ಸ್ಫೋಟಕ ಬ್ಯಾಟಿಂಗ್ ಬಳಿಕ ಮಾರಕ ಬೌಲಿಂಗ್ ದಾಳಿ ಆಸ್ಟ್ರೇಲಿಯಾ ತಂಡಕ್ಕೆ ಶಾಕ್ ನೀಡಿತು. 236 ರನ್ ಬೃಹತ್ ರನ್ ಚೇಸ್ ಸಾಧ್ಯವಾಗಲಿಲ್ಲ. ಭಾರತದ ಅದ್ಭುತ ಬೌಲಿಂಗ್ ಪ್ರದರ್ಶನಕ್ಕೆ ಆಸ್ಟ್ರೇಲಿಯಾ 191 ರನ್ ಸಿಡಿಸಿ ಸೋಲಿಗೆ ಶರಣಾವಾಗಿದೆ.
ತಿರುವನಂತಪುರಂ(ನ.26) ಆಸ್ಟ್ರೇಲಿಯಾ ವಿರುದ್ದದ ಮೊದಲ ಪಂದ್ಯ ರೋಚಕ ಹೋರಾಟವಾದರೆ, ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ ಸಂಪೂರ್ಣ ಮೇಲುಗೈ ಸಾಧಿಸಿತ್ತು. ಬ್ಯಾಟಿಂಗ್ ಮೂಲಕ 235 ರನ್ ಸಿಡಿಸಿದರೆ, ಮಾರಕ ಬೌಲಿಂಗ್ ದಾಳಿ ಮೂಲಕ ಆಸ್ಟ್ರೇಲಿಯಾ ತಂಡವನ್ನು 191 ರನ್‌ಗೆ ಕಟ್ಟಿ ಹಾಕಿತು. ಈ ಮೂಲಕ 44 ರನ್ ಗೆಲುವು ದಾಖಲಿಸಿದ ಭಾರತ, ಸರಣಿಯಲ್ಲಿ 2-0 ಮುನ್ನಡೆ ಕಾಯ್ದುಕೊಂಡಿದೆ.
236 ರನ್ ಟಾರ್ಗೆಟ್ ಆರಂಭದಲ್ಲೇ ಆಸ್ಟ್ರೇಲಿಯಾ ತಂಡದ ಮೇಲೆ ತೀವ್ರ ಒತ್ತಡ ಹೇರಿತು. ಪ್ರತಿ ಎಸೆತದಲ್ಲೂ ರನ್ ಕಬಳಿಸಬೇಕಾದ ಅನಿವಾರ್ಯತೆಗೆ ಸಿಲುಕಿದ ಆಸ್ಟ್ರೇಲಿಯಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ಮುಂದಾಗಿತ್ತು. ಆದರೆ ಭಾರತದ ಬೌಲಿಂಗ್ ದಾಳಿ ಮುಂದೆ ಆಸ್ಟ್ರೇಲಿಯಾಗೆ ವಿಕೆಟ್ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮ್ಯಾಥ್ಯೂ ಶಾರ್ಟ್ ಹಾಗೂ ಸ್ಟೀವನ್ ಸ್ಮಿತ್ ಜೊತೆಯಾಟ 35 ರನ್‌ಗೆ ಅಂತ್ಯವಾಯಿತು. ಶಾರ್ಟ್ 19 ರನ್ ಸಿಡಿಸಿ ನಿರ್ಗಮಿಸಿದರು.
undefined
ಐಪಿಎಲ್ ಹರಾಜಿಗೂ ಮೊದಲು ಟ್ವಿಸ್ಟ್, 17.5 ಕೋಟಿ ರೂಗೆ ಕ್ಯಾಮರೂನ್ ಗ್ರೀನ್ ಖರೀದಿಸಿದ ಆರ್‌ಸಿಬಿ!
ಜೋಶ್ ಇಂಗ್ಲಿಸ್ ಕೇವಲ 2 ರನ್ ಸಿಡಿಸಿ ನಿರ್ಗಮಿಸಿದರು.2ನೇ ಟಿ20 ಪಂದ್ಯಕ್ಕೆ ತಂಡ ಸೇರಿಕೊಂಡ ಗ್ಲೆನ್ ಮ್ಯಾಕ್ಸ್‌ವೆಲ್ 12 ರನ್ ಸಿಡಿಸಿ ಔಟಾದರು. ಸ್ಟೀವ್ ಸ್ಮಿತ್ ಹೋರಾಟ 19 ರನ್‌ಗೆ ಅಂತ್ಯವಾಯಿತು. 58ರನ್‌ಗೆ ಆಸ್ಟ್ರೇಲಿಯಾ 4 ವಿಕೆಟ್ ಕಳೆದುಕೊಂಡಿತು. ಪ್ರಸಿದ್ಧ್ ಕೃಷ್ಣ ಹಾಗೂ ರವಿ ಬಿಶ್ನೋಯ್ ಬೌಲಿಂಗ್ ದಾಳಿಯಲ್ಲಿ ಆಸ್ಟ್ರೇಲಿಯಾ ತತ್ತರಿಸಿತು.
ಟಿಮ್ ಡೇವಿಡ್ ಹಾಗೂ ನಾಯಕ ಮ್ಯಾಥ್ಯೂ ವೇಡ್ ಜೊತೆಯಾಟದಲ್ಲಿ ಆಸ್ಟ್ರೇಲಿಯಾ ಚೇತರಿಸಿಕೊಂಡಿತು. ಆದರೆ ಜೊತೆಯಾಟ ಹೆಚ್ಚು ಹೊತ್ತು ಇರಲಿಲ್ಲ. ಡೇವಿಡ್ 37 ರನ್ ಸಿಡಿಸಿ ಔಟಾದರು. ಸೀನ್ ಅಬಾಟ್, ನತನ್ ಎಲ್ಲಿಸ್, ಆ್ಯಡಮ್ ಜಂಪಾ ರನ್ ಸಿಡಿಸಲಿಲ್ಲ. ನಾಯಕ ವೇಡ್ ಏಕಾಂಗಿ ಹೋರಾಟ ಆರಂಭಿಸಿದರು. ಅಷ್ಟರಲ್ಲಾಗಲೇ ಡೆತ್ ಓವರ್ ಆಗಮಿಸಿತ್ತು.
ಗುಜರಾತ್ ಟೈಟಾನ್ಸ್‌ಗೆ ಶಾಕ್, ರೀಟೈನ್ ಆದರೂ ಮುಂಬೈ ಇಂಡಿಯನ್ಸ್‌ಗೆ ಹಾರಿದ ಹಾರ್ದಿಕ್ ಪಾಂಡ್ಯ!
ಅಂತಿಮ 2 ಓವರ್‌ನಲ್ಲಿ ವೇಡ್ 4 ಸಿಕ್ಸರ್ ಹಾಗೂ ಒಂದು ಬೌಂಡರಿ ಸಿಡಿಸಿದರು. ಆದರೆ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಮ್ಯಾಥ್ಯೂ ವೇಡ್ ಅಜೇಯ 42 ರನ್ ಸಿಡಿಸಿದರು. ಆಸ್ಟ್ರೇಲಿಯಾ 9 ವಿಕೆಟ್ ಕಳೆದುಕೊಂಡು 191 ರನ್ ಸಿಡಿಸಿತು. ಇತ್ತ ಭಾರತ 44 ರನ್ ಗೆಲುವು ದಾಖಲಿಸಿತು.
ಪ್ರಸಿದ್ಧ ಕೃಷ್ಣ 3, ರವಿ ಬಿಶ್ನೋಯ್ 3, ಅರ್ಶದೀಪ್ ಸಿಂಗ್, ಮುಕೇಶ್ ಕುಮಾರ್, ಅಕ್ಸರ್ ಪಟೇಲ್ ತಲಾ ಒಂದೊಂದು ವಿಕೆಟ್ ಕಬಳಿಸಿ ಮಿಂಚಿದರು. 5 ಟಿ20 ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿದೆ.