್ ಎದುರಿಸಿದ್ದಾರೆ. ಮಕ್ಕಳ ಎಸೆತಕ್ಕೆ ಕೊಹ್ಲಿ ಭರ್ಜರಿ ಶಾಟ್ ಪ್ರಯೋಗಿಸಿದ್ದಾರೆ. ಬಳಿಕ ಮಕ್ಕಳಿಗೆ ಕೊಹ್ಲಿ ಬೌಲಿಂಗ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ಇದನ್ನೂ ಓದಿ: ರೈನಾಗೆ ಭವೇಶ್ ಎಂದ ಕೊಹ್ಲಿ; ಸೀಕ್ರೆಟ್ ಬಹಿರಂಗ ಪಡಿಸಲು ಫ್ಯಾನ್ಸ್ ಆಗ್ರಹ!.

ಜಾಹೀರಾತಿ ಶೂಟಿಂಗ್‌ಗಾಗಿ ವಿರಾಟ್ ಕೊಹ್ಲಿ ಮಕ್ಕಳ ಜೊತೆ ಕ್ರಿಕೆಟ್ ಆಡಿದ್ದಾರೆ. ಜಾಹೀರಾತು ಹಾಗೂ ಶೂಟಿಂಹ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಬಾಂಗ್ಲಾದೇಶ ವಿರುದ್ದದ ಟೆಸ್ಟ್ ಸರಣಿಗೆ ಟೀಂ  ಇಂಡಿಯಾ ಈಗಾಗಲೇ ಕಸರತ್ತು ಆರಂಭಿಸಿದೆ.  ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ನವೆಂಬರ್ 14 ರಿಂದ ಇಂದೋರ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ ಆಡಲಿದೆ. 

ನವೆಂಬರ್ 22 ರಿಂದ ಕೋಲ್ಕತಾದಲ್ಲಿ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಆಡಲಿದೆ. ಈ ಪಂದ್ಯ ಹಗಲು ರಾತ್ರಿ ಟೆಸ್ಟ್ ಆಯೋಜಿಸಲಾಗಿದೆ. ಈ ಮೂಲಕ ಇದೇ ಮೊದಲ ಭಾರಿಗೆ ಭಾರತ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯ ಆಯೋಜಿಸುತ್ತಿದೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ ಮಾತ್ರವಲ್ಲ, ಪಾಕಿಸ್ತಾನದಲ್ಲೂ ಸಂಜು ಸ್ಯಾಮ್ಸನ್ ಹವಾ: ವಿರಾಟ್ ಕೊಹ್ಲಿ ಬಳಿಕ ಸಂಜುಗೆ ಪಾಕ್ ಆಟಗಾರರು ಫಿದಾ!
ಟಿ20 ವಿಶ್ವಕಪ್ ಸೋತ ಪಾಕ್ ಆಟಗಾರರಿಗೆ ಪಿಸಿಬಿ ಶಾಕ್; ಪ್ರತಿಯೊಬ್ಬ ಪ್ಲೇಯರ್‌ಗೂ ಕೋಟ್ಯಂತರ ದಂಡ!