IPL Retention: ಹಾರ್ದಿಕ್ ಪಾಂಡ್ಯ ವರ್ಗಾವಣೆ ಹೈಡ್ರಾಮಾ..!

By Kannadaprabha NewsFirst Published Nov 27, 2023, 9:09 AM IST
Highlights

ಈ ಮೊದಲು ಹಾರ್ದಿಕ್‌ ಮುಂಬೈ ತಂಡಕ್ಕೆ ಮರಳಲಿದ್ದಾರೆ ಎಂದು ಸುದ್ದಿ ಹರಡಿತ್ತು. ಆದರೆ ಭಾನುವಾರ ಗುಜರಾತ್‌ ಜೈಂಟ್ಸ್‌ ತಂಡ ತನ್ನಲ್ಲೇ ಉಳಿಸಿಕೊಂಡ ಆಟಗಾರರ ಪಟ್ಟಿ ಬಿಡುಗಡೆ ಮಾಡಿದಾಗ ಅದರಲ್ಲಿ ಹಾರ್ದಿಕ್‌ ಹೆಸರಿತ್ತು. ಇದು ಗೊಂದಲ ಸೃಷ್ಟಿಸಿತ್ತು. ಬಳಿಕ ಹಾರ್ದಿಕ್‌ ಮತ್ತೆ ಮುಂಬೈಗೆ ಮರಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ನವದೆಹಲಿ(ನ.27): 2024ರ ಐಪಿಎಲ್‌ನಲ್ಲಿ ಹಾರ್ದಿಕ್‌ ಪಾಂಡ್ಯ ಯಾವ ತಂಡದ ಪರ ಆಡಲಿದ್ದಾರೆ ಎಂಬುದರ ಬಗ್ಗೆ ಭಾನುವಾರ ಭಾರೀ ಹೈಡ್ರಾಮ ನಡೆದಿದೆ. ಈ ನಡುವೆ ಅವರು ತಮ್ಮ ಹಳೆ ತಂಡ ಮುಂಬೈ ಇಂಡಿಯನ್ಸ್‌ಗೆ ಮರಳುವುದು ಖಚಿತವಾಗಿದೆ ಎಂದು ಹಲವು ಪ್ರಮುಖ ಮಾಧ್ಯಮಗಳಲ್ಲಿ ವರದಿಯಾಗಿವೆ.

ಈ ಮೊದಲು ಹಾರ್ದಿಕ್‌ ಮುಂಬೈ ತಂಡಕ್ಕೆ ಮರಳಲಿದ್ದಾರೆ ಎಂದು ಸುದ್ದಿ ಹರಡಿತ್ತು. ಆದರೆ ಭಾನುವಾರ ಗುಜರಾತ್‌ ಜೈಂಟ್ಸ್‌ ತಂಡ ತನ್ನಲ್ಲೇ ಉಳಿಸಿಕೊಂಡ ಆಟಗಾರರ ಪಟ್ಟಿ ಬಿಡುಗಡೆ ಮಾಡಿದಾಗ ಅದರಲ್ಲಿ ಹಾರ್ದಿಕ್‌ ಹೆಸರಿತ್ತು. ಇದು ಗೊಂದಲ ಸೃಷ್ಟಿಸಿತ್ತು. ಬಳಿಕ ಹಾರ್ದಿಕ್‌ ಮತ್ತೆ ಮುಂಬೈಗೆ ಮರಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Latest Videos

ಮುಂಬೈ ಜೊತೆಗೆ ಈಗಾಗಲೇ ಹಾರ್ದಿಕ್ ಮಾತುಕತೆ ನಡೆಸಿದ್ದು, ತಂಡಕ್ಕೆ ಮರಳುವುದು ಖಚಿತವಾಗಿತ್ತು ಎನ್ನಲಾಗಿದೆ. ಆದರೆ ತಾಂತ್ರಿಕ ಕಾರಣದಿಂದಾಗಿ ಅವರ ವರ್ಗಾವಣೆಗೆ ಬಿಸಿಸಿಐ ಒಪ್ಪಿಗೆ ನೀಡಿರಲಿಲ್ಲ. ಸಂಜೆ ವೇಳೆ ವರ್ಗಾವಣೆ ಅಧಿಕೃತಗೊಂಡಿದ್ದು, ಅವರು 2024ರಲ್ಲಿ ಮುಂಬೈ ತಂಡದಲ್ಲಿ ಆಡಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾಗಿ ವರದಿಯಾಗಿದೆ.

ಹರಾಜಿಗೂ ಮೊದಲು ಹಲವು ಟ್ವಿಸ್ಟ್, 10 ತಂಡದಲ್ಲಿ ಉಳಿದಿರುವ-ಹೊರಬಿದ್ದ ಆಟಾಗಾರರ ಫುಲ್ ಲಿಸ್ಟ್!

ಇದಕ್ಕಾಗಿ ಮುಂಬೈ ತಂಡ ಕ್ಯಾಮರೂನ್‌ ಗ್ರೀನ್‌ರನ್ನು ಆರ್‌ಸಿಬಿಗೆ ಮಾರಾಟ ಮಾಡಿದೆ ಎಂದು ಹೇಳಲಾಗುತ್ತಿದೆ. ಗ್ರೀನ್‌ ಮಾರಾಟದಿಂದಾಗಿ ಮುಂಬೈ 17.5 ಕೋಟಿ ರು. ಉಳಿಸಿಕೊಳ್ಳಲಿದ್ದು, ಅದರಿಂದ ಹಾರ್ದಿಕ್‌ರನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ ಎಂದು ವರದಿಯಾಗಿದೆ.

2022ರ ಹರಾಜಿಗೂ ಮುನ್ನ ಗುಜರಾತ್‌ ಫ್ರಾಂಚೈಸಿಯು ₹15 ಕೋಟಿ ನೀಡಿ ಹಾರ್ದಿಕ್‌ರನ್ನು ತನ್ನ ತೆಕ್ಕೆಗೆ ಪಡೆದಿತ್ತು. ಅವರ ನಾಯಕತ್ವದಲ್ಲೇ ತಂಡ 2022ರಲ್ಲಿ ಚಾಂಪಿಯನ್‌ ಆಗಿದ್ದರೆ, 2023ರಲ್ಲಿ ರನ್ನರ್‌-ಅಪ್‌ ಆಗಿತ್ತು. ಆದರೆ ಫ್ರಾಂಚೈಸಿ ಜೊತೆ ಸಂಬಂಧ ಸರಿಯಿಲ್ಲದ ಕಾರಣ ಅವರು ಗುಜರಾತ್‌ ತೊರೆದು ಮುಂಬೈಗೆ ಮರಳಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಇನ್ನು, ಮುಂಬೈ ತಂಡ ನಾಯಕನಾಗಿ ರೋಹಿತ್‌ ಶರ್ಮಾರನ್ನೇ ಉಳಿಸಿಕೊಂಡಿದ್ದು, ವೇಗಿ ಜೋಫ್ರಾ ಆರ್ಚರ್‌ರನ್ನು ತಂಡದಿಂದ ಕೈಬಿಟ್ಟಿದೆ.

IPL Retention: ಹರ್ಷಲ್, ಹೇಜಲ್‌ವುಡ್ ಹಸರಂಗಗೆ ಗೇಟ್‌ಪಾಸ್‌..! ಹರಾಜಿಗೆ 40 ಕೋಟಿ ಉಳಿಸಿಕೊಂಡ RCB

ರಾಹುಲ್‌, ವಾರ್ನರ್‌ ರೀಟೈನ್‌: ಈ ನಡುವೆ ಎಲ್ಲಾ ತಂಡಗಳು ಕೆಲ ಪ್ರಮುಖ ಆಟಗಾರರನ್ನು ತಮ್ಮಲ್ಲೇ ಉಳಿಸಿಕೊಂಡಿವೆ. ಕೆ.ಎಲ್‌.ರಾಹುಲ್‌ ಲಖನೌ ಜೈಂಟ್ಸ್‌ನಲ್ಲೇ ಉಳಿದಿದ್ದು, ಡೇವಿಡ್‌ ವಾರ್ನರ್‌, ರಿಷಭ್‌ ಪಂತ್‌, ಪೃಥ್ವಿ ಶಾ ಡೆಲ್ಲಿಯಲ್ಲಿ, ಸಂಜು ಸ್ಯಾಮ್ಸನ್‌, ಜೋಸ್‌ ಬಟ್ಲರ್‌ ರಾಜಸ್ಥಾನದಲ್ಲಿ ಉಳಿದುಕೊಂಡಿದ್ದಾರೆ. ಆರ್‌ಸಿಬಿ 11 ಆಟಗಾರರನ್ನು ಕೈಬಿಟ್ಟಿದೆ. ತಂಡಗಳು ಆಟಗಾರರನ್ನು ಕೈಬಿಟ್ಟ ಬಳಿಕ ಉಳಿದಿರುವ ಮೊತ್ತವನ್ನು ಹರಾಜಿನಲ್ಲಿ ಬಳಸಲಿವೆ.

ಪ್ರಮುಖರಿಗಿಲ್ಲ ಸ್ಥಾನ: ಈ ಬಾರಿ ಕೆಲ ತಂಡಗಳು ಪ್ರಮುಖ ಆಟಗಾರರನ್ನು ಕೈಬಿಟ್ಟಿವೆ. ಕೋಲ್ಕತಾದಿಂದ ಶಕೀಬ್‌, ಸೌಥಿ, ಶಾರ್ದೂಲ್‌, ಲಖನೌದಿಂದ ಕರುಣ್‌ ನಾಯರ್‌, ಹೈದ್ರಾಬಾದ್‌ನಿಂದ ಹ್ಯಾರಿ ಬ್ರೂಕ್‌, ಚೆನ್ನೈನಿಂದ ಜೇಮಿಸನ್‌, ಪ್ರಿಟೋರಿಯಸ್‌, ಡೆಲ್ಲಿಯಿಂದ ಮನೀಶ್‌ ಪಾಂಡೆ ಹೊರಬಿದ್ದಿದ್ದಾರೆ.
 

click me!