ಪಾಕಿಸ್ತಾನದ ಕ್ಯಾತೆ ಶುರು, ಚಾಂಪಿಯನ್ಸ್ ಟ್ರೋಫಿಗೆ ಭಾರತ ಆಗಮಿಸದಿದ್ದರೆ ಪರಿಹಾರ ನೀಡಿ!

By Suvarna NewsFirst Published Nov 27, 2023, 10:49 AM IST
Highlights

ಐಸಿಸಿ ವಿಶ್ವಕಪ್ ಟೂರ್ನಿಯನ್ನು ಭಾರತ ಯಶಸ್ವಿಯಾಗಿ ಆಯೋಜಿಸಿದೆ. ಇದೀಗ  2025ರ ಚಾಂಪಿಯನ್ಸ್ ಟ್ರೋಫಿ ಆಯೋಜನೆಗೆ ಪಾಕಿಸ್ತಾನ ಸಜ್ಜಾಗುತ್ತಿದೆ. ಆದರೆ ಭಾರತ ತಂಡ ಪಾಕ್ ಪ್ರವಾಸ ಸಾಧ್ಯತೆಗಳಿಲ್ಲ. ಹೀಗಾಗಿ ಸಾವಿರಾರು ಕೋಟಿ ರೂಪಾಯಿ ಆದಾಯ ಬಂದ್ ಆಗಲಿದೆ. ಕೆರಳಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭಾರತ ತಂಡ ಪಾಕ್ ಪ್ರವಾಸ ಮಾಡದಿದ್ದರೆ ಪರಿಹಾರ ನೀಡಬೇಕು ಎಂದು ಎಚ್ಚರಿಕೆ ನೀಡಿದೆ.
 

ಇಸ್ಲಾಮಾಬಾದ್(ನ.27) ಏಷ್ಯಾಕಪ್ ಸೇಡು ತೀರಿಸಿಕೊಳ್ಳಲು ಐಸಿಸಿ ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ತಂಡ ಭಾರತ ಪ್ರವಾಸ ಮಾಡಲ್ಲ ಅನ್ನೋ ವಾದ ಮುಂದಿಟ್ಟು ಸೋತು ಹೋಗಿತ್ತು. ಬೇರೆ ದಾರಿ ಕಾಣದೆ ಪಾಕ್ ತಂಡ ಭಾರತ ಪ್ರವಾಸ ಮಾಡಿತ್ತು.  ಇತ್ತ ಬಿಸಿಸಿಐ ಬರೋಬ್ಬರಿ 22,000 ಕೋಟಿ ರೂಪಾಯಿ ಆದಾಯಗಳಿಸಿತ್ತು. ಇದೀಗ 2025ರ ಚಾಂಪಿಯನ್ಸ್ ಟ್ರೋಫಿ ಆಯೋಜಿಸಲು ಪಾಕಿಸ್ತಾನ ಸಜ್ಜಾಗಿದೆ. ಆದರೆ ಕನಿಷ್ಠ 15,000 ಕೋಟಿ ಆದಾಯ ನಿರೀಕ್ಷೆಯಲ್ಲಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಆತಂಕ ಶುರುವಾಗಿದೆ. ಏಷ್ಯಾಕಪ್ ಟೂರ್ನಿ ರೀತಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕೈತಪ್ಪುವ ಭೀತಿ ಎದುರಾಗಿದೆ. ಇದಕ್ಕೆ ಕಾರಣ ಭಾರತ. ಪಾಕಿಸ್ತಾನದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸಿದರೆ ಭಾರತ ಪ್ರವಾಸ ಮಾಡುವ ಸಾಧ್ಯತೆಗಳಿಲ್ಲ. ಹೀಗಾದರೆ ಟೂರ್ನಿ ಬೇರೆಡೆಗೆ ಸ್ಥಳಾಂತರಗೊಳ್ಳುವ ಸಾಧ್ಯತೆಗಳೇ ಹೆಚ್ಚು. ಇದಕ್ಕೂ ಮೊದಲೇ ಪಾಕಿಸ್ತಾನ ಇದೀಗ ಎಚ್ಚರಿಕೆ ನೀಡಿದೆ. ಭಾರತ ಪ್ರವಾಸ ಮಾಡದಿದ್ದರೆ, ಇದಕ್ಕೆ ತಕ್ಕ ಪರಿಹಾರ ನೀಡಬೇಕು ಎಂದು ಎಚ್ಚರಿಕೆ ನೀಡಿದೆ.

2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಪಾಕಿಸ್ತಾನ ಆಯೋಜಿಸಲಿದೆ ಎಂದು ಘೋಷಿಸಿದೆ. ಆದರೆ ಪಾಕಿಸ್ತಾನ ಜೊತೆ ಐಸಿಸಿ ಆತಿಥ್ಯದ ಒಪ್ಪಂದಕ್ಕೆ ಇನ್ನೂ ಸಹಿ ಹಾಕಿಲ್ಲ. ಇದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆತಂಕ ಹೆಚ್ಚಿಸಿದೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿ ಪಾಕಿಸ್ತಾನದಲ್ಲಿ ಆಯೋಜನೆಗೊಂಡರೆ ಕನಿಷ್ಠ 15,000 ಕೋಟಿ ರೂಪಾಯಿ ಆದಾಯಗಳಿಸಲಿದೆ. ಆದರೆ ಭಾರತ ತಂಡ ಪಾಕಿಸ್ತಾನ ಪ್ರವಾಸ ಮಾಡದಿದ್ದರೆ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಲಿದೆ. ಇತ್ತ ಭಾರತ ತಂಡ ಪಾಕ್ ಪ್ರವಾಸ ನಿರಾಕರಿಸಿದರೆ, ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಸ್ಥಳಾಂತರಗೊಳ್ಳುವ ಸಾಧ್ಯತೆಗಳಿವೆ. ಹೀಗಾದಲ್ಲಿ ಪಾಕಿಸ್ತಾನ ಸಂಪೂರ್ಣ ಆದಾಯ ನಷ್ಟವಾಗಲಿದೆ.

ಗುಜರಾತ್ ಟೈಟಾನ್ಸ್‌ಗೆ ಶಾಕ್, ರೀಟೈನ್ ಆದರೂ ಮುಂಬೈ ಇಂಡಿಯನ್ಸ್‌ಗೆ ಹಾರಿದ ಹಾರ್ದಿಕ್ ಪಾಂಡ್ಯ!

ಇದೇ ಕಾರಣಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಐಸಿಸಿಗೆ ಪತ್ರ ಬರೆದಿದೆ. ಭದ್ರತೆ ಹಾಗೂ ರಾಜಕೀಯ ಕಾರಣಕ್ಕಾಗಿ ಭಾರತ ತಂಡ ಪಾಕಿಸ್ತಾನ ಪ್ರವಾಸ ನಿರಾಕರಿಸಿದರೆ, ಅದಕ್ಕೆ ತಕ್ಕ ಪರಿಹಾರ ನೀಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದೆ. ಪಾಕಿಸ್ತಾನಕ್ಕೆ ಐಸಿಸಿ ರ್ಯಾಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ತಂಡಗಳು ಪ್ರವಾಸ ಮಾಡಿದೆ. ಯಾವ ತಂಡವೂ ಭದ್ರತೆ ಸಮಸ್ಯೆ ಎದುರಿಸಿಲ್ಲ. ಪಾಕಿಸ್ತಾನ ಭಾರತ ತಂಡಕ್ಕಾಗಿ ಹೆಚ್ಚುವರಿ ಭದ್ರತೆ ನೀಡಲಿದೆ. ಇನ್ನು ಪಾಕಿಸ್ತಾನ ಭದ್ರತೆಯಲ್ಲಿ ವಿಶ್ವಾಸವಿಲ್ಲದಿದ್ದರೆ, ಅಂತಾರಾಷ್ಟ್ರೀಯ ಭದ್ರತಾ ಏಜೆನ್ಸಿಗಳಿಂದಲೂ ಭದ್ರತೆ ನೀಡಲು ನಾವು ಸಿದ್ದ. ಆದರೆ ಈ ಕಾರಣಕ್ಕೆ ಭಾರತ ಪ್ರವಾಸ ನಿರಾಕರಿಸಿದೆ ದೊಡ್ಡ ಮೊತ್ತವನ್ನು ಐಸಿಸಿ ಪರಿಹಾರವಾಗಿ ನೀಡಬೇಕು ಎಂದು ವಾದ ಮುಂದಿಟ್ಟಿದೆ.

ಐಸಿಸಿ ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ತಂಡ ಭಾರತ ಪ್ರವಾಸ ಕೈಗೊಂಡಿದೆ. ಏಷ್ಯಾಕಪ್ ಟೂರ್ನಿಯನ್ನು ಪಾಕಿಸ್ತಾನದಿಂದ ಸ್ಥಳಾಂತರ ಮಾಡಲಾಗಿದೆ. ಆದರೆ ಚಾಂಪಿಯನ್ಸ್ ಟ್ರೋಫಿ ಈ ರೀತಿ ಮಾಡಲು ಪಾಕಿಸ್ತಾನ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.

IPL Retention: ಹರ್ಷಲ್, ಹೇಜಲ್‌ವುಡ್ ಹಸರಂಗಗೆ ಗೇಟ್‌ಪಾಸ್‌..! ಹರಾಜಿಗೆ 40 ಕೋಟಿ ಉಳಿಸಿಕೊಂಡ RCB
 

click me!